Breaking News

Daily Archives: ಜೂನ್ 10, 2022

ಶಿಕ್ಷಕರ ಸಮಸ್ಯೆ ನೀಗಿಸಲು ಶಿಕ್ಷಕನೇ ಆಗಬೇಕೆಂದೇನಿಲ್ಲ:ಪ್ರಕಾಶ ಹುಕ್ಕೇರಿ

ಬೆಳಗಾವಿ: ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ. ನಾನು ಆಯ್ಕೆಯಾದರೆ ಅವುಗಳನ್ನೆಲ್ಲ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಶಿಕ್ಷಕರ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತೇನೆ… ವಿಧಾನ ಪರಿಷತ್‌ ಚುನಾವಣೆಯ ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು  ಹಂಚಿಕೊಂಡ ಮಾತುಗಳಿವು. ಶಿಕ್ಷಕರ ಸಮಸ್ಯೆ ನೀಗಿಸಲು ಶಿಕ್ಷಕನೇ ಆಗಬೇಕೆಂದೇನಿಲ್ಲ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರು ಬೇಕು ಎಂದರು. ಅವರ ಸಂದರ್ಶನದ ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.   * ನಿಮ್ಮ ಪಕ್ಷದಲ್ಲಿ ಒಗ್ಗಟ್ಟು ಹೇಗಿದೆ? …

Read More »

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಪ್ರವೇಶ ಬಿತ್ತನೆ ಕಾರ್ಯ ಪ್ರಾರಂಭ

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಪ್ರವೇಶ ಮಾಡಿದ್ದು ಉತ್ತಮ ಮಳೆಯಾಗಿದೆ. ಇದರಿಂದ ರೈತರು ಸಂತಸದಿಂದ ಭೂಮಿತಾಯಿಯ ಉಡಿ ತುಂಬುವ ಕಾರ್ಯಕ್ರಮ ಅಂದ್ರೆ ಬಿತ್ತನೆ ಕಾರ್ಯವನ್ನು ಪ್ರಾರಂಭವಾಗಿವೆ. ಹೌದು ಬೆಳಗಾವಿ ಜಿಲ್ಲೆಯ ವಿವಿಧೆಡೆ ಹಾಗೂ ಬೆಳಗಾವಿಯ ಸುತ್ತಮುತ್ತಲಿನ ತಾಲೂಕುಗಳಲ್ಲಿ ಕೂಡ ಉತ್ತಮವಾಗಿ ಮಳೆಯಾಗಿದೆ. ಇನ್ನು ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಮಾಡಿದ್ದು ರೈತರು ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಬೆಳ್ಳಾನ ಎರೆಡೆತ್ತು ಬೆಳ್ಳಿಯ ಬಾರಕೋಲ ಎನ್ನುವಂತೆ ಬಸವಣ್ಣನನ್ನು ತೆಗೆದುಕೊಂಡು ಹೊಲಗದ್ದೆಗಳಲ್ಲಿ ಬಿತ್ತನೆ ಕಾರ್ಯ ಈಗ …

Read More »

ಇಬ್ಬರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ ನಿಪ್ಪಾಣಿ ಠಾಣೆ ಪೊಲೀಸರು

ಮನೆಗಳುವು ಹಾಗೂ ಮೋಟಾರ್ ಸೈಕಲ್ ಸ್ಪೇರ್ ಪಾರ್ಟ್ಸ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಿಪ್ಪಾಣಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು 27 ವರ್ಷದ ನಿಹಾಲ ಅಸ್ಲಾಂ ಬಾಲೇಖಾನ ಹಾಗೂ 47 ವರ್ಷದ ರಮೀಜಾ ದಸ್ತಗೀರ ಮಲ್ನೋಡಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಕಾರು, ಬೈಕ್ ಸ್ಪೇರ್ ಪಾರ್ಟ್ಸ್, ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 4,13,000 ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.ಬೆಳಗಾವಿ ಎಸ್.ಪಿ. …

Read More »

ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೊಮ್ಮಾಯಿಗೆ ಸಿದ್ದರಾಮಯ್ಯ ಕೊಟ್ಟ ಸಲಹೆ

ಬೆಂಗಳೂರು, ಜೂನ್ 10: ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವ್ಯಂಗ್ಯವಾಗಿ ಸಲಹೆಯನ್ನು ನೀಡಿದ್ದಾರೆ. ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಸಾಲುಸಾಲು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅಸಮರ್ಥ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ತಕ್ಷಣದಿಂದಲೇ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. “ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕ ಪರಿಷ್ಕರಣೆಗೆ ಒಬ್ಬ ಕಿಡಿಗೇಡಿ ಟ್ರೋಲರ್ ನಿಗೆ ಅವಕಾಶ ನೀಡಿ, ಈಗ ಆತ ಮಾಡಿರುವ ಕೊಳಕುಗಳನ್ನು …

Read More »

ನಾನು ಕಾಂಗ್ರೆಸ್​ಗೆ ವೋಟ್ ಹಾಕಿದೆ.. I Love It’ -ಕುಮಾರಸ್ವಾಮಿಗೆ ಕಿಚಾಯಿಸಿದ JDS ಶಾಸಕ

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನದ ವೇಳೆ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್​ ಗೌಡ ಅಡ್ಡಮತದಾನ ಮಾಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಕುಪೇಂದ್ರ​ ರೆಡ್ಡಿ ವೋಟ್ ಮಾಡುವ ಬದಲಾಗಿ, ಕಾಂಗ್ರೆಸ್​​ ಅಭ್ಯರ್ಥಿಗೆ ಮತಚಲಾಯಿಸಿದ್ದಾರೆ. ತಮ್ಮ ಹಕ್ಕು ಚಲಾಯಿಸಿ ನೇರವಾಗಿ ಸಿದ್ದರಾಮಯ್ಯರಿದ್ದ ಕೊಠಡಿಗೆ ಶಾಸಕ ಶ್ರೀನಿವಾಸ್ ಗೌಡ ಬಂದಿದ್ದಾರೆ. ಇನ್ನು ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಗೌಡ, ನಾನು ಕಾಂಗ್ರೆಸ್​ಗೆ ವೋಟ್ ಹಾಕಿದ್ದೇನೆ. ಅದಕ್ಕೆ ಕಾರಣ ಐ ಲವ್ ಇಟ್ …

Read More »

30 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕಾನ್ಸ್ಟೇಬಲ್

ಕಲಬುರಗಿ:ಮೂವತ್ತು ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ನಗರದ ಬ್ರಹ್ಮಪುರ ಪೋಲಿಸ್ ಠಾಣೆಯ ಕಾನಸ್ಟೇಬಲ್ ಭೀಮಾ ನಾಯಕ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಬ್ದುಲ್ ಮುಸ್ತಫಾ ಎಂಬುವವರು ಎಸಿಬಿಗೆ ದೂರು ನೀಡಿದ್ದು,‌ ಭೀಮಾ ನಾಯಕ್ ಸೈಟ್ ವ್ಯವಹಾರದ ಸೆಟಲ್ಮೆಂಟ್ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ.   ಅಬ್ದುಲ್ ಅಜೀಜ್ ಮುಸ್ತಫಾ ಎಂಬುವವನ ವಿರುದ್ಧ ಸೈಟ್ ವಿಚಾರವಾಗಿ ಕೆಲವರು ದೂರು ನೀಡಿದ್ದು, ಠಾಣೆಗೆ ಕರೆಯಿಸಿ ಸಮಸ್ಯೆ ಇತ್ಯರ್ಥ ಮಾಡಿದ್ದನು. ವ್ಯವಹಾರ …

Read More »

ಯಾರಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್ ಬಿಟ್ಟಿದ್ದಾರೆ. ಶಾಸಕ ಎಸ್.ಆರ್.ಶ್ರೀನಿವಾಸ್

ಬೆಂಗಳೂರು,ಜೂ.10-ರಾಜ್ಯಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಯಾರಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್ ಬಿಟ್ಟಿದ್ದಾರೆ. ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಅವರು ಇತ್ತ ಸ್ವಪಕ್ಷದ ಅಭ್ಯರ್ಥಿಗೂ ಮತ ಹಾಕದೆ ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್‍ನಲ್ಲಿ ಯಾರಿಗೂ ಸೂಚಿಸದೆ ಖಾಲಿ ಬಿಟ್ಟಿದ್ದಾರೆ. ನಿಯಮಗಳ ಪ್ರಕಾರ ಮತ ಚಲಾಯಿಸುವ ಶಾಸಕರು ಬ್ಯಾಲೆಟ್ ಪೇಪರ್‍ನಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು. ಇಲ್ಲದಿದ್ದರೆ ಅದನ್ನು ಎಣಿಕೆ …

Read More »

ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ, , 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ.

ಬೆಂಗಳೂರು,ಜೂ.10-ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು, ನಾಲ್ಕನೇ ಅಭ್ಯರ್ಥಿಯ ಗೆಲುವು ಯಾರಿಗೆ ದಕ್ಕಲಿದೆ ಎಂಬುದಷ್ಟೇ ಬಾಕಿ ಉಳಿದಿದೆ. ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಬಹುತೇಕ ಖಚಿತವಾಗಿದ್ದು, 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ. ನಿರ್ಮಲಾಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲಿ 46, ಜಗ್ಗೇಶ್ 44, ಕಾಂಗ್ರೆಸ್ ಜೈರಾಮ್ ರಮೇಶ್ ಅವರಿಗೆ 46 …

Read More »

ನಾಳೆಯಿಂದ ಕರ್ನಾಟಕದಲ್ಲಿ ಹೊಸ ಚ್ಯಾಪ್ಟರ್‌ ಶುರು :H.D.K.

ಬೆಂಗಳೂರು : ಇಂದು ರಾಜ್ಯಸಭೆ ಚುನಾವಣೆ ಹಿನ್ನೆಲೆ ವಿಧಾನ ಸೌಧಕ್ಕೆ ಜೆಡಿಎಸ್‌ ಶಾಸಕರು ಆಗಮಿಸಿದ ಬಳಿಕ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಮಾತನಾಡಿ ಆತ್ಮಸಾಕ್ಷಿಯ ಮತಗಳು ನಮಗೆ ಬರುತ್ತದೆ ಎಂದರು. ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು ನಾಳೆಯಿಂದ ಕರ್ನಾಟಕದಲ್ಲಿ ಹೊಸ ಚ್ಯಾಪ್ಟರ್‌ ಶುರುವಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮತದಾನ ಮಾಡುತ್ತಿದ್ದಾರೆ.   …

Read More »

ಪದವೀಧರ, ಶಿಕ್ಷಕರ ಪರಿಷತ್ ಚುನಾವಣೆ: ರಾಜ್ಯ ಸರ್ಕಾರದಿಂದ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಿ ಆದೇಶ

ಬೆಂಗಳೂರು: 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ( Graduate, Teachers’ Council elections ) ದಿನಾಂಕ 13-06-2022ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂದು ರಾಜ್ಯ ಸರ್ಕಾರದಿಂದ ಮತದಾನದಲ್ಲಿ ಭಾಗಿಯಾಗಲಿರುವಂತ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ( Special casual leave ) ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ.   ಈ ಕುರಿತು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ದಿನಾಂಕ 13-06-2022ರಂದು …

Read More »