Breaking News

Daily Archives: ಏಪ್ರಿಲ್ 15, 2022

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ದಿನ ನಡೆದಿದ್ದೇನು? ಸ್ನೇಹಿತರಿಂದ ಬಹಿರಂಗ!

ಸಚಿವ ಕೆಎಸ್‌ ಈಶ್ವರಪ್ಪ ವಿರುದ್ಧ ಕಮಿಷನ್‌ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಜೊತೆ ಕೊನೆಯ ಕ್ಷಣದಲ್ಲಿದ್ದ ಸ್ನೇಹಿತರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ಸ್ನೇಹಿತರು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.   ಪೊಲೀಸರ ವಶದಲ್ಲಿರುವ ಸಂತೋಷ್‌ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೇದಪ್ಪ ಹೇಳಿರುವ ನಾವೆಲ್ಲಾ ಬಾರ್ ನಲ್ಲಿ ಕುಡಿದಿದ್ದೆವು. ಸಂತೋಷ್ ಪಾಟೀಲ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು ಎಂದು ವಿವರಿಸಿದ್ದಾರೆ. …

Read More »

ರಾಜೀನಾಮೆʼ ಬಳಿಕ ರೈಲಿನಲ್ಲಿ ಶಿವಮೊಗ್ಗಕ್ಕೆ ಈಶ್ವರಪ್ಪ ವಾಪಾಸ್

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಳಿಸಿದ್ದ ವಾಟ್ಸಾಪ್‌ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪನವರು ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.   ಇದಕ್ಕೂ ಮುನ್ನ ಈಶ್ವರಪ್ಪನವರು ತಮ್ಮ ಬೆಂಬಲಿಗರ ಬಲ ಪ್ರದರ್ಶನ ಮಾಡಲಿದ್ದು, ಶಿವಮೊಗ್ಗದಿಂದ ರಸ್ತೆ ಮಾರ್ಗದ ಮೂಲಕ ಸಾವಿರಾರು ಬೆಂಬಲಿಗರೊಂದಿಗೆ ರಾಜ್ಯ ರಾಜಧಾನಿಗೆ …

Read More »

ಗುತ್ತಿಗೆದಾರ ಸಂತೋಷ್’ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್: ಸಾವಿಗೂ ಮುನ್ನ ‘ಲಾಡ್ಜ್’ನಲ್ಲಿ ಆಗಿದ್ದೇನು.?

ಉಡುಪಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ. ಆದ್ರೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆಯನ್ನು ರಾಜ್ಯಾಧ್ಯಂತ ನಡೆಸಲಾಗುತ್ತಿದೆ. ಈ ನಡುವೆ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಅವರ ಸಾವಿಗೂ ಮುನ್ನವೇ ಲಾಡ್ಜ್ ನಲ್ಲಿ ಆಗಿದ್ದೇನು ಎನ್ನುವ ಮಾಹಿತಿಯನ್ನು ಸಂತೋಷ್ ಸ್ನೇಹಿತರು ಬಿಚ್ಚಿಟ್ಟಿದ್ದಾರೆ.   ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ರೂಂ ಮಾಡಿಕೊಂಡು ಗುತ್ತಿಗೆದಾರ ಸಂತೋಷ್ …

Read More »

3 ತಿಂಗಳಲ್ಲಿ ಇನ್ಫೋಸಿಸ್‌ ತೊರೆದಿದ್ದಾರೆ 80 ಸಾವಿರ ಉದ್ಯೋಗಿಗಳು.!

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ನಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರೈಮಾಸಿಕದ ಅಂಕಿ-ಅಂಶಗಳನ್ನು ಗಮನಿಸಿದ್ರೆ ನೌಕರಿ ಬಿಟ್ಟು ಹೋದವರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ. 2022ರ ಜನವರಿಯಿಂದ ಮಾರ್ಚ್‌ವರೆಗೆ ಶೇ.27.7 ರಷ್ಟು ಉದ್ಯೋಗಿಗಳು ಕೆಲಸ ತೊರೆದಿದ್ದಾರೆ. ಅಂದರೆ 3 ತಿಂಗಳ ಅವಧಿಯಲ್ಲಿ 80 ಸಾವಿರ ನೌಕರರು ಇನ್ಫೋಸಿಸ್‌ಗೆ ಗುಡ್‌ ಬೈ ಹೇಳಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಇನ್ಫೋಸಿಸ್‌, ಜಾಗತಿಕವಾಗಿ ಒಟ್ಟು 85,000 …

Read More »

River Rafting: ಕಾಳಿ ನದಿಯಲ್ಲಿ ಬೋಟ್​ ಮುಳುಗಡೆ, ಮಕ್ಕಳು ಸೇರಿ 12 ಪ್ರವಾಸಿಗರು ಗ್ರೇಟ್​ ಎಸ್ಕೇಪ್​-

ಕಾರವಾರ: ನಿಗದಿ ಪ್ರಮಾಣಕ್ಕಿಂತ ಹೆಚ್ಚಿನ ಜನರನ್ನು ರಿವರ್ ರ್ಯಾಪ್ಟಿಂಗ್ (River Rafting) ಬೋಟ್​ನಲ್ಲಿ ಕುಳ್ಳಿರಿಸಿ ರ್ಯಾಪ್ಟಿಂಗ್ ಮಾಡಿದ ಪರಿಣಾಮ ನದಿಯಲ್ಲಿ ಬೋಟ್ ಮುಳುಗುವ ಹಂತ ತಲುಪಿ ಮಕ್ಕಳು ಸೇರಿದಂತೆ 12 ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಯ ಕಾಳಿ ನದಿಯಲ್ಲಿ ನಡೆದಿದೆ. ರಬ್ಬರ್ ಬೋಟ್​ನಲ್ಲಿ ಆರು ಜನಕ್ಕಿಂತ ಹೆಚ್ಚು ಜನರನ್ನು ಹಾಕಿ ರಿವರ್ ರ್ಯಾಪ್ಟಿಂಗ್ ಮಾಡುವಂತಿಲ್ಲ. ಆದರೆ ಖಾಸಗಿ ಆಯೋಜಕರು ಅನುಮತಿ …

Read More »

ಈಶ್ವರಪ್ಪ ರಾಜೀನಾಮೆ’ಗೂ ಮುನ್ನವೇ ’29 ಪಿಡಿಓ’ಗಳ ವರ್ಗಾವಣೆ

ಬೆಂಗಳೂರು,ಏ.15- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಇಲಾಖೆಯ 29 ಪಿಡಿಒ ಅಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.   ಉಡುಪಿಯ ಶಾಂಭವಿ ಹೋಟೆಲ್‍ನಲ್ಲಿ ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈಶ್ವರಪ್ಪ ದಿಢೀರನೇ 29 ಪಿಡಿಒ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಪಾಟೀಲ್ …

Read More »

ರಾಜೀನಾಮೆ‌ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರಿಟ್ಟ ಬಿಜೆಪಿ ಕಾರ್ಯಕರ್ತೆಯರು!

ಶಿವಮೊಗ್ಗ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಶುಕ್ರವಾರ ಬೆಂಗಳೂರಿಗೆ ತೆರಳುವ ಮುನ್ನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ಕೆ.ಎಸ್​.ಈಶ್ವರಪ್ಪ ಬರುತ್ತಿದ್ದಂತೆ ಅವರನ್ನು ಸುತ್ತುವರಿದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ರಾಜೀನಾಮೆ‌ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರು ಹಾಕಿದರು.   ಆ ವೇಳೆ ಮಹಿಳಾ ಕಾರ್ಯಕರ್ತರನ್ನು ಸಂತೈಸಲು ಮುಂದಾದ ಈಶ್ವರಪ್ಪ, ನೀವು ಹೀಗೆ ಅಳುತ್ತಿದ್ದರೆ ನಾನು ಇಲ್ಲಿಂದ ಹೋಗುವುದೇ ಇಲ್ಲ. ಸಂತೋಷದಿಂದ ಕಳಿಸಿಕೊಡಿ ಎಂದು ಮನವಿ ಮಾಡಿದರು. …

Read More »

ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ಆ ಮಹಾನ್ ನಾಯಕ ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು.: ರೇಣುಕಾಚಾರ್ಯ

ಬೆಂಗಳೂರು,ಏ.15-ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ ಆ ಮಹಾನ್ ನಾಯಕ ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಅಧಿಕಾರದ ಹಪಾಹಪಿಗೆ ಬಿದ್ದಿರುವ ಬಂಡೆ ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು …

Read More »

‘ಈಶ್ವರಪ್ಪ ಒಬ್ಬ ಸುಳ್ಳಿನ ಫ್ಯಾಕ್ಟರಿ ಚೇರ್ಮನ್’ ಇದ್ದಂತೆ,: ಡಿ.ಕೆ ಶಿವಕುಮಾರ್

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಹಾಗೂ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಅಹೋರಾತ್ರಿ ಪ್ರತಿಭಟನೆ ನಿರತರಾಗಿರುವ ಕಾಂಗ್ರೆಸ್ ನಾಯಕರು, ಇಂದು ಬೆಳಗ್ಗೆ ದೈನಂದಿನ ಚಟುವಟಿಕೆ ಆರಂಭಿಸಿದರು. ಈ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದ ಡಿಕೆಶಿ, ವಿಧಾನಸೌಧದ ಗೋಡೆಗೆ ಹೊಡೆದರೆ ಕಾಸು ಕಾಸು ಕಾಸು ಎನ್ನುತ್ತದೆ ಎಂದು ವ್ಯಂಗ್ಯವಾಡಿದರು. ಸಂತೋಷ ಪಾಟೀಲ್ ಸಹೋದರ ಏನ್ ಬೇಡಿಕೆ ಇಟ್ಟಿದ್ದಾರೆ ಮೊದಲು ಆ …

Read More »

ಗುತ್ತಿಗೆದಾರನ ಸಾವಿನ ಬಗ್ಗೆ ದಾಖಲೆಗಳಿದ್ದರೆ ಇಂದೇ ಬಿಡುಗಡೆ ಮಾಡಲಿ :

ಬೆಳಗಾವಿ : ಗುತ್ತಿಗೆದಾರ ಸಂತೋಷ ಪಾಟೀಲ್​​ ಆತ್ಮಹತ್ಯೆ ಹಿಂದೆ ಮಹಾನಾಯಕನ ಕೈವಾಡ ಇದ್ದು, ಸೋಮವಾರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್​​ ಜಾರಕಿಹೊಳಿ ಹೇಳಿಕೆಯನ್ನು ನಾನು ಹೃದಯ ಪೂರ್ವಕವಾಗಿ ಸ್ವಾಗತಿಸುವೆ. ದಾಖಲೆ ಬಿಡುಗಡೆಗಾಗಿ ಅವರು ಸೋಮವಾರದವರೆಗೆ ಕಾಯುವುದು ಬೇಡ. ಧಾರಾವಾಹಿಯಲ್ಲಿ ಕುತೂಹಲ ಕ್ರಿಯೇಟ್ ಮಾಡುವ ರೀತಿ ಇಲ್ಲಿ ಮಾಡುವುದು ಬೇಡ. ದಾಖಲೆಗಳಿದ್ದರೆ ಇಂದೇ, …

Read More »