Breaking News

Monthly Archives: ಆಗಷ್ಟ್ 2022

ಲಕ್ಷ್ಮೀ ಹೆಬ್ಬಾಳ್ಕರ್ ಬೋಗಸ್‍ಗಿರಿ ಮಾಡಿ, ಕುಕ್ಕರ್ ಕೊಟ್ಟು ಕಳೆದ ಬಾರಿ ಆರಿಸಿ ಬಂದಿದ್ದಾರೆ.: ಶಿವಾಜಿ ಸುಂಠಕರ್

ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಮಜುಕರ್ ಕಾಂಗ್ರೆಸ್ ಪಕ್ಷ ಸೇರಿದ್ದ ವಿಚಾರ ಸಧ್ಯ ಟ್ವಿಸ್ಟ್ ಪಡೆದುಕೊಂಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಂಇಎಸ್ ಮುಖಂಡ ಶಿವಾಜಿ ಸುಂಠಕರ್ ಏಕಾಏಕಿ ಕರೆದುಕೊಂಡು ಹೋಗಿ ಕಾಂಗ್ರೆಸ್ ಶಾಲು, ಮಾಲೆ ಹಾಕಿದ್ದಾರೆ. ಇದೆಲ್ಲಾ ಸುಳ್ಳು ಬಾಳು ಮಜುಕರ್ ಕಾಂಗ್ರೆಸ್ ಸೇರಿಲ್ಲ, ಮುಂದೆಯೂ ಕಾಂಗ್ರೆಸ್ ಸೇರುವುದಿಲ್ಲ ಎಂದಿದ್ದಾರೆ. ಹೌದು ಇತ್ತಿಚಿಗೆ ಬೆಳವಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂಇಎಸ್ ಮುಖಂಡ ಬಾಳು ಮಜುಕರ್ …

Read More »

ಮಕ್ಕಳೇ ಮೊಬೈಲ್‌ ಬಿಡಿ, ಗಿಲ್ಲಿ ದಾಂಡು ಆಡಿ! ಶಾಲೆಗಳಲ್ಲೇ 75 ದೇಸಿ ಕ್ರೀಡೆಗಳ ಪರಿಚಯ

ಹೊಸದಿಲ್ಲಿ: ಇಂದಿನ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳು, ಆಟಗಳ ಪರಿಚಯವೇ ಇಲ್ಲ. ಸ್ವಲ್ಪ ಸಮಯ ಸಿಕ್ಕರೂ ಮೊಬೈಲ್‌, ಲ್ಯಾಪ್‌ಟಾಪ್‌ ಮುಂದೆ ಕುಳಿತುಕೊಂಡು ಬಿಡುತ್ತಾರೆ. ಇದು ಎಲ್ಲ ಹೆತ್ತವರ ಅಳಲು. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆಯಲ್ಲೇ ಗ್ರಾಮೀಣ ಆಟಗಳನ್ನು ಕಲಿಸಿಕೊಟ್ಟರೆ ಹೇಗಿರುತ್ತದೆ?   ಹೌದು. ಕೇಂದ್ರ ಸರ‌ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಕರ್ನಾಟಕ ಹಾಗೂ ಒಡಿಶಾದ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಗಿಲ್ಲಿ ದಾಂಡು (ಚಿನ್ನಿ ದಾಂಡು) ಸೇರಿದಂತೆ ಒಟ್ಟು 75 “ಭಾರತೀಯ ಆಟ’ಗಳನ್ನು ಶಾಲೆಗಳಲ್ಲೇ …

Read More »

ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಅಭಿಯಾನ ನಡೆಸಲು ಪ್ರಧಾನಿ ಸಲಹೆ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವವು ಒಂದು ದೊಡ್ಡ ಮಟ್ಟದ ಸಾಮೂಹಿಕ ಚಳವಳಿಯ ರೂಪ ಪಡೆಯುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಎಲ್ಲರೂ ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರವಾಗಿ ಬಳಸಿ’ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.   ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಅವರು, ಆ.13ರಿಂದ 15ರವರೆಗೆ ಆಯೋಜಿಸಲಾಗಿರುವ “ಹರ್‌ ಘರ್‌ ತಿರಂಗಾ’ ಅಭಿಯಾನದ …

Read More »

ಗಾಳಿಪಟ-2ʼ ಟ್ರೇಲರ್‌ ರಿಲೀಸ್‌ :

ಯೋಗರಾಜ್‌ ಭಟ್‌ ನಿರ್ದೇಶನದ ʼಗಾಳಿಪಟ-2ʼ ಚಿತ್ರದ ಬಹು ನಿರೀಕ್ಷಿತ ಟ್ರೇಲರ್‌ ರಿಲೀಸ್‌ ಆಗಿದೆ. ಚಿತ್ರದ ಬಗ್ಗೆ ಚಂದವನದಲ್ಲಿ ದೊಡ್ಡ ನಿರೀಕ್ಷೆಯಿದೆ. ಈಗಾಗಲೇ ಆ ನಿರೀಕ್ಷೆಯನ್ನು ಚಿತ್ರದ ಹಾಡು ಹಾಗೂ ಕ್ಯಾರೆಕ್ಟರ್ ಟೀಸರ್‌ ದುಪ್ಪಟ್ಟುಗೊಳಿಸಿದೆ. ಇದೀಗ ಟ್ರೇಲರ್‌ ರಿಲೀಸ್‌ ಆಗಿದ್ದು, ಹೊಸ ಬಗೆಯ ಕಥೆಯಿಂದ ಗಮನ ಸೆಳೆಯುತ್ತಿದೆ. ‌ ʼನೀನು ಬಗೆಹರಿಯದ ಹಾಡುʼ, ʼದೇವ್ಲೆ ದೇವ್ಲೆʼ,ʼಎಕ್ಸಾಂ ಹಾಡುʼ ಮಿಲಿಯನ್‌ ಗೂ ಅಧಿಕ ವೀಕ್ಷಣೆ ಪಡೆದುಕೊಂಡು ಸೂಪರ್‌ ಹಿಟ್‌ ಸಾಲಿಗೆ ಸೇರಿದೆ. ಟ್ರೇಲರ್‌ …

Read More »

ಸಿಎಂ ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶನ ಯತ್ನ: ಯುವಕರು ಪೊಲೀಸ್ ವಶಕ್ಕೆ

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಮಾದಿಗ ಸಮಾಜದ ಯುವಕರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.   ಗಂಗಾವತಿ ನಗರದ ಸೋಮನಾಥ ಕಂಪ್ಲಿ ಹಾಗೂ ಬಾಳಪ್ಪ ಕಾಮದೊಡ್ಡಿ ಎಂಬ ಯುವಕರು ಸದಾಶಿವ ವರದಿ ಅನುಷ್ಠಾನದ ಮೂಲಕ ಎಸ್ಸಿ ಮೀಸಲಾತಿ ಯನ್ನು …

Read More »

ಸತೀಶ ಜಾರಕಿಹೊಳಿ ಫೌಂಡೇಶನ್‍ನಿಂದ ಸೌಂಡ್ ಸಿಸ್ಟಮ್-ಕುರ್ಚಿಗಳ ವಿತರಣೆ

ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್‍ನಿಂದ ಘಟಪ್ರಭಾ ಸೇವಾದಳದಲ್ಲಿ ವಿದ್ಯಾರ್ಥಿಗಳಿಗೆ ಆರ್ಮಿ, ಪೆÇಲೀಸ್ ತರಬೇತಿಯನ್ನು ಉಚಿತ ನೀಡಲಾಗುತ್ತಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿಯ ಜಾಧವ ನಗರದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಕಚೇರಿಯಲ್ಲಿ ಸತೀಶ ಜಾರಕಿಹೊಳಿ ಫೌಂಢೇಶನ್‍ದಿಂದ ಬೆಳಗಾವಿಯ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದಲ್ಲಿರುವ ವಿವಿಧ ಸಮುದಾಯಗಳಿಗೆ ಸೌಂಡ್ ಸಿಸ್ಟಮ್ ಹಾಗು ಕುರ್ಚಿಗಳನ್ನು ಯುವ …

Read More »

ಭ್ರಷ್ಟ ಬಿಜೆಪಿಯನ್ನು ಬುಡ ಸಮೇತ ಕಿತ್ತು ಹಾಕುವುದೇ ಎಎಪಿ ಗುರಿ:

ಬೆಂಗಳೂರು : ಮುಂಬರುವ ಬಿಬಿಎಂಪಿ (ಪಾಲಿಕೆ) ಚುನಾವಣೆ ಭ್ರಷ್ಟ ಬಿಜೆಪಿ ವಿರುದ್ಧ ಜನಸಾಮಾನ್ಯರು ನಡೆಸುವ ಹಣಾಹಣಿಯಾಗಲಿದೆ. ಪಕ್ಷ ಸ್ಥಾಪನೆಯ ಹತ್ತೇ ವರ್ಷದಲ್ಲಿ ದೇಶದೆಲ್ಲೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯ ಸಾಧಿಸಿದ್ದಲ್ಲದೇ, ಎರಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿರುವ ಆಮ್ ಆದ್ಮಿ ಪಾರ್ಟಿಯು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ನಾವು ಕೆಲಸ ಮಾಡುತ್ತಿರುವುದರಿಂದ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೇವೆ.! ದೇಶದ ಜನರು “ಅರವಿಂದ್ ಕೇಜ್ರಿವಾಲ್ ಮಾದರಿ” ಅನ್ನು ಗುರುತಿಸಿದ್ದಾರೆ. ಪಾಲಿಕೆ ಚುನಾವಣೆ ಯಾವ ಕ್ಷಣದಲ್ಲಾದರೂ …

Read More »

ಪವರ್ ಸ್ಟಾರ್ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಗ್ಗೆ ವ್ಯಂಗ್ಯದ ರೀತಿಯಲ್ಲಿ ಟ್ವೀಟ್ ಮಾಡಿದ್ದಕ್ಕೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಅಭಿಮಾನಿಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಕೋರಿದ್ದಾರೆ.   ನನ್ನ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. …

Read More »

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸರ್ಕಾರದಿಂದ ‘ಅರಿಶಿನ-ಕುಂಕುಮ’ ವಿತರಣೆ

ಬೆಂಗಳೂರು : ಈ ಬಾರಿಯ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಂದಿನ ದಿನ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ, ದೇವಾಲಯಗಳಿಗೆ ಆಗಮಿಸುವಂತಹ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಬೇಕು ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಅ ಜೊಲ್ಲೆ ( Minister Shashikala Jolle ) ಅವರ ನಿರ್ದೇಶನದ …

Read More »

ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ಸಿಎಂ ಬಿಎಸ್ ಬೊಮ್ಮಾಯಿ

ಕೊಪ್ಪಳ: ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ. ಇದನ್ನು ಸಾವಿರ ಸಾವಿರ ಸಾರಿ ಒತ್ತಿ ಹೇಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಮ್ಮೆಲ್ಲರ ಆರಾದ್ಯ ದೈವ ಅಂಜನಾದ್ರಿಯ ಹನುಮಂತನ ದರ್ಶನಕ್ಕೆ ಆಗಮಿಸಿದ್ದೇವೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ‌ ಘೋಷಣೆ ಮಾಡಿದ್ದೇನೆ. ಅಂಜನಾದ್ರಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು …

Read More »