Breaking News

Daily Archives: ಏಪ್ರಿಲ್ 28, 2022

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ : ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಆರ್ಥಿಕತೆಯನ್ನು ಗಮನಿಸಿದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮೇಲಿನ ತೆರಿಗೆಯನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬುಧವಾರ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು …

Read More »

ಹುಬ್ಬಳ್ಳಿ ಗಲಭೆ ಕೇಸ್ : ಮತ್ತೆ 8 ಆರೋಪಿಗಳು ಅರೆಸ್ಟ್

ಹುಬ್ಬಳ್ಳಿ : ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ 8 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 154 ಕ್ಕೆ ಏರಿಕೆಯಾಗಿದೆ.   ಗಲಭೆ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಬಂಧಿಸಿರುವ ಆರೋಪಿಗಳ ನೀಡಿರುವ ಸುಳಿವಿನ ಮೇರೆಗೆ ತಲೆಮರೆಸಿಕೊಂಡಿದ್ದ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.   ಪೊಲೀಸ್ ವಶದಲ್ಲಿದ್ದ ಗಲಭೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ವಸೀಂ ಪಠಾಣ್‍ನನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದು …

Read More »

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆದರೆ ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್ ಪರ ನಿಂತಿದ್ದಾರೆ. ಚಿತ್ರನಟ ಸುದೀಪ್ ಹೇಳಿರುವ ಮಾತು ಸರಿಯಿದೆ. ಮಾತೃಭಾಷೆ ವಿಚಾರದಲ್ಲಿ ನಮ್ಮ‌ ನಿಲುವು ಸ್ಪಷ್ಟವಾಗಿದೆ. ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗಲೇ ನಿರ್ಧಾರವಾಗಿದೆ. ಪ್ರಾದೇಶಿಕ ಭಾಷೆಗಳೇ ಸಾರ್ವಭೌಮ.‌ ಅದೇ ವಿಚಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಗೌರವಿಸಬೇಕು. …

Read More »

ಸಿಎಂ ಬೊಮ್ಮಾಯಿ ಪ್ರಯಾಣಿಸಬೇಕಿದ್ದ ವಿಮಾನಕ್ಕೆ ಪೈಲೆಟ್‌ ಗೈರು!

ಬೆಂಗಳೂರು: ಪೈಲೆಟ್‌ ಅನುಪಸ್ಥಿತಿಯಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿದ ಬೆಳವಣಿಗೆ ಬುಧವಾರ ನಡೆದಿದೆ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. “ಮಧ್ಯಾಹ್ನ ಮಂಗಳೂರಿಗೆ ತೆರಳಬೇಕಿತ್ತು. ಆದರೆ, ಪೈಲೆಟ್‌ ಒಬ್ಬರು ಬಾರದ ಕಾರಣ ವಿಮಾನ ಮೇಲೇರಲಿಲ್ಲ’ ಎಂದು ಮೂಡುಬಿದಿರೆ ಕಾರ್ಯಕ್ರಮದಲ್ಲಿ ಸಿಎಂ ಹೇಳಿದರು. ಆದರೆ ಅಧಿಕಾರಿಗಳ ಮೂಲದ ಪ್ರಕಾರ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ವಿಮಾನ ಮೇಲೇರದೆ ಸಿಎಂ ನಂತರ ಪ್ರತ್ಯೇಕ ಹೆಲಿಕ್ಯಾಪ್ಟರ್‌ ಮೂಲಕ ಮೂಡುಬಿದಿರೆಗೆ ತೆರಳುವಂತಾಯಿತು ಎನ್ನಲಾಗಿದೆ.

Read More »

ಗೆಳೆಯನ ಪತ್ನಿ ಜೊತೆ ಅನೈತಿಕ ಸಂಬಂಧ; ಪಾರ್ಟಿ ಮಾಡಿ ತಲೆ ಮೇಲೆ ಕಲ್ಲೆತ್ತಿ ಹಾಕಿ ಬರ್ಬರ ಕೊಲೆ

ಆರೋಪಿ ತಿರುಪತಿ ಪತ್ನಿ ಜೊತೆ ಮೃತ ತಿರುಪತಿ ಅನೈತಿಕ ಸಂಬಂಧ ಹೊಂದಿದ್ದ. ಪತ್ನಿ ಜೊತೆಗಿನ ಅನೈತಿಕ ಸಂಬಂಧ ಬಿಡುವಂತೆ ಆರೋಪಿ ತಿರುಪತಿ ಬೇಡಿಕೊಂಡಿದ್ದ. ಇಡೀ ಊರಿಗೆ ವಿಷಯ ಗೊತ್ತಾಗುತ್ತಿದೆ ತನ್ನ ಪತ್ನಿ ಸಹವಾಸ ಬಿಡುವಂತೆ ಮನವಿ ಮಾಡಿದ್ದ.ರಾಯಚೂರು: ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಅನಾಥ ಹೆಣವಾದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಬಣಕಲ್ನಲ್ಲಿ ನಡೆದಿದೆ. ಗೆಳೆಯ ಕೈಕಾಲು ಬಿದ್ದರೂ ಅನೈತಿಕ ಸಂಬಂಧ ಬಿಡದ ಹಿನ್ನೆಲೆ ಕೊನೆಗೆ …

Read More »

ನಾಳೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ಏ.28- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಲ್ಲಾ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ಶನಿವಾರ ನಡೆಯಲಿದ್ದು, ನಾಳೆ ದೆಹಲಿಗೆ ತೆರಳುವು ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ತಮಗೂ ಕೂಡ ಆಹ್ವಾನ ಬಂದಿರುವುದರಿಂದ ಈ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವುದಾಗಿ ತಿಳಿಸಿದರು. ದೆಹಲಿಗೆ ತೆರಳಿದ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಚಿವ ಸಂಪುಟ …

Read More »

ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ

ಬೆಳಗಾವಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೇ. 1 ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೇ 1 ರವರರೆಗೂ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇಂದು ಬೆಳಗಾವಿ,ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಚಿತ್ರದುರ್ಗ ಮತ್ತು ಉಡುಪಿ, ಕೊಡಗಿನಲ್ಲಿ ಮಳೆಯಾಗಲಿದೆ.

Read More »

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಬ್ಬ ಕಂಟ್ರಾಕ್ಟರ್ ಲಾಡ್ಜ್ ನಲ್ಲಿ ನೇಣಿಗೆ ಶರಣು!

ಬೆಳಗಾವಿ : ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ಇದೀಗ ಜಿಲ್ಲೆಯ ಮತ್ತೊಬ್ಬ ಗುತ್ತಿಗೆದಾರ ಬಾಳೆಹೊನ್ನೂರಿನ ಖಾಸಗಿ ಲಾಡ್ಜ್ ನಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣವಾಗಿರುವ ಘಟನೆ ನಡೆದಿದೆ. ಬೆಳಗಾವಿ ಮೂಲದ ಬಸವರಾಜ (47) ಆತ್ಮಹತ್ಯೆಗೆ ಶರಣಾದವರು. ಪಟ್ಟಣದ ಖಾಸಗಿ ಲಾಡ್ಜ್ ವೊಂದರಲ್ಲಿ ಮೂರು ದಿನಗಳ ಹಿಂದೆ ಕೊಠಡಿ ಪಡೆದಿದ್ದ ಬಸವರಾಜ್ ಬುಧವಾರ ಬೆಳಗ್ಗೆ ಕೊಠಡಿಯಿಂದ ಹೊರಬಂದಿದ್ದರು ಎನ್ನಲಾಗಿದ್ದು, ಆ ಬಳಿಕ ಕೊಠಡಿ ಒಳಗೆ ತೆರಳಿದವರು ಪುನಃ ವಾಪಸ್ …

Read More »

ವಿಶ್ವಮಾನವ ಎಕ್ಸ್‌ಪ್ರೆಸ್ ರದ್ದು: ಪ್ರಯಾಣಿಕರಿಗೆ ತೊಂದರೆ

ಬೆಂಗಳೂರು: ಬೆಳಗಾವಿ ರೈಲು ನಿಲ್ದಾಣದಲ್ಲಿ ಸಿಗ್ನಲ್‌ ಕಾಮಗಾರಿ ನಿರ್ವಹಿಸಲು ಮೈಸೂರಿನಿಂದ ಬೆಂಗಳೂರು ಮಾರ್ಗದಲ್ಲಿ ಬೆಳಗಾವಿಗೆ ಹೋಗುವ ‘ವಿಶ್ವಮಾನವ ಎಕ್ಸ್‌ಪ್ರೆಸ್‌’ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಮೇ 5ರ ತನಕ ರದ್ದುಪಡಿಸಿದೆ. ಇದು ಮೈಸೂರು-ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಪ್ರಯಾಣಿಕರಿಗೂ ತೊಂದರೆ ಉಂಟು ಮಾಡಿದೆ. ಬೆಳಿಗ್ಗೆ 5.50ಕ್ಕೆ ಮೈಸೂರಿನಿಂದ ಹೊರಡುತ್ತಿದ್ದ ರೈಲು, 8.40 ಬೆಂಗಳೂರಿಗೆ ಬಂದು ರಾತ್ರಿ 9.45ರ ಸುಮಾರಿಗೆ ಬೆಳಗಾವಿ ತಲುಪುತ್ತಿತ್ತು. ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 5.40ಕ್ಕೆ …

Read More »

ಜಗದೀಶ್ ಎರಡನೇ ಹಂತದ ಸಮರ

ಬೆಂಗಳೂರು, ಏ. 27: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ವಕೀಲ ಕೆ.ಎನ್. ಜಗದೀಶ್ ನಡುವೆ ಎರಡನೇ ಹಂತದ ‘ವಾರ್’ ಶುರುವಾಗಿದೆ. ರವಿ ಡಿ. ಚನ್ನಣ್ಣನವರ್ ಅವರ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಸಂಬಂಧ ಆತನ ಪತ್ನಿ ರೋಜಾ ಎಂಬುವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನೊಂದ ಮಹಿಳೆ ಬೆಂಬಲಕ್ಕೆ ನಿಲ್ಲುವ ಮೂಲಕ ವಕೀಲ ಕೆ.ಎನ್. ಜಗದೀಶ್ ಎರಡನೇ ಹಂತದ ಸಮರ …

Read More »