Breaking News

Daily Archives: ಸೆಪ್ಟೆಂಬರ್ 8, 2022

ಜಂಗಲ್‌ ರೆಸಾರ್ಟ್‌ ಉದ್ಘಾಟನೆಗೆ ಬರ್ತೀನಿ ಅಂದಿದ್ರು!

ಚಿಂಚೋಳಿ: ರಾಜ್ಯದ ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಅವರು ತಾಲೂಕಿಗೆ ಕಳೆದ ಜೂನ್‌ 27ರಂದು ಭೇಟಿ ನೀಡಿ, ಪೋಲಕಪಳ್ಳಿ ಗ್ರಾಮದ ಹತ್ತಿರ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ ಉದ್ಘಾಟಿಸಿದ್ದ ಕ್ಷಣಗಳು ಸ್ಮರಣೀಯವಾಗೇ ಉಳಿದವು.   ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಾಲೂಕಿಗೆ ಪ್ರಥಮ ಬಾರಿ ಭೇಟಿ ನೀಡಿದ್ದ ಸಚಿವ ಉಮೇಶ ಕತ್ತಿ ಅವರು “ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ’ ಉದ್ಘಾಟಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರಣ್ಯಪ್ರದೇಶ ಹೊಂದಿರುವ ಕುಂಚಾವರಂ …

Read More »

KPSC ಹಗರಣ: ಮೂವರು ಸೇವೆಯಿಂದ ವಜಾ

ಬೆಂಗಳೂರು, ಸೆ.7: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ನಡೆಸಿದ ಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿ ಕೆಪಿಎಸ್‍ಸಿ ಸಿಬ್ಬಂದಿ ಬಸವರಾಜ ಎಲ್.ಕುಂಬಾರ್, ಸನಾ ಬೀಡಿ, ರಾಮಪ್ಪ ಎ. ಹೆರಕಲ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಪ್ರಕಟನೆ ಹೊರಡಿಸಿದ್ದಾರೆ.   2020ರ ಜ.31ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ದೆಹಲಿಯ ಕರ್ನಾಟಕ ಭವನದ ಖಾಲಿ ಹುದ್ದೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. 2021ರ ಜ.24ರಂದು …

Read More »

ಬೆಳಗಾವಿ: ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು, ಕುಟುಂಬಸ್ಥರಿಗೆ ಸಾಂತ್ವನ

ಬೆಲ್ಲದ ಬಾಗೇವಾಡಿ (ಬೆಳಗಾವಿ ಜಿಲ್ಲೆ): ಉಮೇಶ ಕತ್ತಿ ಅವರ ಇಲ್ಲಿನ ನಿವಾಸಕ್ಕೆ ಗುರುವಾರ ಕೂಡ ಹಲವು ಗಣ್ಯರು, ಸಚಿವರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದರು. ತೋಟದ ಆವರಣದಲ್ಲಿನ ಉಮೇಶ ಕತ್ತಿ ಅವರ ಸಮಾಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು.   ಉಮೇಶ ಕತ್ತಿಯವರ ಪತ್ನಿ ಶೀಲಾ, ಪುತ್ರ ನಿಖಿಲ್, ಪುತ್ರಿ ಸ್ನೇಹಾ, ಸಹೋದರ ರಮೇಶ, ಅವರ ಪುತ್ರರಾದ ಪವನ್, ಪೃಥ್ವಿ ಸೇರಿ ಕುಟುಂಬದವರನ್ನು ಭೇಟಿ ಮಾಡಿದ ಗಣ್ಯರು ಸಾಂತ್ವನ …

Read More »

ಡೈಲಿ ಕಂಠಪೂರ್ತಿ ಕುಡಿದು ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿ; ಬೇಸತ್ತ ಪೋಷಕರು ಮಾಡಿದ್ದೇನು ಗೊತ್ತಾ?

ತುಮಕೂರು: ಶಿಕ್ಷಕರನ್ನು ಗುರುಗಳೆಂದು ಪೂಜಿಸುತ್ತಾರೆ. ಮಕ್ಕಳಿಗೆ ಪಾಠ ಕಲಿಸಿ ಬುದ್ದಿಹೇಳುವ ಶಿಕ್ಷಕರು ಕಂಡ್ರೆ ಮಕ್ಕಳಿಗೂ ಇಷ್ಟವಾಗುತ್ತದೆ. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಕಂಠಪೂರ್ತಿ ಕುಡಿದು ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿಯೊಬ್ಬರು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.   ಹೌದು ತುಮಕೂರು ಜಿಲ್ಲೆಯ ಚಿಕ್ಕ ಸಾರಂಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಬೆಳ್ಳಂಬೆಳಗ್ಗೆ ಮದ್ಯಪಾನ ಮಾಡಿಕೊಂಡು ಪಾಠ ಮಾಡುತ್ತಿದ್ದರು. ಈ ವೇಳೆ ಗ್ರಾಮಸ್ಥರ ಬಳಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕಿ …

Read More »

BJP ಮುಖಂಡನ ಹನಿಟ್ರ್ಯಾಪ್ ಪ್ರಕರಣ: ಬಿಗ್ ಟ್ವಿಸ್ಟ್.. ಬೆಡ್ ರೂಮ್ Video ವೈರಲ್

ಮಂಡ್ಯ :- ಆರ್​ಎಸ್​ಎಸ್​, ಬಿಜೆಪಿ ಮುಖಂಡ ಹನಿಟ್ರ್ಯಾಪ್​​ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, 50 ಲಕ್ಷ ಹಣವನ್ನು ಸುಲಿಗೆ ಮಾಡಿ ದ್ದಾರೆ. ಎಂದು ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ, ಶ್ರೀನಿಧಿ ಗೊಲ್ಡ್ ಮಾಲೀಕ ಜಗನ್ನಾಥ ಶೆಟ್ಟಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್​ ಕೊಡುವುದಾಗಿ ಕಾರಿನಲ್ಲಿ …

Read More »

ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 2ನೇ ಆರೋಪಿ ವಾರ್ಡನ್ ರಶ್ಮಿಯನ್ನು ನ್ಯಾಯಾಂಗ ಬಂಧನಕ್ಕೆ

ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 2ನೇ ಆರೋಪಿ ವಾರ್ಡನ್ ರಶ್ಮಿಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿ ಚಿತ್ರದುರ್ಗ ಕೋರ್ಟ್ ಆದೇಶ ನೀಡಿದೆ. ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ರಶ್ಮಿಯ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಇಂದು ಚಿತ್ರದುರ್ಗ ಜಿಲ್ಲಾ ಎರಡನೇ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ರಶ್ಮಿಯನ್ನು ಸೆ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ …

Read More »

‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘ಆರೋಗ್ಯ ಇಲಾಖೆ’ಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ( Karnataka Health Department Recruitment ) ಇರುವಂತ ವಿವಿಧ 558 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ( Job Application ) ಆಹ್ವಾನಿಸಲಾಗಿದೆ.   ಈ ಸಂಬಂಧ ಆರೋಗ್ಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( Karnataka State Health and Family Welfare Department ) ಉಳಿಕೆ ಮೂಲ …

Read More »

ತುಂಬಿ ಹರಿಯತ್ತಿರುವ ಕಳ್ಳಕವಟಗಿ ಗ್ರಾಮದ ಹಳ್ಳ: ಕಷ್ಟವಾದ ಸೋಮನಾಥನ ದರ್ಶನ

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಹಳ್ಳ ಸತತ ಮಳೆಯಿಂದ ತುಂಬಿ ಹರಿಯುತ್ತಿದೆ.ಸಂಗಮನಾಥನ ಹಳ್ಳ ಮಳೆ ನೀರಿಗೆ ಮೈದುಂಬಿ‌ ಹರಿಯುತ್ತಿದೆ. ಭಕ್ತರಿಗೆ ಸಂಗಮನಾಥನ ದರ್ಶನ ಕಷ್ಟವಾಗ್ತಿದೆ. ತಾಳಿಕೋಟೆ ಪಟ್ಟಣಕ್ಕಿದ್ದ ಪರ್ಯಾಯ ಮಾರ್ಗವೂ ಬಂದ್ ಆಗಿದೆ. ಕಾಮಗಾರಿ ನಡೆದು ತಿಂಗಳಲ್ಲೇ ತಾಳಿಕೋಟಿ-ಮೂಕಿಹಾಳ ಸಂಪರ್ಕಿಸುವ ಸೋಗಲಿ ಹಳ್ಳದ ಸೇತುವೆ ಕಳಚಿ ಬೀಳ್ತಿದೆ. ಮೂಕಿಹಾಳ, ಹಡಗಿನಾಳ,ಕಲ್ಲದೇವನಹಳ್ಳಿ, ಶಿವಪುರ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಡೋಣಿ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದ ಪ್ರಮುಖ ಸೇತುವೆ …

Read More »

ಸಾಗುವಳಿ ಹಕ್ಕು ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ

ಜಮೀನಿಗೆ ಸಾಗುವಳಿ ಹಕ್ಕು ನೀಡುವಂತೆ ಆಗ್ರಹಿಸಿ ಚನ್ನಮ್ಮನ ಕಿತ್ತೂರು ತಾಲೂಕಿನ ಒಂಬತ್ತು ಗ್ರಾಮಗಳ ರೈತರು “ಬೆಳಗಾವಿ ಚಲೋ” ಹೆಸರಿನಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಹಕ್ಕು ಪತ್ರ ನೀಡದಿದ್ರೆ ದನ, ಕರು, ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಡಿಸಿ ಕಚೇರಿ ಮುಂದೆ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು, ಗುರುವಾರ ಕಿತ್ತೂರಿನಲ್ಲಿರುವ ರಾಣಿ ಚನ್ನಮ್ಮಾಜಿ ವೃತ್ತದ ಮುಂಭಾಗದಲ್ಲಿ ಕೆಲಕಾಲ ಧರಣಿ ನಡೆಸಿದ ರೈತರು ಹಾಗೂ ರೈತ ಮುಖಂಡರು ರಾಜ್ಯ …

Read More »

ಕನ್ನಡ ಹಿರಿಯ ನಟಿ ಲೀಲಾವತಿ’ಗೆ ಅನಾರೋಗ್ಯ: ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಭೇಟಿ, ಆರೋಗ್ಯ ವಿಚಾರಣೆ

ಬೆಂಗಳೂರು: ಕನ್ನಡದ ಹಿರಿಯ ನಟಿ ಲೀಲಾವತಿ ( Actress Leelavathi ) ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ನಿವಾಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.   ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವಂತ ಕನ್ನಡದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನಟಿ ಲೀಲಾವತಿಗೆ ನೀಡಲಾಗುತ್ತಿದೆ.   ಈ ವಿಷಯ …

Read More »