Breaking News

Monthly Archives: ಆಗಷ್ಟ್ 2022

ಭೂಮಿ ಕಂಪಿಸಲಿದೆ, ಮೇಘ ಘರ್ಜಿಸಲಿದೆ: ಕೋಡಿಮಠ ಸ್ವಾಮೀಜಿ

ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು , ಭೂಮಿ ತಲ್ಲಣಗೊಂಡೀತು . ಭೂಮಿ ಕಂಪಿಸುತ್ತೆ , ಗುಡ್ಡಗಳು ಕುಸಿಯುತ್ತವೆ , ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ . ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ . ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು , ಮಿಂಚು , ಗಾಳಿ …

Read More »

ಸಿದ್ದರಾಮಯ್ಯ ಅಮೃತ ಮಹೋತ್ಸವ: ಬೆಳಗಾವಿಯಲ್ಲಿ 3 ಕಿಮೀ ಉದ್ದದ ಫೋಟೋ ಬಯೋಗ್ರಫಿ ಸಿದ್ಧ..!

ಬೆಳಗಾವಿ : ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಸಿದ್ದರಾಮಯ್ಯರ ಜೀವನದ ವಿವಿಧ 500 ಫೋಟೋಗಳನ್ನು ಬಳಸಿ 3000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ ಸಿದ್ಧಪಡಿಸಲಾಗಿದೆ. ಜಿಲ್ಲೆಯ ಸವದತ್ತಿ ಪಟ್ಟಣದ ಕಾಂಗ್ರೆಸ್ ಮುಖಂಡ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ ಆನಂದ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯ ರಾಜಕೀಯ ಜೀವನದ ಫೋಟೋಗಳನ್ನು ಬಳಸಿ ಬಯೋಗ್ರಫಿ ತಯಾರಿಸಿದೆ. ಇದಕ್ಕೆ ಸುಮಾರು 500 ಫೋಟೋಗಳನ್ನು ಬಳಸಿಕೊಳ್ಳಲಾಗಿದ್ದು, 3 ಸಾವಿರ …

Read More »

ಕಳ್ಳತನ ಪ್ರಕರಣ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 51,000/- ರೂ ಮೊತ್ತದ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2,00,000/- ರೂ ಮೌಲ್ಯದ ಅಷೆ ಟಂಟಂ ವಾಹನವನ್ನು ಹಾಗೂ ಒಂದು ರಾಡ್ ಸೇರಿದಂತೆ ಒಟ್ಟು-2,51,000/- ರೂ ಮೌಲ್ಯದ ವಸ್ತುಗಳನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ರಾಮದುರ್ಗ ಡಿ.ಎಸ್.ಪಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ರಾಹುಲ್ ಜಾರಕಿಹೊಳಿ ವತಿಯಿಂದ ಹಾಲು ಹಣ್ಣು ವಿತರಣೆ

ದಿನಾಂಕ 02-08-2022 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಸುಪುತ್ರರಾದ ಯುವ ಪ್ರೇಮಿಗಳಾದ ರಾಹುಲ್ ಅಣ್ಣಾ ಜಾರಕಿಹೊಳಿಯವರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾನವ ಬಂದುತ್ವ ವೇದಿಕೆ ವತಿಯಿಂದ ಆಯೋಜಿಸಿದ ಬಸವ ಪಂಚಮಿ ನಿಮಿತ್ಯ ರೋಗಿಗಳಿಗೆ ಹಾಲು ಹಣ್ಣುಹಂಪಲ ವಿತರಣೆ ಮಾಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿ ಮಾತನಾಡಿ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ …

Read More »

ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ: ಗೋಕಾಕ

ಗೋಕಾಕ :ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೋಕಾಕದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಚಿಕ್ಕ ಮಕ್ಕಳ ವೈದ್ಯರಾದ ಡಾ ಗೋಪಾಲ ಹೊಂಗಲ ಮತ್ತು ಡಾ ಸಂಜೀವಿನಿ ಉಮರಾಣಿ ಯವರು ತಾಯಂದಿರಿಗೆ ಎದೆಹಾಲಿನ ಮಹತ್ವ ಬಗ್ಗೆ ಹೇಳಿದರು. ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಹುಟ್ಟಿದ ಪ್ರತಿ ಮಗುವೂ ಬದುಕಬೇಕು, ತಾಯಿಯೂ ಆರೋಗ್ಯವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು …

Read More »

ಬಸವ ಪಂಚಮಿ: ರೋಗಿಗಳಿಗೆ ಹಾಲು ವಿತರಿಸಿದ ರಾಹುಲ್ ಜಾರಕಿಹೊಳಿ

  ಬೆಳಗಾವಿ: ಮಾನವ ಬಂಧುತ್ವ ವೇದಿಕೆಯ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗಿದ್ದು, ಬೆಳಗಾವಿ, ಗೋಕಾಕ, ಘಟಪ್ರಭ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿಯೂ ಬಸವ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸಲಾಯಿತು. ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಂಗಳವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ಹಾಲು ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಕಳೆದ ನಾಲ್ಕು …

Read More »

ಬಸವಣ್ಣನವರ ಹೋರಾಟ ಜನರಿಗೆ ತಿಳಿಸುವ ಕಾರ್ಯ ನಿರಂತರ : ಸತೀಶ ಜಾರಕಿಹೊಳಿ

  ಘಟಪ್ರಭಾ ಪಟ್ಟಣದ ಕೆಎಚ್ಐ ಆಸ್ಪತ್ರೆಯಲ್ಲಿ ಮಾನವ ಬಂದುತ್ವ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರೋಗಿಗಳಿಗೆ ಹಾಲು ಹಣ್ಣುಹಂಪಲ ವಿತರಣೆ ಮಾಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿದರು. ಘಟಪ್ರಭಾದ ಗುಬ್ಬಲಗುಡ್ಡ ಮಹಾಸ್ವಾಮೀಗಳಾದ ಶ್ರೀ ಮಲ್ಲಿಕಾರ್ಜುನ ದೇವರು ಇದ್ದರು.   ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಇಡೀ ರಾಜ್ಯಾದ್ಯಂತ ಬಸವ ಪಂಚಮಿಯನ್ನು ಆಚರಿಸುತ್ತಿದ್ದೇವೆ. ಮೌಢ್ಯಗಳ ವಿರುದ್ಧ ಬಸವಣ್ಣನವರ ಹೋರಾಟವನ್ನು …

Read More »

ಹುಡುಗಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ: ಇಬ್ಬರಿಗೆ ಚಾಕು ಇರಿತ

ಬೆಳಗಾವಿ: ಹುಡುಗಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ‌ ನಗರದ ಕಾಲೇಜು ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ. ನಗರದ ಸರ್ದಾರ್ ಮೈದಾನ ಪಕ್ಕದ ಕಾಲೇಜು ರಸ್ತೆಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಶುರುವಾಗಿದೆ. ನೋಡನೋಡುತ್ತಿದ್ದಂತೆ ಒಂದು ಗುಂಪಿನ ಯುವಕರು ಮತ್ತೊಂದು ಗುಂಪಿನ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದಿದ್ದಾರೆ. ಶ್ರೀಹರಿ ಮತ್ತು ಪರಶುರಾಮ್ ಎಂಬುವವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ರವಾನಿಸಿ …

Read More »

M.B.ಪಾಟೀಲ ಮನೆಯಲ್ಲಿ ಕಳವು: ಒಡಿಶಾದಲ್ಲಿ ಆರೋಪಿ ಸೆರೆ

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ನಿವಾಸದಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಒಡಿಶಾದಲ್ಲಿ ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ. ಶಾಸಕರ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್‌ ದಾಸ್‌ ಬಂಧಿತ ಆರೋಪಿ.   ಆರೋಪಿಯನ್ನು ಐದು ದಿನಗಳ ಕಾಲ ವಶಕ್ಕೆ ಪಡೆದಿರುವ ಸದಾಶಿವನಗರದ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ‘ಐದು ವರ್ಷಗಳಿಂದ ಶಾಸಕರ ಮನೆಯಲ್ಲಿ ಆರೋಪಿ ಕೆಲಸಕ್ಕಿದ್ದ. ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿತ್ತು. …

Read More »

ಖಾಸಗಿಕರಣದತ್ತ ಹೆಜ್ಜೆ ಇಟ್ಟಿದೆಯಾ KSRTC ? ಅನುಮಾನಕ್ಕೆ ಕಾರಣವಾಗಿದೆ ನಿಗಮದ ಈ ನಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಷ್ಟವನ್ನು ಒಂದಷ್ಟು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸರ್ಕಾರಿ ಬಸ್ ಗಳಿಗೆ ಟೋಲ್ ಗಳಲ್ಲಿ ಶುಲ್ಕ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿತ್ತು.   ಇದರ ಮಧ್ಯೆ ನಿಗಮದ ನಡೆಯೊಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. 350 ಚಾಲಕರನ್ನು ಹೊರಗುತ್ತಿಗೆ ಆಧಾರದ ಮೇಲೆ …

Read More »