Breaking News

Daily Archives: ಏಪ್ರಿಲ್ 7, 2022

ಉಗ್ರಗಾಮಿಗಳು ಅಂದ್ರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ,: ಲಕ್ಷ್ಮಣ ಸವದಿ

ಅಥಣಿ(ಬೆಳಗಾವಿ): ಉಗ್ರಗಾಮಿಗಳು ಎಂದರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ ಎಂದು ಅಲ್ ​ಖೈದಾ ಮುಖ್ಯಸ್ಥ ಅಮನ್ – ಅಲ್ ​- ಜವಾಹಿರಿ ಹೇಳಿಕೆಯನ್ನು ಮಾಜಿ ಉಪಮುಖ್ಯಮಂತ್ರಿ, ಮಾಜಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತೀವ್ರವಾಗಿ ಖಂಡಿಸಿದ್ದಾರೆ. ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಉಗ್ರಗಾಮಿಗಳು ಅಂದ್ರೆ ದೇಶದ್ರೋಹ ಕೆಲಸ ಮಾಡುವವರು. ಇಂಥವರ ಹೇಳಿಕೆಗೆ ನಮ್ಮ ಸರ್ಕಾರ ಸೊಪ್ಪು ಹಾಕುವುದಿಲ್ಲ, ಸಮಾಜದ ಸ್ವಾಸ್ಥ್ಯ …

Read More »

ಗೋಕಾಕ್​ ಜಿಲ್ಲೆ ಮಾಡಬೇಕು ಜಾರಕಿಹೊಳಿ ಸಹೋದರರ ಜೊತೆಗೂ ಮಾತನಾಡುತ್ತೇವೆ. : ಡಾ.ರಾಜೇಂದ್ರ ಸಣ್ಣಕ್ಕಿ

ಬೆಳಗಾವಿ: ಜಿಲ್ಲಾ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಚರ್ಚೆ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಯನ್ನಾಗಿ ವಿಂಗಡಿಸುವ ಬಗ್ಗೆ ಸಚಿವ ಉಮೇಶ್ ಕತ್ತಿ ಒಲವು ತೋರಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಗಳಾಗಿ ವಿಂಗಡಿಸುವಂತೆ ಕೋರಿ ಉಮೇಶ್ ಕತ್ತಿ ಶೀಘ್ರವೇ ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಸಚಿವ ಉಮೇಶ್ ಕತ್ತಿಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸಾಥ್ ನೀಡಿದ್ದಾರೆ. ಇನ್ನೊಂದೆಡೆ ಸಚಿವ ಉಮೇಶ್ ಕತ್ತಿ ಹೇಳಿಕೆ ಗೋಕಾಕ್ ಭಾಗದ ಜನರ …

Read More »

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇಂದು ಬೆಳಗಾವಿ ಆರ್‌ಎಸ್ಎಸ್ ಕಚೇರಿಗೆ ಭೇಟಿ

ಬೆಳಗಾವಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇಂದು ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದರು. ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಸಿಎಂ ಪ್ರಮೋದ್​ ಸಾವಂತ್ ಮುಖಂಡರ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಪ್ರಮೋದ್​ ಸಾವಂತ್ ಬೆಳಗಾವಿಗೆ ಆಗಮಿಸಿದ್ದಾರೆ. ಆರ್‌ಎಸ್ಎಸ್ ಮುಖಂಡರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಸಾವಂತ್, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ …

Read More »

ಜಗನ್‌ ಸಂಪುಟದ ಎಲ್ಲಾ ಸಚಿವರು ನಾಳೆ ರಾಜೀನಾಮೆ; ಎ.11ಕ್ಕೆ ಸಂಪುಟ ಪುನರ್‌ರಚನೆ

ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಸಂಪುಟದ ಎಲ್ಲಾ 24 ಮಂದಿ ಸಚಿವರು ಗುರುವಾರ(ಎ.07) ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಎ.11ರಂದು ಅವರು ಸಂಪುಟ ಪುನಾರಚನೆ ನಡೆಸಲಿದ್ದಾರೆ.ಹೀಗಾಗಿ, ಹಾಲಿ ಸಚಿವರೆಲ್ಲರ ರಾಜೀನಾಮೆ ನೀಡಲಿದ್ದಾರೆ.   ಹಾಲಿ ಇರುವ ಸಚಿವರ ಪೈಕಿ ನಾಲ್ವರು ಸ್ಥಾನ ಉಳಿಸಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.ಜಾತಿ, ಪ್ರಾದೇಶಿಕವಾರು ಪ್ರಾಬಲ್ಯ ಪ್ರಮುಖವಾಗಿ ನೂತನ ಸಚಿವರ ಆಯ್ಕೆಯಲ್ಲಿ ಪ್ರಧಾನವಾಗಲಿದೆ. 2019 ಮೇ 30ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ …

Read More »

ಬೆಳಗಾವಿ ಆರೆಸ್ಸೆಸ್ ಕಚೇರಿಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿ

ಬೆಳಗಾವಿ: ಪ್ರಮೋದ್ ಸಾವಂತ್ ಅವರು ಗೋವಾ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಬೆಳಗಾವಿಗೆ ಭೇಟಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಬಂದು ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇಲ್ಲಿಯ ಶಾಸ್ತ್ರಿ ನಗರದ ಆರೆಸ್ಸೆಸ್ ಕಚೇರಿಗೆ ಬಂದು ಕೆಲ ಹೊತ್ತು ಉಳಿದುಕೊಂಡು ಆರೆಸ್ಸೆಸ್ ನ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಮೋದ ಸಾವಂತ್ ಬೆಳಗಾವಿಗೆ ಆಗಮಿಸಿದ್ದರು.‌ ಮಾಧ್ಯಮದವರೊಂದಿಗೆ ಮಾತನಾಡಿದ ಗೋವಾ …

Read More »

ಗೋವಾ: ಪೋರ್ಚುಗೀಸರಿಂದ ಭಗ್ನಗೊಂಡಿದ್ದ ದೇವಾಲಯಗಳ ಪುನರ್ ನಿರ್ಮಾಣ

ಪಣಜಿ: ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ಭಗ್ನಗೊಂಡಿರುವ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯವನ್ನು ಪುರಾತತ್ವ ಇಲಾಖೆಯ ಮೂಲಕ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದ್ದಾರೆ. ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೇವಸ್ಥಾನಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ 20 ಕೋಟಿ ರೂ ಮೀಸಲಿರಿಸಿದೆ. ಗೋವಾದಲ್ಲಿ ಹಲವೆಡೆ ದೇವಾಲಯಗಳು ಶಿಥಿಲಗೊಂಡ ಮತ್ತು ನಿರ್ಲಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದಿವೆ. ಪೋರ್ಚುಗೀಸರ ಆಳ್ವಿಕೆಯಲ್ಲಿ ಈ ಧಾರ್ಮಿಕ ಕೇಂದ್ರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿದ್ದವು ಎಂದರು.

Read More »

75 ವರ್ಷದ ಬಳಿಕ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದ ಹಳ್ಳಿ!

ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಕಳೆದರೂ ಜಮ್ಮು ಕಾಶ್ಮೀರದ ಹಳ್ಳಿಯೊಂದರಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಇದೀಗ ಈ ಹಳ್ಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಜಮ್ಮು ಕಾಶ್ಮೀರದ ಉಧಂಪುರದ ಸಡ್ಡಲ್ ಎಂಬ ಹಳ್ಳಿಗೆ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ‘ಯುನೈಟೆಡ್ ಗ್ರಾಂಟ್ಸ್ ಸ್ಕೀಮ್’ ಅಡಿಯಲ್ಲಿ ಸಡ್ಡಲ್ ಹಳ್ಳಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಂಡಿದೆ. ಮೇಣದ ಬತ್ತಿ ಮತ್ತು ಎಣ್ಣೆ ಬುಡ್ಡಿಗಳೇ ಇದುವರೆಗೆ …

Read More »

ಅಲ್ ಖೈದಾ ವಿಡಿಯೋ ಬಂದರೆ ಸಿದ್ದರಾಮಯ್ಯ ಯಾಕೆ ಗಲಿಬಿಲಿಯಾಗುತ್ತಾರೆ? : ಸಿಎಂ

ಮೈಸೂರು: ”ಸಂಪುಟದ ಕುರಿತಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸ್ಥೂಲವಾಗಿ ಚರ್ಚೆ ಆಗಿದ್ದು, ಅವರು ಇನ್ನಷ್ಟು ವಿವರ ಪಡೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಅವರು ತೀರ್ಮಾನ ಮಾಡಿದ ನಂತರ ವಿಸ್ತರಣೆ ಇಲ್ಲ ಪುನಾರಚನೆ ಎನ್ನುವ ಕುರಿತು ತೀರ್ಮಾನ ಆಗುತ್ತದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.   ಮೈಸೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ,’ಹಲವಾರು ಇಲಾಖೆಗಳ ವಿಚಾರಗಳ ಕುರಿತು ಚರ್ಚೆ ಮಾಡಲು ದೆಹಲಿಗೆ ತೆರಳಿದ್ದೆ, ಇಂಧನ, ರಕ್ಷಣೆ, …

Read More »

ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು.

ಬೆಳಗಾವಿ ಕುವೆಂಪು ನಗರದ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು. ಇದೇ ವೇಳೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಸಾರ್ವಜನಿಕರ ಮನವಿ ಮೇರೆಗೆ 1 ಲಕ್ಷ …

Read More »

ಭಾರತ ನಮ್ಮ ‘ದೊಡ್ಡಣ್ಣ’ -ಪ್ರಧಾನಿ ಮೋದಿ ಸಹಾಯ ನೆನೆದ ಜಯಸೂರ್ಯ

ಭಾರತ ನಮ್ಮ ‘ದೊಡ್ಡಣ್ಣ’ -ಪ್ರಧಾನಿ ಮೋದಿ ಸಹಾಯ ನೆನೆದ ಜಯಸೂರ್ಯ ಶ್ರೀಲಂಕಾಗೆ ಭಾರತ ‘ಬಿಗ್ ಬ್ರದರ್’ ಎಂದು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಬಣ್ಣಿಸಿದ್ದಾರೆ. ಸ್ವಾತಂತ್ರ್ಯ ಬಳಿಕ ಭೀಕರವಾಗಿ ಆರ್ಥಿಕ ದಿವಾಳಿತನವನ್ನ ಎದುರಿಸುತ್ತಿರುವ ಲಂಕಾಗೆ, ಭಾರತ ಮಾಡಿರುವ ಸಹಾಯವನ್ನ ನೆನೆದು ಜಯಸೂರ್ಯ ಭಾರತ ನಮ್ಮ ದೊಡ್ಡಣ್ಣ ಎಂದಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮಾಡಿರುವ ಸಹಾಯವನ್ನ ಈ ಸಂದರ್ಭದಲ್ಲಿ ಸ್ಮರಿಸಿರುವ ಅವರು, ಭಾರತ ನಮ್ಮ ನೆರೆಯ ರಾಷ್ಟ್ರ.. ನಮ್ಮ ದೊಡ್ಡಣ್ಣ.. …

Read More »