ದಾಂಡೇಲಿ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಅಕ್ರಮವಾಗಿ ಸಾಗವಾನಿ ಸಾಗಿಸುತ್ತಿದ್ದ ವಾಹನ ಮಾಲು ಸಮೇತ ಜಪ್ತಿ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿರುವ ಘಟನೆ ಜೋಯ್ಡಾ ತಾಲೂಕಿನ ಉಸೋಡ ಬಳಿ ನಡೆದಿದೆ. ಹೌದು GA 07 C 9384 ನಂಬರಿನ ಸಫಾರಿ ವಾಹನದಲ್ಲಿ ಅಕ್ರಮವಾಗಿ ಸಾಗವಾನಿ ಮರದ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ದಾಂಡೇಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. …
Read More »Daily Archives: ಸೆಪ್ಟೆಂಬರ್ 2, 2022
ಈ ಊರಿನ ಜನರೆಲ್ಲ ಯೂಟ್ಯೂಬರ್ಸ್; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ
ಯೂಟ್ಯೂಬ್ ಚಾನಲ್ ನಡೆಸ್ತಿರೋರನ್ನು ನೀವು ನೋಡಿರಬಹುದು. ನಿಮ್ಮದೂ ಒಂದು ಯೂಟ್ಯೂಬ್ ಚಾನಲ್ ಇರಬಹುದು! ಚೆನ್ನಾಗಿ ಸ್ಮಾರ್ಟ್ ಆಗಿ ಕೆಲಸ ಮಾಡಿ ನಿಮ್ಮ ಚಾನಲ್ ಸಹ ಕ್ಲಿಕ್ ಆದರೆ ಚೆನ್ನಾಗಿಯೇ ಹಣ ಬರುತ್ತೆ ನಿಜ. ಆದರೆ ಯೂಟ್ಯೂಬ್ ಚಾನಲ್ಗೆಂದೇ ಸರ್ಕಾರಿ ಕೆಲಸವನ್ನೂ (Government Job) ಬಿಡೋರನ್ನು ನೋಡಿದ್ದೀರಾ? ಇಲ್ಲೊಂದು ಊರಿಗೆ ಊರೇ ಯೂಟ್ಯೂಬ್ ವಿಡಿಯೋಸ್ (YouTube Channel) ಮಾಡ್ತಾ ಅದ್ರಲ್ಲಿ ಬರೋ ಹಣದಿಂದಲೇ ಜೀವನ ಮಾಡ್ತಿದೆ! ಇದು ನಂಬಲಿಕ್ಕೆ ಅಸಾಧ್ಯ ಅನಿಸುವಂಥಾ …
Read More »ಮಂಗಳೂರಿನಲ್ಲಿ 3800 ಕೋಟಿ ರೂ. ವಿವಿಧ ಯೋಜನೆಗಳಿಗೆ ಪಿಎಂ ಮೋದಿ ಚಾಲನೆ
ಆಯುμÁ್ಮನ್ ಭಾರತ್ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಸುಮಾರು 4 ಕೋಟಿ ಬಡವರಿಗೆ ಉಚಿತ ಚಿಕಿತ್ಸೆ ದೊರೆತಿದೆ, ಕರ್ನಾಟಕದಲ್ಲೂ 30 ಲಕ್ಷಕ್ಕೂ ಹೆಚ್ಚು ಬಡವರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು. ನಂತರ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಮೈಸೂರು ಪೇಟ ತೊಡಿಸಿ, …
Read More »ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ? ವಿನಾಶ ದರ್ಶನಕ್ಕೋ?: ಸಿದ್ದರಾಮಯ್ಯ
ಬೆಂಗಳೂರು: “ನಿಮ್ಮ ಇಂದಿನ ಮಂಗಳೂರು ಭೇಟಿ ವಿಕಾಸ ದರ್ಶನಕ್ಕೋ? ಅಥವಾ ವಿನಾಸ ದರ್ಶನಕ್ಕೊʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. #AnswerMadiModi ಎಂಬ ಹ್ಯಾಷ್ ಟ್ಯಾಗ್ ಬಳಸಿ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, “ನಮ್ಮೆಲ್ಲ ಪ್ರಶ್ನೆಗಳಿಗೆ ನಿಮ್ಮ ಇಂದಿನ ಭಾಷಣದಲ್ಲಿ ಉತ್ತರ ಕೊಡಿʼ ಎಂದು ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರ ಪ್ರಶ್ನೆಗಳು ಹೀಗಿವೆ… ದಕ್ಷಿಣ ಕನ್ನಡದ ಉದ್ಯಮ ಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, …
Read More »ಹಬ್ಬ ಆಚರಿಸಲು ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ: ಮುತಾಲಿಕ್
ಹುಬ್ಬಳ್ಳಿ: ‘ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ನಾವಿದ್ದರೂ, ನಮ್ಮದೇ ನೆಲದಲ್ಲಿ ಹಬ್ಬ ಆಚರಿಸಲು ಕೋರ್ಟ್ ಕಟ್ಟೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿದೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದರು. ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿಯ ವಿಸರ್ಜನೆ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಇದೀಗ ಹಿಂದೂಗಳೆಲ್ಲರೂ ಒಂದಾಗಿದ್ದಾರೆ. ರಾಣಿ ಚನ್ನಮ್ಮ ಮೈದಾನದಲ್ಲಿ ನಡೆದ ಗಣೇಶೋತ್ಸವವೇ ಇದಕ್ಕೆ ಸಾಕ್ಷಿ. ಪ್ರಥಮ ಬಾರಿಗೆ ಇಲ್ಲಿ …
Read More »ಪ್ಲ್ಯಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಮರಕ್ಕೆ ನೇತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಳಗಾವಿ: ಕಳೆದ ಒಂದು ವಾರದ ಹಿಂದೆ ಪ್ಲಾಸ್ಟಿಕ್ ಕವರ್ನಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೋಕ್ಸೋ ಪ್ರಕರಣದಡಿ ಒಬ್ಬ ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನೆರಸಾ – ಗೌಳಿವಾಡ ಗ್ರಾಮದ ಮಲ್ಲು ಪಿಂಗಳೆ (19) ಬಂಧಿತ ಆರೋಪಿಯಾಗಿದ್ದಾನೆ. ಪ್ರಕರಣದ ಹಿನ್ನೆಲೆ ನೋಡುವುದಾದರೆ, ಕಳೆದ ಆರು ದಿನಗಳ ಹಿಂದೆ (ಆ.25ರಂದು) ಪ್ಲ್ಯಾಸ್ಟಿಕ್ ಚೀಲದಲ್ಲಿ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಲಾಗಿತ್ತು. …
Read More »ನ್ಯಾಯಾಧೀಶರ ಸೂಚನೆ ಮೇರೆಗೆ ಕೋರ್ಟ್ಗೆ ಮುರುಘಾ ಶ್ರೀ ಹಾಜರು
ಚಿತ್ರದುರ್ಗ: ಪೋಕ್ಸೋ ಪ್ರಕರಣ ಸಂಬಂಧ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರುವಂತೆ ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರು ಸೂಚಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಈಗಾಗಲೇ ಶ್ರೀಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಒಪ್ಪಿಸಿದೆ. ನಂತರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಐಸಿಯು ಘಟಕದಲ್ಲಿ ದಾಖಲಿಸಲಾಗಿದೆ. ಇದೀಗ ಮುರುಘಾ ಶರಣರು ಆಸ್ಪತ್ರೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬರುವಂತೆ ಜಿಲ್ಲಾ …
Read More »ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಮಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಕರಾವಳಿ ಭಾಗದ ಅಭಿವೃಧ್ಧಿಗೆ ಬಲವನ್ನು ತುಂಬುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿರವರು ವಿವಿಧ ಕಾಮಗಾರಿಗೆ ಚಾಲನೆಯನ್ನು ನೀಡುವ ಉದ್ದೇಶಿದಿಂದ ಇಂದು ಮಂಗಳೂರಿಗೆ ಆಗಮಿಸಿದರು. ಹೌದು ಮಂಗಳೂರು ಭಾಗದಲ್ಲಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಂದರು ಪ್ರಾಧಿಕಾರದ ೩೮೦೦ ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶದಿಂದ ಇಂದು ಪ್ರಧಾನಿ ನರೇಂದ್ರ ಮೋದಿ ನವ ಮಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ್ ಬೊಮ್ಮಾಯಿ, …
Read More »ಜಾರಕಿಹೊಳಿ ಬ್ರದರ್ಸ ಬಿಟ್ಟು ಯಮಕನಮರಡಿಯಲ್ಲಿ ಕಾರ್ಯಕ್ರಮ ಮಾಡಿದ್ದು ತಪ್ಪು: ಸಂಜಯ್ ಪಾಟೀಲ್
ನಿಗಮ ಮಂಡಳಿ ಅಧ್ಯಕ್ಷರಾದ ಹಿನ್ನೆಲೆ ಮಾರುತಿ ಅಷ್ಟಗಿ ಅವರಿಗೆ ಯಮಕನಮರಡಿಯಲ್ಲಿ ಅವರ ಕಾರ್ಯಕರ್ತರು ಅಭಿನಂದನಾ ಸಮಾರಂಭ ಮಾಡಿದ್ದರು. ಅದಕ್ಕೆ ನಾವು ಪಕ್ಷದ ಶಿಷ್ಟಾಚಾರ ಹಾಕಲು ಬರುವುದಿಲ್ಲ. ಆದರೆ ಜಾರಕಿಹೊಳಿ ಬ್ರದರ್ಸ ಬಿಟ್ಟು ಕಾರ್ಯಕ್ರಮ ಮಾಡಿದ್ದು ತಪ್ಪು ಎನ್ನುವ ಮೂಲಕ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಎಂ.ಕೆ.ಹುಬ್ಬಳ್ಳಿಯಲ್ಲಿ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ …
Read More »ಮುರಘಾ ಶ್ರೀ ಬಂಧನ ಕಾಯ್ದೆ ಪ್ರಕಾರ ಸರ್ಕಾರ ಏನು ಕ್ರಮ ತಗೆದುಕೊಳ್ಳಬೇಕೋ ತಗೆದುಕೊಳ್ಳುತ್ತಿದ್ದಾರೆ: ಪ್ರಭಾಕರ್ ಕೋರೆ
ಮುರಘಾ ಶ್ರೀಗಳ ಬಂಧನ ಈಗ ಸರಕಾರದ ಮುಂದಿದೆ. ಸರಕಾರ ಕಾಯ್ದೆ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತೆ. ತಪ್ಪು ಮಾಡಿದವರ ಮೇಲೆ ಕ್ರಮ ಆಗೇ ಆಗುತ್ತೆ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಹೇಳಿದ್ದಾರೆ. ಪೆÇೀಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳ ಬಂಧನ ವಿಚಾರ ಕುರಿತಂತೆ ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿ ಮೊದಲು ಪ್ರತಿಕ್ರಿಯಿಸಲು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ನಿರಾಕರಿಸಿದ್ದರು. ಮಹಾಂತೇಶ ಕವಟಗಿಮಠ ಪ್ರತಿಕ್ರಿಯಿಸುತ್ತಾರೆ ಎಂದು ಕವಟಗಿಮಠರತ್ತ ಬೊಟ್ಟು …
Read More »
Laxmi News 24×7