ಮುಂಬೈ: ಒಂದೆಡೆ ಮಹಾರಾಷ್ಟ್ರ ಸರ್ಕಾರದ ಪತನದ ಅಂಚಿನಲ್ಲಿದ್ದರೆ, ಅದೇ ಇನ್ನೊಂದೆಡೆ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆಯ ಸಚಿವ ಧನಂಜಯ್ ಮುಂಡೆ ನನ್ನ ಗಂಡ, ನಾನು ಆತನ ಎರಡನೆಯ ಹೆಂಡತಿ ಎಂದು ಭಾರಿ ಕೋಲಾಹಲ ಸೃಷ್ಟಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾ ಶರ್ಮಾ (43) ಎಂಬ ಮಹಿಳೆ ಬಂಧನಕ್ಕೆ ಒಳಗಾಗಿದ್ದಾರೆ. ಈಕೆ ಈ ಹಿಂದೆ ಭಾರಿ ಸುದ್ದಿ ಮಾಡಿದ್ದರು. ತಾವು ಮುಂಡೆ ಅವರ ಎರಡನೆಯ ಪತ್ನಿ ಎಂದು ಹೇಳಿಕೊಂಡು ತೀವ್ರ ಗಲಾಟೆ …
Read More »Daily Archives: ಜೂನ್ 22, 2022
ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆ
ಸಾಂಗ್ಲಿ: ಸಾಂಗ್ಲಿ ಜಿಲ್ಲೆಯ ಎರಡು ಮನೆಗಳಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. ಬಂಧಿಸಲ್ಪಟ್ಟವರು ಕುಟುಂಬಕ್ಕೆ ಸಾಲ ನೀಡಿದವರಾಗಿದ್ದಾರೆ. ಮಣಿಕ್ ವಾನ್ಮೋರೆ ಮತ್ತು ಪೋಪರ್ ವಾನ್ಮೋರೆ ಸದಸ್ಯರು ತಮ್ಮ ಪತ್ನಿಯರು, ಮಕ್ಕಳು ಮತ್ತು ತಾಯಿಯೊಂದಿಗೆ ಸೋಮವಾರ ಮಹೈಸಲ್ ಪಟ್ಟಣದ ತಮ್ಮ ಮನೆಗಳಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹೋದರರ ಮನೆಗಳು ಒಂದು ಕಿಮೀ ಅಂತರದಲ್ಲಿವೆ. ಮಣಿಕ್ ಮನೆಯಲ್ಲಿ ಆರು ಮಂದಿ …
Read More »ಗೌಂಡವಾಡ ಮರ್ಡ್‍ರ್ ಪ್ರಕರಣ ಮತ್ತೆ ಮೂವರ ಅರೆಸ್ಟ್: ಡಿಸಿ ಕಚೇರಿ ಬಳಿ ಮೃತ ಕುಟುಂಬಸ್ಥರ ಆಕ್ರಂದನ
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಹಾಗೂ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಧಿಸಿದಂತೆ ಮತ್ತೆ ಮೂವರು ಆರೋಪಿಗ¼ನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ. ಜೂನ್ 18ರಂದು ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಯಾಗಿತ್ತು. ಇನ್ನು ಹತ್ಯೆಯನ್ನು ಖಂಡಿಸಿ ಗ್ರಾಮದಲ್ಲಿ ರಾತ್ರಿವೇಳೆ ಹಿಂಸಾಚಾರವೂ ಕೂಡ ನಡೆದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, …
Read More »ಬೆಳಗಾವಿ ಪುಟ್ಟ ಮಗಳು ಕೃಷ್ಣವೇಣಿಯ ಸಂಪೂರ್ಣ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ
ಬೆಂಗಳೂರು: ದೃಷ್ಟಿ ದೋಷ, ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬೆಳಗಾವಿ ಜಿಲ್ಲೆಯ ಕೇಳಿಗ್ರಾಮದ ಶಂಕ್ರಮ್ಮ ಎಂಬುವರ ಪುಟ್ಟ ಮಗಳು ಕೃಷ್ಣವೇಣಿಯ ಸಂಪೂರ್ಣ ಚಿಕಿತ್ಸೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯವಸ್ಥೆ ಮಾಡಿದ್ದಾರೆ. ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ತಮ್ಮ ನಿವಾಸಕ್ಕೆ ಹಿಂದಿರುಗಿದಾಗ ಹಸುಗೂಸು ಎತ್ತಿಕೊಂಡ ಶಂಕ್ರಮ್ಮ ಗಮನ ಸೆಳೆದರು. ಆಕೆಯ ಬಳಿ ಸಮಸ್ಯೆಯನ್ನು ವಿಚಾರಿಸಿದಾಗ, ಮಗುವಿನ ಕಾಯಿಲೆ ಬಗ್ಗೆ ವಿವರಿಸಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದ್ದು, ನೆರವು ನೀಡಬೇಕು …
Read More »SSLC ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ 15 ಸಾವಿರ ರೂ. ಪ್ರೋತ್ಸಾಹಧನ
ದಾವಣಗೆರೆ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ.60 ರಿಂದ 74.99 ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 7,000 ರೂ. ನೀಡಲಾಗುವುದು. ಶೇ. 75 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 15,000 ರೂ. ಪ್ರೋತ್ಸಾಹಧನವನ್ನು ಡಿ.ಬಿ.ಟಿ. ಪೋರ್ಟಲ್ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಆ ಪ್ರಕಾರ ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆದ ವಿದ್ಯಾರ್ಥಿಗಳಿಗೆ ಈಗಾಗಲೇ …
Read More »ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ರಮೇಶ್ ಜಾರಕಿಹೊಳಿ ಇದೀಗ ಮುಂಬೈ ತೆರಳಿದ್ದಾರೆ
ಬೆಳಗಾವಿ: ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ರಮೇಶ್ ಜಾರಕಿಹೊಳಿ ಇದೀಗ ಮುಂಬೈ ತೆರಳಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಅವರ ಮುಂಬೈ ಪ್ರವಾಸ ಕುತೂಹಲವನ್ನು ಮೂಡಿಸುತ್ತಿರುವುದರೊಂದಿಗೆ, ತಮ್ಮ ಗುರುವಿನ ಋಣ ತೀರಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ರಮೇಶ್ ಜಾರಕಿಹೊಳಿ ಯಾವಾಗಲೂ ತಮ್ಮ ಗುರು ಎಂದು ಹೇಳಿಕೊಳ್ಳುತ್ತಿದ್ದರು. ಇದೀಗ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನದ ಅಂಚಿನಲ್ಲಿದ್ದು, ಕಮಲ …
Read More »ನಾನು ಮನಸ್ಸು ಮಾಡಿದ್ರೆ ಮುಂದೊಂದು ದಿನ ಸಿಎಂ ಆಗುತ್ತೇನೆ : ಮಾಜಿ ಸಚಿವ ಜನಾರ್ದನ ರೆಡ್ಡಿ
ಬಳ್ಳಾರಿ : ನಾನು ಮನಸ್ಸು ಮಾಡಿದರೆ ಮುಂದೊಂದು ದಿನ ಸಿಎಂ ಆಗ್ತಾನೆ. ಮನಸ್ಸು ಮಾಡಿದ್ರೆ ಯಾವಗ ಬೇಕಾದ್ರೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರೆಡ್ಡಿ, ರಾಮುಲು ಸೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗೆ ಶಾಸಕ, ಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. ನನಗಂತೂ ಯಾರಿಗೂ ಕೊಡಲಾರದ ಕಷ್ಟ ಕೊಟ್ಟಿದ್ದಾರೆ.ಆದರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಇಂತಹ …
Read More »ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ NDA ಒಕ್ಕೂಟ ತನ್ನ ಅಭ್ಯರ್ಥಿಯನ್ನ ಪ್ರಕಟಿಸಿದೆ. ಇಂದು ನಡೆದ ಸಂಸದೀಯ ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಒಡಿಶಾದ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿಯ ಈ ಘೋಷಣೆ ಬೆನ್ನಲ್ಲೇ ದ್ರೌಪತಿ ಮುರ್ಮು ಯಾರು ಎಂಬ ಚರ್ಚೆಗಳು ಶುರುವಾಗಿವೆ. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ಗವರ್ನರ್ ಎಂಬ …
Read More »ರಾಜ್ಯದಿಂದ ಕಾಶಿಯಾತ್ರೆಗೆ ಹೋಗುವ ಭಕ್ತರಿಗೆ 5 ಸಾವಿರ ರೂ.!: ಶಶಿಕಲಾ ಜೊಲ್ಲೆ
ಉಡುಪಿ : ಕಾಶಿಯಾತ್ರೆಗೆ ಹೋಗುವ ಭಕ್ತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಜರಾಯಿ ಇಲಾಖೆ ವತಿಯಿಂದ ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಉಡುಪಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಬರುವ ಅಗಸ್ಟ್, ಶ್ರಾವಣ ಮಾಸದಲ್ಲಿ ರಾಜ್ಯದ 30,000 ಭಕ್ತರಿಗೆ ಉಚಿತವಾಗಿ ಕಾಶಿಯಾತ್ರೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಯಾತ್ರೆ ಕೈಗೊಳ್ಳುವವರ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದ 5000 ರೂ. ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Read More »
Laxmi News 24×7