ಕಾಂಗ್ರೆಸ್ ನವರು ದೇಶ ಇಬ್ಬಾಗ ಮಾಡಿದ ಕಳಂಕ ಹೊತ್ತಿದ್ದಾರೆ. ಸ್ವಾತಂತ್ರ‍್ಯ ಬಂದ ನಂತರ ಕಾಂಗ್ರೆಸ ನಾಯಕರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಇಬ್ಬಾಗ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು. ಬೆಳಗಾವಿ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ್ ರವರು, ದೇಶ ಇಬ್ಬಾಗ ಮಾಡಿದ ಪಾಪದ ಪ್ರಜ್ಞೆ ಕಾಂಗ್ರೆಸ್ ನವರಿಗೆ ಕಾಡುತ್ತಿದೆ. ಅದಕ್ಕಾಗಿ ಭಾರತ ಜೋಡೊ ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಕಡೆಯಿಂದ ಭಾರತವನ್ನು …
Read More »Daily Archives: ಸೆಪ್ಟೆಂಬರ್ 17, 2022
ವಾಹನ ಸವಾರರೇ ಎಚ್ಚರ : ಇನ್ಮುಂದೆ ವಾಹನಗಳಲ್ಲಿ `LED’ ದೀಪ ಬಳಸಿದರೆ 500 ರೂ. ದಂಡ!
ಬೆಂಗಳೂರು : ಎಲ್ ಇಡಿ (LED) ಬಳಸುವ ವಾಹನ ಸವಾರರಿಗೆ ಸಾರಿಗೆ ಸಚಿವ ಶ್ರೀರಾಮುಲು ಬಿಗ್ ಶಾಕ್ ನೀಡಿದ್ದು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ 500 …
Read More »ಬಿಜೆಪಿ ಸಂಸದ ಪಿ.ಸಿ. ಗದ್ದಿಗೌಡರ್ ಅವರಿಗೆ ಓಪನ್ ಹಾರ್ಟ್ ಸರ್ಜರಿ!
ಬೆಂಗಳೂರು: ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಿಜೆಪಿ ಸಂಸದ ಪಿ.ಸಿ. ಗದ್ದಿಗೌಡರ್ ಅವರಿಗೆ ಓಪನ್ ಹಾರ್ಟ್ ಸರ್ಜರಿ ಯಶಸ್ವಿಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪಿ.ಸಿ. ಗದ್ದಿಗೌಡರ್ ಆಸ್ಪತ್ರೆಗೆ ದಾಖಲಾಗಿದ್ದರು. ಬಾಗಲಕೋಟೆ ಕ್ಷೇತ್ರದ ಬಿಜೆಪಿ ಸಂಸದರಾದ ಗದ್ದಿಗೌಡರ್ ಹೃದಯದಲ್ಲಿ ಶೇಕಡ 70 ರಷ್ಟು ಬ್ಲಾಕ್ ಆಗಿದ್ದು, ಹೀಗಾಗಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿತ್ತು. ಗದ್ದಿಗೌಡರ್ ಅವರಿಗೆ ಕರೆ ಮಾಡಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರೋಗ್ಯ ವಿಚಾರಿಸಿದ್ದಾರೆ. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ …
Read More »ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ: ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ’40 ಪರ್ಸೆಂಟ್ ಸರ್ಕಾರದ ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ. ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, ’40 ಪರ್ಸೆಂಟ್ ಸರ್ಕಾರದ ಅಕ್ರಮಗಳ ತನಿಖೆಯಾದರೆ ಇಡೀ ಸರ್ಕಾರವೇ ಜೈಲು ಪಾಲಾಗಲಿದೆ. ಪಿಎಸ್‌ಐ ಹಗರಣ, ಎಮ್‌ಎಸ್‌ಐಎಲ್ ಹಗರಣ, ಗಂಗಾ ಕಲ್ಯಾಣ ಹಗರಣ ಇವೆಲ್ಲವೂ …
Read More »ವಿಮ್ಸ್ ಅವಘಡ; ಸಾವಿನ ಹೊಣೆ ಸರ್ಕಾರವೇ ಹೊರಲಿ, ಕಾಂಗ್ರೆಸ್ ಆಗ್ರಹ
ಬೆಂಗಳೂರು: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್) ಚಿಕಿತ್ಸೆಗೆ ದಾಖಲಾಗಿದ್ದ ಮೂವರು ರೋಗಿಗಳು ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತಗೊಂಡು ಮೃತ ಪಟ್ಟಿರುವ ಪ್ರಕರಣ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿತು. ರೋಗಿಗಳ ಸಾವಿನ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ವಿಧಾನಸಭೆಯಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ವಿಮ್ಸ್‌ನಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದ ಅವಧಿಯಲ್ಲಿ ಜನರೇಟರ್ ಕೂಡ ಕಾರ್ಯನಿರ್ವಹಿಸಿಲ್ಲ. ಈ ಅವಧಿಯಲ್ಲಿ ಮೌಲಾ ಹುಸೇನ್ …
Read More »ಕುರಾನ್ ವಾಕ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಲ್ಲ: ಸಚಿವೆ ಜೊಲ್ಲೆ
ಬೆಂಗಳೂರು: ‘ಮುಸ್ಲಿಮರ ಧರ್ಮ ಗ್ರಂಥವಾದ ಕುರಾನ್‌ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ’ ಎಂದು ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರು, ‘ಕುರಾನ್‌ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂಬುವುದರ ಕುರಿತು ಸರ್ಕಾರದ ನಿಲುವು ಏನು’ ಎಂಬ ಪ್ರಶ್ನೆಗೆ ಸಚಿವರು ಈ ಲಿಖಿತ ಉತ್ತರ ನೀಡಿದ್ದಾರೆ. ‘ಕುರಾನ್‌ನಲ್ಲಿರುವ ಸುರ ಆಯತ್ 3:85, ಸುರ ವರ್ಸೆ …
Read More »ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕಡಿತ: ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ
ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ಕಡಿತಗೊಳಿಸಿರುವ ವಿಚಾರಕ್ಕೆ ಸಂಬಂಂಧಿಸಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಂದಿರಾ ಕ್ಯಾಂಟೀನ್ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡದೆ ಬಿಜೆಪಿ ಸರ್ಕಾರ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿದೆ’ ಎಂದು ಕಿಡಿಕಾರಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಿಗೆ 2017-2018, 2018-19ರಲ್ಲಿ ಕ್ರಮವಾಗಿ ₹100 ಮತ್ತು ₹145 ಕೋಟಿ ಅನುದಾನ …
Read More »2013-17ರಲ್ಲೂ ಪಿಎಸ್‌ಐ ನೇಮಕಾತಿ ಅಕ್ರಮ: ಬಿಜೆಪಿ
ಬೆಂಗಳೂರು: 2013ರಲ್ಲಿ ನಡೆದ ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಅವುಗಳ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಪಿ.ರಾಜೀವ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013 ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪರೀಕ್ಷೆಯನ್ನೇ ಬರೆಯದ ಹಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಥವರು ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದರ ಸುಳಿವು ಪಡೆದು ವರದಿ …
Read More »ಮಾತೇ ಇಲ್ಲ , ಕಥೆ ಇನ್ನೆಲ್ಲಿ? ಜತೆಯಾಗಿ ನಿಂತರೂ ಮಾತನಾಡದ ಮೋದಿ, ಕ್ಸಿ ಜಿನ್‌ಪಿಂಗ್
ಹೊಸದಿಲ್ಲಿ/ಸಮರಖಂಡ್: ಲಡಾಖ್ ಮತ್ತು ಗಾಲ್ವಾನ್ ಘರ್ಷಣೆ ಬಳಿಕ ಭಾರತ ಮತ್ತು ಚೀನ ನಡುವಿನ ಸಂಬಂಧ ತೀರಾ ಎನ್ನುವಷ್ಟರ ಮಟ್ಟಿಗೆ ಹಳಸಿದ್ದು, ಇದು ಉಜ್ಬೇಕಿಸ್ಥಾನದ ಸಮರಖಂಡ್‌ನಲ್ಲೂ ವ್ಯಕ್ತವಾಯಿತು. ವಿಶೇಷವೆಂದರೆ, 2 ದಿನಗಳ ಶಾಂಘೈ ಸಹಕಾರ ಸಭೆಯ ನೆನಪಿನ ಗ್ರೂಪ್ ಫೋಟೋಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಯಲ್ಲೇ ನಿಂತರೂ ಒಂದೂ ಮಾತನಾಡಲಿಲ್ಲ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನ …
Read More »ನನ್ನ ಮದುವೆಯನ್ನು ತಡೆಯಲು ಅವರ್ಯಾರು ? ಬಜರಂಗ ದಳದ ವಿರುದ್ದ ಯುವತಿ ಆಕ್ರೋಶ
ಅವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಇನ್ನೇನು ತಾವಿಬ್ಬರು ಮದುವೆಯಾಗಬೇಕು ಎಂದುಕೊಂಡವರಿಗೆ ಅಡ್ಡಲಾಗಿದ್ದು ಬಜರಂಗದಳವರು. ಹೌದು, ಜಾಫರ್, ಚೈತ್ರಾ ಸೆ.14 ರಂದು ಚಿಕ್ಕಮಗಳೂರಿನ ರತ್ನಗಿರಿ ರಸ್ತೆಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ವಿವಾಹವಾಗಲು ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದಾರೆ. ಬಂದವರೇ ಮದುವೆಯನ್ನು ತಡೆಹಿಡಿದಿದ್ದರು. ಅಷ್ಟೆ ಅಲ್ಲ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರೆಸಿ, ಇಬ್ಬರನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಬಳಿಕ …
Read More »
Laxmi News 24×7