Breaking News

Daily Archives: ಏಪ್ರಿಲ್ 5, 2022

ಧಾರ್ಮಿಕ ವಿಚಾರಗಳು ತಾರಕಕ್ಕೆ: ಕುತೂಹಲಕ್ಕೆ ಎಡೆಮಾಡಿದ ಸ್ವಾಮೀಜಿಗಳ ಹೆಚ್‌ಡಿಕೆ ಭೇಟಿ

ರಾಮನಗರ: ತಾಲೂಕಿನ ಬಿಡದಿ ಒಳಿ ಇರುವ ಕೇತಗಾನಹಳ್ಳಿಯ ಎಚ್.ಡಿ.ಕುಮಾರಸ್ವಾಮಿ ಅವರ ತೋಟಕ್ಕೆ ವಿವಿಧ ಮಠಾಧೀಶರು ಆಗಮಿಸಿದ್ದಾರೆ. ಸ್ವಾಮಿಜೀಗಳ ಭೇಟಿ ಕುತೂಹಲಕ್ಕೆ ಎಡೆಮಾಡಿದ. ರಾಜ್ಯದಲ್ಲಿ ಧಾರ್ಮಿಕ ವಿಚಾರಗಳು ತಾರಕಕ್ಕೇರುತ್ತಿರುವ ಬೆನ್ನಲ್ಲೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿಗೆ ಸ್ವಾಮೀಜಿಗಳ ಭೇಟಿ ಮಹತ್ವ ಪಡೆದುಕೊಂಡಿದೆ. ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ, ಈಡಿಗ ಮಠದ ಪ್ರಣವಾನಂದ ಸ್ವಾಮಿಜೀ ಬಂಜಾರ ಮಠದ ಸರ್ದಾರ್ ಸೇವಲಾಲ್ ಸ್ವಾಮಿಜೀ, ಬೋವಿ ಮಠದ ಗಂಗಾಧರೇಶ್ವರ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಕೇತಗಾನಹಳ್ಳಿಯ ತೋಟಕ್ಕೆ …

Read More »

ಎಲ್ಲ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೊದಲ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ: ಸಿಎಂ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲ ಸಮುದಾಯಗಳಿಗೆ ಮೊದಲ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   ಪ್ರಸ್ತುತ ಕೆಲವು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕುಟೀರ ಜ್ಯೋತಿ ಯೋಜನೆ ಅಡಿ 40 ಯೂನಿಟ್ ಉಚಿತವಾಗಿ ನೀಡಲಾಗುತ್ತಿದ್ದು, ಇದನ್ನು 75 ಯೂನಿಟ್ ಗೆ ಹೆಚ್ಚಿಸುವುದರ ಜತೆಗೆ …

Read More »

ಮೈಸೂರು: ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೇಸತ್ತು ವ್ಯಕ್ತಿಯೋರ್ವರು ಮೈಸೂರು ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆಯಿತು. ನಗರದ ವಿದ್ಯಾರಣ್ಯಪುರಂ ನಿವಾಸಿ ಪ್ರಕಾಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ಪ್ರಕಾಶ್ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದಾರೆ.‌ ಇವರ ತಾಯಿ ಹಾಗೂ ಸಹೋದರಿಯರು ಆಗಾಗ ಆಸ್ತಿ ವಿಚಾರಕ್ಕೆ ಜಗಳವಾಡುತ್ತಿದ್ದಾರಂತೆ. ಇದರಿಂದ ಬೇಸತ್ತ ಪ್ರಕಾಶ್ ಕುಟುಂಬ ಪಿತ್ರಾರ್ಜಿತ ಆಸ್ತಿ ಇರುವ ವಿದ್ಯಾರಣ್ಯಪುರಂನಲ್ಲಿ ವಾಸಿಸುತ್ತಿದ್ದಾರೆ. …

Read More »

ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ

ತುಮಕೂರು: ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಪ್ರೇಯಸಿಯ ಕುತ್ತಿಗೆಗೆ ತಾಳಿ ಕಟ್ಟಿದ ಯುವಕ, ಜೀವನಪೂರ್ತಿ ನಿನ್ನೊಂದಿಗೇ ಇರುವೆ ಎಂದೂ ಮಾತೂ ಕೊಟ್ಟಿದ್ದ. ಇದಾದ ಮೂರು ದಿನಕ್ಕೆ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಖುಷಿಯಾಗೇ ಮದುವೆ ನೋಂದಣಿ ಕೂಡ ಮಾಡಿಸಿಕೊಂಡ ಈ ಜೋಡಿ 6 ದಿನ ಸಂಸಾರವನ್ನೂ ನಡೆಸಿತ್ತು. ಎಲ್ಲವೂ ಸುಸೂತ್ರವಾಗಿ ನೆರವೇರಿತು, ಪ್ರೀತಿಸಿದ ಹುಡುಗ ಜೀವನ ಪೂರ್ತಿ ಸಂಗಾತಿಯಾಗಿ ಇರ್ತಾನೆ… ಇನ್ನು ತಮ್ಮದೇ ಆದ ಬದುಕು ಕಟ್ಟಿಕೊಂಡು ನೆಲೆಯೂರಬೇಕು ಅಂದುಕೊಳ್ಳುವಷ್ಟರಲ್ಲಿ ಯುವತಿ ಬಾಳಲ್ಲಿ …

Read More »

IPL 2022: RCB vs RR ಪಂದ್ಯದ ಡ್ರೀಮ್ ಟೀಂ, ಪ್ಲೇಯಿಂಗ್ 11, ಪಿಚ್ ರಿಪೋರ್ಟ್‌

ಮುಂಬೈನ ವಾಂಖೆಡೆ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ರಾಜಸ್ತಾನ್ ರಾಯಲ್ಸ್ (ಆರ್‌ಆರ್‌) ಮುಖಾಮುಖಿಯಾಗುತ್ತಿವೆ. ಐಪಿಎಲ್ 13ನೇ ಸೀಸನ್‌ನಲ್ಲಿ ಆರ್‌ಆರ್ ಮೊದಲೆರಡು ಪಂದ್ಯಗಳನ್ನ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಒಂದು ಪಂದ್ಯ ಸೋಲು ಹಾಗೂ ಗೆಲುವನ್ನ ಕಂಡಿದೆ.   ಆರ್‌ಸಿಬಿ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನ್ನ ಕಂಡ ಬಳಿಕ, ಕೆಕೆಆರ್‌ ವಿರುದ್ಧ ಗೆದ್ದು ಕಂಬ್ಯಾಕ್ ಮಾಡಿದೆ. ಹೀಗಾಗಿ 2 ಪಾಯಿಂಟ್ಸ್‌ಗಳು ಆರ್‌ಸಿಬಿ ಖಾತೆಗೆ ಸೇರಿದೆ. …

Read More »

ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ! ಏನು ಗೊತ್ತಾ?

ಹಾಸನ : ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.   ಕೋಡಿಮಠದ ಶ್ರೀಗಳು ಈ ವರ್ಷದ ಭವಿಷ್ಯ ನುಡಿದಿದ್ದು, ಈ ವರ್ಷ ಮಳೆ ಕೆಂಡಮಂಡಲ, ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗಲಿದ್ದು, ಹಿಂಗಾರು ಮಳೆ ಕಡಿಮೆಯಾಗಲಿದೆ. ಅಶಾಂತಿ, ಮತೀಯ ಗಲಭೆಗಳಿಂದ ಹೆಚ್ಚು ಸಾವು, ಕೊಲೆಗಳಾಗಿವೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಭಾರತದಲ್ಲಿ ಈ …

Read More »

ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ

ಬೆಂಗಳೂರು: ಚಿಕನ್ ಖರೀದಿ ಮಾಡಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜೆಜೆ ನಗರದಲ್ಲಿ ನಡೆದಿದೆ. ಚಂದ್ರು ಕೊಲೆಯಾದ ಯುವಕ. ಜೆಜೆ ನಗರದ ಹಳೇ ಗುಡ್ಡದಹಳ್ಳಿಯಲ್ಲಿ ಘಟನೆ ನಡೆದಿದ್ದು, ಯುವಕ ಚಂದ್ರುನನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.  ನಡೆದಿದ್ದೇನು? ಅಂಜಪ್ಪ ಗಾರ್ಡನ್‍ನಲ್ಲಿ ಚಂದ್ರ ಬರ್ತ್‍ಡೇ ಪಾರ್ಟಿಗೆಂದು ಹೋಗಿದ್ದನು. ಈ ವೇಳೆ ಜೆಜೆ ನಗರದಲ್ಲಿ ಚಿಕನ್ ತರಲು …

Read More »

ಮಾವಿನಹಣ್ಣಿನ ಮಾರ್ಕೆಟ್ ನಮ್ಮದಾಗಬೇಕು – ಹಾಸನದಲ್ಲಿ ಹೊಸ ಅಭಿಯಾನ

ಹಾಸನ: ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್-ಜಟ್ಕಾ ಕಟ್ ವಿವಾದ ಬಳಿಕ, ಇದೀಗ ಮಾವಿನಹಣ್ಣು ಹೋಲ್‍ಸೇಲ್ ಮಾರ್ಕೆಟ್ ಹಿಂದೂಗಳ ಪಾಲಾಗಬೇಕೆಂದು ಹಿಂದೂ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಹಿಂದೂ ದೇವಾಲಯ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿತ್ತು. ನಂತರ ಯುಗಾದಿ ಹಬ್ಬದ ಹೊಸತೊಡುಕು ವೇಳೆ ಹಿಂದೂಗಳು ಮುಸಲ್ಮಾನರು ಮಾರುವ ಹಲಾಲ್ ಕಟ್ ಮಾಂಸವನ್ನು ಖರೀದಿಸಬಾರದು. ಬದಲಾಗಿ ಹಿಂದೂಗಳು ಮಾರುವ ಜಟ್ಕಾಕಟ್ ಮಾಂಸವನ್ನು ಕೊಳ್ಳಬೇಕು ಎಂದು …

Read More »

ಬಿಎ, ಬಿಕಾಂಗೂ ಎಂಟ್ರೆನ್ಸ್ ಎಕ್ಸಾಂ: ಪಿಯು ಅಂಕವಿನ್ನು ಲೆಕ್ಕಕ್ಕಿಲ್ಲ; ಪದವಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷೆ

ಉನ್ನತ ಶಿಕ್ಷಣಕ್ಕೆ ತಳಹದಿ ಹಾಗೂ ವೃತ್ತಿಪರ ಕೋರ್ಸ್​ಗಳಿಗೆ ದಿಕ್ಸೂಚಿಯಾಗಬೇಕಾದ ಪಿಯುಸಿ ವ್ಯಾಸಂಗ ಸದ್ದಿಲ್ಲದಂತೆ ಮಹತ್ವ ಕಳೆದುಕೊಳ್ಳುವಂತಹ ವಾತಾವರಣ ಗೋಚರಿಸಿದೆ. ಪದವಿ ಪ್ರವೇಶಕ್ಕೂ ಇನ್ಮುಂದೆ ರಾಷ್ಟ್ರೀಯ ಪ್ರವೇಶ ಪರೀಕ್ಷೆ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಡಿಗ್ರಿ ಪ್ರವೇಶಾತಿ ವೇಳೆ ಪಿಯುಸಿ ಅಂಕಗಳ ಮಹತ್ವ ಇಲ್ಲವಾಗಲಿದೆ. ಹೀಗಾಗಿ, ಪ್ರವೇಶ ಪರೀಕ್ಷೆಗಳ ಭರಾಟೆಯಲ್ಲಿ ಪಿಯುಸಿ ಮೌಲ್ಯ ಕಳೆದು ಹೋಗುತ್ತಿದೆಯೇ? ಎರಡು ವರ್ಷಗಳ ಕೋರ್ಸ್ ನಿಷ್ಪ›ಯೋಜಕವೇ? ಎಂಬ ಚರ್ಚೆ ಶೈಕ್ಷಣಿಕ ವಲಯದಲ್ಲಿ ಶುರುವಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಾಗಿರುವ …

Read More »

ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್, FC ಶುಲ್ಕ 16 ಪಟ್ಟು ಹೆಚ್ಚಳ

ಬೆಂಗಳೂರು: ಹಳೆ ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ. ಖಾಸಗಿ ವಾಹನಗಳ ಆರ್.ಸಿ. ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. ಟ್ರಾನ್ಸ್ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕಿದೆ. 8 ವರ್ಷಗಳ ನಂತರ ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ. …

Read More »