Breaking News

Daily Archives: ಜುಲೈ 22, 2022

ಶಾಲೆಯಲ್ಲಿ ಬಿಸಿಯೂಟ ತಿಂದು 50 ಮಕ್ಕಳಿಗೆ ವಾಂತಿ, ಭೇದಿ, ಮಕ್ಕಳು ಅಸ್ವಸ್ಥ

ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಅನ್ನ ಹಾಗೂ ತರಕಾರಿ ಸಾಂಬಾರ್​ ಮಾಡಿದ್ರು. ಎಲ್ಲಾ ಮಕ್ಕಳು ಅದೇ ಊಟ ಮಾಡಿದ್ದಾರೆ. ಊಟ ತಿಂದ ಬಳಿಕ 50 ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ (ಜು 21):  ಬಿಸಿಯೂಟ ಸೇವಿಸಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳುಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗದ ಇಸಾಮುದ್ರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ‌ ನಡೆದಿದೆ. ವಾಂತಿ, ಭೇದಿಯಿಂದ ಅಸ್ವಸ್ಥಗೊಂಡವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಭರಮಸಾಗರ ಪ್ರಾಥಮಿಕ …

Read More »

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದ B.S.Y.

ಬೆಂಗಳೂರು: ತಮ್ಮನ್ನು ಪಕ್ಷವು ಮೂಲೆಗುಂಪು ಮಾಡುತ್ತಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಯಡಿಯೂರಪ್ಪ, “ಕಾಂಗ್ರೆಸ್ ನಾಯಕರು ಆತುರಾತುರವಾಗಿ ಮತ್ತು ಮುಖ್ಯಮಂತ್ರಿಯಾಗಲು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ನಾವು ಹಾಗೆ ಆಗಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ” …

Read More »

ಸಂಕೇಶ್ವರ : ಟಿಪ್ಪರ್ ಢಿಕ್ಕಿ ಹೊಡೆದು 50ಕ್ಕೂ ಹೆಚ್ಚು ಕುರಿಗಳ ಸಾವು

ಸಂಕೇಶ್ವರ : ಟಿಪ್ಪರ್ ವಾಹನವೊಂದು ಹಾಯ್ದು 50ಕ್ಕೂ ಅಧಿಕ ಕುರಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹಾಯ್ದು ವಾಹನ ಪಲ್ಟಿಯಾಗಿದೆ ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.   ಅಮ್ಮಣಗಿ ಗ್ರಾಮದ ಕುರಿಗಾಯಿ ಹಾಲಪ್ಪ ಸಿದ್ದಪ್ಪ ಹೆಗಡೆ ಎಂಬುವವರಿಗೆ ಸೇರಿದ ಕುರಿಗಳು ಇದಾಗಿವೆ. ಘಟನಾ ಸ್ಥಳಕ್ಕೆ ಸಂಕೇಶ್ವದ ಪೋಲಿಸರು ಭೇಟಿ ನೀಡಿ ಪರಿಶೀಲನೆ …

Read More »

ರಾಷ್ಟ್ರಪತಿ ಚುನಾವಣೆ:ಬಿಜೆಪಿ ಮಹಾನಗರ ಹಾಗೂ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ

ಬೆಳಗಾವಿ-: ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಗಿದೆ. ಗುರುವಾರ ಬೆಳಗಾವಿ ಗ್ಯಾಂಗವಾಡಿ ಮರಗಾಯಿದೇವಿ ಮಂದಿರದ ಬಳಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಬಿಜೆಪಿ ಪದಾದಿಕಾರಗಳ ಜೊತೆಗೆ ವಿಜಯೋತ್ಸವ ಆಚರಿಸಿ ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿ ಶಾಸಕ …

Read More »

ಬೆಳಗಾವಿ ಮೂಲದ ಯುವತಿ ಪುತ್ತೂರಿನ ಪೊಲೀಸರಿಗೆ ಅತಿತಿ

ಪುತ್ತೂರು : ಬೆಳಗಾವಿ ಮೂಲದ ಯುವತಿ ಪುತ್ತೂರಿನ ಸಂಸ್ಥೆಯೊಂದಕ್ಕೆ ಕೆಲಸ ಅರಸಿಕೊಂಡು ಬಂದ ವೇಳೆ ಅನ್ಯ ಧರ್ಮದ ವ್ಯಕ್ತಿಯ ಜತೆಗಿರುವುದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.21 ರಂದು ಮಂಜಲ್ಪಡ್ಪು ಬಳಿ ಸಂಭವಿಸಿದೆ.   ಬೆಳಗಾವಿಯ ಗಾನಪುರ ಮೂಲದ ಹಿಂದೂ ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಪುತ್ತೂರು ಮಂಜಲ್ಪಡ್ಪುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಮುಕ್ವೆಯ ಅನ್ಯ ಧರ್ಮದ ವ್ಯಕ್ತಿ ಆಕೆಗೆ …

Read More »