Breaking News

Daily Archives: ಜೂನ್ 8, 2022

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ

ವಿಜಯಪುರ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಗೆ ವಿಜಯೇಂದ್ರ ಸ್ಪರ್ಧಿಸುತ್ತಾರೆ. ಅವರು ಎಲ್ಲಿ ನಿಂತರೂ ಗೆದ್ದು ಬರ್ತಾರೆ. ಮುಂದಿನ ದಿನಗಳಲ್ಲಿ ಜನರ ಆಶೀರ್ವಾದದಿಂದ ಒಳ್ಳೆ ಅವಕಾಶ ಸಿಗುತ್ತದೆ. ಭವಿಷ್ಯದಲ್ಲಿ ಬೆಳೆಯುತ್ತಾನೆ ಎಂಬ ವಿಶ್ವಾಸವಿದೆ ಎಂದರು. ಯಡಿಯೂರಪ್ಪ ಮತ್ತು ಕುಟುಂಬವನ್ನು ಬಿಜೆಪಿ ಪಕ್ಕಕ್ಕೆ ಸರಿಸಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ …

Read More »

ಛಲವಾದಿ ನಾರಾಯಣಸ್ವಾಮಿಯವರೇ, ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು‌ ಮನಸ್ಸಿಗೆ ನೋವಾಯಿತು – ಸಿದ್ಧರಾಮಯ್ಯ

ಬೆಂಗಳೂರು: ಛಲವಾದಿ ನಾರಾಯಣ ಸ್ವಾಮಿಯವರೇ ( Chalavadi Narayanaswamy ), ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು‌ ಮನಸ್ಸಿಗೆ ನೋವಾಯಿತು. ನಿಮ್ಮನ್ನು ಪಠ್ಯಪುಸ್ತಕ‌ ಪರಿಷ್ಕರಣ‌ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ‌ ಕಾಣುವ ಆಸೆ ನನಗೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ವ್ಯಂಗ್ಯವಾಡಿದ್ದಾರೆ.   ಈ ಕುರಿತು ಸರಣಿ ಟ್ವಿಟ್ ( Twitter ) ಮಾಡಿರುವ ಅವರು, ಛಲವಾದಿ ನಾರಾಯಣ ಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ …

Read More »

ಕೈಮೇಲೆ ಆರೋಪಿ ಹೆಸರು ಬರೆದುಕೊಂಡು, ಆತ್ಮಹತ್ಯೆಗೆ ಶರಣಾದ ಅತ್ಯಾಚಾರ ಸಂತ್ರಸ್ತೆ

(ಉತ್ತರಪ್ರದೇಶ): ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೃತ್ಯದಿಂದ ಮನನೊಂದ ಅಪ್ರಾಪ್ತೆಯೊಬ್ಬರು ಕೈ ಮೇಲೆ ಆರೋಪಿಯ ಹೆಸರು ಬರೆದು, ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಬ್ಲ್ಯಾಕ್​ ಮೇಲ್​​ನಿಂದ ಆತಂಕಕ್ಕೊಳಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಾಲಕಿ ಜೊತೆ ಪ್ರೀತಿಯ ನಾಟಕವಾಡಿರುವ ಯುವಕ, ತದನಂತರ ದೈಹಿಕ ಸಂಪರ್ಕ ಬೆಳೆಸಿ, ಅದರ ವಿಡಿಯೋ ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ …

Read More »

ಬಸ್ಸಿನಲ್ಲೇ ಬಾಲಕಿಗೆ ಸಾರಾಯಿ ಕುಡಿಸಿ ಸಾಮೂಹಿಕ ಅತ್ಯಾಚಾರ!

  ಬೇತಿಯಾ(ಬಿಹಾರ): ದೇಶದಲ್ಲಿ ನಿರ್ಭಯಾ ಘಟನೆಯಂತಹ ಅತ್ಯಾಚಾರಗಳು ಬೆಳಕಿಗೆ ಬರುತ್ತಲೇ ಇವೆ. ಇದರ ವಿರುದ್ಧ ಪೊಲೀಸ್​ ಇಲಾಖೆ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಆರೋಪಿಗಳು ಮಾತ್ರ ತಮ್ಮ ದುರಾಭ್ಯಾಸ ಮುಂದುವರಿಸುತ್ತಲೇ ಇದ್ದಾರೆ. ನಿರ್ಭಯಾದಂತಹ ಅತ್ಯಾಚಾರವೊಂದು ಬಿಹಾರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಅಮಲು ಪದಾರ್ಥ ನೀಡಿ ಅತ್ಯಾಚಾರ: ಪಾಟ್ನಾಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೆಲ್ಪರ್​​ಬಸ್​​​​ನಲ್ಲಿ ಕೂರಿಸಿದ್ದಾನೆ. ನಂತರ ಬಸ್ ನಿಲ್ದಾಣದಿಂದ ಚಾಲಕ ಬಸ್ ಅನ್ನು ಬೈಪಾಸ್ ರಸ್ತೆಗೆ ತೆಗೆದುಕೊಂಡು ಹೋಗಿದ್ದಾನೆ. ಈ ಅನುಕ್ರಮದಲ್ಲಿ ಆರೋಪಿಗಳು …

Read More »

ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಧಾರವಾಡ: ರಾಜ್ಯದಲ್ಲಿ ಮೈಕ್ ದಂಗಲ್‍ನ 2ನೇ ಚಾಪ್ಟರ್ ಶುರು ಮಾಡಲು ಶ್ರೀರಾಮಸೇನೆ ಸಜ್ಜಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಮೈಕ್ ತೆರವು ವಿಳಂಬವಾಗಿರೋದ್ರಿಂದ ಇವತ್ತು ಬಿಜೆಪಿ ಮುಖಂಡರ ಮನೆ ಮುಂದೆ ಪ್ರತಿಭಟನೆ ಆಯೋಜಿಸಲಾಗಿದೆ. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿಗೆ ಶ್ರೀರಾಮಸೇನೆ ಕರೆ ಕೊಟ್ಟಿದೆ. ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಪ್ರತಿಭಟನೆಗೆ ಹಲವು ಹಿಂದೂಪರ ಸಂಘಟನೆಗಳು ಬೆಂಬಲ ಕೊಟ್ಟಿವೆ. ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಧರಣಿಯಲ್ಲಿ ಭಾಗವಹಿಸುವಂತೆ ಶ್ರೀರಾಮಸೇನೆಯ ಸದಸ್ಯರಿಗೆ, ಪದಾಧಿಕಾರಿಗಳಿಗೆ, …

Read More »

ಯಡಿಯೂರಪ್ಪ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಯಡಿಯೂರಪ್ಪ: ಬಿಎಸ್ ವೈ ಪರ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾಟಿಂಗ್

ಬೆಳಗಾವಿ: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಒಳಜಗಳದಿಂದಾಗಿ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್​ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.   ಹೌದು, ನಗರದಲ್ಲಿ ಮಾಧ್ಯಮದವರ ಎದುರು ಈ ಬಗ್ಗೆ ಪ್ರತಿಕ್ರಿಸಿದ ಹೆಬ್ಬಾಳ್ಕರ್, ‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ವಿಚಾರ ಬಿಡಿ. ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನ ನಡೆಸಿಕೊಳ್ಳುವ ರೀತಿಯನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ …

Read More »

ರೈಲ್ವೇ ಸ್ಟೇಷನ್​ನಲ್ಲಿ ಫ್ರೀಯಾಗಿ ವೈಫೈ ಕೊಟ್ರೆ ಅಶ್ಲೀಲ ವಿಡಿಯೋ ಹುಡುಕಾಟವೇ ಹೆಚ್ಚು

ರೈಲ್ವೇ ನಿಲ್ದಾಣಗಳಲ್ಲಿ ಉಚಿತವಾಗಿ ವೈಫೈ (Free WiFi) ಕೊಡಲು ಪ್ರಾರಂಭಿಸಿದ ನಂತರ ಬಹಳಷ್ಟು ಪ್ರಯೋಜನವಾಗಿದೆ. ಪ್ರಯಾಣದ ಮಧ್ಯೆ ಜನರು ಸ್ಟೇಷನ್ (Station) ಬಂದಾಗ ಆತ್ಮೀಯರಿಗೋ, ಕುಟುಂಬದವರಿಗೂ ಕಾಲ್ ಮಾಡಿ ಮಾತನಾಡಬಹುದು, ವಿಡಿಯೋ ಕಾಲ್ ಮಾಡಬಹುದು. ಸೋಷಿಯಲ್ ಮೀಡಿಯಾ ನೋಡಬಹುದು. ಇಂಟರ್​ನೆಟ್ (Internet) ಆರಾಮವಾಗಿ ಬಳಸಬಹುದು. ಮುಖ್ಯ ವಿಚಾರ ಏನು ಎಂದರೆ ರೈಲು ಎಲ್ಲಿಗೆ ತಲುಪಿತು, ಎಷ್ಟು ಹೊತ್ತಿಗೆ ತಲುಪಲಿದೆ? ಆಹಾರ ಬುಕ್ ಮಾಡುವುದು, ಟ್ರೈನ್ ಟ್ರಾಕಿಂಗ್ ಹೀಗೆ ಹಲವಷ್ಟು ಉಪಯುಕ್ತ …

Read More »

ಲಾರಿ ಚಕ್ರಕ್ಕೆ ಸಿಲುಕಿದ ಅರ್ಧ ದೇಹ : ನರಳಾಡಿ..ನರಳಾಡಿ ಸತ್ತ ಬಾಲಕ..

ಚಿಕ್ಕೋಡಿ (ಬೆಳಗಾವಿ): ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ..ಉಳಿದ ಅರ್ಧ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು..ಹೀಗಾಗಿ ಆ ಬಾಲಕ ನರಳಾಡುತ್ತಿದ್ದ..ಕೊನೆಗೆ ಲಾರಿ ಚಕ್ರಕ್ಕೆ ಸಿಲುಕಿದ್ದ ಆ ಬಾಲಕನನ್ನು ಅದ್ಯಾಗೋ ರಕ್ಷಿಸಲಾಯಿತು.ಆದ್ರೂ ತೀವ್ರವಾಗಿ ಗಾಯಗೊಂಡಿದ್ದ ಆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.   ಅಂದ ಹಾಗೇ ಇಂತಹ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದೆ. ಸದ್ಯ ಚಿಕ್ಕೋಡಿ …

Read More »

ಸಿದ್ಧಗಂಗಾ ಶ್ರೀ, ಆದಿ ಶ್ರೀಗಳ “ಅನ್ನ-ಅಕ್ಷರ ದಾಸೋಹ’ ಕೈಬಿಟ್ಟ ಚಕ್ರತೀರ್ಥ ಸಮಿತಿ

ಬೆಂಗಳೂರು: ಇಲ್ಲಿಯವರೆಗೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಹಿತಿಗಳ ಹೆಸರು ಮತ್ತು ಪಠ್ಯವನ್ನು ಕೈಬಿಡಲಾಗುತ್ತಿದೆ ಎಂಬ ವಿವಾದ ಇದೀಗ, ಮಠ-ಮಂದಿರಗಳತ್ತ ತಿರುಗಿದೆ. ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿರುವ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಕೈಂಕರ್ಯಗಳನ್ನೇ ಬಿಡಲಾಗಿದೆ.   ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ನಡೆಸುತ್ತಿದ್ದರು. ಈ ಮೂಲಕ ಮಠವು ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಮೂಲ ಶಿಕ್ಷಣ ಮತ್ತು ವೃತ್ತಿ ಶಿಕ್ಷಣವನ್ನು ಕಾಲೇಜುಗಳಲ್ಲಿ ನೀಡುತ್ತಿದೆ ಎನ್ನುವ ಸಾಲುಗಳನ್ನು …

Read More »

ಸಿಡಿಲು ಬಡಿದು ಮಹಿಳೆ ಸಾವು : ಏಳು ಜನರಿಗೆ ಗಂಭೀರ ಗಾಯ

ರಟ್ಟೀಹಳ್ಳಿ : ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ವೇಳೆ ಮಂಗಳವಾರ ಸಂಜೆ ಸಿಡಿಲು ಬಡಿದು ಮಹಿಳೆ ಸಾವಿಗೀಡಾಗಿದ್ದು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟಣದ ಕೋಟೆ ನಿವಾಸಿ ಕರಿಯಮ್ಮ ರಂಗಪ್ಪ ಪರಸಪ್ಪನವರ (35) ಮೃತರು. ಲತಾ ಮಾರುತೆಪ್ಪ ಸುಣಗಾರ, ಮಾರುತೆಪ್ಪ ಸುಣಗಾರ, ಸುಧಾ ಪರಸಪ್ಪನವರ, ರತ್ನಾ ಉಪ್ಪಾರ, ಸಾಕಮ್ಮ ಸುಣಗಾರ, ರವೀಂದ್ರ ಪರಸಪ್ಪನವರ, ಜುಬೇದಾ ಬಾಗಲಮನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ …

Read More »