Breaking News

Daily Archives: ಜುಲೈ 2, 2022

ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.       ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ.   …

Read More »

ಯುವತಿ ಅಪಹರಣ ಪ್ರಕರಣದಲ್ಲಿ ಹು-ಧಾ ಪಾಲಿಕೆ ಕಾರ್ಪೊರೇಟರ್ ಕೊನೆಗೂ ಅರೆಸ್ಟ್

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ (Love Marriage) ಯುವತಿಯನ್ನು (Girl) ಅಪಹರಿಸಿದ ಪ್ರಕರಣಕ್ಕೆ (Kidnap Case) ಸಂಬಂಧಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ‌ (Hubballi Dharwad Corporation) ಕಾರ್ಪೋರೆಟರ್ ನನ್ನು (Corporator) ಕೊನೆಗೂ ಬಂಧಿಸಲಾಗಿದೆ. ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ನನ್ನು ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ (Gokul Road Station) ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ಯುವತಿಯ ತಂದೆ ಶಿವು ಹಿರೇಕೆರೂರ ಹಾಗೂ ತಾಯಿ ಜಯಲಕ್ಷ್ಮಿ ಎಂಬುವರನ್ನು ಕೂಡ …

Read More »

ಸಾಧನೆ ಶ್ರಮಿಕರ ಸ್ವತ್ತು ರಾಜ್ಯ ಕ್ರೈಡಲ್ ಎಮ್.ಡಿ. ಮಹಾಂತೇಶ ಹಿರೇಮಠ ಅಭಿಮತ

ವೈಜ್ಞಾನಿಕ ಕೊಡುಗೆಗಳಿಂದ ಜಗತ್ತು ಅಂಗೈಯಲ್ಲಿ ಹಿಡಿಯಲು ಸಾಧ್ಯವಾಗಿದೆ. ಇಂಥಹ ವಿಶೇಷತೆಗಳನ್ನು ಕೊಡಲು ಶ್ರಮ ಅತ್ಯಗತ್ಯ. ಸಾಧನೆಗಳು ಶ್ರಮಿಕರ ಸ್ವತ್ತಾಗಿದೆ ಎಂದು ರಾಜ್ಯ ಕ್ರೈಡಲ್ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಹಿರೇಮಠ ಹೇಳಿದರು. ಅವರು ಶನಿವಾರ ಬೆಂಗಳೂರಿನ ಭೂಸೇನಾ ನಿಗಮದ ಕೇಂದ್ರ ಕಚೇರಿಯಲ್ಲಿ ಅಕ್ಕತಂಗೇರಹಾಳ ಗ್ರಾಮದ ಐ.ಐ.ಎಸ್.ಸ್ಸಿ. ಪಿ.ಎಚ್.ಡಿ ಸಾಧಕ , ಚೇತನ ಉರಬಿನಹಟ್ಟಿ ಅವರಿಂದ ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದರು. ಜಗತ್ತಿನ ಹೆಸರಾಂತ ತಾಂತ್ರಿಕ ಸಂಸ್ಥೆಗಳಲ್ಲಿ ಅಗ್ರಮಾನ್ಯ ಹೆಸರು ಭಾರತೀಯ ವಿಜ್ಞಾನ ಸಂಸ್ಥೆಗಿದೆ. …

Read More »

ಬೆಳಗಾವಿ ನಗರದ ಈ ಏರಿಯಾಗಳಲ್ಲಿ ಈ ರವಿವಾರ ದಿನಾಂಕ ೩ ರಂದು ಕರೆಂಟ್ ಇರಲ್ಲ

ಬೆಳಗವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ನೆಹರು ನಗರದ ವಿದ್ಯುತ್ ಪರಿವರ್ತಕ ಕೇಂದ್ರದಿ0ದ ಹೊರಡುವ ಪರಿವರ್ತಕಗಳ ಮೇಲೆ ಬರುವ ಸ್ಥಳಗಳಲ್ಲಿ ದಿನಾಂಕ ೦೩-೦೭-೨೦೨೨ ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕೆಲಸ ಕೈಗೊಳ್ಳುತ್ತಿರುವುದರಿಂದ ನೆಹರು ನಗರದ ೧೧೦/೩೩/೧೧ ಕೆವಿ ವಿದ್ಯುತ್‌ವಿತರಣಾ ಕೇಂದ್ರದಿ0ದ ಹೊರಡುವ ಸದರಿ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ದಿನಾಂ ೦೩-೦೭-೨೦೨೨ರಂದು ರವಿವಾರ ಮುಂಜಾನೆ ೧೦ ಗಂಟೆಯಿAದ ಸಾಯಂಕಾಲ …

Read More »

ಡಿಒ ಕೈ ಹಿಡಿದು ಚುಂಬಿಸಿದ ಪಂಚಾಯಿತಿ ಸದಸ್ಯ

ತುಮಕೂರು: ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನೊಬ್ಬ ಪಿಡಿಒಗೆ ಮುತ್ತು ಕೊಟ್ಟಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಚಿವ ಮಾಧುಸ್ವಾಮಿ ಅವರ ತವರು ಕ್ಷೇತ್ರದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ, ಪಿಡಿಒ ಕೋಕಿಲಾ ಅವರಿಗೆ ಕಚೇರಿಯಲ್ಲೇ ಪಿಡಿಒ ಕೈ ಹಿಡಿದು ಚುಂಬಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದು ದೃಶ್ಯದಲ್ಲಿ ಪಿಡಿಒ ಅವರ ಕೈ ಹಿಡಿದುಕೊಂಡು ಬಲವಂತವಾಗಿ ಎಳೆದಾಡಿ ಮುತ್ತುಕೊಟ್ಟಿದ್ದಾನೆ. ಕೆಲ ದಿನಗಳ …

Read More »

ಸುವರ್ಣ ವಿಧಾನ ಸೌಧಕ್ಕೆ ಕಚೇರಿ ಸ್ಥಳಾಂತರವಾಗಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ. : ಅಶೋಕ ಚಂದರಗಿ

ಕಳೆದ ಹಲವಾರ ವರ್ಷಗಳಿಂದ ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಬೆಂಗಳೂರಿನಲ್ಲಿರುವ ಕಚೇರಿ ಸ್ಥಳಾಂತರವಾಗಬೇಕೆಂದು ಗಡಿಭಾಗದ ಕನ್ನಡಿರು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದರ ನಡುವೆ ಬಿಜೆಪಿ ರಾಜ್ಯ ವಕ್ತಾರ ಮಹೇಶ ಸೌಧಕ್ಕೆ ಕಚೇರಿ ಸ್ಥಳಾಂತರವಾದರೆ ಅಭಿವೃದ್ಧಿಯಾಗುತ್ತದೆ ಎಂಬುದು ತಪ್ಪು ಎಂಬ ಹೇಳಿಕೆಯನ್ನು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿಯ ಸುವರ್u ಸೌಧಕ್ಕೆ ಸರಕಾರಿ ಕಚೇರಿಗಳು ಸ್ಥಳಾಂತರವಾದರೆ ಮಾತ್ರ ಅಭಿವೃದ್ಧಿಯಾಗುತ್ತದೆ ಎಂಬುದು ತಪ್ಪು ಎಂದು …

Read More »

ಸಿದ್ದರಾಮಯ್ಯ ಸವದತ್ತಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಈ ಬಗ್ಗೆ ಯಾವುದೇ ರೀತಿ ಚರ್ಚೆ ಆಗಿಲ್ಲ.: ಸತೀಶ ಜಾರಕಿಹೊಳಿ

ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಳಿಸಲು ಬಿಜೆಪಿ ಮೊದಲ ದಿನದಿಂದಲೂ ಪ್ರಯತ್ನ ನಡೆಸಿತ್ತು. ಆದರೆ ಅದರಲ್ಲಿ ಅವರು ಯಶಸ್ವಿಯಾಗಿರಲಿಲ್ಲ. ಎಲ್ಲಾ ಶಾಸಕರಿಗೆ ಬೇರೆ ಬೇರೆ ಆಮೀಷಗಳನ್ನು ಒಡ್ಡಿ, ಅವರ ಮೇಲಿರುವ ಇಡಿ, ಐಟಿ ಕೇಸ್‍ಗಳ ಬಗ್ಗೆ ಒತ್ತಡ ಹಾಕಿ ಅವರು ಶಿವಸೇನಾದಿಂದ ಹೊರಗೆ ಬರುವಂತೆ ಮಾಡುವಲ್ಲಿ ಈಗ ಯಶಸ್ವಿಯಾಗಿದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಗೆ ರಮೇಶ ಜಾರಕಿಹೊಳಿ ಕಾರಣ ರಣತಂತ್ರ ಕಾರಣ ಎಂಬ …

Read More »

ಜಮೀನು ವಿವಾದ; ತಮ್ಮನ ಕಾಟಕ್ಕೆ ಬೇಸತ್ತು ಅಣ್ಣ ಆತ್ಮಹತ್ಯೆ

ಬೆಳಗಾವಿ; ಜಮೀನು ವಿಚಾರದಲ್ಲಿ ತಮ್ಮನ ಕಿರುಕುಳ ತಾಳಲಾರದೇ ಅಣ್ಣನೋರ್ವ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚಗಾಂವ ಗ್ರಾಮದಲ್ಲಿ ನಡೆದಿದೆ. ಶ್ರೀಕಾಂತ್ ಅಪ್ಪಾಜಿ ಜಾಧವ್(56) ಆತ್ಮಹತ್ಯೆ ಮಾಡಿಕೊಂಡವರು. ಮೃತ ಶ್ರೀಕಾಂತ್ ಮತ್ತು ಅವರ ಸಹೋದರ ಮಧುಕರ್ ಜಾಧವ್ ನಡುವೆ ಜಮೀನು ವಿವಾದವಿತ್ತೆನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಧುಕರ್ ಜಾಧವ್ ಮೃತ ಶ್ರೀಕಾಂತ್ ಹಾಗೂ …

Read More »

ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಮೂವರಿಗೆ ತಗುಲಿತು ಬೆಂಕಿ..!

ಹಾವೇರಿ; ಟೈರ್‌ಗೆ ಬೆಂಕಿ ಹಚ್ಚುವ ವೇಳೆ ಪ್ಯಾಂಟ್‌ಗೆ ಬೆಂಕಿ ತಗುಲಿ ಮೂವರು ಪ್ರತಿಭಟನಾಕಾರರು ಗಾಯಗೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಉದಯಪುರದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮೂವರು ಮಂದಿಯ ಪ್ಯಾಂಟ್‍ಗೆ ಬೆಂಕಿ ಕಿಡಿ ತಗುಲಿದ ಘಟನೆ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ. ಹಾವೇರಿಯಲ್ಲಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ …

Read More »

ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಕೂಲ್ ಬಸ್ ವ್ಯವಸ್ಥೆ:

ಬೆಂಗಳೂರು; ಖಾಸಗಿ ಶಾಲೆಗಳ ರೀತಿಯಲ್ಲೇ ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಕೂಲ್ ಬಸ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಕ್ಕಳಿಗೆ ಶಾಲಾ ವಾಹನ ಖರೀದಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಇನ್ಮುಂದೆ ಖಾಸಗಿ ಶಾಲೆಗಳಂತೆ ಮಕ್ಕಳಿಗೆ ಪಿಕ್ ಅಪ್ & ಡ್ರಾಪ್ ಕೊಡಲಾಗುತ್ತದೆ. ಬಸ್ ಖರೀದಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಮಾಡಲಾಗುತ್ತದೆ. ಚಾಲಕರ ವೇತನ, ಡೀಸೆಲ್ ಖರೀದಿಗೆ ಈ ಹಣ ಬಳಕೆಗೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ರಾಜ್ಯದಲ್ಲಿ …

Read More »