Breaking News

Daily Archives: ಏಪ್ರಿಲ್ 9, 2022

ಬೈಕ್ ವೀಲ್ಹಿಂಗ್ ಕ್ರೇಜ್‍ಗೆ ಆಸ್ಪತ್ರೆ ಸೇರಿದ ಪಾದಚಾರಿ

ಬೆಂಗಳೂರು: ಪುಂಡರ ವೀಲ್ಹಿಂಗ್ ಕ್ರೇಜ್‍ಗೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡದುಕೊಂಡು ಹೋಗುತ್ತಿದ್ದ ಮಹಿಳೆ ಆಸ್ಪತ್ರೆಗೆ ಸೇರಿರುವ ಘಟನೆ ಬೆಂಗಳೂರಿನ ಗೌರಿಪಾಳ್ಯದ ನರಸಿಂಹಸ್ವಾಮಿ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಬುಧವಾರ ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಬೈಕ್ ಸವಾರರಿಬ್ಬರು ವೀಲ್ಹಿಂಗ್ ಮಾಡುತ್ತ ಕಂಟ್ರೋಲ್ ಸಿಗದೇ ಗುದ್ದಿದ್ದಾರೆ. ಮಹಿಳೆಯ ಮೇಲೆ ಬೈಕ್ ಬಿದ್ದ ಪರಿಣಾಮವಾಗಿ ತಲೆ ಮತ್ತಿತರ ಭಾಗಗಳಿಗೆ ಪೆಟ್ಟು ಬಿದಿದ್ದೆ. ಸ್ಥಳೀಯರು ಸೇರುತ್ತಿದ್ದಂತೆ ಸ್ಥಳದಿಂದ …

Read More »

ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗುವುದಿಲ್ಲ

ವಿಜಯಪುರ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗುವುದಿಲ್ಲ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ತಿಳಿಸಿದರು. ಬೆಲೆ ಏರಿಕೆ ಖಂಡಿಸಿ ವಿಜಯಪುರದಲ್ಲಿ ಯುಥ್ ಕಾಂಗ್ರೆಸ್‍ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಇತಿಹಾಸ ಈ ದೇಶದ ಇತಿಹಾಸ. ಆ ಇತಿಹಾಸವನ್ನು ಯಾರ ಕೈಯಲ್ಲೂ ಬದಲಾಯಿಸೋಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಸ್ವಾತಂತ್ರ್ಯ ಹೋರಾಟ ಮಾಡುವಾಗ …

Read More »

ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ; ಅವರು ರಾಜಕಾರಣಕ್ಕೆ ಬರಲ್ಲ.

ಬೆಳಗಾವಿ: ತಮ್ಮ ಪತಿ ಹೇಮಂತ್ ನಿಂಬಾಳ್ಕರ್ ಐಪಿಎಸ್ ಹುದ್ದೆಗೆ (IPS Hemant Nimbalkar) ರಾಜೀನಾಮೆ ನೀಡುವುದಿಲ್ಲ; ಅವರು ರಾಜಕಾರಣಕ್ಕೆ ಬರಲ್ಲ. ಸದ್ಯಕ್ಕೆ ಅವರು ಕಾನೂನು ಪದವಿ ಪಡೆಯುತ್ತಿದ್ದಾರೆ. ಹಾಗಾಗಿ ಅವರೀಗ ಬೆಂಗಳೂರಿನಲ್ಲಿದ್ದು, ಕಾನೂನು ಪದವಿ ಪಡೆಯುತ್ತಿದ್ದಾರೆ. ಈಗ ವಿದ್ಯಾಭ್ಯಾಸಕ್ಕಾಗಿ ಎರಡು ವರ್ಷ ರಜೆ ಪಡೆದಿದ್ದಾರೆ. ಕಾನೂನು ಪದವಿ ಪೂರೈಸಿದ ಬಳಿಕ ಮತ್ತೆ ಐಪಿಎಸ್ ಅಧಿಕಾರಿಯಾಗಿ ಭಾರತೀಯ ಆಡಳಿತ ಸೇವೆ ಮುಂದುವರಿಸಲಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ಖಾನಾಪುರ ಕಾಂಗ್ರೆಸ್​ …

Read More »

BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

ಚನ್ನಪಟ್ಟಣ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೇ ಪ್ರಭಾವಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಕಾರಣ ಶುಕ್ರವಾರ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ನಡೆದ ಬೆಳವಣಿಗೆ.   ಈ ಹಿಂದಿನಿಂದಲೂ ತಹಸೀಲ್ದಾರ್ ಎಲ್.ನಾಗೇಶ್ ವರ್ಗಾವಣೆ ವಿಚಾರದಲ್ಲಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ನಡುವೆ ಶೀತಲ ಸಮರ ನಡೆಯುತಿತ್ತು. ಶುಕ್ರವಾರ ಸಂಜೆ ತಹಸೀಲ್ದಾರ್ ವರ್ಗಾವಣೆ ಆದೇಶ ಹೊರಬಿದ್ದಿತ್ತು. ತಹಸೀಲ್ದಾರ್ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ &ಸಂತೋಷ್ ಜಾರಕಿಹೊಳಿ ಅವರ್ ವತಿಯಿಂದ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್

ಗೋಕಾಕ: ಶ್ರೀ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಮಾಜ ಮುಖಿ ಕಾರ್ಯಕ್ರಮ ಗಳಿಗೆ ಚಾಲನೆ ನೀಡುತ್ತಿದ್ದಾರೆ.   ಜಾರಕಿಹೊಳಿ ಅವರು ಅಂದ್ರೆ ಎಂದು ಕೊಡುವ ಕೈ ದೇವರ ಗುಡಿಗಳು, ಜನರ, ಸಂಕಷ್ಟ, ಸಕ್ಕರೆ ಕಾರ್ಖಾನೆ ಸಿಬ್ಬಂದಿಗಳಿಗೆ ಕೊಡುವ ಗೌರವ್ , ಶಾಲಾ ಕಾಲೇಜು ಗಳ ಬಗ್ಗೆ ಕಾಳಜಿ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ,   ಇದೆ ರೀತಿ ಪಟ್ಟಿ ಗಳನ್ನ ಹೇಳುತ್ತಾ ಹೋದ್ರೆ ಕಮ್ಮಿನ್ನೆ ಅನ್ನಬಹುದು ಆದ್ರೂ ಇವು …

Read More »

ಬ್ರಿಟನ್‌ ರಾಣಿಗಿಂತ್ಲೂ ಶ್ರೀಮಂತೆ ಇನ್ಫಿ ನಾರಾಯಣ ಮೂರ್ತಿ ಅವರ ಪುತ್ರಿ..!

ಬ್ರಿಟನ್‌ ನ ಹಣಕಾಸು ಸಚಿವ ರಿಷಿ ಸುನಕ್‌ ಅವರ ಪತ್ನಿ, ಭಾರತೀಯ ಮೂಲದ ಅಕ್ಷತಾ ಮೂರ್ತಿ ಅಲ್ಲಿನ ರಾಣಿಗಿಂತಲೂ ಸಿರಿವಂತೆ ಅನ್ನೋ ವರದಿಗಳು ಹರಿದಾಡ್ತಾ ಇವೆ. ಅಕ್ಷತಾ ಮೂರ್ತಿ, ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ. ತಂದೆ ಸಹ ಬಿಲಿಯನೇರ್.‌ ಎಂಜಿನಿಯರ್‌ ಆಗಿರೋ ಅಕ್ಷತಾ ದಾನ, ಧರ್ಮದಲ್ಲೂ ಮುಂದಿದ್ದಾರೆ.   ರಿಷಿ ಸುನಕ್‌, ಬ್ರಿಟನ್‌ ನ ಭವಿಷ್ಯದ ಪ್ರಧಾನಿಯೆಂದೇ ಬಿಂಬಿತರಾಗಿದ್ದರು. ಆದ್ರೀಗ ಬೆಲೆ ಏರಿಕೆಯಿಂದಾಗಿ ಅವರ ಜನಪ್ರಿಯತೆ …

Read More »

ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ಸಾಲದು,:ಬೊಮ್ಮಾಯಿಗೆ ಕಿವಿ ಹಿಂಡಿದ ಹೈಕಮಾಂಡ್

ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಹಿಜಬ್, ಹಲಾಲ್ ನಂತಹ ಧಾರ್ಮಿಕ ವಿಚಾರಗಳು ಸಾಲದು ಉತ್ತಮ ಆಡಳಿತ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯೂ ಮುಖ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್ ಹೇಳಿದೆ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಬೊಮ್ಮಾಯಿ ಅವರು ಎರಡು ದಿನಗಳ ಕಾಲ ದೆಹಲಿಗೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿದ್ದಾರೆ. …

Read More »

ಅಮಿತಾಭ್, ಅಕ್ಷಯ್ ಪ್ರತಿಕೃತಿ ದಹಿಸಿ ಬೆಲೆ ಏರಿಕೆಗೆ ಕಾಂಗ್ರೆಸ್ ಪ್ರತಿಭಟನೆ

ಭೂಪಾಲ್: ಬಾಲಿವುಡ್ ನಟ ಅಮಿತಾಭ್ ಬಚ್ಚನ್, ನಟ ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹಿಸಿ ಮಧ್ಯ ಪ್ರದೇಶ ಕಾಂಗ್ರೆಸ್ ಇಂದು ಪ್ರತಿಭಟನೆ ಮಾಡಿದೆ. ಯುಪಿಎ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ಹಾಗೂ ಹಣದುಬ್ಬರ ವಿರುದ್ದ ಟ್ವೀಟ್ ಮಾಡಿದ್ದ ಈ ನಟರು, ಇದೀಗ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸತತವಾಗಿ ಏರುತ್ತಿದ್ದರೂ ಮೌನವಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಅಮಿತಾಭ್ ಬಚ್ಚನ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಕಾಂಗ್ರೆಸ್ ಹತಾಶೆಯಿಂದ ಈ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ &ಸಂತೋಷ್ ಜಾರಕಿಹೊಳಿ ಅವರ್ ವತಿಯಿಂದ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್

ಗೋಕಾಕ: ಶ್ರೀ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಮಾಜ ಮುಖಿ ಕಾರ್ಯಕ್ರಮ ಗಳಿಗೆ ಚಾಲನೆ ನೀಡುತ್ತಿದ್ದಾರೆ. ಜಾರಕಿಹೊಳಿ ಅವರು ಅಂದ್ರೆ ಎಂದು ಕೊಡುವ ಕೈ ದೇವರ ಗುಡಿಗಳು, ಜನರ, ಸಂಕಷ್ಟ, ಸಕ್ಕರೆ ಕಾರ್ಖಾನೆ ಸಿಬ್ಬಂದಿಗಳಿಗೆ ಕೊಡುವ ಗೌರವ್ , ಶಾಲಾ ಕಾಲೇಜು ಗಳ ಬಗ್ಗೆ ಕಾಳಜಿ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಇದೆ ರೀತಿ ಪಟ್ಟಿ ಗಳನ್ನ ಹೇಳುತ್ತಾ ಹೋದ್ರೆ ಕಮ್ಮಿನ್ನೆ ಅನ್ನಬಹುದು ಆದ್ರೂ ಇವು ಯಾವು ಕೂಡ …

Read More »

ರಸ್ತೆ ಗುಂಡಿ ಮುಚ್ಚದ ಸರ್ಕಾರದ ವಿರುದ್ಧ ಟೆಕ್ಕಿ ಸಮೂಹದಿಂದ ಭಾರೀ ಆಕ್ರೋಶ

ಬೆಂಗಳೂರು : ಮಹಾನಗರದ ರಸ್ತೆ ಗುಂಡಿ ನಿರಂತರವಾಗಿ ಪ್ರಾಣಬಲಿ ಪಡೆಯುತ್ತಿದ್ದರೂ, ಬಿಬಿಎಂಪಿ ಮಾತ್ರ ತನ್ನ ದಿವ್ಯ ನಿರ್ಲಕ್ಷ್ಯವನ್ನು ಮುಂದುವರಿಸಿದೆ. ದಿನಕ್ಕೊಬ್ಬರು ಬಿದ್ದು ಸಾವು-ನೋವು ಅನುಭವಿಸುತ್ತಿರುವ ಸಂದರ್ಭದಲ್ಲಿ ಇದೀಗ ನಗರಕ್ಕೆ ಅತಿದೊಡ್ಡ ತೆರಿಗೆ ಮೂಲವಾಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಇದರ ವಿರುದ್ಧ ದನಿ ಎತ್ತಿರುವುದು ಕೊಂಚ ಬದಲಾವಣೆಯ ನಿರೀಕ್ಷೆ ಮೂಡಿಸಿದೆ.ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ, ದಿಢೀರ್ ರಸ್ತೆ ಮಧ್ಯೆ ಗುಂಡಿ ತೋಡಿ ಹಾಗೆಯೇ ಬಿಡುವುದು, ರಸ್ತೆ ಅಂಚುಗಳಲ್ಲಿ ತೆರೆದ ಗುಂಡಿಗಳಿಗೆ ಸೂಚನಾ ಫಲಕ …

Read More »