Breaking News

Daily Archives: ಸೆಪ್ಟೆಂಬರ್ 7, 2022

ಉಮೇಶ್ ಕತ್ತಿ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ (61) ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿದ್ದ 61 ವರ್ಷದ ಉಮೇಶ್ ಕತ್ತಿ ಅವರು ಮಂಗಳವಾರ (ಸೆಪ್ಟೆಂಬರ್ 6) ರಾತ್ರಿ 10.30ರ ಸುಮಾರಿಗೆ ಬಾತ್ ರೂಮ್ ಗೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅವರ ಕುಟುಂಬದವರು ತಕ್ಷಣ ಅವರನ್ನು ಸರ್ಕಾರಿ ಕಾರಿನಲ್ಲಿಯೇ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಚಿವ ಉಮೇಶ್ ಕತ್ತಿ …

Read More »

ಹಿಂದಿ ಹೇರಿಕೆಗೆ ಉತ್ತರ: ಕರ್ನಾಟಕದ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯ!

ಬೆಂಗಳೂರು, ಸೆಪ್ಟೆಂಬರ್ 6: ಕರ್ನಾಟಕದಲ್ಲಿ ನಡೆಯುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡವೇ ಕಡ್ಡಾಯ ಭಾಷೆ ಆಗಿರಬೇಕು ಎಂದು ರಾಜ್ಯ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ. ಕನ್ನಡವನ್ನು ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಹಾಗೂ ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನ ಅನ್ವಯ ಸಂರಕ್ಷಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.     ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವೇ ಇರಬೇಕು ಎಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ …

Read More »

ಹೊಸ ಸಾಹಸಕ್ಕೆ ಕೈ ಹಾಕಿದ ಕಲಾ ಸಾಮ್ರಾಟ್ ಎಸ್ ನಾರಾಯಣ್ ಪುತ್ರ!

ಸ್ಯಾಂಡಲ್‌ವುಡ್‌ನ ಶಿಸ್ತಿನ ನಿರ್ದೇಶಕ ಎಂದೇ ಖ್ಯಾತಿ ಪಡೆದಿರೋ ಎಸ್‌ ನಾರಾಯಣ್ ಹಾಗೂ ಅವರ ಪುತ್ರ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪುತ್ರ ಪವನ್ ಎಸ್ ನಾರಾಯಣ್ ನೇತೃತ್ವದಲ್ಲಿ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ. ಶಿಕ್ಷಕರ ದಿನದಂದು ಕನ್ನಡ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ‘ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ಯನ್ನು ಉದ್ಘಾಟನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ ಈ ನೂತನ ಫಿಲ್ಮ್ ಅಕಾಡೆಮಿಯನ್ನು ಉದ್ಘಾಟಿಸಿದ್ರೆ, ಹಿರಿಯ ನಟರಾದ ಮುಖ್ಯಮಂತ್ರಿ …

Read More »

ಆಪ್ತ ಸ್ನೇಹಿತನ ಅಗಲಿಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕಂಬನಿ*

  ಗೋಕಾಕ್- ರಾಜ್ಯದ ಹಿರಿಯ ಶಾಸಕ, ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನಕ್ಕೆ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕತ್ತಿ ಅವರ ನಿಧನದಿಂದ ಮುತ್ಸದ್ದಿ, ಕ್ರಿಯಾಶೀಲ ವ್ಯಕ್ತಿತ್ವದ ಆಪ್ತ ಸ್ನೇಹಿತನೊಬ್ಬನನ್ನು ಕಳೆದುಕೊಂಡಿದ್ದೇನೆ. ನನ್ನ ಮತ್ತು ಕತ್ತಿ ಅವರ ಮಧ್ಯೆ ಸುಮಾರು ೨ ದಶಕದ ಒಡನಾಟವೂ ಎಂದೂ ಮರೆಯದ ಘಟನೆ ಎಂದೂ ಅವರು ತಿಳಿಸಿದ್ದಾರೆ. ಉತ್ತಮ ಹೃದಯವಂತಿಕೆಯ …

Read More »

ಹೃದಯಾಘಾತದಿಂದ ಬಿಜೆಪಿ ಶಾಸಕ ಅರವಿಂದ್ ಗಿರಿ ನಿಧನ..!

ಲಕ್ನೋ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಅರವಿಂದ್ ಗಿರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅರವಿಂದ್ ಗಿರಿ ಅವರು ಲಖೀಂಪುರ ಖೇರಿ ಜಿಲ್ಲೆಯ ಗೋಲ ಗೋಕ್ರನಾಥ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಈ ಕುರಿತಂತೆ ಮಾಹಿತಿ ನೀಡಿರುವ ಲಖೀಂಪುರ ಖೇರಿ ಬಿಜೆಪಿ ಘಟಕ, ಹೃದಯಾಘಾತದ ಬಳಿಕ ಕೂಡಲೇ ಅರವಿಂದ್ ಗಿರಿ ಅವರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕರೆದೊಯ್ಯುವಾಗ ಸೀತಾಪುರ ಬಳಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಅರವಿಂದ್ ಗಿರಿ ಅವರ ಸಾವಿಗೆ ಮುಖ್ಯಮಂತ್ರಿ ಯೋಗಿ …

Read More »

ಪ್ರೌಢಶಾಲಾ ಸಹ ಶಿಕ್ಷಕರ ಅಕ್ರಮ ನೇಮಕ: 11 ಶಿಕ್ಷಕರ ಬಂಧನ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಗ್ರೇಡ್‌ 2 ಸಹ ಶಿಕ್ಷಕರು ಮತ್ತು ಗ್ರೇಡ್‌-1ರ ದೈಹಿಕ ಶಿಕ್ಷಕರ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತುಮಕೂರು ಮತ್ತು ವಿಜಯಪುರ ಜಿಲ್ಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 11 ಮಂದಿ ಶಾಲಾ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.   ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಗ್ರಾಮದ ಶಾಲೆಯ ಶಮೀನಾಜ್‌ ಬಾನು (34), ಕುಣಿಗಲ್‌ ತಾಲೂಕಿನ ಕೊಡವತ್ತಿ ಗ್ರಾಮದ …

Read More »

ಶಿಕ್ಷಕರ ಹಾಜರಾತಿಗೆ ಬಯೋಮೆಟ್ರಿಕ್‌ ಕಡ್ಡಾಯ; 15 ನಿಮಿಷ ಬೇಗ ಶಾಲೆಗೆ ಬರುವಂತೆ ಸೂಚನೆ

ಬೆಂಗಳೂರು: ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದೆ ಕಳ್ಳಾಟವಾಡುವ ಶಿಕ್ಷಕರಿಗೆ ಬಿಸಿ ಮುಟ್ಟಿಸಿರುವ ಶಿಕ್ಷಣ ಇಲಾಖೆ, ಶಾಲೆ ಆರಂಭದ ಸಮಯಕ್ಕಿಂತ 15 ನಿಮಿಷ ಬೇಗ ಬರಬೇಕು ಮತ್ತು ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾಗಿ ಹಾಕುವಂತೆ ಸೂಚಿಸಿದೆ.   ಶಾಲೆಯ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಚಾರಗಳಲ್ಲಿ ಶಿಕ್ಷಕರ ಅಶಿಸ್ತಿನಿಂದ ಮಕ್ಕಳ ಕಲಿಕಾ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು …

Read More »

ಉಮೇಶ್ ಕತ್ತಿ ನಿಧನದಿಂದ ತೀವ್ರ ಆಘಾತವಾಗಿದೆ :H.D.K.

ಬೆಂಗಳೂರು : ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.   ಉಮೇಶ್ ಕತ್ತಿ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ನನಗೆ ತೀವ್ರ ಆಘಾತವಾಗಿದೆ. ಜನತಾ ಪರಿವಾರದ ಹಿರಿಯರಾಗಿದ್ದ ಕತ್ತಿ ಅವರು ಸ್ನೇಹಜೀವಿ ಆಗಿದ್ದರಲ್ಲದೆ, ತಮ್ಮ ನೇರ …

Read More »

ಐಸ್​ಕ್ರೀಮ್​ ಮಾರಾಟದ ಸೋಗಿನಲ್ಲಿ ಬಂದ ಮಕ್ಕಳ ಕಳ್ಳ; ಬಾಲಕನನ್ನು ಕದ್ದೊಯ್ಯಲು ಮುಂದಾದಾಗ ಸಿಕ್ಕಿಬಿದ್ದ..

ಬೆಳಗಾವಿ: ಮಕ್ಕಳ ಕಳವಿಗೆ ಯತ್ನಿಸಿದವನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಹಾಕಿಕೊಂಡು ಏಟು ಬೀಳುತ್ತಿದ್ದಂತೆ ತಪ್ಪಿಸಿಕೊಂಡು ಪರಾರಿಯಾದ ಪ್ರಕರಣವೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದು, ಜನತೆಯಲ್ಲಿ ಆತಂಕ ಮೂಡಿದೆ.   ಸೋಮವಾರ ಮಧ್ಯಾಹ್ನ ವೇಳೆ ಪಟ್ಟಣದ ಪಿಂಜಾರ ಗಲ್ಲಿಯಲ್ಲಿ ಮಕ್ಕಳ ಕಳ್ಳನೋರ್ವ ಚಿಕ್ಕ ಬಾಲಕನನ್ನು ಕಳ್ಳತನ ಮಾಡಿ ಕರೆದೊಯ್ಯುವಾಗ ಗಲ್ಲಿಯ ಜನತೆಯಿಂದ ಧರ್ಮದೇಟು ತಿಂದು ಪರಾರಿಯಾದ ಘಟನೆ ನಡೆದಿದೆ. ಸ್ವಯಂ ಸತೀಶ ಅರವಳ್ಳಿ ಎಂಬ ನಾಲ್ಕು ವರ್ಷದ ಬಾಲಕನು …

Read More »

ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್‌ ಕತ್ತಿ ಅಂತ್ಯಸಂಸ್ಕಾರ

ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್‌ ಕತ್ತಿ ಅಂತ್ಯಸಂಸ್ಕಾರ ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಮೃತದೇಹದ ಅಂತಿಮ ಸಂಸ್ಕಾರ ಇಂದು ಸಂಜೆ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಲಿದೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಸಚಿವರ ಸ್ವಗೃಹ ಮತ್ತು ಬೆಳಗ್ಗೆ 10.30ಕ್ಕೆ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 12ಕ್ಕೆ ಸ್ವಗ್ರಾಮ ಬೆಲ್ಲದ ಬಾಗೇವಾಡಿಗೆ ಮೃತದೇಹವನ್ನು ರವಾನಿಸಲಿದ್ದು, …

Read More »