Breaking News

Daily Archives: ಅಕ್ಟೋಬರ್ 29, 2022

ಜೀವಗಳು ಹೋಗುತ್ತಿದ್ದರು ಸ್ಥಳಕ್ಕೆ ಬಾರದ ಗೋವಿಂದ ಕಾರಜೋಳ ವರ್ತನೆಗೆ ನೆಟ್ಟಿಗರ ಆಕ್ರೋಶ

ರಾಮದುರ್ಗ (ಬೆಳಗಾವಿ ಜಿಲ್ಲೆ: ‘ಮುದೇನೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಸಮಸ್ಯೆ ತಲೆದೋರಿದೆ. ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ದಿನದಿನಕ್ಕೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿ ಆಗಲಿ ಸ್ಥಳಕ್ಕೆ ಬಂದಿಲ್ಲ. ನಮ್ಮ ಕಷ್ಟ ನೋಡಿಲ್ಲ’ ಎಂದು ಹಲವರು ಆಕ್ರೋಶ ಹೊರಹಾಕಿದರು. ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದಾಗ ಮಹಿಳೆಯರು ಸಂಕಷ್ಟ ತೋಡಿಕೊಂಡರು. ‘ಸಚಿವ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲೇ ಇದ್ದಾರೆ. ಮುದೇನೀರಿಗೆ …

Read More »

ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯನ್ನು ಕಳಿಸೋಣ; ಸಿದ್ದರಾಮಯ್ಯ

ಮಂಡ್ಯ, : “ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರನ್ನು ಮುಂಬಾಗಿಲಿನಿಂದ ಕಳುಹಿಸಿಬಿಡೋಣ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರಿಗೆ ಕರೆ ನೀಡಿದ್ದಾರೆ. ಮಂಡ್ಯ ತಾಲ್ಲೂಕಿನ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮ(ಹಳೇಊರಮ್ಮ) ದೇವಿ ದೇವಾಲಯ ಸೇವಾ ಸಮಿತಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ಹುಲಿಯೂರಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಪರಿಶಿಷ್ಠ ಜಾತಿ, ವರ್ಗ, ಹಿಂದುಳಿದವರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಕೃಷಿ ಭಾಗ್ಯವನ್ನು ನಿಲ್ಲಿಸಿದ್ದಾರೆ. …

Read More »

ಬಾಗಲಕೋಟೆ; ಕುಳಗೇರಿ ಬೀರಲಿಂಗೇಶ್ವರ ಜಾತ್ರೆಯ ವಿಶೇಷತೆ ಏನು?

ಬಾಗಲಕೋಟೆ, ಅಕ್ಟೋಬರ್‌, 28; ಕಳೆದ ಎರಡು ವರ್ಷಗಳಿಂದ ಜಾತ್ರೆಗಳಿಗೆ ಕೋವಿಡ್ ಕಂಟಕ ಎದುರಾಗಿತ್ತು. ಆದರೆ ಈ ಬಾರಿ ಮುಕ್ತ ಅವಕಾಶ ಸಿಕ್ಕಿದ್ದು, ಜಾತ್ರೆಗಳಿಗೆ ಮತ್ತೆ ಕಳೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಕುಳಗೇರಿ ಗ್ರಾಮದಲ್ಲಿ ನಡೆದ ಜಾತ್ರೆ ಎಲ್ಲರ ಗಮನ ಸೆಳೆಯಿತು. ಇಡೀ ಜಾತ್ರೆ ತುಂಬಾ ಭಂಡಾರದ ಓಕುಳಿ ಆಡಿ ಬೀರಲಿಂಗನ ಭಕ್ತರು ಸಂಭ್ರಮಿಸಿದರು.   ಅದ್ದೂರಿಯಾಗಿ ನೆರವೇರುತ್ತಿರುವ ರಥೋತ್ಸವವನ್ನು ನೋಡುವುದಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಎಲ್ಲ ಕಡೆ ಭಂಡಾರಮಯ …

Read More »

ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್‌ ಆಕ್ಟಿಂಗ್‌ : ಸಾಮಾಜಿಕ ಜಾಲತಾಣದಲ್ಲಿ ಟೀಕೆ

ಬೆಂಗಳೂರು: ನಿರೂಪಕಿ ಅನುಶ್ರೀ ಅವರ ನಿರೂಪಣೆ ಬಗ್ಗೆ ಸದಾ ಒಂದಲ್ಲ ಒಂದು ವಿವಾದ ಇದ್ದೇ ಇರುತ್ತದೆ. ನಿರೂಪಣೆ ಮಾಡೋದು ಬಿಟ್ಟು ಬಾಕಿ ಎಲ್ಲ ಮಾಡ್ತಾರೆ ಅನ್ನೋದು ಅನೇಕರ ಅಭಿಪ್ರಾಯ ಕೂಡ. ಟಿವಿ ಟಿಆರ್‌ಪಿಗಾಗಿ, ದುಡ್ಡಿಗಾಗಿ ಅನುಶ್ರೀ ನಡೆದುಕೊಳ್ಳುತ್ತಿದ್ದಾರೆ ಅಂತ ಅವರ ನಿರೂಪಣೆ ರೀತಿಯನ್ನು ಟೀಕೆ ಮಾಡುವವರು ಕೂಡ ಇದ್ದಾರೆ. ಈ ನಡುವೆ ಅಪ್ಪು ಹೆಸರಿನಲ್ಲಿ ನಿರೂಪಕಿ ಅನುಶ್ರೀ ಓವರ್‌ ಆಕ್ಟಿಂಗ್‌ ಮಾಡುತ್ತಿದ್ದಾರೆ ಅಂತ ಅನೇಕ ಮಂದಿ ಅನುಶ್ರೀಯವರ ನಡೆಯನ್ನು ಕಿಡಿಕಾರುತ್ತಿದ್ದಾರೆ. …

Read More »