Breaking News

Daily Archives: ಏಪ್ರಿಲ್ 29, 2022

ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ಸ್ವಾಗತಿಸಿದ ಡಿ. ರೂಪಾ

ಬೆಂಗಳೂರು: ಪಿಎಸ್‌ಐ ನೇಮಕಾತಿಗೆ ಮರುಪರೀಕ್ಷೆ ನಿರ್ಧಾರದ ಮೂಲಕ ನೊಂದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರವು ನ್ಯಾಯ ಒದಗಿಸಿದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದ್ದಾರೆ. ನೇಮಕಾತಿ ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿಗಳಿಂದ ಹಿಡಿದು ಎಲ್ಲರಿಗೂ ಅಮಾನತು ಮುಂತಾದ ಶಿಸ್ತು ಕ್ರಮ(ಟ್ರಾನ್ಸ್‌ಫರ್ ಶಿಸ್ತುಕ್ರಮ ಅಲ್ಲ) ಆದಾಗ ಮಾತ್ರ ಮುಂದೆ ಇಂತಹ ಘಟನೆ ತಡೆಯಲು ಸಾಧ್ಯ. ಇಲ್ಲವಾದಲ್ಲಿ ಅಧಿಕಾರಿಗಳು ಆಡಿದ್ದೇ ಆಟ. ಎಂದು ‌ ಡಿ.ರೂಪಾ ಟ್ವೀಟ್ ಮಾಡಿದ್ದಾರೆ. 545 ಪಿಎಸ್‌ಐ ಹುದ್ದೆ …

Read More »

ಸ್ವಾವಲಂಬನೆ ಬದುಕು; ಆಘಾತಕ್ಕೆ ಸಿಲುಕಿದ್ದ ಬದುಕಿಗೆ ಆಧಾರವಾದ ರೊಟ್ಟಿ

ಹುಬ್ಬಳ್ಳಿ: ಇದ್ದದ್ದು ಎರಡೇ ಎಕರೆ ಜಮೀನು ಆದರೂ ನೆಮ್ಮದಿ-ತೃಪ್ತಿಯಿಂದ ಬದುಕುತ್ತಿದ್ದ ಆ ಕುಟುಂಬಕ್ಕೆ ಬರಸಿಡಲಿನ ಆಘಾತ ಬಂದೆರಗಿತ್ತು. ತಾನಾಯಿತು ತನ್ನ ಮನೆಯಾಯಿತು ಎಂದುಕೊಂಡಿದ್ದ ಮಹಿಳೆ ಆಧಾರಸ್ತಂಭ ಕಳೆದುಕೊಂಡು ಇಡೀ ಕುಟುಂಬಕ್ಕೆ ಆಧಾರವಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂಕಷ್ಟ ಸಂದರ್ಭದಲ್ಲಿ ತರಬೇತಿ ಪಡೆದಿದ್ದೇನೆ. ಇದ್ದರೆ ಮನೆಯಲ್ಲಿರಲಿ ಎಂದು ಪಡೆದಿದ್ದ ರೊಟ್ಟಿ ಯಂತ್ರವೇ ಇದೀಗ ಆ ಕುಟುಂಬಕ್ಕೆ ಪ್ರಮುಖ ಆಧಾರವಾಗಿದೆ. ರೊಟ್ಟಿ ತಟ್ಟುವ ಮೂಲಕವೇ ಆ ಮಹಿಳೆ ಇಡೀ ಕುಟುಂಬ ನಿರ್ವಹಣೆ ಮಾಡುವ …

Read More »

ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಬಿಟ್ಟು ಬೇರೆ ಎನೂ ಕಾಣಿಸುತ್ತಿಲ್ಲ.: ಮೊಹಮ್ಮದ್ ನಲಪಾಡ್

ಬೆಳಗಾವಿ: ದೇಶದಲ್ಲಿ ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ ಎಂದು ಸಂಸದ ಪ್ರತಾಪ್ ಸಿಂಹಗೆ ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ಖ ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಬಿಟ್ಟು ಬೇರೆ ಎನೂ ಕಾಣಿಸುತ್ತಿಲ್ಲ. ಕಳೆದ ಏಳು ವರ್ಷದಿಂದ ಪೆಟ್ರೋಲ್, ಡೀಸೆಲ್ ದರ ಡಬಲ್ ಆಗಿದೆ. ಸಾಮಾನ್ಯ ಒಬ್ಬ ವ್ಯಕ್ತಿ ಮನೆಯಿಂದ ಆಚೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು. …

Read More »

ಅರ್ಧ ಜ್ಞಾನವಿರೋ ಆರಗ ಜ್ಞಾನೇಂದ್ರ ಎಂದ ಮೊಹಮ್ಮದ್ ನಲಪಾಡ್

ಬೆಳಗಾವಿ: ಗೃಹ ಸಚಿವರು ಅರ್ಧ ಜ್ಞಾನೇಂದ್ರ. ಫುಲ್ ಜ್ಞಾನ ಇದ್ದಿದ್ರೆ ಕಷ್ಟ ಇರಲಿಲ್ಲ. ಆದರೆ ಅರ್ಧ ಜ್ಞಾನ ಇಟ್ಟುಕೊಂಡು ಇಂತಹ ಕೆಲಸಗಳನ್ನ ಮಾಡಿಕೊಂಡು ಹೋಗುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಯೂಥ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಇರುವವರೇ ಹಗರಣ ಮಾಡಿದ್ದಾರೆ. 56 ಸಾವಿರ ಯುವಕರ ಜೀವನದ ಜೊತೆಗೆ ಆಟವಾಡಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಮಾನ, ಮರ್ಯಾದೆ, …

Read More »

ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ: ಮೊಹಮ್ಮದ್ ನಲ್ ಪಾಡ

ಬೆಳಗಾವಿ: ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷಮೊಹಮ್ಮದ್ ನಲ್ ಪಾಡ ಆರೋಪ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಎಂದರೆ ಬೆಲೆ ಏರಿಕೆ ಸರ್ಕಾರ. ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ರೂಪಾಯಿ ಎರಡೂ ರೂಪಾಯಿ ಏರಿಕೆಯಾದರೂ ಬಿಜೆಪಿ ನಾಯಕರು ರಸ್ತೆಗೆ ಬಂದು ಗ್ಯಾಸ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದರು. ಈಗ ಎಲ್ಲಿದ್ದಾರೆ ಆ. ಚುನಾವಣೆ ಸಂದರ್ಭದಲ್ಲಿ ಬೆಲೆ …

Read More »

ತಾಕತ್ತಿದ್ದರೆ ಮುಂದಿನ ವರ್ಷ ಕುರಾನ್ ಪಠಣ ಮಾಡಿ ನೋಡೋಣ, ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ : ಪ್ರಮೋದ್ ಮುತಾಲಿಕ್

ಹಾಸನ: ಬೇಲೂರು ಚನ್ನಕೇಶವ ಸ್ವಾಮಿ ಜಾತ್ರಾ ಮಹೋತ್ಸವದ ಗಳಿಗೆ ತೇರಿನ ದಿನ ರಥ ಎಳೆಯುವ ಮುನ್ನ ಕುರಾನ್ ಪಠಣ ಮಾಡುವುದಕ್ಕೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದು ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಶ್ರೀರಾಮಸೇನೆ ಬೇಲೂರು ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ? ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಮುಂದಿನ ವರ್ಷ ಗಳಿಗೆ ತೇರಿಗೂ ಮುನ್ನ …

Read More »

ಸಿಎಂ ಮನೆಯಲ್ಲೇ ಚರ್ಚೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಮೇ 3 ಬಿಜೆಪಿಗೆ ಬಿಗ್ ಡೇ ಆಗಲಿದೆ. ಸಂಪುಟ ಪುನಾರಚನೆಯ ಮಾತುಕತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯಲ್ಲೇ ನಡೆಯಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಸವರಾಜ ಬೊಮ್ಮಾಯಿ ಅವರು ಊಟದ ವ್ಯವಸ್ಥೆ ಏರ್ಪಾಡು ಮಾಡಿದ್ದಾರೆ. ಮಧ್ಯಾಹ್ನ 2 ರಿಂದ 3ಗಂಟೆ ತನಕ ಸಿಎಂ ಸರ್ಕಾರಿ ನಿವಾಸದಲ್ಲಿ ಅಮಿತ್ ಶಾ ಲಂಚ್ ಟಾಕ್ ನಡೆಯಲಿದೆ. ಆ ಒಂದು ಗಂಟೆಯಲ್ಲಿ ರಾಜ್ಯ ಸಂಪುಟ …

Read More »

ಕಡಿಮೆ ಬೆಲೆಗೆ ಸಿಗುತ್ತೆ ಅಂತ ಗೋವಾದಿಂದ ಈ ಇಬ್ಬರು ತಂದ ಮದ್ಯ ಎಷ್ಟು ಗೊತ್ತಾ.? ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ.?

ಕಾರವಾರ: ಗೋವಾದಲ್ಲಿ ಮದ್ಯದ ದರ ಕರ್ನಾಟಕಕ್ಕೆ ಹೋಲಿಕೆ ಮಾಡಿದ್ರೇ ಕಡಿಮೆ. ಹೀಗೆ ಕಡಿಮೆ ರೇಟ್ ಗೆ ಸಿಗುತ್ತೆ ಅಂತ ಇಬ್ಬರು ಆಸಾಮಿಗಳು ಮಾತ್ರ ತಂದಿದ್ದು ಲಕ್ಷ ಗಟ್ಟಲೇ ಮದ್ಯ. ಹಾಗಾದ್ರೇ.. ಅವರು ತಂದಿ ಮದ್ಯವೆಷ್ಟು, ಸಿಕ್ಕಿ ಹಾಕಿಕೊಂಡಿದ್ದೇಗೆ ಎನ್ನುವ ಬಗ್ಗೆ ಮುಂದೆ ಓದಿ..   ಸಾಗರ-ಪಣಜಿ ನಡುವೆ ಓಡಾಡುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಅನ್ನು ಗೋವಾದಲ್ಲಿ ಶಿವಮೊಗ್ಗ ಮೂಲಕ ನಾಗರಾಜ್ (35) ಹಾಗೂ ಸಾಗರ್ (25) …

Read More »

E-Shram Card : ಕೇಂದ್ರ ಸರ್ಕಾರ ಯಾವಾಗ? ಯಾರ ಖಾತೆಗೆ ‘ಹಣ’ ಕಳುಸುತ್ತೆ? ನೋಂದಾಯಿಸಿಕೊಳ್ಳೋದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಪ್ರಸ್ತುತ, ಕೇಂದ್ರ ಸರ್ಕಾರವು ದೇಶದ ಬಡ ವರ್ಗಗಳ ಜನರಿಗಾಗಿ ಅನೇಕ ಯೋಜನೆಗಳನ್ನ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಜನರು ಅನೇಕ ರೀತಿಯ ಪರಿಹಾರ ಮತ್ತು ಪ್ರಯೋಜನಗಳನ್ನ ಪಡೆಯುತ್ತಾರೆ. ಇ-ಶ್ರಮ್ ಕಾರ್ಡ್ ಯೋಜನೆಯೂ ಇದೇ ರೀತಿಯ ಯೋಜನೆಯಾಗಿದ್ದು, ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಇದನ್ನ ಪರಿಚಯಿಸಿದೆ. ಕಾರ್ಮಿಕರನ್ನ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ, ಈ ಯೋಜನೆಯು ಇಲ್ಲಿಯವರೆಗೆ ಲಕ್ಷಾಂತರ ಕಾರ್ಮಿಕರಿಗೆ ಪ್ರಯೋಜನವನ್ನ ನೀಡಿದೆ. …

Read More »

ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸಂಪರ್ಕ’ಸೇತು’ಗಳಿಗೆ ನಡುಕ ಶುರು!

ಬೆಂಗಳೂರು, ಏ. 29: ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಸಿಕ್ಕಿ ಬೀಳುತ್ತಿದ್ದಂತೆ ಕೆಲವು ಪ್ರಭಾವಿ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ದಿವ್ಯಾ ಹಾಗರಗಿ ಮಹಾರಾಷ್ಟ್ರದ ಪುಣೆಯಲ್ಲಿ ಸಿಕ್ಕಿ ಬಿದ್ದಿದ್ದು, ಆಕೆಗೆ ಆಶ್ರಯ ನೀಡಿದ ವ್ಯಕ್ತಿಯನ್ನೂ ಸಹ ಸಿಐಡಿ ಪೊಲೀಸರು ಎಳೆದು ತಂದಿದ್ದಾರೆ. ನ್ಯಾಯಾಲಯ ಅರೆಸ್ಟ್ ವಾರಂಟ್ ಹಿನ್ನೆಲೆಯಲ್ಲಿ ದಿವ್ಯಾ ಹಾಗರಗಿ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದು ಪಡಿಸಿ …

Read More »