Breaking News

Daily Archives: ಏಪ್ರಿಲ್ 25, 2022

“ಹೆಲೋ. ಬ್ಯುಸಿನೆಸ್‌ ಗೆ ಸಾಲ ಕೊಡುತ್ತೇವೆ”.. ಕಾಲ್‌ ಮಾಡಿ ಲೋನ್‌ ಆಮಿಷ ಬಳಿಕ ವಂಚನೆ; ಬಂಧನ

ಬೆಂಗಳೂರು: ಸಾರ್ವಜನಿಕರೇ ಎಚ್ಚರ! ಲೋನ್‌ ಕೊಡಿಸುವ ನೆಪದಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಮೋಸ ಮಾಡುವ ವ್ಯವಸ್ಥಿತ ಜಾಲ ಸಿಲಿಕಾನ್‌ ಸಿಟಿಯಲ್ಲಿ ತಲೆ ಎತ್ತಿದ್ದು ಯಾಮಾರಿದರೆ ಮೋಸ ಹೋಗುವುದು ಗ್ಯಾರೆಂಟಿ. ಅಂತಹದ್ದೆ ಖತರ್ನಾಕ್‌ ವಂಚಕ ಜಾಲದ ಹೆಡೆಮುರಿ ಕಟ್ಟುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.   ಲೋನ್‌ ಕೊಡಿಸುವ ನೆಪದಲ್ಲಿ ಆನ್‌ಲೈನ್‌ನಲ್ಲಿ ಕರೆ ಮಾಡಿ ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಜಾಲವನ್ನು ಈಶಾನ್ಯ ವಿಭಾಗದ ಸಿಎನ್‌ ಎನ್‌ ಪೊಲೀಸರು ಭೇದಿಸಿದ್ದು ನಾಲ್ವರು ವಂಚಕರನ್ನು ಬಂಧಿಸಿದ್ದಾರೆ. …

Read More »

ಬೆಳ್ಳಂಬೆಳಗ್ಗೆ ರಾಮನಗರದಲ್ಲಿ ದುರಂತ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾದ ಘಟನೆ ರಾಮನಗರದ ಕುಂಭಾಪುರ ಗೇಟ್ ಬಳಿ ಸೋಮವಾರ ಬೆಳಗ್ಗೆ 6 ಗಂಟೆಗೆ ಸಂಭವಿಸಿದೆ. ಸುಂದ್ರಶ್ (49) ಮತ್ತು ತನ್ಮಯ್ (9) ಮೃತ ದುದೈವಿಗಳು. ಶೀಲ, ಗಾನವಿ, ಸಾನವಿ ಗಂಭೀರ ಗಾಯಗೊಂಡಿದ್ದಾರೆ. ಒಂದೇ ಕುಟುಂಬದ ಐವರು ಬೆಂಗಳೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ಬಳಿಯ ಅಗಸನ ಪುರಕ್ಕೆ ಹಬ್ಬಕ್ಕೆಂದು ಹೋಗಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್​ ಬೆಂಗಳೂರಿಗೆ ಒಮಿನಿ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ …

Read More »

ರೈತನ ಮೀಸೆ ತಿರುವಿದ ಸಿಎಂ ಬೊಮ್ಮಾಯಿ..!

ಬಾಗಲಕೋಟೆ : ಕಾರ್ಯಕ್ರಮವೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರೊಬ್ಬರ ಮೀಸೆ ತಿರುವಿದ ಫೋಟೊ ಸಾಮಾಜಿಕ ಜಾಲತಾಣಲದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜಿಲ್ಲೆ ಮುಧೋಳ ನಗರದಲ್ಲಿ ನಿನ್ನೆ ನಡೆದಿದ್ದ ಕಾರ್ಯಕ್ರಮದಲ್ಲಿ ಫೋಟೋವನ್ನು ಸೆರೆ ಹಿಡಿಯಲಾಗಿದೆ.   ಸಿಎಂ ಬಸವರಾಜ ಬೊಮ್ಮಾಯಿ ರಾಮಣ್ಣ ಹಿಪ್ಪರಗಿ ಎಂಬ ರೈತನ ಮೀಸೆ ತಿರುವಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ರೈತನ ಕೊರೆ ಮೀಸೆಯನ್ನು ತಿರುವಿ ಮಜಾಕ್ ಮಾಡಿದ್ದಾರೆ. ನಿನ್ನೆ ಏತ ನೀರಾವರಿ ಹಾಗೂ ವಿವಿಧ ಅಭಿವೃದ್ಧಿ …

Read More »

ಬಿಯರ್ ತರಸಿ ಉಳಿದ ಹಣ ವಾಪಾಸ್ ಕೇಳಿದ್ದಕ್ಕೆ ಹೆಣ ಬೀಳಿಸಿದ ಭೂಪ..!

ಬೆಳಗಾವಿ: ನಗರದ ಸತ್ಯಸಾಯಿ ಕಾಲೋನಿಯಲ್ಲಿ ಏಪ್ರಿಲ್ 17ರಂದು ಕಾಲೋನಿಯ ನಿವಾಸಿ ಮಹಮ್ಮದ್ ದಿಲ್ ಫುಕಾರ್ ಶೇಖ್ (27) ಎಂಬಾತನ್ನನು ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆ ಮಾಡಿ ದುಷ್ಕರ್ಮಿ ಎಸ್ಕೇಪ್ ಆಗಿದ್ದ. ಸಂಜೆ ಎಂಟು ಗಂಟೆ ಸುಮಾರಿಗೆ ಕಾಲೋನಿಯ ಪಕ್ಕದ ಚರಂಡಿಯ ಮೇಲೆ ಬಿದ್ದಿದ್ದ ಮಹಮ್ಮದ್ ದಿಲ್ ಫುಕಾರ್ ನನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸುರೋವಾಗ ತೀವ್ರ ರಕ್ತಸ್ರಾವದಿಂದ ಮಹಮ್ಮದ್ ದಿಲ್ ಫುಕಾರ್ ಸಾವನ್ನಪ್ಪಿದ್ದಾನೆ.   ಮಹಮ್ಮದ್ ಊರು ಊರು ಅಲೆದು ಸ್ಕ್ರಾಪ್ …

Read More »

ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

ಹೈದರಾಬಾದ್: ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿರುವ ನಾಥುರಾಮ್ ಗೋಡ್ಸೆ ಅವರ ಸಿದ್ಧಾಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಬೆಂಬಲಿಸುತ್ತಿದ್ದಾರೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಟಿ. ರಾಮ್‍ರಾವ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ. ಪ್ರಧಾನಿ ಮೋದಿ ಮೌನವಾಗಿ ಮತ್ತು ನೇರವಾಗಿ ಗೋಡ್ಸೆಯ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಗುಜರಾತ್ ಶಾಸಕನನ್ನು ಅಸ್ಸಾಂ ಪೊಲೀಸರು ಬಂಧಿಸುವಂತೆ ಮಾಡಿದ ಮೋದಿ ಸರ್ಕಾರಕ್ಕೆ …

Read More »

ಪಿಎಸ್‍ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್

ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ ಆಗಿರೋದು ಒಂದರ ಹಿಂದೆ ಒಂದರಂತೆ ಬಹಿರಂಗ ವಾಗುತ್ತಿದೆ. ಪಿಎಸ್‍ಐ, ಕಾನ್ಸಟೇಬಲ್, ಕೆಪಿಎಸ್‍ಸಿ ಜೊತೆ ಲೋಕೋಪಯೋಗಿ ಇಲಾಖೆ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಆಗಿದೆ. 2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಎಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಉತ್ತರ ಬರೆಯಲಾಗಿದೆ. ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರದ ಸಮೀಪದ ಹೊಟೇಲ್‍ವೊಂದರಲ್ಲಿ ಕುಳಿತು ಬ್ಲೂಟೂತ್ ಡಿವೈಸ್ ಮೂಲಕ ಸರಿ ಉತ್ತರ …

Read More »

1441 ಎಲೆಕ್ಟ್ರಿಕಲ್​ ಬೈಕ್​ಗಳನ್ನು ಹಿಂಪಡೆದ ಓಲಾ!

ನವದೆಹಲಿ: ತಾಂತ್ರಿಕ ದೋಷ ಹಿನ್ನಲೆಯಲ್ಲಿ ಸ್ವಯಂಪ್ರೇರಿತವಾಗಿ ಒಲಾ ಕಂಪನಿ ತನ್ನ 1441 ಎಲೆಕ್ಟ್ರಿಕ್​ ಬೈಕ್​ಗಳನ್ನು ವಾಪಸ್​ ಪಡೆದಿದೆ. ಇತ್ತೀಚೆಗೆ ಬೈಕ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚೆತ್ತ ತನ್ನ ಬೈಕ್​ಗಳ ತಾಂತ್ರಿಕ ಪರಿಶೀಲನೆಗೆ ಮುಂದಾಗಿದೆ. ಘಟನೆ ಬಳಿಕ ಓಲಾ ಎಲೆಕ್ಟ್ರಿಕಲ್​ ಬೈಕ್​ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆ ಎದುರಾಗಿತ್ತು. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದಾಗಿ ಸ್ವಯಂಪ್ರೇರಿತವಾಗಿ ಎಲೆಕ್ಟ್ರಿಕ್​ ಬೈಕ್​ಗಳ ತಾಂತ್ರಿಕ ಸುಧಾರಣೆಯ ದೃಷ್ಟಿಯಿಂದ ಬೈಕ್​ಗಳನ್ನು ವಾಪಸ್​ ಪಡೆಯುತ್ತಿರುವುದಾಗಿ ತಿಳಿಸಿದೆ. ಮಾರ್ಚ್​ 26 ರಂದು ಬೈಕ್​ನಲ್ಲಿ ಕಾಣಿಸಿಕೊಂಡಬೆಂಕಿ …

Read More »

ವಿಮಾನದಲ್ಲಿ ರಾತ್ರಿ 10ರ ನಂತರ ಹಿಂಬದಿ ಸೀಟಿನಲ್ಲಿ ಕುಳಿತು ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು: ಚೆನ್ನೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಮಹಿಳೆಗೆ ವಿಮಾನದ ಒಳಗಡೆ ಕಿರುಕುಳ ಕೊಟ್ಟು ಇದೀಗ ಜೈಲು ಪಾಲಾಗಿದ್ದಾನೆ.  ಮಹಿಳೆಯೊಬ್ಬರು ಮಾರ್ಕೆಟಿಂಗ್ ಕೆಲಸಕ್ಕೆಂದು ಚನ್ನೈಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಇದೇ ಏಪ್ರಿಲ್ 18ರ ರಾತ್ರಿ 10 ಗಂಟೆ ಸುಮಾರಿಗೆ ಇಂಡಿಗೋ 6e6225 ವಿಮಾನದಲ್ಲಿ ಮಹಿಳೆ ಬರುತ್ತಿದ್ದಾಗ, ಹಿಂಬದಿ ಸೀಟ್‌ ನಂ-20a ರಲ್ಲಿ‌ ಕುಳಿತಿದ್ದ ಚನ್ನೈ ಮೂಲದ ಕೃಷ್ಣನ್.ಪಿ. ಎಂಬಾತ ಮುಂದಿನ ಸೀಟಿನಲ್ಲಿ‌ ಕುಳಿತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ …

Read More »

ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ: ವಾಟ್ಸ್​ಆಯಪ್​ನಲ್ಲಿ ಎಡಿಟೆಡ್ ವಿಡಿಯೋವೊಂದನ್ನು ಸ್ಟೇಟಸ್ ಆಗಿ ಹಾಕಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.   ಈ ಮೂಲಕ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ಮತ್ತೊಬ್ಬ ಮುಖಂಡನ ಬಂಧನ ಆದಂತಾಗಿದೆ. ಎಐಎಂಐಎಂ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿಯನ್ನು ಇಂದು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಎಐಎಂಐಎಂ ಪಕ್ಷದ ಮುಖಂಡ, ಕಾರ್ಪೋರೇಟರ್​ ನಜೀರ್ …

Read More »

ರಥೋತ್ಸವ ಸಂದರ್ಭ ದುರಂತ; ಒಬ್ಬನ ಸಾವು, ಇಬ್ಬರಿಗೆ ಗಾಯ..

ಕಲಬುರಗಿ: ದೇವಸ್ಥಾನದಲ್ಲಿನ ರಥೋತ್ಸವ ಸಂದರ್ಭದಲ್ಲಿ ದುರಂತವೊಂದು ಸಂಭವಿಸಿದ್ದು, ಇದರಲ್ಲಿ ಒಬ್ಬ ಸಾವಿಗೀಡಾಗಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಲಕ್ಷ್ಮೀಕಾಂತ್ ಕೆಸಬಳ್ಳಿ (25) ಎಂಬಾತ ಸಾವಿಗೀಡಾಗಿದ್ದು, ಭೀಮಾಶಂಕರ ಪೂಜಾರಿ ಮತ್ತು ಯಂಕಪ್ಪ ನೆಡಲ್​ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಜಿಲ್ಲೆಯ ಶಹಬಾದ್​ ತಾಲೂಕಿನ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಇಂದು ರಥೋತ್ಸವ ನಡೆಯಿತು. ಈ ಸಂದರ್ಭ …

Read More »