Breaking News

Daily Archives: ಏಪ್ರಿಲ್ 18, 2022

ಕದ್ದವಾಚು ಕೈಗೆ ಕಟ್ಟಿ ನಿರ್ಲಜ್ಜವಾಗಿ ಮೆರೆದ ಸುಳ್ಳುಶೂರನಿಗೆ ಜೆಡಿಎಸ್ ಜ್ವರ; HDK

ಬೆಂಗಳೂರು: ಸುಳ್ಳುಶೂರ, ಸಿದ್ದಸೂತ್ರದಾರ, ಸಿದ್ದಕಲಾ ನಿಪುಣ, ರಾಜಕೀಯ ಊಸರವಳ್ಳಿಗೆ ಚುನಾವಣೆಗೆ ಮುನ್ನವೇ ʼಜೆಡಿಎಸ್ ಜ್ವರʼ ಬಂದುಬಿಟ್ಟಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು ಏಕವಚನದಲ್ಲಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಹುಬ್ಲೋ ವಾಚ್ ಪ್ರಸಂಗ ಮತ್ತೆ ಪ್ರಸ್ತಾಪಿಸಿದ್ದಾರೆ. ಹಾಸನದಲ್ಲಿ ವೃಥಾ ಹರಿಬಿಟ್ಟ ʼಸತ್ಯಭಕ್ಷʼ ನಾಯಕನ ಆಚಾರಹೀನ ಅರಿವುಗೆಟ್ಟ ನಾಲಗೆ ಮತ್ತೆ ಹುಚ್ಚುಕುಣಿತ ಮಾಡುತ್ತಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರವೇ ಇಲ್ಲ, ಮತ್ತೆಮತ್ತೆ ಕೆಣಕುವ …

Read More »

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತರಾತುರಿಯಲ್ಲಿ 5,500 ಕೋ ರೂ.ಗಳ ಟೆಂಡರ್ಗಳಿಗೆ, ಈಶ್ವರಪ್ಪ ರಾಜೀನಾಮೆಗೂ ಮುನ್ನ ಭಾರೀ ಪ್ರಮಾಣದ ಕಮಿಷನ್ : ಆಲಂ ಪಾಷಾ ಆರೋಪ

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲರದ್ದು ವ್ಯವಸ್ಥಿತ ಕೊಲೆ. ಒಂದು ಲಕ್ಷ ಕೋಟಿ ರೂ. ಟೆಂಡರ್ ಗಳಲ್ಲಿ ಅವ್ಯವಹಾರ ನಡೆದಿದೆ. ಉಡುಪಿಯಲ್ಲಿ ಏ.12ರಂದು ಸಂಭವಿಸಿದ ಗುತ್ತಿಗೆದಾರ ಸಂತೋಷ್ ಅವರ ನಿಗೂಢ ಸಾವು ಭ್ರಷ್ಟಾಚಾರಿ ವ್ಯವಸ್ಥೆ ಮಾಡಿಸಿದ ವ್ಯವಸ್ಥಿತ ಕೊಲೆಯಾಗಿದೆ ಎಂದು ಉದ್ಯಮಿ ಆಲಂ‌ ಪಾಷಾ ಹೇಳಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್ ಸಾವಿಗೆ ಮೂಲ ಕಾರಣವಾದ ಭ್ರಷ್ಟಾಚಾರದ ಬಗ್ಗೆ ಒಂದಕ್ಷರವನ್ನೂ ಹೇಳದೆ ಉಡುಪಿಯ ಪೊಲೀಸರು 2022ರ ಏಪ್ರಿಲ್ 13ರಂದು ಎಫ್‌ಐಆರ್ ದಾಖಲಿಸಿದ್ದಾರೆ. …

Read More »

ಬಿಜೆಪಿಯೊಂದಿಗೆ ಕುಮಾರಸ್ವಾಮಿಯ ಮ್ಯಾಚ್ ಫಿಕ್ಸಿಂಗ್: ಸತೀಶ್ ಜಾರಕಿಹೊಳಿ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳವುದು ಶೇ. 100 ನಿಜ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಬಿಜೆಪಿ ಪರ ಎಂಬುದು ಸಾಬೀತಾಗಿದೆ. ಕುಮಾರಸ್ವಾಮಿ ಯಾವಾಗಲೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಶೇ. 100 ನಿಜ ಎಂದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಮಹಾನಾಯಕ …

Read More »

ಗುತ್ತಿಗೆದಾರ ಸಂತೋಷ ಪಾಟೀಲ ಪುತ್ರನ ಶಿಕ್ಷಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿಯಲ್ಲಿ ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ನಮ್ಮ ತಂದೆ ಪ್ರಕಾಶ ಹುಕ್ಕೇರಿ ಅವರು ಸರ್ಕಾರದ ವತಿಯಿಂದ ಮೃತ ಸಂತೋಷ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ಬಾಕಿಯಿರುವ ಕಾಮಗಾರಿ ಯೋಜನಾ ಮೊತ್ತವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು ಜೊತೆಗೆ ನಮ್ಮ ಕ್ಷೇತ್ರದ ಕಾರ್ಯಕರ್ತರ ಆಶಯದಂತೆ ವೈಯಕ್ತಿಕವಾಗಿ ಸಂತೋಷ ಪಾಟೀಲನ ಪುತ್ರನ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂಪಾಯಿ ಹಣವನ್ನು ನೀಡುತ್ತೇವೆ ಎಂದು …

Read More »

ಸ್ವಾಮೀಜಿಗಳ ಬಳಿ ಕಮಿಷನ್ ಕೇಳುವ ನಾಚಿಕೆಗೇಡಿನ ಸರ್ಕಾರ: ಸಿದ್ದರಾಮಯ್ಯ

ಬೆಂಗಳೂರು: ಸ್ವಾಮೀಜಿಗಳ ಬಳಿಯೇ ಲಂಚ ಕೇಳುತ್ತಾರೆಂದರೆ ಎಂಥಹ ನಾಚಿಕೆಗೇಡಿನ‌ ಸರ್ಕಾರವಿದು? ಇದು 40% ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಠಗಳಿಗೆ ಕೊಟ್ಟ ಅನುದಾನ ಪಡೆಯುವುದಕ್ಕೂ ಕಮಿಷನ್ ಕೊಡಬೇಕು ಎಂದು ಸ್ವಾಮೀಜಿಗಳು ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಾಮೀಜಿಗಳ ಬಳಿ ಕಮಿಷನ್ ಕೇಳೋದು ನಾಚಿಕೆಗೇಡಿನತನ. ಸಿಎಂ ಮನೆ ಮುತ್ತಿಗೆ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ನಾನು ಎ1 ಆದರೂ …

Read More »

ಶೇ, 30 ಕಮಿಷನ್ ಆರೋಪ ; ದಿಂಗಾಲೇಶ್ವರ ಶ್ರೀಗಳು ದಾಖಲೆ ಕೊಡಲಿ: ಸಿಎಂ

ಬೆಂಗಳೂರು: ದಿಂಗಾಲೇಶ್ವರ ಸ್ವಾಮೀಜಿಗಳು ಎಲ್ಲಿ, ಯಾರಿಗೆ ಎಷ್ಟು ಪರ್ಸೆಂಟ್ ಕಮಿಷನ್ ಕೊಟ್ಟಿದ್ದಾರೆ ಎಂದು ದಾಖಲೆ ಕೊಡಲಿ, ಸಂಪೂರ್ಣ ತನಿಖೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ‘ಮಠ ಗಳಿಗೆ ಅನುದಾನ ಬಿಡುಗಡೆಗೂ ಶೇಕಡಾ 30 ಕಮಿಷನ್ ನೀಡಬೇಕು’ ಎಂದು ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ವಿಧಾನ ಸೌಧದಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಸಿಎಂ, ”ದಿಂಗಾಲೇಶ್ವರ ಸ್ವಾಮೀಜಿಗಳು ಅತ್ಯಂತ ಉತ್ತಮ ಸ್ವಾಮೀಜಿ, ದೊಡ್ಡ ತಪಸ್ವಿಗಳು. ಒಳ್ಳೆ ಹಿನ್ನೆಲೆ ಇದೆ …

Read More »

ಬಂಡೀಪುರದಲ್ಲಿ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿರುವ ಘಟನೆ ನಡೆದಿದ್ದು, ಕೂದಲೆಳೆಯಿಂದ ಪಾರಾಗಿ ಪ್ರಾಣ ಉಳಿದಿದೆ.   ಮದ್ದೂರು ವಲಯದ ಬ್ರಿಡ್ಜ್ ಹತ್ತಿರ ಎಡಭಾಗದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜಿಸಲು ಬಲ ಭಾಗಕ್ಕೆ ಹೋಗಿದ್ದಾಗ ಆನೆ ಬರುವುದನ್ನು ಕಂಡು ಜತೆಯಲ್ಲಿ ಇದ್ದವರು ಕಾರು ಹತ್ತಿದ್ದಾರೆ. ಬಳಿಕ ಕೆರಳಿದ ಆನೆ ಬಲ ಭಾಗದಲ್ಲಿ ಇದ್ದ …

Read More »

ಕಣ್ಣಲ್ಲಿ ಕಾರದಪುಡಿ ಎರಚಿ ಹಣ ದರೋಡೆ ನಾಟಕವಾಡಿದ್ದ ಆರೋಪಿ ಅಂದರ್..!

ಕಣ್ಣಲ್ಲಿ ಖಾರದಪುಡಿ ಎರಚಿ ಹಣ ದರೋಡೆ ನಾಟಕವಾಡಿ ಪೆÇಲೀಸರ ದಿಕ್ಕು ತಪ್ಪಿಸಿದ್ದ ಲಾರಿ ಚಾಲಕನನ್ನು 36 ಗಂಟೆಯಲ್ಲೆ ಚಿಕ್ಕೋಡಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಹೌದು ಡೈರಿಗಳಿಗೆ ಹತ್ತಿಕಾಳು ಹಿಂಡಿ ಸ್ಟಾಕ್ ಸರಬರಾಜು ಮಾಡಿ ಬಂದಿದ್ದ ಹಣವನ್ನು ಚಿಕ್ಕೋಡಿ ತಾಲೂಕಿನ ಬೆಳಕುಡ ಕ್ರಾಸ್ ಬಳಿ ಕಣ್ಣಲ್ಲಿ ಖಾರದ ಪುಡಿ ಎರಚಿ ಯಾರೋ ದರೋಡೆ ಮಾಡಿದ್ದಾರೆಂದು ಚಾಲಕ ಆನಂದ ಎಂಬಾತ ಚಿಕ್ಕೋಡಿ ಪೆÇಲೀಸ್ ಠಾಣೆಗೆ ಬಂದು ಶುಕ್ರವಾರ ಮಧ್ಯಾಹ್ನ ದೂರು ನೀಡಿದ್ದ. ಈ …

Read More »

ರಾಜ್ಯದಲ್ಲಿ 40% ಕಮಿಷನ್ ಸರಕಾರ ಇದ್ದು, ಕಮಿಷನ್ ಕಿರುಕುಳಕ್ಕೆ ಸಂತೋಷ ಪಾಟೀಲ ಆತ್ಮಹತ್ಯೆ : ಎಂ.ಬಿ.ಪಾಟೀಲ

ರಾಜ್ಯದಲ್ಲಿ 40% ಕಮಿಷನ್ ಸರಕಾರ ಇದ್ದು, ಕಮಿಷನ್ ಕಿರುಕುಳಕ್ಕೆ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕೋಡಿಯಲ್ಲಿಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲಕಾಂಗ್ರೆಸ್ ಪಕ್ಷದ ಹೋರಾಟದ ಬಳಿಕ ಈಶ್ವರಪ್ಪ ಅವರನ್ನ ಬಂಧಿಸಬೇಕು ಎನ್ನುವದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದ್ದು, ಇದೀಗ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಭ್ರμÁ್ಟಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು ಎಂದು ಗುತ್ತಿಗೆದಾರರು …

Read More »

ಮಠಕ್ಕೆ ಕೊಟ್ಟ ಅನುದಾನ ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ, ಮುದಾಯಕ್ಕೆ 2ಎ ಮೀಸಲಾತಿ ಬೇಕಷ್ಟೇ : ಬಸವ ಜಯಮೃತ್ಯುಂಜಯ ಸ್ವಾಮೀಜಿ

ನಾವು ಮಠಕ್ಕೆ ಅನುದಾನವನ್ನೇ ಪಡೆಯುವುದಿಲ್ಲ. ಈ ಹಿಂದೆ ಕೊಟ್ಟ ಅನುದಾನ ಸರ್ಕಾರಕ್ಕೆ ಹಿಂತಿರುಗಿಸಿದ್ದೇವೆ ಎಂದು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟಪಡಿಸಿದರು. ಮಠದಿಂದಲೂ 30 ಪರ್ಸೆಂಟ್ ಕಮಿಷನ್ ಪಡೆದು ಅನುದಾನ ನೀಡಲಾಗುತ್ತದೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಮಾಡಿದ ಆರೋಪದ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.   ದಿಂಗಾಲೇಶ್ವರರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಬಹುಶಃ ಅವರ ಬಳಿ ಆ …

Read More »