Breaking News

Monthly Archives: ಏಪ್ರಿಲ್ 2022

ಶಾಂತಿ ಕದಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ: ಎಸ್‌ಡಿಪಿಐ ಪ್ರತಿಭಟನೆ

ಚಾಮರಾಜನಗರ: ಹಿಜಾಬ್‌, ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ, ಹಲಾಲ್‌ ವಿಚಾರಗಳನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಶಾಂತಿ ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ (ಎಸ್‌ಡಿಪಿಐ) ವತಿಯಿಂದ ನಗರದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಯಿತು.   ಡೀವಿಯೇಷನ್‌ ರಸ್ತೆಯಲ್ಲಿರುವ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಸಮಾಜದಲ್ಲಿ ಜಾತಿ, ಧರ್ಮ ನಡುವೆ ಧ್ವೇಷವನ್ನು ಬಿತ್ತಿ ಶತ …

Read More »

ಉತ್ತರ ಕೊಡಿ: ಅಮಿತ್‌ ಶಾಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು: ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ನೋಟು ರದ್ದು, ಕೃಷಿ ಕಾಯ್ದೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದಾರೆ.   ‘ಆನ್ಸರ್‌ ಮಾಡಿ ಅಮಿತ್‌ ಶಾ’ ಹೆಸರಿನಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಸಹಕಾರ ಸಮ್ಮೇಳನಲ್ಲಿ ಭಾಷಣ ಆರಂಭಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಕೇಳಿದ್ದಾರೆ. ‘ಸಹಕಾರ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡುತ್ತಿದ್ದೀರಿ. ಈ …

Read More »

ಶಿಕ್ಷಕಿ ಬಾತ್​ರೂಂಗೆ ಹೋಗಿದ್ದ ವೇಳೆ ಆ ದೃಶ್ಯವನ್ನು ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಪುಣೆ : ಪುಣೆಯ ಅಲಂಕಾರ್ ಪೊಲೀಸ್ ಠಾಣೆಯ ಆವರಣದಲ್ಲಿ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿಗೆ ಪಾಠ ಹೇಳಲು ಮನೆಗೆ ಬಂದ ಶಿಕ್ಷಕಿ ಬಾತ್​ರೂಂಗೆ ಹೋಗಿದ್ದ ವೇಳೆ ಆ ದೃಶ್ಯವನ್ನು ಅಪ್ರಾಪ್ತ ವಿದ್ಯಾರ್ಥಿ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. 16ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ಅನ್ನು ವಾಶ್ ರೂಂನಲ್ಲಿ ಮರೆಮಾಡಿಟ್ಟಿದ್ದಾನೆ. ಇದರ ಅರಿವಿಲ್ಲದ ಶಿಕ್ಷಕಿ ಬಾತ್​ರೂಂ ಬಳಕೆ ಮಾಡಿ ಹೊರ ಬಂದಿದ್ದಾರೆ. ಆದರೆ, ಶಿಕ್ಷಕಿಯ ಎಲ್ಲಾ ಖಾಸಗಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. …

Read More »

ಯುಗಾದಿ ಹೊತ್ತಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಯುಗಾದಿ ಹೊತ್ತಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ‘ಗ್ರಾಮೀಣಾಭಿವೃದ್ಧಿ ಇಲಾಖೆ ಯಿಂದ ‘6,406 ಹುದ್ದೆ’ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ದಿ ಸಹಾಯಕ ( ಗ್ರೇಡ್ 2) ಹುದ್ದೆಗೆ ಪದವಿ ಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರತಕ್ಕದ್ದು, ಮತ್ತು ಕಂಪ್ಯೂಟರ್ ಕಲಿಕೆ ಅಗತ್ಯವಾಗಿದೆ. ಹಾಗೂ ಹಿಂದಿನ ಮಂಡಲ ಪಂಚಾಯತ್ ಅಥವಾ ಗ್ರಾಮ ಪಂಚಾಯತ್ ಗಳಲ್ಲಿ ಬಿಲ್ ಕಲೆಕ್ಟರ್ ಗಳು/ಗುಮಾಸ್ತರು/ಬೆರಳಚ್ಚುಗಾರರು/ಗುಮಾಸ್ತ ಕಮ್ ಡೇಟಾ …

Read More »

ಈ ರಾಶಿಯ ಯುಗಾದಿಯ ಶುಭಯೋಗ ಪ್ರಾರಂಭ!

ಈ ರಾಶಿಯ ಯುಗಾದಿಯ ಶುಭಯೋಗ ಪ್ರಾರಂಭ! ಈ ರಾಶಿಯ ಉದ್ಯೋಗಿಗಳಿಗೆ ಮುಂಬಡ್ತಿ,ವರ್ಗಾವಣೆ,ಮನೆ ಕಟ್ಟಡ ಇತ್ಯಾದಿ ಯಶಸ್ವಿ ಕಾರ್ಯ ಪ್ರಾರಂಭ! ಶನಿವಾರ ರಾಶಿ ಭವಿಷ್ಯ-ಏಪ್ರಿಲ್-2,2022 ಯುಗಾದಿ,ಚೈತ್ರ ನವರಾತ್ರಿ ಸೂರ್ಯೋದಯ: 06:10am, ಸೂರ್ಯಸ್ತ: 06:29pm ಶುಭಕೃತ್ ನಾಮ ಸಂವತ್ಸರ ಶಾಲಿವಾಹನ ಶಕೆ1944, ಸಂವತ್ 2078 ಚೈತ್ರ ಮಾಸ, ಶಿಶಿರ ಋತು, ಶುಕ್ಲ ಪಕ್ಷ, ಉತ್ತರಾಯಣ ತಿಥಿ: ಪಾಡ್ಯ 11:58am ವರೆಗೂ, ನಂತರ ಬಿದಿಗೆ ನಕ್ಷತ್ರ: ರೇವತಿ 11:21am ವರೆಗೂ , ಅಶ್ವಿನಿ ಯೋಗ: …

Read More »

ಗ್ಲೋಬಲ್‌ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳ ಹವಾ.

ಕನ್ನಡ ಸಿನಿಮಾಗಳು ಇತ್ತೀಚೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮೀರಿ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರೋದು ಖುಷಿಯ ವಿಚಾರ. ಅದರಲ್ಲೂ ಕನ್ನಡ ಸಿನಿಮಾಗಳು ಬೇರೆ ಭಾಷೆಗೂ ಡಬ್‌ ಆಗಿ “ನಾವೂ ಯಾರಿಗೂ ಕಮ್ಮಿಯಿಲ್ಲ’ ಎಂದು ತೊಡೆ ತಟ್ಟಿ ನಿಲ್ಲುತ್ತಿರೋದು ಒಳ್ಳೆಯ ಬೆಳವಣಿಗೆ. ಕಲೆಗೆ ಯಾವುದೇ ಬೇಲಿ ಇಲ್ಲ ಎಂಬುದು ಅಕ್ಷರಶಃ ಸತ್ಯ. ಕನ್ನಡದ ಸಿನಿಮಾಗಳು ಭಾಷೆ, ಗಡಿ ಮೀರಿ ಬಾನೆತ್ತರದಲ್ಲಿ ಹಾರಾಡಲು ಶುರುವಿಟ್ಟುಕೊಂಡಿವೆ. ಹಾಗೆಯೇ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರ ಮಾಡುವಲ್ಲಿ ಸಫ‌ಲವಾಗಿದೆ. ಹಿಂದೆಲ್ಲ ಮೂಲ ಭಾಷೆಯ …

Read More »

ಕೌಟುಂಬಿಕ ಕಲಹ: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ಕೊಳ್ಳೇಗಾಲ: ಪತ್ನಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿರುವ ಘಟನೆ ಪಟ್ಟಣದ ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ. ಚಿನ್ನಮ್ಮ (30) ಮೃತ ದುರ್ದೈವಿ. 10 ವರ್ಷ ಹಿಂದೆ ಕುಮಾರ್ (35) ಹಾಗೂ ಚಿನ್ನಮ್ಮ ಮುದುವೆಯಾಗಿದ್ದರು. ಇವರಿಬ್ಬರ ನಡುವೆ ಮನಸ್ತಾಪವಿದ್ದ ಹಿನ್ನೆಲೆ, ಪತಿ ಮುನಿಸಿಕೊಂಡು ತವರು ಮನೆಗೆ ಹೋಗಿದ್ದಳು. ಗುರುವಾರ ಮುಳ್ಳೂರು ಗ್ರಾಮಸ್ಥರ ಸಮ್ಮಖದಲ್ಲಿ ನ್ಯಾಯ ಪಂಚಾಯಿತಿ ಮಾಡಿ, ಗಂಡನೊಂದಿಗೆ ಕಳುಹಿಸಲಾಗಿತ್ತು. ಮತ್ತೆ ಜಗಳ ಮುಂಜಾನೆ ಆರಂಭವಾಗುತ್ತಿದಂತೆ ಪತಿ, ಪತ್ನಿಯನ್ನು ಕೊಲೆ …

Read More »

ಎಳೆನೀರು ಮಾರುತ್ತಿದ್ದ ಮಹಿಳೆಯ ಮಾಂಗಲ್ಯ ಸರ ದೋಚಿ ಪರಾರಿ

ಗಂಗಾವತಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿಗೆ ಆಗಮಿಸುವ ಪ್ರವಾಸಿಗರಿಗೆ ಎಳೆನೀರು, ತೆಂಗಿನಕಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳರು ದೋಚಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ಹನುಮನಹಳ್ಳಿ ಗ್ರಾಮದ ಖಾಜಾಬಿ ಹತ್ತಿರ ಬೈಕ್ ನಲ್ಲಿಆಗಮಿಸಿದ ಮೂವರು ತೆಂಗಿನ ಕಾಯಿ ಖರೀದಿಸುವ ನೆಪದಲ್ಲಿ ಮಹಿಳೆಯ ಕತ್ತಿನಲ್ಲಿದ್ದ 2ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.ಶುಕ್ರವಾರ ಅಮವಾಸ್ಯೆಯಾಗಿದ್ದರಿಂದ ಹೆಚ್ಚಿನ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುತ್ತಿದ್ದು, ಶನಿವಾರ, ಮಂಗಳವಾರ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು …

Read More »

ಸಹಕಾರ ಸಮ್ಮೇಳನ: ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನೆ

ಬೆಂಗಳೂರು: ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಸಹಕಾರ ಸಮ್ಮೇಳನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್” ಉದ್ಘಾಟಿಸಲಾಯಿತು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ನಂದಿನಿ ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಲಾಂಛನ ಬಿಡುಗಡೆ ಮಾಡಿದರು.   ಸಮಾರಂಭದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕರ್ನಾಕಟದಲ್ಲಿ ಸಹಕಾರಿ ರಂಗ ಮಹತ್ವದ ಪಾತ್ರ ವಹಿಸಿದೆ. ಸಹಕಾರ ಗ್ರಾಮೀಣ ಆರ್ಥಿಕ ಚಟುವಟಿಕೆಗೆ ದೊಡ್ಡ …

Read More »

ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರಿಗೆ ಗ್ರಾಮಸ್ಥರಿಂದ ಧರ್ಮದೇಟು

ಹಾವೇರಿ: ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರಿಗೆ ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಬಳಿಯ ಜೇಕಿನಕಟ್ಟಿ ರಸ್ತೆಯಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಮೂಲದ ಇಬ್ಬರು ವ್ಯಕ್ತಿಗಳು ಕಾವಿ ತೊಟ್ಟು ಮನೆಮನೆಗೆ ತೆರಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ಬಳಿಕ ಗ್ರಾಮದ ಹೊರವಲಯಕ್ಕೆ ಬಂದು ಕಾವಿ ಕಳಚಿ ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ವಿಚಾರವನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನು ಬೆನ್ನಟ್ಟಿ ಹಿಡಿದು …

Read More »