ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಉಜ್ವಲ್ ನಗರದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲದೇ ಹೈವೆ ಸೇರಿದಂತೆ ಸರ್ವೀಸ್ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ಅಕ್ಕ ಪಕ್ಕದ ನಿವಾಸಿಗಳ ಮನೆಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಸ್ತೆಯ ಮೇಲೆಲ್ಲ ನೀರು ನಿಂತಿದ್ದು ವಾಹನ ಸವಾರರ ಕಷ್ಟ ಹೇಳತೀರದ್ದಾಗಿದೆ. ಇನ್ನು …
Read More »Monthly Archives: ಜುಲೈ 2022
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಫಲನುಭವಿಗಳಿಗೆ ಭಾಗ್ಯಲಕ್ಷಿ ಬಾಂಡಗಳನ್ನು ವಿತರಣೆ ಮಾಡಿದ ಶಾಸಕ ಅನಿಲ ಬೆನಕೆ :
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಶನಿವಾರದಂದು ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃಧ್ದಿ ಯೋಜನೆಯಡಿ ಬೆಳಗಾವಿ ನಗರದ ಬಡಕಲ ಗಲ್ಲಿಯ ಬನಶಂಕರಿ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪಾ ರವರ ಮಹತ್ವದ ಯೋಜನೆಯಾದ ಭಾಗ್ಯಲಕ್ಷಿö್ಮÃ ಬಾಂಡಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು, ಹೆಣ್ಣು ಮಕ್ಕಳ ಭದ್ರತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ …
Read More »ಜೈಲಿನಲ್ಲಿದ್ದ ಸ್ನೇಹಿತರಿಗೆ ಮಾದಕ ವಸ್ತು ಪೂರೈಕೆ
ಬೆಂಗಳೂರು: ಜೈಲಿನಲ್ಲಿರುವ ಸ್ನೇಹಿತರಿಗೆ ಮಾದಕ ವಸ್ತು ಸರಬರಾಜು ಮಾಡಲು ಯತ್ನಿಸಿದ ಇಬ್ಬರು ಯುವತಿಯರನ್ನ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಾಮರಾಜಪೇಟೆ ಮೂಲದ ಸಂಗೀತಾ ಅಲ್ಫೋನ್ಸ್ ಮತ್ತು ಛಾಯಾ ಎಂದು ಗುರುತಿಸಲಾಗಿದೆ. ಜೈಲಿನಲ್ಲಿರುವ ಸ್ನೇಹಿತರಾದ ಲೋಹಿತ್ ಹಾಗೂ ಕಾಳಪ್ಪ ಎಂಬುವವರನ್ನು ಜುಲೈ 12ರಂದು ಭೇಟಿಯಾಗಲು ಬಂದಿದ್ದರು. ಸಂಗೀತಾ ಹಾಗೂ ಛಾಯಾರನ್ನ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಇಬ್ಬರೂ ಸಹ ಗುಪ್ತಾಂಗದಲ್ಲಿ ಏನನ್ನೋ ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
Read More »ಗೋಕಾಕ ತಾಲೂಕಿನ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ
ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಮೂಡಲಗಿ ತಾಲೂಕಿನ ನಾಲ್ಕು ಸೇತುವೆಗಳು ಜಲಾವೃತವಾಗಿದೆ. ಕೆಲ ಬೈಕ್ ಸವಾರರು ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆಯೇ ಸಂಚರಿಸಿದ್ದಾರೆ. ಪ್ರಮುಖವಾಗಿ ಅವರಾದಿ – ಮಹಾಲಿಂಗಾಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಸುಣಧೋಳ -ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸೇತುವೆ, ವಡೇರಹಟ್ಟಿ-ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಮೂಡಲಗಿ-ಭೈರನಹಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿವೆ. ಪರಿಣಾಮ ಈ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿದೆ. ಸದ್ಯ ಬಳ್ಳಾರಿ ನಾಲಾ, …
Read More »ಅಪ್ರಾಪ್ತ ಬಾಲಕಿ ವಿವಾಹಕ್ಕೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಭೂಪ; ವರ ಮಹಾಶಯ ಅರೆಸ್ಟ್
ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಲು ವರ ಮಹಾಶಯನೊಬ್ಬ ಆಧಾರ್ ಕಾರ್ಡ್ ನ್ನೇ ನಕಲು ಮಾಡಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮದುಮಗ ಮನು ಎಂದು ಗುರುತಿಸಲಾಗಿದೆ. ಕಾನೂನು ಪ್ರಕಾರ ಯುವತಿಗೆ ವಿವಾಹವಾಗಲು 18 ವರ್ಷ ಆಗಿರಬೇಕು. ಆದರೆ ಮನು ಎಂಬ ಯುವಕ ಅಪ್ರಾಪ್ತ ಯುವತಿ ವಿವಾಹವಾಗಲೆಂದು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾನೆ. ಯುವತಿಯ ಆಧಾರ್ ಕಾರ್ಡ್ ನಲ್ಲಿ ಆಕೆ ಹುಟ್ಟಿದ ದಿನಾಂಕ, ವರ್ಷವನ್ನೇ …
Read More »ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕನ ಕೊಲೆ
ಯಮಕನಮರಡಿ: ಇಲ್ಲಿನ ಯಮಕನಮರಡಿಯಲ್ಲಿ ಕಿರಾಣಿ ಅಂಗಡಿ ಮಾಲೀಕರೊಬ್ಬರನ್ನು ಶನಿವಾರ ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಹೊಸಪೇಟೆ ನಿವಾಸಿ ಪರಶುರಾಮ ಸಿದ್ದಲಿಂಗಯ್ಯ ಹಲಕರ್ಣಿ(32) ಕೊಲೆಯಾದವರು. ಬಸವರಾಜ ಭರಮಪ್ಪ ಗಲಾಟಿ (30) ಮಂಜುನಾಥ ಲಕ್ಷ್ಮಣ ಪುಟ್ಜಾನೆ (24), ಕೆಂಪಣ್ಣ ಅರ್ಜುನ್ ನೇಸರ್ಗಿ ಕೊಲೆಗೈದ ಆರೋಪಿಗಳು. ಕೊಲೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿಗಳಾದ ಮಂಜುನಾಥ ಹಾಗೂ ಕೆಂಪಣ್ಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಇನ್ನೊಬ್ಬ ಾರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
Read More »ಸವದತ್ತಿ: ವಿದ್ಯುತ್ ಶಾಕ್ ತಗುಲಿ ಇಬ್ಬರು ರೈತರ ಸಾವು
ಸವದತ್ತಿ: ತಾಲೂಕಿನ ಹಿರೂರು ಗ್ರಾಮದಲ್ಲಿ ವಿದ್ಯುತ್ ಶಾಕ್ ತಗುಲಿ ಇಬ್ಬರು ರೈತರು ಶನಿವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಫಕೀರಪ್ಪಾ ಸಿದ್ದಪ್ಪಾ ಚಂದರಗಿ (54) ಹಾಗೂ ಮಹಾದೇವ ದುರ್ಗಪ್ಪಾ ಮೇತ್ರಿ (40) ಮೃತಪಟ್ಟವರು. ಇವರಿಬ್ಬರೂ ಕಬ್ಬಿನ ಹೊಲದಲ್ಲಿ ಕೆಲಸ ಮಾಡುವಾಗ ಹರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಸವದತ್ತಿ ಠಾಣೆ ಪೊಲೀಸರು ತೆರಳಿ ಕ್ರಮ ಕೈಗೊಂಡಿದ್ದಾರೆ.
Read More »ಖಾನಾಪುರ ತಾಲೂಕಿನಲ್ಲಿ ರಸ್ತೆ ಮೇಲೆ ಬಿದ್ದ ಮರ: ತೆರವುಗೊಳಿಸದ ಅಧಿಕಾರಿಗಳ ನಿರ್ಲಕ್ಷ
ಖಾನಾಪುರ ತಾಲೂಕಿನ ಕಡತನ ಬಾಗೇವಾಡಿಯಿಂದ ಬೇಕವಾqಗೆÀ ಹೋಗುವ ರಸ್ತೆ ಮೇಲೆ ಪಕ್ಕದ ಗಿಡ ಮರಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯ ಈ ನಿರ್ಲಕ್ಷ್ಯ ಧೋರಣೆ ಹಾಗೂ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಹೌದು ಜೂನ್ ತಿಂಗಳಿನಿಂದ ಅಗಸ್ಟ್ ತಿಂಗಳವರೆಗೆ ಅತಿ ಹೆಚ್ಚು ಮಳೆಗಾಲದ ದಿನಗಳು, ಈ ದಿನಗಳಲ್ಲಿ ರಸ್ತೆ ಪಕ್ಕದಲ್ಲಿರುವ ಮರಗಳು ರಸ್ತೆಯ ಮೇಲೆ ಬಿದ್ದು ಸಾರ್ವಜನಿಕರಿಗೆ ತೊಂದರೆಗಳಾಗುವುದು ಜಾಸ್ತಿ. ಆದರೆ ಈ ರೀತಿ ಆಗಬಹುದಾದ …
Read More »ನದಿಗಳ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ: ಸಿಎಂ ಬಸವರಾಜ್ ಬೊಮ್ಮಾಯಿ.
ನದಿಗಳ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ: ಸಿಎಂ ಬಸವರಾಜ್ ಬೊಮ್ಮಾಯಿ. ರಾಜ್ಯದಲ್ಲಿ ಮಳೆ ಪ್ರವಾಹ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಹ ಪೀಡಿತ ಜಿಲ್ಲೆಗಳ ಡಿಸಿ ಗಳ ಜೊತೆ ಸಭೆ ನಡೆಸಿದ್ದೇನೆ. ಮಹಾರಾಷ್ಟ್ರ ಹಾಗೂ ನಮ್ಮ ರಾಜ್ಯದ ಡಿಸಿಗಳು ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ. ನದಿಗಳ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ನೀರಿನ ಪ್ರಮಾಣಕ್ಕೆ ತಕ್ಕಂತೆ …
Read More »ಗೋಕಾಕ ತಾಲೂಕಿನ ಶಿಂಗಳಾಪುರ ಸೇತುವೆ ಮುಳುಗಡೆ
ಗೋಕಾಕ: ಮಳೆಯ ಆರ್ಭಟ ಮುಂದುವರಿದಿದ್ದು ಕೃಷ್ಣಾ ನದಿ ಮಟ್ಟ ಮೀರಿ ಹರಿಯುತ್ತಿದೆ. ಈ ಮಧ್ಯೆ ಶಿಂಗಳಾಪುರ ಸೇತುವೆ ಶನಿವಾರ ಮುಳುಗಡೆಯಾಗಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸೇತುವೆ ಮೇಲಿನಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಜನ ಸಂಚರಿಸದಂತೆ ಎಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಗೋಕಾಕ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಸ್ಥಳಕ್ಕೆ ಗೋಕಾಕ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿದ್ದು ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ್ದಾರೆ.
Read More »
Laxmi News 24×7