Breaking News

Monthly Archives: ಜನವರಿ 2023

ಸಂಕ್ರಮಣದ ಶುಭದಿನದಂದು ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ `ಯೋಗಥಾನ್’

ಬೆಳಗಾವಿ : ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ ‘ಯೋಗ ಸಾಕ್ಷರತಾ ರಾಜ್ಯ’ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಇಂದು ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು.   ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ನೇಸರನ ಹೊಂಗಿರಣಗಳ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲುಗಳ ಎದುರು ಸಾವಿರಾರು ಜನರು ಯೋಗ ಪ್ರದರ್ಶಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, …

Read More »

ನಗ್ನ ವಿಡಿಯೋ ಕಾಲ್ ಬಲೆಗೆ ಬಿದ್ದು 2.69 ಕೋಟಿ ರೂ.ಕಳೆದುಕೊಂಡ ಉದ್ಯಮಿ..!

ಅಹಮದಾಬಾದ್: ಗುಜರಾತ್ ಮೂಲದ ಉದ್ಯಮಿಯೊಬ್ಬರು ನಗ್ನ ವಿಡಿಯೋ ಕಾಲ್ ಬಲೆಗೆ ₹2.69 ಕೋಟಿ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿಗೆ ಕಳೆದ ವರ್ಷ ಆಗಸ್ಟ್ 8 ರಂದು ಮೋರ್ಬಿಯಿಂದ ರಿಯಾ ಶರ್ಮಾ ಎಂದು ಗುರುತಿಸಿಕೊಂಡ ಮಹಿಳೆಯಿಂದ ಕರೆ ಬಂದಿತ್ತು ಎಂದು ಅವರು ಹೇಳಿದರು.   ಅವರು ನಂತರ ವೀಡಿಯೊ ಕರೆ ಸಮಯದಲ್ಲಿ ಅವನ ಬಟ್ಟೆಗಳನ್ನು ತೆಗೆಯುವಂತೆ ಮನವರಿಕೆ ಮಾಡಿದರು. ನಂತರ ಅವರು ಕರೆಯನ್ನು …

Read More »

ದಶಕಗಳ ಜಲ ಸಂಕಟಕ್ಕೆ ಮುಕ್ತಿ

ಹುಬ್ಬಳ್ಳಿ: ‘ನಮ್ಮೂರಿನ ನೀರಿನ ಬವಣೆ ಕೊನೆಗೂ ನೀಗಿತು. ಯಾವಾಗ ಕೆರೆ ನಿರ್ಮಾಣವಾಗುತ್ತೊ, ನಿತ್ಯ ನೀರು ಬರುತ್ತೊ, ಬಿಂದಿಗೆಗಳಲ್ಲಿ ದೂರದಿಂದ ನೀರು ತರುವುದು ತಪ್ಪುತ್ತದೊ ಎಂಬ ಪ್ರಾರ್ಥನೆ ಆ ದೇವರಿಗೆ ಮುಟ್ಟಿದೆ…’ – ಅಣ್ಣಿಗೇರಿ ಪಟ್ಟಣಕ್ಕೆ ದಿನದ 24X7 ನೀರು ಪೂರೈಸುವುದಕ್ಕಾಗಿ ತಾಲ್ಲೂಕಿನ ಬಸಾಪುರದ ಬಳಿ ನಿರ್ಮಿಸಿರುವ ನೂತನ ಕೆರೆಯ ಲೋಕಾರ್ಪಣೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯರ ಮಾತುಗಳಿವು. ‘ಮೂರು ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಪಟ್ಟಣದಲ್ಲಿ, ಇತ್ತೀಚಿನ …

Read More »

ಬೆಳಗಾವಿ-ಸಿಕಂದರಾಬಾದ್ ರೈಲು, ಮಂತ್ರಾಲಯ ಭಕ್ತರಿಗೆ ಅನುಕೂಲ

ಬೆಳಗಾವಿ, ಜನವರಿ 15; ನೈಋತ್ಯ ರೈಲ್ವೆಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ರೈಲು ಘೋಷಣೆ ಮಾಡಿದೆ. ಈ ರೈಲು ಸೇವೆಯಿಂದಾಗಿ ಪುಣ್ಯ ಕ್ಷೇತ್ರ ಮಂತ್ರಾಲಯಕ್ಕೆ ಪ್ರಯಾಣ ಮಾಡಲು ಭಕ್ತರಿಗೆ ಅನುಕೂಲವಾಗಲಿದೆ.   ಬೆಳಗಾವಿಯ ಬಿಜೆಪಿ ಸಂಸದೆ ಮಂಗಲ ಸುರೇಶ್ ಅಂಗಡಿ ರೈಲು ಸಂಚಾರದ ಬಗ್ಗೆ ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದ್ದಾರೆ. ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 17ರಂದು ಪ್ರಾರಂಭವಾಗಲಿದೆ.   ಮಂಗಲ ಸುರೇಶ್ ಅಂಗಡಿ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಬೆಳಗಾವಿ-ಸಿಕಂದರಾಬಾದ್ ನಡುವೆ …

Read More »

ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಪಾಲಿಟಿಕ್ಸ್‌ : ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA ರಘು

ಬೆಂಗಳೂರು : ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಪಾಲಿಟಿಕ್ಸ್‌ ಶುರುವಾಗಿದ್ದು, ಮನೆಮನೆಗಳಿಗೆ ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.     ಸಿಲಿಕಾನ್‌ ಸಿಟಿಯ ಕೆಲ ಭಾಗಗಳಲ್ಲಿ ರಾಜಕೀಯ ನಾಯಕರು ಚುನಾವಣೆಗಾಗಿ ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಜನರಿಗೆ ಗಿಫ್ಟ್‌ ನೀಡುವ ಮೂಲಕ ಮತ ಪಡೆಯೋದಕ್ಕೆ ಮುಂದಾಗಿದ್ದಾರೆ. ಅದರಲ್ಲೂ …

Read More »

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ

ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ(Karnataka Election). ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ ನಮ್ಮ ಸಹೋದರ. ಪಕ್ಷ ಕಟ್ಟಿರುವುದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ, ಇದಕ್ಕಿಂತ ನಾನು ಇನ್ನೇನು ಹೇಳಬೇಕು ಎಂದು ಅವರು ಕೇಳಿದ್ದಾರೆ. ಯಾವತ್ತಿಗೂ ಬಿಜೆಪಿ ಪಾರ್ಟಿ ಬಿಡುವುದಿಲ್ಲ, …

Read More »

ಹಿಂಡಲಗಾ ಕೈದಿ ಕೇಂದ್ರ ಸಚಿವರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ ಕೈದಿಯಿಂದಲೇ ಶನಿವಾರ ಬೆಳಗ್ಗೆ ನಿತಿನ್​ ಗಡ್ಕರಿಗೆ ಕರೆ ಮಾಡಿ, ಬಾಂಬ್ ಇಟ್ಟು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಮಾಹಿತಿ ಸಿಕ್ಕ ಕೂಡಲೆ ಶನಿವಾರ ರಾತ್ರಿ ನಾಗ್ಪುರದ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಆದರೆ ಎಲ್ಲರನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ. ಕೈದಿಯೊಬ್ಬ, ಕೇಂದ್ರ ಮಂತ್ರಿಗೆ ಜೈಲಿನಿಂದ ಕರೆ ಮಾಡಿದ್ದು ಹೇಗೆ ಎಂದು ಜೀವ ಬೆದರಿಕೆ ಸಂಬಂಧ ಮಹಾರಾಷ್ಟ್ರದ ನಾಗ್ಪುರದ …

Read More »

IAS ಪಾಸ್​ ಮಾಡಲು ಎಷ್ಟು ಗಂಟೆ ಓದಬೇಕು? ಸೆಲೆಬ್ರಿಟಿ ಅಧಿಕಾರಿ ಟೀನಾ ಡಾಬಿ ಕೊಟ್ಟ ಉತ್ತರ ವೈರಲ್​

ನವದೆಹಲಿ: ಐಎಎಸ್​ ಅಧಿಕಾರಿಯಾಗಲು ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು ಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.   ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್​ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಯೋನಿರ್​ ಜೈಸನ್ ಶಕ್ತಿ (ಮಹಿಳೆಯರು ಮೊದಲು) ಕಾರ್ಯಕ್ರಮದ ಭಾಗವಾಗಿ ಜೈಸಲ್ಮೇರ್​ನ ಇಂಧಿರಾ ಗಾಂಧಿ ಇಂದೋರ್​ ಸ್ಟೇಡಿಯಂನಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿ ಸಮಾಲೋಚನೆ ಕುರಿತು ಹಮ್ಮಿಕೊಳ್ಳಲಾಗಿದ್ದ …

Read More »

ಒಂದೇ ಬಾರಿಗೆ 4 ಕರುಗಳಿಗೆ ಜನ್ಮನೀಡಿ ಅಚ್ಚರಿ ಮೂಡಿಸಿದ ಹಸು!

ಬಾಗಲಕೋಟೆ: ಪ್ರಪಂಚದಲ್ಲಿ ಪ್ರತಿದಿನವೂ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲ ವಿಷಯಗಳನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. 2 ಮುಖ, 5 ಕಾಲಿನ ಕರುಗಳು ಮತ್ತು ಪ್ರಾಣಿಗಳನ್ನು ನೀವು ನೋಡೇ ಇರುತ್ತೀರಿ. ಒಂದೇ ಬಾರಿಗೆ 2 ಕರುಗಳಿಗೆ ಜನ್ಮನೀಡಿದ ಹಸುಗಳನ್ನೂ ನೀವು ಕಂಡಿರುತ್ತೀರಿ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಹಸುವೊಂದು ಒಂದೇ ಬಾರಿಗೆ 4 ಕರುಗಳಿಗೆ ಜನ್ಮ ನೀಡಿದ್ದು, ಅಚ್ಚರಿ ಮೂಡಿಸಿದೆ. ಹೌದು, ಅಚ್ಚರಿಯಾದರೂ ಇದು ನಿಜ.ಬಾಗಲಕೋಟೆಜಿಲ್ಲೆಯ ಆಸಂಗಿ ಗ್ರಾಮದಲ್ಲಿ ಹಸುವೊಂದು ಒಂದೇ ಬಾರಿಗೆ …

Read More »

ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. C.M.

ಬೆಂಗಳೂರು: ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಜನವರಿ ಅಂತ್ಯ ಹಾಗೂ ಫೆಬ್ರವರಿ ಪ್ರಾರಂಭದಲ್ಲಿ ಚಾಲನೆ ನೀಡಲಾಗುವುದು. ಯುವಕರಿಗೆ, ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, …

Read More »