Breaking News

Monthly Archives: ಆಗಷ್ಟ್ 2022

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ಸೆ. 6ಕ್ಕೆ `ವೇತನ ಆಯೋಗ’ ಘೋಷಣೆ ಸಾಧ್ಯತೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯಸ ರ್ಕಾರಿ ವೇತನ ಆಯೋಗವನ್ನು ಸೆ. 6 ರಂದು ಘೋಷಣೆ ಮಾಡುವ ಸಾಧ್ಯತೆಗಳಿವೆ. ಸೆ.6 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಿ ನೌಕರರಿಗೆ ವೇತನ ಆಯೋಗ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.   …

Read More »

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ: ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸೋಮವಾರ ಸುತ್ತೋಲೆ ಹೊರಡಿಸಿದೆ. ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಪಬ್‌, ಬಾರ್‌ಗಳಲ್ಲಿ ಆಹಾರ ಸೇವನೆಯ ಸಮಯವನ್ನು ಹೊರತುಪಡಿಸಿದ ಅವಧಿಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ. ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.  

Read More »

ಬಿಡಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ: ಬಿಜೆಪಿ ಭ್ರಷ್ಟೋತ್ಸವ ಎಂದ ಕಾಂಗ್ರೆಸ್‌

ಬೆಂಗಳೂರು: ಬಿಡಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹರಿಹಾಯ್ದಿದೆ. ಈ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ ಮಾಡಿರುವ ಕೆಪಿಸಿಸಿ, ಬಿಜೆಪಿ ಭ್ರಷ್ಟೋತ್ಸವಕ್ಕೆ ಸುಪ್ರೀಂ ಕೋರ್ಟ್ ಕೂಡ ‘ಛೀಮಾರಿ’ ಹಾಕಿ ಗೌರವಿಸಿದೆ ಎಂದು ವ್ಯಂಗ್ಯವಾಡಿದೆ.   ಈ ವಿಚಾರವಾಗಿ ‘ಪ್ರಜಾವಾಣಿ’ ವರದಿಯನ್ನು ಟ್ವೀಟ್‌ ಮಾಡಿರುವ ಕೆಪಿಸಿಸಿ, ಬಿಜೆಪಿ ಭ್ರಷ್ಟೋತ್ಸವಕ್ಕೆ ಸುಪ್ರೀಂ ಕೋರ್ಟ್ ಕೂಡ ‘ಛೀಮಾರಿ’ ಹಾಕಿ ಗೌರವಿಸಿದೆ ಎಂದು ವ್ಯಂಗ್ಯವಾಡಿದೆ. ನಿವೇಶನ ಹಂಚಿಕೆಯಲ್ಲೂ …

Read More »

ಅಮಿತ್ ಶಾ ಮನೆ ಬಳಿ ಪ್ರತಿಭಟನೆ ಮಾಡಲು ಹೋಗಿದ್ದೆ. ಎನ್ನುತ್ತಲೇ ಕರ್ನಾಟಕ ಪೊಲೀಸರ ವಿರುದ್ಧ ಕಿಡಿಕಾರಿದ ನವ್ಯಶ್ರೀ!

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಲು ಮುಂದಾದ ಚನ್ನಪಟ್ಟಣ ಮೂಲದ ಕಾಂಗ್ರೆಸ್​ ಮುಖಂಡೆ ನವ್ಯಶ್ರೀ ರಾವ್​ಗೆ ಅವಕಾಶ ಸಿಕ್ಕಿಲ್ಲ. ಈ ಕುರಿತು ಸುದ್ದಿಗಾರರೊಂದಿಗೆ ನವ್ಯಶ್ರೀ ಅಸಮಾಧಾನ ಹೊರಹಾಕಿದ್ದಾರೆ.   ‘ಶುಕ್ರವಾರ ಸಂಜೆ ದೆಹಲಿಗೆ ಬಂದ್ವಿ. ಶನಿವಾರ ಅಮಿತ್​ ಶಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋದ್ವಿ. ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಅವಕಾಶ ಸಿಗಲಿಲ್ಲ. ಆ.15 ರಂದು …

Read More »

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ; ಐವರಿಗೆ ಗೌರವ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2021ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾದ ಕಲಾವಿದರ ಹೆಸರನ್ನು ಪ್ರಕಟಿಸಿದೆ. ಬಾಗಲಕೋಟೆಯ ಹಿರಿಯ ಕಲಾವಿದ ನಾಗಲಿಂಗಪ್ಪ ಗಂಗಪ್ಪ ಗಂಗೂರ (ಸಂಪ್ರದಾಯ ಶಿಲ್ಪ), ಉಡುಪಿಯ ರತ್ನಾಕರ ಎಸ್‌. ಗುಡಿಗಾರ್‌ (ಸಂಪ್ರದಾಯ ಶಿಲ್ಪ), ಬಳ್ಳಾರಿಯ ಪಿ. ಮುನಿರತ್ನಾಚಾರಿ (ಸಂಪ್ರದಾಯ ಶಿಲ್ಪ), ಕಲಬುರಗಿಯ ಮಾನಯ್ಯ ನಾ. ಬಡಿಗೇರ (ಎರಕ ಶಿಲ್ಪ) ಹಾಗೂ ಬೆಂಗಳೂರಿನ ಬಿ.ಸಿ. ಶಿವಕುಮಾರ್‌ (ಸಮಕಾಲೀನ ಶಿಲ್ಪ) ಅವರು …

Read More »

ರಾಜಕೀಯದಲ್ಲಿ ಇರದಿದ್ರೆ.ಬಿಜೆಪಿಯವರ ನಾಲಿಗೆ ಸೀಳುತ್ತಿದ್ದೆ: ಮಮತಾ ಬ್ಯಾನರ್ಜಿ

ಕೋಲ್ಕತಾ: ಪ್ರತಿಯೊಬ್ಬರನ್ನು ಕಳ್ಳರು ಎಂಬಂತೆ ಬಿಂಬಿಸುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಆಗಸ್ಟ್ 29) ವಾಗ್ದಾಳಿ ನಡೆಸಿದ್ದು, ಒಂದು ವೇಳೆ ರಾಜಕೀಯದಲ್ಲಿ ಇಲ್ಲದಿರುತ್ತಿದ್ದರೆ, ಬಿಜೆಪಿಯವರ ನಾಲಿಗೆ ಸೀಳಿ ಬಿಡುತ್ತಿದ್ದೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷವನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳನ್ನು ಮತ್ತು ಚುನಾಯಿತ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಕೇಂದ್ರ ತನಿಖಾ …

Read More »

ಈದ್ಗಾ ಮೈದಾನದಲ್ಲಿ ಗಣೇಶ; ಚುನಾವಣೆಗಾಗಿಯೇ ಎಂದು ಒಪ್ಪುವುದಿಲ್ಲ: ಜೋಶಿ

ಹುಬ್ಬಳ್ಳಿ: ”ಚುನಾವಣೆ ಬಂದಾಗ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಹೋರಾಟಗಳು ಕೂಡ ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಇರಬಹುದೇನೋ ಗೊತ್ತಿಲ್ಲ. ಆದರೆ ಇದು ಚುನಾವಣೆಗಾಗಿಯೇ ಎದ್ದಿದೆ ಎಂದು ನಾನು ಒಪ್ಪುವುದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.   ಸೋಮವಾರ ಇಲ್ಲಿನ ಭವಾನಿ ನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಪಾಲಿಕೆ ಮೇಯರ್ ಹಾಗೂ ಸದಸ್ಯರ ಸಭೆ …

Read More »

ಚಿರತೆ ಹಿಡಿಯುವಲ್ಲಿ ಸರ್ಕಾರ ಯಾವುದೇ ರೀತಿ ವಿಫಲ ಆಗಿಲ್ಲ: ಈರಣ್ಣ ಕಡಾಡಿ

ಬೆಳಗಾವಿಯಲ್ಲಿ ಚಿರತೆ ಪತ್ತೆಗೆ 25ನೇ ದಿನದ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆ ಗಾಲ್ಫ್ ಕ್ಲಬ್‍ಗೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಅರಣ್ಯಾಧಿಕಾರಿಗಳ ಜತೆಗೆ ಚಿರತೆ ಕಾರ್ಯಾಚರಣೆ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಚರ್ಚೆ ನಡೆಸಿದರು. ಕಾರ್ಯಾಚರಣೆ ಬಗ್ಗೆ ಸಂಪೂರ್ಣ ವಿವರವನ್ನು ಪಡೆದ ಬಳಿಕ ಗಾಲ್ಫ್ ಕ್ಲಬ್‍ನಲ್ಲಿ ರೌಂಡ್ಸ್ ಹೊಡೆದ ಈರಣ್ಣ ಕಡಾಡಿ ಬೋನ್, ಕ್ಯಾಮರಾ ಇಟ್ಟ ಸ್ಥಳಗಳನ್ನು ಪರಿಶೀಲನೆ ನಡೆಸಿದರು.ನಂತರ ಮಾಧ್ಯಮಗಳ ಜೊತೆಗೆ …

Read More »

ಬೆಳಗಾವಿ ನಗರದಲ್ಲಿ ಅದ್ಧೂರಿ ಸಂಗೊಳ್ಳಿ ರಾಯಣ್ಣಾ ಶೋಭಾಯಾತ್ರೆ

ಬೆಳಗಾವಿ ನಗರದಲ್ಲಿ ಕರುನಾಡ ವಿಜಸೇನೆ ಜಿಲ್ಲಾ ಘಟಕ ಬೆಳಗಾವಿ ಜಿಲ್ಲೆ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಹೌದು ಕರುನಾಡ ವಿಜಯಸೇನೆ ಜಿಲ್ಲಾ ಘಟಕ ಬೆಳಗಾವಿ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಾಯಣ್ಣ ಉತ್ಸವ ಪ್ರಯುಕ್ತ ಬೃಹತ್ ಶೋಭಾಯಾತ್ರೆಯನ್ನೂ ಕೂಡ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಟ್ರ್ಯಾಕ್ಟರ್‍ನಲ್ಲಿ ಬೃಹತ್ ರಾಯಣ್ಣನ ಮೂರ್ತಿಯನ್ನು …

Read More »

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಕೊಲೆ

ಬಾಗಲಕೋಟೆ: ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಹೊರವಲಯದಲ್ಲಿ‌ ನಡೆದಿದೆ. ಸಂಗೀತಾ ಹರಿಜನ (36) ಕೊಲೆಯಾದವರು. ಕಳೆದ ರಾತ್ರಿ 9 ಗಂಟೆಗೆ ಬಹಿರ್ದೆಸೆಗೆ ಹೋಗಿದ್ದಾಗ ಘಟನೆ ನಡೆದಿದೆ. ತಲೆ ಮತ್ತು ಕುತ್ತಿಗೆಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಪಿ …

Read More »