ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದ್ದು, ಬಿಜೆಪಿ ‘ಸ್ಕ್ಯಾಮ್ ರಾಮಯ್ಯ’ ಎಂದು ತಿರುಗೇಟು ನೀಡುತ್ತಿದೆ. ಬೆಂಗಳೂರಿನ ಆಯಕಟ್ಟಿನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಿ, ಸಾಮಾಜಿಕ ಜಾಲತಾಣದಲ್ಲೂ ” ಪೇಸಿಎಂ” ಅಭಿಯಾನ ತೀವ್ರಗೊಳಿಸಿತ್ತು. ಪ್ರತಿಯಾಗಿ ಬಿಜೆಪಿ ಹೋರಾಟಕ್ಕಿಳಿದು ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ‘ಸ್ಕ್ಯಾಮ್ ರಾಮಯ್ಯ’ …
Read More »Monthly Archives: ಸೆಪ್ಟೆಂಬರ್ 2022
ಮಠಮಾನ್ಯಗಳಿಗೆ ಅನುದಾನ ನೀಡುವುದನ್ನು ಸರ್ಕಾರ ಬಿಡಲಿ: ಮರಿತಿಬ್ಬೇಗೌಡ
ವಿಧಾನಪರಿಷತ್ತು: ಸರ್ಕಾರ ದೇವಾಲಯ, ಪ್ರತಿಮೆ, ಮಠಗಳಿಗೆ ಹಾಗೂ ಜಾತಿ ಸಂಘಟನೆಗಳಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡುವುದನ್ನು ಮೊದಲು ನಿಲ್ಲಿಸಲಿ. ಆ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಬಳಕೆ ಮಾಡಿಕೊಳ್ಳಲಿ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಸರ್ಕಾರಕ್ಕೆ ಮನವಿ ಮಾಡಿದರು. ನಿಯಮ 68ರ ಅಡಿಯಲ್ಲಿ ನಡೆದ ಅತಿವೃಷ್ಠಿ ಚರ್ಚೆಯ ವೇಳೆ ಮಾತನಾಡಿದ ಅವರು ಸರ್ಕಾರ ಈಗಾಗಲೇ ಮಠಗಳಿಗೆ ಮತ್ತು ಜಾತಿ ಸಂಘ-ಸಂಸ್ಥೆಗಳಿಗೆ ಕೋಟ್ಯಾಂತ ರೂ. ಅನುದಾನ ನೀಡುತ್ತಿದೆ. ಸರ್ಕಾರದ ಈ ನಡೆ ಸಂವಿಧಾನ ವಿರೋಧಿಯಾಗಿದೆ …
Read More »ನಾನು ಹೊಡೆದ ಗುಂಡನ್ನು ವಿಫಲಗೊಳಿಸಲು ಷಡ್ಯಂತ್ರ ನಡೆಯುತ್ತಿದೆ: ಕುಮಾರಸ್ವಾಮಿ
ಬೆಂಗಳೂರು: ಬಿಎಂಎಸ್ ಶಿಕ್ಷಣ ಟ್ರಸ್ಟ್ ಅನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸುವಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಶಾಮೀಲಾಗಿದ್ದು, ಹಣಕಾಸಿನ ಅವ್ಯವಹಾರವೂ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು. ಇದೀಗ ನಾನು ಹೊಡೆದ ಗುಂಡನ್ನು ವಿಫಲಗೊಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. …
Read More »ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ: ಶಿವನಗೌಡ ಪಾಟೀಲ
ಬೆಳಗಾವಿ: ಕೃಷಿ ಕಾರ್ಮಿಕರ ಮಕ್ಕಳಿಗೆ ಇದು ಸಂತಸದ ಸುದ್ದಿ. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ‘ಮುಖ್ಯಮಂತ್ರಿ ರೈತ ವಿದ್ಯಾವಿಧಿ’ ಯೋಜನೆ ವಿಸ್ತರಿಸಲಾಗಿದೆ. ಹಿಂದೆ ತಂದೆ- ತಾಯಿ ಅಥವಾ ಅಜ್ಜ- ಅಜ್ಜಿ ಹೆಸರಿನಲ್ಲಿ ಹೊಲ ಇದ್ದವರು ಮಾತ್ರ ಅರ್ಹರಾಗಿದ್ದರು. ಪ್ರಸಕ್ತ (2022-23) ವರ್ಷದಿಂದ ಕೃಷಿ ಕಾರ್ಮಿಕರ ಮಕ್ಕಳೂ ಈ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು. ರಾಜು ಕಡಕೋಳ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ …
Read More »ಜಾತಿ ನಿಂದನೆ ಆರೋಪದಲ್ಲಿ ಸುಳ್ಳು ದೂರು ದಾಖಲಿಸಿದ್ರೆ ಬೀಳುತ್ತೆ ದಂಡ!
ಬೆಂಗಳೂರು: ಜಾತಿ ನಿಂದನೆ ಆರೋಪದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ನಗರದ ಅಪಾರ್ಟ್ಮೆಂಟ್‌ವೊಂದರ ನಿವಾಸಿಗಳ ಸಂಘದ ಪದಾಧಿಕಾರಿಗಳ ವಿರುದ್ಧ ಸುಳ್ಳು ದೂರು ದಾಖಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. ಬೆಂಗಳೂರು ನಗರದ ಕೈಲಾಶ್ ಅಪಾರ್ಟ್ಮೆಂಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ ಕಣ್ಣೂರು, ಸಂಘದ ಕಾರ್ಯದರ್ಶಿ ರಾಮಲಿಂಗಯ್ಯ ಮತ್ತು ಅಪಾರ್ಟ್ಮೆಂಟ್ ನಿವಾಸಿಯಾಗಿರುವ ಬಿ.ಎನ್. ಅಭಿಷೇಕ್ ಅವರ ವಿರುದ್ಧದ ಅದೇ ಅಪಾರ್ಟ್ಮೆಂಟ್ …
Read More »P.D.O.ಗಳ ಮುಂಭಡ್ತಿಗೆ ಶೀಘ್ರ ಕ್ರಮ: C.M.
ಬೆಂಗಳೂರು: ರಾಜ್ಯದಲ್ಲಿ 12 ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಮುಂಭಡ್ತಿಗೆ ಶೀಘ್ರ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಲಿಖೀತ ರೂಪದಲ್ಲಿ ಪ್ರತಿಕ್ರಿಯಿಸಿದ ಅವರು, ಪಿಡಿಒಗಳು ಸುಮಾರು 12 ವರ್ಷಗಳಿಂದ ಒಂದೇ ಹುದ್ದೆಯಲ್ಲಿರುವುದು ಸರಕಾರದ ಗಮನಕ್ಕೆ ಬಂದಿದೆ. ಅವರನ್ನು ಸಹಾಯಕ ನಿರ್ದೇಶಕ ಹುದ್ದೆಗೆ ಭಡ್ತಿಗೊಳಿಸಲು ಶೀಘ್ರ …
Read More »ಪೇ ಸಿಎಂ’ ಅಧಿಕೃತಗೊಳಿಸಲು ಮುಂದಾದ ರಾಜ್ಯ ಸರ್ಕಾರ
ವಿಧಾನ ಪರಿಷತ್ತು: ಕೇವಲ ಒಂದು ದಿನದ ಹಿಂದೆ ತೀವ್ರ ಸದ್ದು ಮಾಡಿದ್ದ “ಪೇ ಸಿಎಂ’ ಅನ್ನು ಈಗ ಸರ್ಕಾರ ಅಧಿಕೃತಗೊಳಿಸಲು ಮುಂದಾಗಿದೆ! ಮುಖ್ಯಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ “ಪೇ ಸಿಎಂ’ ಡಿಜಿಟಲ್ “ಪೇ ಟು ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ (ಸಿಎಂಆರ್‌ಎಫ್) ಎಂಬ ಡಿಜಿಟಲ್ ಆಯಪ್ ಅಭಿವೃದ್ಧಿಪಡಿಸಿ, ಆ ಮೂಲಕ ಅಧಿಕೃತಗೊಳಿಸಲು ಮುಂದಾಗಿದೆ. ಇದರೊಂದಿಗೆ ಸರ್ಕಾರದ ವಿರುದ್ಧದ ಅಭಿಯಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಲೆಕ್ಕಾಚಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ. “ಪೇ ಸಿಎಂ’ …
Read More »ಇಂಡಿಯಾ ಟಾಪ್ 10 ಹೀರೋಗಳ ಪಟ್ಟಿ ಬಿಡುಗಡೆ : ರಾಕಿ ಭಾಯ್‌ಗೆ 5ನೇ ಸ್ಥಾನ
ಬೆಂಗಳೂರು : ಓರ್‌ಮ್ಯಾಕ್ಸ್ ಸಂಸ್ಥೆ ಭಾರತದ ಟಾಪ್ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಲಿವುಡ್ ಸ್ಟಾರ್ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದು, ಅಭಿಮಾನಿಗಳಲ್ಲಿ ಸಂತೋಷ ಹೆಚ್ಚಿಸಿದೆ. ಹೌದು, ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಸೌಂಡ್ ಮಾಡುವ ಮೂಲಕ ಕೆಜಿಎಫ್ ಭಾರತದಾದ್ಯಂತ ಕನ್ನಡದ ಪತಾಕೆ ಹಾರಿಸಿತ್ತು. ಅದರಂತೆ ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಸದ್ಯ ಓರ್‌ಮ್ಯಾಕ್ಸ್ …
Read More »ಕನ್ನಡದ ಸಾರ್ವಭೌಮತ್ವಕ್ಕೆ ಶಾಸನದ ಬಲ : ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ’ ವಿಧೇಯಕ ಮಂಡನೆ
ಬೆಂಗಳೂರು:ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ ಮಾಡಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ ಮಾಡಲಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಟಾನಗೊಳಿಸಲು ಅಗತ್ಯವಾದ ಶಾಸನಾತ್ಮಕ ಬಲ ನೀಡುವ ಆಶಯದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022 ನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ,. ಶಿಕ್ಷಣ ಮತ್ತು ಉದ್ಯೋಗದಲ್ಲಿ ಕನ್ನಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಉದ್ದೇಶ ಹಾಗೂ ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಲು ಜಾರಿಗೆ ತರಲಾಗುತ್ತಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕದಿಂದ ರಾಜ್ಯದಲ್ಲಿ …
Read More »ಸಾವಿನಲ್ಲೂ ಸಾರ್ಥಕತೆ: ತಂಗಿ ಮೃತದೇಹದ ಮುಂದೆ ‘ಗೊಂಬೆ ಹೇಳುತೈತೆ’ ಹಾಡಿ ಕಣ್ಣೀರಿಟ್ಟ ಅಣ್ಣ
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ ಜೀವನ ಎಲ್ಲರಿಗೂ ಸ್ಫೂರ್ತಿ, ಬದುಕಿದ್ದಾಗಲೂ ಇತರರ ಬಾಳಿಗೆ ಬೆಳಕಾಗಿದ್ದ ಅಪ್ಪು, ನಿಧನದ ನಂತರವೂ ಹಲವರ ಜೀವನಕ್ಕೆ ಬೆಳಕಾಗಿದ್ದಾರೆ. ಒಬ್ಬ ನಟ ಹೇಗೆ ಬದುಕುತ್ತಾನೋ ಆತನನ್ನೇ ಅನುಸರಿಸುವ ಆತನ ಅಭಿಮಾನಿಗಳು ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಾರೆ ಎನ್ನುದಕ್ಕೆ ಅಪ್ಪು ಉತ್ತಮ ಉದಾಹರಣೆ. ಅಪ್ಪು ಕರ್ನಾಟಕದ ಅಜಾತ ಶತ್ರುವಾಗಿದ್ದು, ಅವರ ಸಮಾಜಮುಖಿ ಕಾರ್ಯಗಳು ಎಂದಿಗೂ ಪ್ರಸ್ತುತ ಹಾಗೂ ಸ್ಫೂರ್ತಿ. ಪುನೀತ್ ರಾಜ್‌ಕುಮಾರ್ ಅವರು ಕೇವಲ ನಟನಾಗಿ ಅಷ್ಟೇ …
Read More »
Laxmi News 24×7