Breaking News

Daily Archives: ಮೇ 14, 2022

ಸಿನಿಮಾಗೆ ಬಳಕೆಯಾಗುತ್ತಿದ್ದ ಕಾರು..! ಕಾರನಲ್ಲಿತ್ತು ಶವ..!

ಬೆಂಗಳೂರು, ಮೇ13: ಅದೊಂದು ಕಾರು ನಿಂತಲ್ಲೇ ನಿಂತು ಬರೊಬ್ಬರಿ ಎರಡು ವರ್ಷಗಳಾಗಿತ್ತು. ಕಾರಿಗೆ ಕಲರ್ ಫುಲ್ ಬಣ್ಣ ಬಳಿಯಲಾಗಿತ್ತು. ಮುಂಜಾನೆ ಆ ಕಾರಿನ ಬಳಿಯಲ್ಲಿ ವಿಚಿತ್ರವಾಗಿ ವಾಸನೆ ಬರತೊಡಗಿತ್ತು. ಜನರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಈ ವೇಳೆ ಬಂದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಪತ್ತೆಯಾಯ್ತು ಪುರುಷನ ಕೊಳೆತ ಶವ.   ಸಿನಿಮಾಗೆ ಬಳಕೆಯಾಗುತ್ತಿದ್ದ ಕಾರು..! ರಾಜಾಜಿನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಲರ್ ಫುಲ್ ಆಗಿದ್ದ …

Read More »

ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’, ಈ ನಿಯಮವು ಗಾಂಧಿ-ನೆಹರೂ ಕುಟುಂಬಕ್ಕೂ ಅನ್ವಯ : ಕಾಂಗ್ರೆಸ್‌

ಉದಯಪುರ: ‘ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌’ ಎಂಬ ನಿಯಮವನ್ನು ಕಾಂಗ್ರೆಸ್‌ ಪಕ್ಷವು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದೇ ಕುಟುಂಬದ ಎರಡನೇ ವ್ಯಕ್ತಿಯು ಕನಿಷ್ಠ ಐದು ವರ್ಷ ಪಕ್ಷ ಸಂಘಟನೆಯಲ್ಲಿ ‘ಅಸಾಧಾರಣ ರೀತಿ’ಯಲ್ಲಿ ಕೆಲಸ ಮಾಡಿದ್ದರೆ ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಇದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಈ ಪ್ರಸ್ತಾವವನ್ನು ಶುಕ್ರವಾರ ಮುಂದಿಡಲಾಗಿದೆ. ಮುಖಂಡರು ಯಾವುದೇ ಹುದ್ದೆಗೆ ದೀರ್ಘ ಕಾಲ ಅಂಟಿಕೊಳ್ಳುವುದಕ್ಕೂ ತಡೆ ಒಡ್ಡುವ ಪ್ರಸ್ತಾವ …

Read More »

ಮದುವೆಯಲ್ಲಿ ಕುಮಾರಸ್ವಾಮಿಗೆ ಮತ ಹಾಕುವಂತೆ ವಧು-ವರರಿಂದ ಮನವಿ!

ಕೊಪ್ಪಳ: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಅಧಿಕಾರದ ಚುಕ್ಕಾಣಿ ಹಿಡಿಯಲು 3 ಪ್ರಮುಖ ಪಕ್ಷಗಳು ಮತದಾರರ ಮನವೊಲಿಕೆಗೆ ಮನೆಬಾಗಿಲಿಗೆ ಎಡತಾಕುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ರಣತಂತ್ರ ರೂಪಿಸುತ್ತಿವೆ.   ಈ ಬಾರಿ ನಾವು ಮುಖ್ಯಮಂತ್ರಿಬಸವರಾಜ್ ಬೊಮ್ಮಾಯಿನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆಂದು ಹೇಳಿರುವ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸುತ್ತಿದೆ. ನೂರಕ್ಕೆ ನೂರರಷ್ಟು ಈ ಬಾರಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ, …

Read More »

ಚುನಾವಣೆಗೆ ಜೆಡಿಎಸ್‌ ರಣಕಹಳೆ

ಬೆಂಗಳೂರು: ಸುಮಾರು ಒಂದು ತಿಂಗಳಿಂದ ರಾಜ್ಯಾದ್ಯಂತ ಸಂಚರಿಸಿ ರಾಜಧಾನಿ ತಲುಪಿದ ಜೆಡಿಎಸ್‌ನ ಕನಸಿನ ಕೂಸು “ಜನತಾ ಜಲಧಾರೆ ರಥಯಾತ್ರೆ’ಗೆ ನಗರದ ಹೆಬ್ಟಾಗಿಲಲ್ಲಿ ಶುಕ್ರವಾರ ಭವ್ಯ ಸ್ವಾಗತ ದೊರೆಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಲಕ್ಷಾಂತರ ರೈತರ ಸಮ್ಮುಖದಲ್ಲಿ ಪ್ರಾದೇಶಿಕ ಪಕ್ಷವು 2023ರ ವಿಧಾನಸಭಾ ಚುನಾವಣೆಯ ರಣಕಹಳೆ ಮೊಳಗಿಸಿತು.   ರಾಜ್ಯದ ನಾನಾ ಭಾಗಗಳಿಂದ ಬಂದು ಕಿಕ್ಕಿರಿದು ತುಂಬಿದ್ದ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಮಾತನಾಡಿದ ನಾಯಕರು, “ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ …

Read More »

ಮೇ 16ಕ್ಕೆ ವರ್ಷದ ಮೊದಲ ʼಚಂದ್ರಗ್ರಹಣ

ಮೇ 16 ರಂದು ಬುದ್ಧ ಪೂರ್ಣಿಮಾ ದಿನ 2022ರ ವರ್ಷದ ಮೊದಲ ಚಂದ್ರ ಗ್ರಹಣವು ಸಂಭವಿಸಲಿದೆ. ಧರ್ಮ ಗ್ರಂಥಗಳಲ್ಲಿ ಗ್ರಹಣದ ಅವಧಿಯನ್ನ ಶುಭವೆಂದು ಪರಿಗಣಿಸಲಾಗುವುದಿಲ್ಲ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರ, ರಾಹು ಮತ್ತು ಕೇತುಗಳಿಂದ ಗ್ರಹಣದ ಸಮಯದಲ್ಲಿ ಹಿಂಸಿಸಲ್ಪಡುತ್ತಾರೆ ಮತ್ತು ಅವರ ಶಕ್ತಿ ದುರ್ಬಲವಾಗುತ್ತದೆ ಎಂದು ನಂಬಲಾಗಿದೆ. ಗ್ರಹಣ ಮುಗಿಯುವವರೆಗೂ ಪೂಜೆಯನ್ನ ನಿಷೇಧಿಸಲಾಗಿದೆ. ಆದ್ರೆ, ಗ್ರಹಣದ ಸಮಯದಲ್ಲಿ ಪೀಡಿತ ಗ್ರಹದ ಶಕ್ತಿ ಹೆಚ್ಚಿಸಲು ಮಾನಸಿಕವಾಗಿ ಮಾಡಿದ ಮಂತ್ರವನ್ನ ಪಠಿಸುವ …

Read More »

ಕಳಪೆ ಪ್ರದರ್ಶನ; ಪಂಜಾಬ್ ಎದುರು ಮತ್ತೊಮ್ಮೆ ಸೋತ ಆರ್​ಸಿಬಿ

RCB vs PBKS, IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿದ್ದು, ಐಪಿಎಲ್ 2022ರ ಪ್ಲೇಆಫ್ ತಲುಪುವ ಅವರ ಭರವಸೆಗೆ ಹೆಚ್ಚಿನ ಬಲ ನೀಡಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿದ್ದು, ಐಪಿಎಲ್ 2022ರ ಪ್ಲೇಆಫ್ ತಲುಪುವ ಅವರ ಭರವಸೆಗೆ ಹೆಚ್ಚಿನ ಬಲ ನೀಡಿದೆ. ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಪ್ಲೇಆಫ್ ಹಂತಕ್ಕೆ ತಲುಪುವ ಬೆಂಗಳೂರು ಕನಸಿಗೆ ಪಂಜಾಬ್ ದೊಡ್ಡ ಹೊಡೆತ …

Read More »