Breaking News

Daily Archives: ಏಪ್ರಿಲ್ 11, 2022

ಎಲ್ಲರ ಚಿತ್ತ ಬಿಎಸ್‌ವೈ-ಅರುಣ್ ಸಿಂಗ್ ಭೇಟಿಯತ್ತ!

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ನಾಯಕರ ಮಧ್ಯೆದ ಸಂಘರ್ಷ ತಾರಕಕ್ಕೇರುತ್ತಿದೆ‌. ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಕಮಲ ನಾಯಕರ ಈ ಕಲಹ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ‌. ಕತ್ತಿ-ಸವದಿ ಹಾಗೂ ಜಾರಕಿಹೊಳಿ‌ ಬ್ರದರ್ಸ್ ಮಧ್ಯೆದ ವೈಮನಸ್ಸು ದಿನ ಕಳೆದಂತೆ ಬಿಗಡಾಯಿಸುತ್ತಿದೆ. ಭಿನ್ನಮತ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ಬೆಳಗಾವಿಯಲ್ಲೇ ಠಿಕಾಣಿ …

Read More »

ಬಿಜೆಪಿ ಸರ್ಕಾರವೆಂದರೆ ಅದು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಅಂದರೆ ಅದು ಸುಳ್ಳಿನ ಕಾರ್ಖಾನೆ. ಅಧಿಕಾರಕ್ಕೆ ಬಂದಾಗಿನಿಂದ ಬರೀ ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ. ಸ್ವಾತಂತ್ರ್ಯ ಭಾರತದ ನಂತರ ಹಲವಾರು ಪ್ರಧಾನಿಗಳು ಬಂದರೂ, ಮೋದಿಯಷ್ಟು ಸುಳ್ಳು ಹೇಳುವವರು ಯಾರೂ ಬರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.   ಫ್ರೀಡಂ ಪಾರ್ಕ್ ನಲ್ಲಿ ಬೆಲೆ ಏರಿಕೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವ …

Read More »

ಇಂದೇ ಉಸ್ತುವಾರಿ ಬದಲಾಯಿಸಿ, ನನಗೇನು ಅಭ್ಯಂತರವಿಲ್ಲ: ಬಿ.ಸಿ.ಪಾಟೀಲ ಗರಂ

ಗದಗ: ಅಕ್ರಮ ಮರಳುಗಾರಿಕೆ ವಿಚಾರವಾಗಿ ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಧ್ಯೆ ವಾಗ್ವಾದ ನಡೆಯಿತು. ‘ಇವತ್ತೇ ಉಸ್ತುವಾರಿ ಬದಲಾವಣೆ ಮಾಡಿಸಿ ನನಗೇನು ಅಭ್ಯಂತರವಿಲ್ಲ. ಆಸಕ್ತಿಯೂ ಇಲ್ಲ’ ಎಂದು ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.   ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಎಸ್ ಪಿ ವಿವರಿಸಿದರು. …

Read More »

ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ, : ಎಚ್ ಡಿಕೆ

ರಾಮನಗರ: ಬಿಜೆಪಿ ಬಂದ ನಂತರ ಕೊಲೆಗಳು ಹೆಚ್ಚಾಗಿವೆ. ತಲೆ ಒಡೆಯುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಕೇತಗಾನಹಳ್ಳಿಯ ತೋಟದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ತಲೆ ಒಡೆಯುತ್ತಿರಿ, ನಾವು ಕನಿಕರ ವ್ಯಕ್ತ ಪಡಿಸುತ್ತಲೇ ಇರುತ್ತೇವೆ ಎಂದು ಆಕ್ರೋಶ ಹೊರಹಾಕಿದರು.   ಜಮೀರ್ ಅಹಮದ್, ಚಲುವರಾಯ ಸ್ವಾಮಿ, ಬಾಲಕೃಷ್ಣ ಮತ್ತೆ ಜೆಡಿಎಸ್ ಪಕ್ಷಕ್ಕೆ ವಾಪಸ್ ಬಂದರೆ ಕರೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ …

Read More »

ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ:B.S.Y.

ಬೆಂಗಳೂರು : ‘ಹಿಂದೂ ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕೆಂಬುದು ನಮ್ಮ ಅಪೇಕ್ಷೆ, ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ನಾವೆಲ್ಲಒಟ್ಟಾಗಿ ಬಾಳಬೇಕು. ಯಾರೋ ಕಿಡಿಗೇಡಿಗಳು ಸಾಮರಸ್ಯಕ್ಕೆ ಅಡ್ಡಿ ಮಾಡಿದರೆ, ಅಹಿತಕರ ಘಟನೆಗಳಿಗೆ ಕಾರಣವಾದರೆ ಸರಕಾರ ಸಹಿಸುವುದಿಲ್ಲ,ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ” ಎಂದರು.

Read More »

ರಾಮನವಮಿ, ಮಾಂಸಾಹಾರದ ವಿಚಾರವಾಗಿ ಜೆಎನ್‌ಯುನಲ್ಲಿ ಗುಂಪು ಘರ್ಷಣೆ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಾವೇರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಎಬಿವಿಪಿ ಸದಸ್ಯರು ಹಾಸ್ಟೆಲ್‌ನಲ್ಲಿ ಮಾಂಸಾಹಾರ ಸೇವಿಸದಂತೆ ವಿದ್ಯಾರ್ಥಿಗಳನ್ನು ತಡೆದು ಹಿಂಸಾತ್ಮಕ ವಾತಾ ವರಣ ಸೃಷ್ಟಿಸಿದ್ದಾರೆ ಎಂದು ವಿ.ವಿ.ಯವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಆರೋಪಿಸಿದೆ. ಆದರೆ ಎಬಿವಿಪಿ ಈ ಆರೋಪವನ್ನು ನಿರಾಕರಿಸಿದೆ. ರಾಮನವಮಿ ನಿಮಿತ್ತ ಹಾಸ್ಟೆಲ್‌ನಲ್ಲಿ ಏರ್ಪಡಿಸಿದ್ದ ಪೂಜೆಗೆ ಎಡ ಪಂಥೀಯರು ಅಡ್ಡಿಪಡಿಸಿದ್ದಾರೆ ಎಂದು ಆಪಾದಿಸಿದೆ. ‘ಎರಡೂ ಗುಂಪಿನವರು ಪರಸ್ಪರ ಕಲ್ಲು …

Read More »

ಚೌಕಿದಾರ್ ಚೋರ್ ಹೇ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ

ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳಲು ಸೇನೆಯೇ ಮುಖ್ಯ ಕಾರಣ ಎಂದು ಅಲ್ಲಿನ ಜನರು ನಂಬಿದ್ದಾರೆ.ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾನುವಾರ ತೆಹ್ರೀಕ್-ಎ-ಇನ್​ಸಾಫ್ (ಪಿಟಿಐ) ಪಕ್ಷ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ‘ಚೌಕಿದಾರ್ ಚೋರ್ ಹೇ’ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಘೋಷಣೆಯನ್ನು ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಕೆ ಮಾಡಿದ್ದರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ …

Read More »

Hijab ಧರಿಸಿ​ ಬಂದ್ರೆ ದ್ವಿತೀಯ ಪಿಯು ಪರೀಕ್ಷೆ ನೋ ಎಂಟ್ರಿ

ಏಪ್ರಿಲ್ 22 ರಿಂದ 18ರವರೆಗೆ ನಡೆಯಲಿರುವ ದ್ವಿತೀಯ ಪಿಯೂಸಿ ಪರೀಕ್ಷೆಗೆ (2nd PU Exam) ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ಒದಗಿಸುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಈಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ (Hijab Ban) ಬಂದ್ರೆ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋ ಎಂಟ್ರಿ ಎಂದು ಖಚಿತಪಡಿಸಿದೆ. ಈಮೂಲಕ SSLC ಪರೀಕ್ಷೆ ಮಾದರಿಯಲ್ಲೇ ದ್ವಿತೀಯ ಪಿಯು …

Read More »

ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ; ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಚಿವ ಹೆಬ್ಬಾರ್

ಬೆಂಗಳೂರು: ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಆಗುವಂತೆ ಕೇಂದ್ರದ ಸಹಕಾರ ಕೋರಿರುವ ಸಚಿವ ಶಿವರಾಂ ಹೆಬ್ಬಾರ್, ಇಎಸ್‌ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ, ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ತೆರೆಯಲು ಅನುಮತಿ, ಕಾರ್ಮಿಕ ಕಲ್ಯಾಣ ಮಂಡಳಿಗೆ ಸೆಸ್‌ ರಿಯಾಯಿತಿ ಸೇರಿದಂತೆ ಹಲವು ಅಂಶಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದರು. ಇದಕ್ಕೆ ಕೇಂದ್ರದ ಸಚಿವರುಗಳಿಂದ ಸಕಾರಾತ್ಮಕ ಸ್ಪಂದನೆ ಕೂಡ ಸಿಕ್ಕಿದೆ. ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್‌ ಯಾದವ್‌ ಅವರನ್ನು ಭೇಟಿ ಮಾಡಿ ಮಾತುಕತೆ …

Read More »

ಜನತೆಗೆ ಮತ್ತೊಂದು ಶಾಕ್: ಶೀಘ್ರವೇ ಗೃಹ ಸಾಲ ಬಡ್ಡಿದರ ಏರಿಕೆ

ನವದೆಹಲಿ: ಈಗಾಗಲೇ ಅಗತ್ಯವಸ್ತುಗಳ ಬೆಲೆ, ತೈಲಬೆಲೆಯಿಂದ ತತ್ತರಿಸಿರೋ ದೇಶದ ಜನತೆಗೆ ಶೀಘ್ರವೇ ಗೃಹ ಸಾಲ ಬಡ್ಡಿ ದರ ಏರಿಕೆಯ ಶಾಕ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಬ್ಯಾಂಕ್ ಠೇವಣಿಗಳ ದರ ಏರಿಕೆಯಾಗುವ ರೀತಿಯಲ್ಲೇ ಗೃಹ ಸಾಲದ ಬಡ್ಡಿದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಗೃಹ ಸಾಲವನ್ನು ಆರಂಭಿಕ ಹಂತದಲ್ಲಿ 5 ಮೂಲಾಂಶಗಳಷ್ಟು ಹೆಚ್ಚಳ ಮಾಡೋ ನಿರೀಕ್ಷೆಯಿದೆ ಎಂಬುದಾಗಿ ಬ್ಯಾಂಕ್ ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಅಂದಹಾಗೇ …

Read More »