Breaking News

Daily Archives: ಸೆಪ್ಟೆಂಬರ್ 16, 2022

ಸತೀಶ್​ ಜಾರಕಿಹೊಳಿ ಹೆಸರಿನಲ್ಲಿ ವಿವಾದಾತ್ಮಕ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದವರ ವಿರುದ್ಧ ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ಬ್ರಾಹ್ಮಣವಾದ’ ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಒಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ, ಈಗ ಮಂದಿರದ ಟ್ರಸ್ಟ್‌ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನು ಒಬಿಸಿ ಇಲ್ಲ ಎಂದು ಸಾಮಾಜಿಕ …

Read More »

ಆನಂದ ಮಾಮನಿ ಅನಾರೋಗ್ಯದ ಹಿನ್ನೆಲೆ ಬೆಳಗಾವಿಯಲ್ಲಿ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಮೃತ್ಯುಂಜಯ ಯಾಗ ಹೋಮಾ, ಉರುಳು ಸೇವೆ,

ಬೆಳಗಾವಿ: ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಉರುಳು ಸೇವೆ, ಮೃತ್ಯುಂಜಯ ಯಾಗ ಹೋಮ ಮಾಡಿದ್ದಾರೆ.   ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಶಾಸಕ ಆನಂದ ಮಾಮನಿ ಗುಣಮುಖರಾಗಲಿ, ಆರೋಗ್ಯವಂತರಾಗಿ ಬರಲಿ ಎಂದು ಸವದತ್ತಿ ಕ್ಷೇತ್ರದ ಅವರ ಅಭಿಮಾನಿಗಳು ವಿಶೇಷ ಪೂಜೆ, ಉರುಳು ಸೇವೆ, ಮೃತ್ಯುಂಜಯ ಯಾಗ ಹೋಮ ಮಾಡಿದ್ದಾರೆ.

Read More »

ಮಹಡಿಯಿಂದ ಬಿದ್ದು ಬಾಲಕಿ ಸಾವು: ಅಂತ್ಯಸಂಸ್ಕಾರಕ್ಕೆ ನೆರವಾದ ಮುಸ್ಲಿಂ ಮುಖಂಡರು

ಬೆಳಗಾವಿ: ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕಿ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಉಡುಪಿ ಮೂಲದವರಾದ, ಕೆಲ ವರ್ಷಗಳಿಂದ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ವಾಸವಾಗಿದ್ದ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಗುರುವಾರ ಬೆಳಿಗ್ಗೆ ಮಹಡಿ ಮೇಲೆ ಹತ್ತಿ ಹೂವು ಕೀಳಲು ಹೋದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಳು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಇಲ್ಲಿನ ಮುಸ್ಲಿಂ ಸಮುದಾಯದ ಕೆಲವರು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಸೇರಿದ್ದರು. …

Read More »

ಪ್ರಧಾನಿ ಮೋದಿʼ ಹುಟ್ಟುಹಬ್ಬ:‌ ನಾಳೆ ಜನಿಸಿದ ಪ್ರತಿ ಮಗುವಿಗೆ ʻಚಿನ್ನದ ಉಂಗುರ & 720 ಕೆಜಿ ಮೀನುʼ ಗಿಫ್ಟ್!. ಎಲ್ಲಿ ಗೊತ್ತಾ?

ತಮಿಳುನಾಡು : ತಮಿಳುನಾಡಿನ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 (ನಾಳೆ)ರಂದು ಜನಿಸಿದ ಪ್ರತಿ ಮಗುವಿಗೆ ಚಿನ್ನದ ಉಂಗುರವನ್ನು ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೇ, 720 ಕೆಜಿ ಮೀನುಗಳನ್ನು ಸಹ ವಿತರಿಸಲಾಗುತ್ತದೆ.   ಈ ಯೋಜನೆಗಾಗಿ ಪಕ್ಷವು ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ ಎಂದು ರಾಜ್ಯದ ಸಚಿವ ಎಲ್ ಮುರುಗನ್ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಪ್ರತಿ ಉಂಗುರವು 2 ಗ್ರಾಂ …

Read More »

ವಾಹನ ಸವಾರರೇ ಎಚ್ಚರ.! ಮತ್ತೆ ಶುರುವಾಗಲಿದೆ ʼಟೋಯಿಂಗ್ʼ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸವಾರರು ಸ್ವಲ್ಪ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಸಿಲಿಕಾನ್ ಸಿಟಿಯಲ್ಲಿ ಮತ್ತೆ ಟೋಯಿಂಗ್ ಆರಂಭವಾಗುವ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುಳಿವು ನೀಡಿದ್ದಾರೆ.   ಬೆಂಗಳೂರಿನಲ್ಲಿ ವೆಹಿಕಲ್ ಟೋಯಿಂಗ್ ಅಗತ್ಯವಿದೆ. ಯಾವ ರೀತಿಯಲ್ಲಿ ಟೋಯಿಂಗ್ ಮಾಡಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೈಕೋರ್ಟ್ ಕೂಡ ಕಾಲಾವಕಾಶ ನೀಡಿತ್ತು ಎಂದು ತಿಳಿಸಿದ್ದಾರೆ. ಟೋಯಿಂಗ್ …

Read More »

ಸಿದ್ದರಾಮೋತ್ಸವದಲ್ಲಿ ಮಿಸ್ಸಿಂಗ್​ ಆಗಿದ್ದ ಜಮಖಂಡಿ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕೊನೆಗೂ ಪತ್ತೆ! ನಿಜವಾಯ್ತು ಸಿದ್ದು ‘ಭವಿಷ್ಯ’

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಗಲಕೋಟೆಯ ಗಿರಿಮಲ್ಲ ಖಂಡೇಕರ್ ಎಂಬುವವರು ಕೊನೆಗೂ ಒಂದೂವರೆ ತಿಂಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ. ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಅಗಸ್ಟ್​ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸಾಗಿರಲಿಲ್ಲ. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದ ಇವರು ವಾಪಸಾಗದೇ ಮನೆಯವರೆಲ್ಲರೂ ಚಿಂತೆಗೀಡಾಗಿದ್ದರು. ‘ದುಡ್ಡಿನ ಆಮಿಷ …

Read More »

ಹೊಸ ಮೊಬೈಲ್ ಬ್ಯಾಂಕಿಂಗ್ ವೈರಸ್ ನಿಮ್ಮ ಖಾತೆಯಲ್ಲಿರುವ ಹಣವನ್ನು ಖಾಲಿ ಮಾಡಲಿದೆ

ನವದೆಹಲಿ: ಹೊಸ ಸೋವಾ ಆಂಡ್ರಾಯ್ಡ್ ಟ್ರೋಜನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ಗುರಿಯಾಗಿಸಲಾಗುತ್ತಿದೆ ಅಂತ ಸಿಇಆರ್ಟಿ-ಇನ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಅಂತ ಹೇಳಿದೆ. ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ ಸೋವಾ ಒಂದು ರಾನ್ಸಮ್ವೇರ್ ಆಗಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್ ಫೋನ್ ಫೈಲ್ಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂತಿಮವಾಗಿ ಸಂಬಂಧಿಸಿದ ವ್ಯಕ್ತಿಯು ಆರ್ಥಿಕ ವಂಚನೆಗೆ ಬಲಿಯಾಗಬಹುದು ಎನ್ನಲಾಗಿದೆ ಈ ವೈರಸ್‌ ಒಮ್ಮೆ ಮೊಬೈಲ್ ಗೆ ಬಂದಾಗ, ಅದನ್ನು …

Read More »

ರಾಜ್ಯದಲ್ಲಿ ‘ಬುಲ್ಡೋಜರ್’ ಕಾರ್ಯಾಚರಣೆ ಇಲ್ಲ: ಅರಗ ಜ್ಞಾನೇಂದ್ರ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಬುಲ್ಡೋಜರ್ ಕಾರ್ಯಾಚರಣೆ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಕೋಮು ಗಲಭೆಗಳಲ್ಲಿ ಪಾಲ್ಗೊಂಡವರ ಅಕ್ರಮ ಆಸ್ತಿ ನೆಲಸಮಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ. ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಕೋಮು ಗಲಭೆಗಳ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಕೆ, ಗಲಭೆಕೋರರ ಗಡಿಪಾರು ಜೊತೆಗೆ ವಿವಿಧ …

Read More »

ಬಿಎಸ್‌ ವೈ ವಿರುದ್ಧ ಸೂಕ್ತ ತನಿಖೆಯಾಗಲಿ;- ಸಂತೋಷ್ ಹೆಗ್ಡೆ

ದಾವಣಗೆರೆ: ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಿಸಿ ತನಿಖೆ ನಡೆಸಲು ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆದೇಶಿಸಿದು ಒಳ್ಳೆಯ ವಿಚಾರ. ಹೊಸ ವಿಚಾರಣೆ ನಡೆಯಬೇಕು, ಸತ್ಯಾಂಶ ಹೊರ ಬರಬೇಕು. ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ ಬರುವುದಿಲ್ಲ. ತಪ್ಪು …

Read More »

ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ: ವರದಿ

Gautam Adani ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, …

Read More »