ಬೆಂಗಳೂರು: ಬಿಜೆಪಿ ಇಂದು ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲು ಮುಂದಾಗಿತ್ತು. ಇದೀಗ ಈ ಪುಸ್ತಕವನ್ನು ಬಿಡುಗಡೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಹೊರಡಿಸಿ ಆದೇಶಿಸಿದೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆಯಾಗದಂತೆ ಕೋರ್ಟ್ಗೆ ತಡೆಯಾಜ್ಞೆ ಅರ್ಜಿ ಸಲ್ಲಿಸಿದ್ದರು. ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಬಿಜೆಪಿ ಹೊರತರಲು ನಿರ್ಧರಿಸಿದ್ದ ಪುಸ್ತಕವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಲೋಕಾರ್ಪಣೆಗೊಳಿಸಬೇಕಿತ್ತು. ‘ಸಿದ್ದು ನಿಜಕನಸುಗಳು’ ಎಂಬ ಪುಸ್ತಕದ …
Read More »Monthly Archives: ಜನವರಿ 2023
ರೈತರಿಗೆ ಮತ್ತೊಂದು ಗುಡ್ ನ್ಯೂಸ್: ವಿದ್ಯುತ್ ಕಡಿತ ಚಿಂತೆ ಬಿಡಿ, ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ
ಬೆಂಗಳೂರು: ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲು ಮುಂದಾಗಿದೆ. ರೈತರು ವಿದ್ಯುತ್ ಕೈ ಕೊಟ್ಟ ಸಂದರ್ಭದಲ್ಲಿ ಪೂರ್ಣ ಬೆಳೆಗೆ ನೀರು ಹಾಯಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪದೇ ಪದೇ ವಿದ್ಯುತ್ ಸಮಸ್ಯೆಯಿಂದ ಬೆಳೆಗಳಿಗೆ ನಿರಂತರವಾಗಿ ಮತ್ತು ಅವಶ್ಯಕತೆ ಇರುವಾಗ ನೀರು ಹಾಯಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸೌರಶಕ್ತಿಯ ಪಂಪ್ ಗಳನ್ನು ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಸೌರಶಕ್ತಿಯ 3 ಹೆಚ್.ಪಿ. ಸೋಲಾರ್ ಪಂಪ್ ಬೆಲೆ 2 ರಿಂದ 2.5 …
Read More »ಹಾವೇರಿ: ಸಾಹಿತ್ಯ ಜಾತ್ರೆಯಲ್ಲಿ ವಸ್ತ್ರ ವೈಭವ, ಕೈಮಗ್ಗದ ವಸ್ತ್ರಗಳಿಗೆ ಬೇಡಿಕೆ
ಹಾವೇರಿ: ಇಳಕಲ್ ಸೀರೆ, ಕೈಮಗ್ಗದ ವಸ್ತ್ರಗಳು, ಕನ್ನಡ ಅಂಗಿಗಳು, ಖಾದಿ ಬಟ್ಟೆಗಳಿಗೆ ಭಾರಿ ಬೇಡಿಕೆ ವ್ಯಕ್ತವಾಯಿತು. ಸಾಹಿತ್ಯ ಜಾತ್ರೆಯ ಕೊನೆಯ ದಿನ ಭಾನುವಾರ ವಸ್ತ್ರ ವೈಭೋಗ ಗರಿಗೆದರಿತ್ತು. ನಗರದ ಹೊರವಲಯದಲ್ಲಿ ಆಯೋಜಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆವರಣದ ವಾಣಿಜ್ಯ ಮಳಿಗೆಗಳಲ್ಲಿ ಬಟ್ಟೆ ಮಳಿಗೆಗಳದ್ದೇ ಕಾರುಬಾರು. ಸೀರೆಗೆ ಮುಗಿಬಿದ್ದ ನಾರಿಯರು: ನೇಕಾರರು ನೇಯ್ದ ಇಳಕಲ್ ಸೀರೆಗಳನ್ನು ಕೊಳ್ಳಲು ನೀರೆಯರು ಮುಗಿಬಿದ್ದರು. ಕಸೂತಿ, ಚದುರಂಗ, ರಾಗಾವಳಿ, ಕರಿಚಂದ್ರಕಾಳಿ, ಪ್ಲೇನ್ ಮತ್ತು …
Read More »ಬಿಜೆಪಿ ವಿರುದ್ಧ ‘ಕೈ’ ಹೋರಾಟ: ಕಾಂಗ್ರೆಸ್ ನಾಯಕರಿಂದ ರಾಜ್ಯ ಪ್ರವಾಸ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಇದೇ 11ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸಲಿದ್ದು, ಅದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರವಾಸ ಸಮಿತಿಯ ಸಭೆ ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆಯಿತು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವೆಂದು ವಿಭಾಗ ಮಾಡಿಕೊಂಡು ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಯಾತ್ರೆ ಕೈಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಕಡೆ …
Read More »ಮೋದಿ ದೇವರಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ: ಮಲ್ಲಿಕಾರ್ಜುನ ಖರ್ಗೆ
ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಎಂಬಂತೆ ಬಿಂಬಿಸಲಾಗುತ್ತಿದೆ. ವ್ಯಕ್ತಿಯೊಬ್ಬ ದೇವರಂತೆ ಬಿಂಬಿತಗೊಂಡರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಪ್ರಭುತ್ವ ನಿರಂಕುಶವಾಗುವ ಸಾಧ್ಯತೆ ಇರುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು. ಐಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ವ್ಯಕ್ತಿಯೊಬ್ಬರನ್ನು ದೇವರು ಎಂಬಂತೆ ರೂಪಿಸಿದರೆ ಸರ್ವಾಧಿಕಾರ ಸ್ಥಾಪಿತವಾಗುತ್ತದೆ. ಇಂತಹ ಅಪಾಯದ ವಿರುದ್ಧ ಜನರು ಜಾಗೃತಗೊಳ್ಳಬೇಕು’ ಎಂದರು. ‘ಗುಜರಾತ್ ಪುತ್ರ ಎಂಬುದಾಗಿ ಬಿಂಬಿಸಿಕೊಂಡ ಮೋದಿ ಅವರನ್ನು ಅಲ್ಲಿಯ ಜನರು …
Read More »ಬೆಂಗಳೂರು: ಯಾವುದೇ ವೃಂದದ ಹುದ್ದೆಗಳಿಗೆ 20 ಸಾವಿರಕ್ಕಿಂತಲೂ ಕಡಿಮೆ ಅರ್ಜಿಗಳು ಸಲ್ಲಿಕೆಯಾದರೆ ಅಭ್ಯರ್ಥಿಗಳ ಆಯ್ಕೆಗೆ ಇನ್ನು ಮುಂದೆ ‘ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ’ (ಸಿಬಿಆರ್‌ಟಿ) ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಿರ್ಧರಿಸಿದೆ. ‘ಸಿಬಿಆರ್‌ಟಿ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂಬ ಉದ್ದೇಶದಿಂದ ಜ.7 ರಂದು ಸಿಬಿಆರ್‌ಟಿ ಅಣಕು ಪರೀಕ್ಷೆ ನಡೆಸಲಾಗಿತ್ತು. ಪ್ರಾಯೋಗಿಕವಾಗಿ ನಡೆಸಿದ ಈ ಪರೀಕ್ಷೆ ಯಶಸ್ವಿಯಾಗಿದೆ. ಹೀಗಾಗಿ, ಈ ಮಾದರಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದರು. ಡಿ. 3 ರಂದು ನಡೆದ ಆಯೋಗದ ಸಭೆಯಲ್ಲಿ ನಿರ್ಣಯಿಸಿದಂತೆ, ಸಿಬಿಆರ್‌ಟಿ ಅಣಕು ಪರೀಕ್ಷೆ ನಡೆಸಲು ಡಿ.22 ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಬೆಂಗಳೂರು: ಯಾವುದೇ ವೃಂದದ ಹುದ್ದೆಗಳಿಗೆ 20 ಸಾವಿರಕ್ಕಿಂತಲೂ ಕಡಿಮೆ ಅರ್ಜಿಗಳು ಸಲ್ಲಿಕೆಯಾದರೆ ಅಭ್ಯರ್ಥಿಗಳ ಆಯ್ಕೆಗೆ ಇನ್ನು ಮುಂದೆ ‘ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ’ (ಸಿಬಿಆರ್‌ಟಿ) ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಿರ್ಧರಿಸಿದೆ. ‘ಸಿಬಿಆರ್‌ಟಿ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕೆಂಬ ಉದ್ದೇಶದಿಂದ ಜ.7 ರಂದು ಸಿಬಿಆರ್‌ಟಿ ಅಣಕು ಪರೀಕ್ಷೆ ನಡೆಸಲಾಗಿತ್ತು. ಪ್ರಾಯೋಗಿಕವಾಗಿ ನಡೆಸಿದ ಈ ಪರೀಕ್ಷೆ ಯಶಸ್ವಿಯಾಗಿದೆ. ಹೀಗಾಗಿ, ಈ ಮಾದರಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಕೆಪಿಎಸ್‌ಸಿ …
Read More »ನನ್ನ ತೇಜೋವಧೆಗೆ ಬಿಜೆಪಿಯಿಂದ ಪುಸ್ತಕ: ಸಿದ್ದರಾಮಯ್ಯ
ಬೆಂಗಳೂರು: ‘ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು (ಸಿದ್ದು ನಿಜ ಕನಸುಗಳು) ಹೊರತರುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಥರ ಖಡ್ಗ ಹಿಡಿದು ಉಡುಗೆ ಧರಿಸಿದವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ …
Read More »ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನ; ನಾಳೆ ಸಾಗರ ಟೌನ್ ಬಂದ್
ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸೋಮವಾರ (ಜ.9 ರಂದು) ನಡೆದಿದೆ. ಸಾಗರ ನಗರ ಭಜರಂಗದಳದ ಸಹ ಸಂಚಾಲಕ ಆಗಿರುವ ಸುನೀಲ್ ಎಂಬುವವರ ಮೇಲೆ ಸಮೀರ್ ಎನ್ನುವ ಯುವಕ ಸಾಗರ ನಗರದ ಬಿ.ಹೆಚ್. ರಸ್ತೆಯ ಬಸ್ ನಿಲ್ದಾಣ ಸಮೀಪ ಮಚ್ಚು ಬೀಸಿದ್ದಾನೆ. ಕೂದಲೆಳೆ ಅಂತರದಲ್ಲಿ ಮಚ್ಚಿನ ದಾಳಿಯಿಂದ ಸುನೀಲ್ ಪಾರಾಗಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ನಡೆದ ಶೌರ್ಯ ಸಂಚಲನ ಯಾತ್ರೆಯಲ್ಲಿ …
Read More »ತಲ್ವಾರ್, ಮಚ್ಚು, ಚಾಕು, ಕುಡಗೋಲು ಇಟ್ಟು ಪೂಜೆ ಮಾಡಬೇಕು ಎಂದ: ಮುತಾಲಿಕ್
ಬೆಳಗಾವಿ: ಮುಸ್ಲಿಮರ ಜೊತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್ ಗೆ ಬೆಂಬಲ ನೀಡಿದಂತೆ ಎಂದು ಪ್ರಮೋದ ಮುತಾಲಿಕ ವಾಗ್ದಾಳಿ ನಡೆಸಿದರು. ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಮೈದಾನದಲ್ಲಿ ರವಿವಾರ ನಡೆದ ವಿರಾಟ್ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಲವ್ ಜಿಹಾದ್ ಮಾಡುವವರು, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜೊತೆ ವ್ಯಾಪಾರ ಬೇಡ. ಪೊಲೀಸ್ ಠಾಣೆ ಸುಟ್ಟು ಹಾಕೋರು, ಸೈನಿಕರ ಮೇಲೆ ಕಲ್ಲೆಸೆವರ ಜೊತೆ ವ್ಯಾಪಾರ ನಿಲ್ಲಿಸುವಂತೆ ಕರೆ …
Read More »ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ: B.S.Y
ಶಿವಮೊಗ್ಗ: ಸ್ಯಾಂಟ್ರೋ ರವಿ ವಿಷಯದಲ್ಲಿ ಸಿಎಂ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸಚಿವರ ಹೆಸರು ಕೇಳಿ ಬಂದ ವಿಚಾರ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಮಾತಾನಾಡಿದ ಅವರು, ಸಂಪುಟದ ವಿಸ್ತರಣೆ ವಿಷಯ ಚರ್ಚೆಯಾಗುತ್ತಿದೆ. ಕೇಂದ್ರದ ನಾಯಕರ …
Read More »