Breaking News

Daily Archives: ಏಪ್ರಿಲ್ 9, 2022

ಆರ್​ಎಸ್​ಎಸ್​, ಬಿಜೆಪಿ ವಿರುದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ

ಬೆಳಗಾವಿ : ನಮ್ಮದು ಈಗಾಗಲೇ ಹಿಂದೂ ರಾಷ್ಟ್ರವಿದೆ. ಹೀಗಾಗಿ, ಆರ್‌ಎಸ್‌ಎಸ್​ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ನಮ್ಮ ದೇಶದ ಮೇಲೆ ಬ್ರಿಟಿಷರು ಸೇರಿ ಹಲವರು ದಾಳಿ ಮಾಡಿದ್ದರು. ಆದರೂ ದೇಶಕ್ಕೆ ಏನೂ ಆಗಲಿಲ್ಲ. ಹಿಂದೂ ಧರ್ಮವನ್ನು ಯಾರಿಂದಲೂ ಟಚ್ ಮಾಡಲು ಆಗಲ್ಲ. ಅಂದು ಹಿಂದೂ ಧರ್ಮ ಇತ್ತು. ಇಂದು ಸಹ ಹಾಗೆಯೇ ಇದೆ. …

Read More »

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಿಎಂಟಿಸಿ ಬಸ್​ಗೆ​ ಬೆಂಕಿ; ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಗದೊಂದು ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಗರ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.2014 ರಲ್ಲಿ 186 ಅಶೋಕ್ ಲೇಲ್ಯಾಂಡ್ ಬಸ್​ಗಳನ್ನ ಖರೀದಿ ಮಾಡಲಾಗಿತ್ತು. ಇತ್ತೀಚಿಗೆ ಸೌತ್ ಎಂಡ್ ಸರ್ಕಲ್ ಮತ್ತು ಮಕ್ಕಳ ಕೂಟದ ಬಳಿ ಎರಡು ಮಿನಿ ಬಸ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಬಿಎಂಟಿಸಿ ಅಧಿಕಾರಿಗಳು ಅಶೋಕ್ …

Read More »

ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಕೊಳೆತ ರೀತಿಯಲ್ಲಿ ಶವ ಪತ್ತೆ

  ಹುಬ್ಬಳ್ಳಿ: ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವೊಂದು ಪತ್ತೆಯಾಗಿತ್ತು. ಅಪರಿಚಿತ ಶವ ಎಂದು ಸರ್ಕಾರ ನಿರ್ದೇಶನದ ಮೇರೆಗೆ ಶವ ಸಂಸ್ಕಾರ ಮಾಡಲಾಗಿತ್ತು. ಆದರೆ, ಇಂದು ಮಧ್ಯಾಹ್ನ ಬಿಡನಾಳ ರುದ್ರಭೂಮಿಯಲ್ಲಿ ಉಪವಿಭಾಗಾಧಿಕಾರಿಗಳ ಉಪಸ್ಥಿತಿಯೊಂದಿಗೆ ಮುಜಾಫರ್ ಕಲಾದಗಿ ಎಂಬುವವರ ಶವ ಹೊರ ತೆಗೆಯಲಾಯಿತು. ನಗರದಲ್ಲಿ ಕೆಲವು ದಿನಗಳ ಹಿಂದೆ ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿತ್ತು. ಶವಗಾರದಲ್ಲಿ ಇಟ್ಟುಕೊಳ್ಳಲು ವೈದ್ಯರು ನಿರಾಕರಿಸಿದ್ದರಿಂದ ಪಾಲಿಕೆಯ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ಆದರೆ, …

Read More »

ಸೈಟ್, ಮನೆ, ಆಸ್ತಿ ಖರೀದಾರರಿಗೆ ಸಿಹಿ ಸುದ್ದಿ: ಮಾರ್ಗಸೂಚಿ ದರ ವಿನಾಯಿತಿ 3 ತಿಂಗಳು ವಿಸ್ತರಣೆ ಸಾಧ್ಯತೆ

ಬೆಂಗಳೂರು: ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಫ್ಲಾಟ್, ಅಪಾರ್ಟ್ಮೆಂಟ್ ಗಳ ಮಾರ್ಗಸೂಚಿ ದರವನ್ನು ಜನವರಿ 1 ರಿಂದ 31 ರವರೆಗೆ ಅನ್ವಯವಾಗುವಂತೆ ಶೇಕಡ 10 ರಷ್ಟು ಕಡಿಮೆ ಮಾಡಲಾಗಿದೆ. ಇದನ್ನು ಮೂರು ತಿಂಗಳು ವಿಸ್ತರಿಸುವ ಸರ್ಕಾರ ಚಿಂತನೆ ನಡೆಸಿದೆ.   ಕಂದಾಯ ಸಚಿವ ಆರ್. ಅಶೋಕ್, ಈ ಬಗ್ಗೆ ಮಾಹಿತಿ ನೀಡಿದ್ದು, ರಿಯಲ್ ಎಸ್ಟೇಟ್ ಉದ್ಯಮ ಪ್ರೋತ್ಸಾಹಿಸಲು ಜನವರಿಯಿಂದ ಮಾರ್ಚ್ 31ರವರೆಗೆ ಸ್ಥಿರಾಸ್ತಿಗಳ ಮೇಲಿನ ಮಾರ್ಗಸೂಚಿ ದರವನ್ನು ಶೇಕಡ …

Read More »

ಅಮಿತ್ ಶಾ ಪುತ್ರನಿಗೆ ಟಕ್ಕರ್ ಕೊಡಲು ಮುಂದಾದ ಕೇಂದ್ರ ಸಚಿವ ಅನುರಾಗ್ ಠಾಕೂರ್

ಮುಂಬೈ, ಏ.8- ವಿಶ್ವ ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡವೆಂದೇ ಬಿಂಬಿಸಿಕೊಂಡಿರುವ ಭಾರತ ಈಗ ಮತ್ತೊಮ್ಮೆ ಐಸಿಸಿಯಲ್ಲಿ ತನ್ನ ಸಾರ್ವಭೌಮತ್ವವನ್ನು ಸಾಧಿಸಲು ಹೊರಟಿದೆ. ಐಸಿಸಿ ಅಧ್ಯಕ್ಷರಾಗಿರುವ ನ್ಯೂಜಿಲ್ಯಾಂಡ್‍ನ ಖ್ಯಾತ ವಕೀಲ ಗ್ರೆಗ್ ಬಾಕ್ರ್ಲೇ ಅವರ ಕಾಲಾವಧಿ ಜುಲೈಗೆ ಮುಕ್ತಾಯವಾಗುವುದರಿಂದ ಮುಂದಿನ ಅವಧಿಯ ಅಧ್ಯಕ್ಷ ಗಾದಿಯ ಮೇಲೆ ಭಾರತದ ಖ್ಯಾತ ನಾಮರು ಕಣ್ಣಿಟ್ಟಿದ್ದಾರೆ. ಜೈಶಾಗೆ ದಾದಾ, ಠಾಕೂರ್ ಪೈಪೋಟಿ: ಈ ಹಿಂದೆ ಬಿಸಿಸಿಐ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸಚಿವ ಅಮಿತ್‍ಶಾರ ಪುತ್ರ …

Read More »

ಅಂಬೇಡ್ಕರ್‌ ಪುತ್ಥಳಿಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರೆ ಪ್ರತಿಭಟನೆ’

ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಬೇಡ್ಕರ್‌ ಜಯಂತಿಯಂದು ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಮಾಲಾರ್ಪಣೆ ಮಾಡಿದರೆ ಕ‍ಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ’ ಎಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ- ಕರ್ನಾಟಕ ಎಚ್ಚರಿಸಿದೆ.   ‘ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಫೆಬ್ರುವರಿ 19ರಂದು ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. ಆಗ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿಯವರು ತಪ್ಪಿತಸ್ಥರ ವಿರುದ್ಧ …

Read More »

ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ

ಬೆಳಗಾವಿ – ಹೊಲಗದ್ದೆಗಳಲ್ಲಿ ಬೋರವೆಲ್ ಗಳಿಗೆ ಅಳವಡಿಸಿರುವ ಸಬ್ ಮರ್ಸಿಬಲ್ ಪಂಪ್ ಗಳನ್ನು ಕಳವು ಮಾಡುತ್ತಿದ್ದ ಮೂವರು ಬೆಳಗಾವಿ ಗ್ರಾಮೀಣ ಪೋಲೀಸರ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಪಕ್ಕದ ಮಚ್ಛೆ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳನ್ನು ಕಳವು ಮಾಡಿ ಮಾರಾಟ ಮಾಡಿತ್ತಿದ್ದ ಮೂವರನ್ನು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ಬಂಧಿಸಿದ್ದಾರೆ. ಮೂವರ ಕಳ್ಳರ ಗ್ಯಾಂಗ್ ರೈತರ ಹೊಲಗದ್ದೆಗಳಿಂದ ಕಳವು ಮಾಡಲಾದ 2ಲಕ್ಷ 70 ಸಾವಿರ ಕಿಮ್ಮತ್ತಿನ 18 …

Read More »

ಕೋಟಿಗಟ್ಟಲೇ ಖರ್ಚು ಮಾಡಿ ಹಾಳು ಬಿದ್ದಿರುವ ಪಾಲಿಕೆಯ ಪಾರ್ಕಿಂಗ್ ಝೋನ್ ಈಗ ಗಾಂಜಾ ಮಾರಾಟಗಾರರ ಜಂಕ್ಷನ್

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ ಮಾರಾಟವನ್ನು ತಡೆಯಲು ಬೆಳಗಾವಿ ಪೋಲೀಸ್ರು ಸೈಲೆಂಟಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದು ಈ ಕುರಿತು ಖಂಜರ್ ಗಲ್ಲಿಯಲ್ಲಿ ಪೋಲೀಸರು ಖಾಕಿ ಖದರ್ ತೋರಿಸಿದ್ದಾರೆ. ಖಂಜರ್ ಗಲ್ಲಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮಾರ್ಕೆಟ್ ಪೋಲೀಸ್ ಠಾಣೆಯ ಪೋಲೀಸರು ಬಂಧಿಸಿ,ಅರ್ದ ಕೆಜಿ (500gm) ಗಾಂಜಾ ವಶಪಡಿಸಿಕೊಂಡಿದ್ದಾರೆ. ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಆದ್ರೆ ಕೋಟಿಗಟ್ಟಲೇ ಖರ್ಚು ಮಾಡಿ ಹಾಳು …

Read More »

ಪಾಕಿಸ್ತಾನ ದೇಶದ ಕರೆನ್ಸಿ ಸಿಕ್ಕಿದರಿಂದ ಕರೋಶಿ ಗ್ರಾಮದಲ್ಲಿ ಸಂಚಲನ

ಚಿಕ್ಕೋಡಿ: ಪಾಕಿಸ್ತಾನ ದೇಶದ ಕರೆನ್ಸಿ ಸಿಕ್ಕಿದರಿಂದ ಕರೋಶಿ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮವು 12ರಿಂದ 14 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ, ಇದು ಎಲ್ಲಾ ಜಾತಿ, ಧರ್ಮದ ಜನರು ವಾಸಿಸುವ ಗ್ರಾಮವಾಗಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳಿಗೆ ದೇಶದ ನಾನಾ ಭಾಗದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಒಂದಲ್ಲ ಒಂದು ಕಾರಣದಿಂದ ಸುದ್ದಿಯಲಿ ಕರೋಶಿ ಗ್ರಾಮವು ಇರುತ್ತೆ ಇವಾಗ ಪಾಕಿಸ್ತಾನದ …

Read More »