Breaking News

Monthly Archives: ಏಪ್ರಿಲ್ 2022

ಬಿಡುಗಡೆಯಾದ ಮೊದಲ ದಿನವೇ ಮಕಾಡೆ ಮಲಗಿದ ಅಜಯ್‌ ದೇವಗನ್‌ ರ ʼರನ್ ವೇ 34ʼ

ಹಿಂದಿ ರಾಷ್ಟ್ರ ಭಾಷೆ ಎಂದು ವರಾತ ತೆಗೆದು ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರ ʼರನ್ ವೇ 34ʼ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿ ಬಿದ್ದಿದೆ. ಸ್ವತಃ ಅಜಯ್ ದೇವಗನ್ ನಿರ್ಮಿಸಿ, ನಿರ್ದೇಶಿಸಿ, ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ನಟಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು.   ಆದರೆ, ಚಿತ್ರ ಬಿಡುಗಡೆಗೆ ಎರಡು ಮೂರು ದಿನಗಳಿರುವಾಗ ದೇವಗನ್ ಭಾಷೆ ವಿಚಾರದಲ್ಲಿ …

Read More »

ಹುಬ್ಬಳ್ಳಿ ಘಟನೆ: ಗಲಭೆಕೋರರಿಗೆ ಕಾಂಗ್ರೆಸ್ ನೆರವು ನೀಡಿದೆ ಎಂದ ಸಿಎಂ

ನವದೆಹಲಿ ಏಪ್ರಿಲ್ 30: ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹರಿಹಾಯದಿದ್ದಾರೆ. ‘ಹುಬ್ಬಳ್ಳಿ ಗಲಭೆ ಪ್ರಕಾರದಲ್ಲಿ ಬಂಧಿತರ ನೆರವಿಗೆ ಧಾವಿಸಿರುವುದು ಶಾಸಕ ಜಮೀರ್ ಅಹಮದ್ ಹಾಗೂ ಅವರ ಪಕ್ಷದ ನಿಲುವು ಆಗಿದೆ. ಗಲಭೆ ಮಾಡಿದವ ಜೊತೆ ನಿಲ್ಲುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡೇ ಬಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಗೆ ಆಗಮಿಸಿ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿ ಪ್ರಕರಣದಲ್ಲಿ ಶಾಸಕ ಜಮೀರ್ …

Read More »

ಕುಮಟಾದ ಪ್ರತೀಕ್ಷಾಗೆ ಒಂಬತ್ತು ಚಿನ್ನ

ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಕುಮಟದ ಪ್ರತೀಕ್ಷಾ ಜೆ.ಪೈ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 2022ನೇ ಸಾಲಿನ ಘಟಿಕೋತ್ಸವದಲ್ಲಿ ಒಟ್ಟು 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಫಿಸಿಯಾಲಜಿ, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಪೆಥಾಲಜಿ, ಫೋರೆನ್ಸಿಕ್‌ ಮೆಡಿಸಿನ್‌, ಕಮ್ಯುನಿಟಿ ಮೆಡಿಸಿನ್‌, ಜನರಲ್‌ ಮೆಡಿಸಿನ್‌, ಜನರಲ್‌ ಸರ್ಜರಿ ಮತ್ತು ಪೀಡಿಯಾಟ್ರಿಕ್ಸ್‌ ವಿಷಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.   ಮೊದಲನೇ, ಎರಡನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದಿರುವ ಅವರಿಗೆ ಪೆಥಾಲಜಿ …

Read More »

3.58 ಲಕ್ಷ ಬೋಗಸ್ ಪಿಂಚಣಿ ಫಲಾನುಭವಿಗಳ ಪತ್ತೆ: ಸಚಿವ ಅಶೋಕ್

ಬೆಂಗಳೂರು: ನವೋದಯ ಆಯಪ್ ಮೂಲಕ ವಿವಿಧ ಪಿಂಚಣಿ ಯೋಜನೆಗಳಡಿ ಫಲಾನುಭವಿಗಳ ದತ್ತಾಂಶ ಸಂಗ್ರಹ, ಆಧಾರ್ ಸಂಖ್ಯೆಗೆ ಜೋಡಿಸಿದ್ದರಿಂದ ರಾಜ್ಯದಲ್ಲಿ ಈವರೆಗೆ‌ 3.58 ಲಕ್ಷ ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚಿ ರದ್ದುಪಡಿಸಿದ್ದರಿಂದ ರಾಜ್ಯದ ಬೊಕ್ಕಸಕ್ಕೆ 430 ಕೋಟಿ ರೂ. ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.   ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ದಲ್ಲಾಳಿಗಳ ಬಳಿ ಮಾಸಾಶನ ಮಂಜೂರು ಆದೇಶಪತ್ರಗಳು, ಒಬ್ಬರಿಗೆ ಎರಡೆರಡು ಪಿಂಚಣಿ, ಸತ್ತವರಿಗೂ ಪಾವತಿಯಾಗಿರುವುದು ಬಯಲಾಗಿದೆ ಎಂದು ತಿಳಿಸಿದರು. …

Read More »

45 ಡಿಗ್ರಿ ದಾಟಿದ ತಾಪಮಾನ: ಕಾರಿನ ಬಾನೆಟ್‌ ಅನ್ನೇ ಒಲೆಯಾಗಿಸಿಕೊಂಡು ರೊಟ್ಟಿ ಮಾಡಿದ ಮಹಿಳೆ

ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ 45 ಡಿಗ್ರಿಗಳಿಗೆ ತಲುಪಿದೆ. ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಈಗ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟು ಬಿಸಿಲಿನಲ್ಲಿ ಅಡುಗೆಯೇ ತಯಾರಿಸಬಹುದು ಎಂದು ಕೆಲವರು ಗೇಲಿ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಬಿಸಿಲನ್ನೇ ಬಳಸಿಕೊಂಡು ಅಡುಗೆ ಮಾಡಿ ಅಚ್ಚರಿಗೊಳಿಸುತ್ತಿದ್ದಾರೆ.   ಇದನ್ನು ಕೇಳಿ ನಿಮಗೆ ನಗು ಬಂದಿರಬಹುದು ಆದರೆ ಇದು ನಿಜ. ಇತ್ತೀಚೆಗೆ, ಒಡಿಶಾದ ಮಹಿಳೆಯೊಬ್ಬರು ಕಾರಿನ ಬಾನೆಟ್ ಮೇಲೆ ಬ್ರೆಡ್, ರೊಟ್ಟಿ ಬೇಯಿಸುತ್ತಿರುವ …

Read More »

ಆಟೋ ಹತ್ತಿದ ಯುವತಿಗೆ ದಾರಿ ತಪ್ಪಿಸಿ ಹಾಡಹಗಲೇ ರೇಪ್ ಮಾಡಿದ ಆಟೋ ಚಾಲಕ..!

ಯಾದಗಿರಿ : ಆಟೋದಲ್ಲಿ ತೆರಳುತ್ತಿದ್ದ ವೇಳೆ ಯುವತಿಯನ್ನು ಹಾಡಹಗಲೇ ಅತ್ಯಾಚಾರ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಕೆಲಸ ಮುಗಿಸಿಕೊಂಡು ಯುವತಿ ಆಟೋದಲ್ಲಿ ಹೋಗುತ್ತಿದ್ದ ವೇಳೆ ಆಕೆಯನ್ನು ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲು ಆಟೋ ಚಾಲಕ ಮತ್ತು ಆತನ ಸ್ನೇಹಿತ ಯತ್ನಿಸಿದ್ದಾರೆ. ಈ ವೇಳೆ ಯುವತಿ ‘ಕಾಲಿಗೆ ಬೀಳುತ್ತೇನೆ ನನ್ನನ್ನು ಬಿಟ್ಟು ಬಿಡಿ’ ಎಂದರೂ ಬಿಡದ ಕಾಮುಕರು ಅತ್ಯಾಚಾರ ಮಾಡಿದ್ದಾರೆ. ಅದು ಅಲ್ಲದೇ ವೀಡಿಯೋ ಸಹ ಸೆರೆ ಹಿಡಿದಿದ್ದಾರೆ. ಪ್ರಕರಣ …

Read More »

ಝಮೀರ್ ಅಹ್ಮದ್ ಗೆ ಬಿಜೆಪಿಯ ಒಬ್ಬ ಮಹಾನಾಯಕನ ಬೆಂಬಲ ಇದೆ: ಶಾಸಕ ಯತ್ನಾಳ್

ವಿಜಯಪುರ: ಹಳೇ ಹುಬ್ಬಳ್ಳಿ ದಾಂಧಲೆ ಪ್ರಕರಣದ ಆರೋಪಿಗಳಿಗೆ ಶಾಸಕ ಝಮೀರ್ ಅಹ್ಮದ್ ಅವರು ಆಹಾರದ ಕಿಟ್ ವಿತರಣೆ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಾಸಕ ಝಮೀರ್‌ ನನ್ನು ಒದ್ದು ಒಳಗೆ ಹಾಕಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.   ​’ಝಮೀರ್ ಹಿಂದೂ ವಿರೋಧಿ ಹಾಗೂ ನಮ್ಮ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಾರೆ. ಝಮೀರ್‌ಗೆ ನಮ್ಮ …

Read More »

ಹುಬ್ಬಳ್ಳಿ: ಮೊದಲ ಓಟದಲ್ಲಿಯೇ ಹಳಿತಪ್ಪಿದ ಪುಟಾಣಿ ರೈಲು

ಹುಬ್ಬಳ್ಳಿ: ಇಲ್ಲಿನ ಮಹಾತ್ಮಾಗಾಂಧಿ ಉದ್ಯಾನದಲ್ಲಿ ಶನಿವಾರ ಚಾಲನೆ ನೀಡಲಾದ ಪುಟಾಣಿ ರೈಲು ಮೊದಲ ಓಟದಲ್ಲಿಯೇ ಹಳಿತಪ್ಪಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ರೈಲಿನಲ್ಲಿ ಇದ್ದರು.   ಇಂದಿರಾ ಗಾಜಿನ ಮನೆ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮುಕ್ತಾಯಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಜೋಶಿ ಚಾಲನೆ ನೀಡಿ, ಪುಟಾಣಿ ರೈಲಿನಲ್ಲಿ ಪ್ರಯಾಣಿಸಿದ್ದರು. ಐದು ಬೋಗಿಯಿರುವ ರೈಲಿನ ಮೊದಲ ಬೋಗಿಯಲ್ಲಿ …

Read More »

ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​

ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ಯಶ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಆದರೆ ಆಯ್ಕೆಗಳ ವಿಚಾರದಲ್ಲಿ ಅವರು ತಮ್ಮದೇ ನಿಲುವು ಹೊಂದಿದ್ದಾರೆ.​’ರಾಕಿಂಗ್​ ಸ್ಟಾರ್​’ ಯಶ್ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಯಶ್ (Yash)​ ಜೊತೆ ಕೆಲಸ ಮಾಡಲು ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ಕಾದಿವೆ. ಹಾಗೆಯೇ ಅನೇಕ ಬ್ರ್ಯಾಂಡ್​ಗಳಿಂದಲೂ ಅವರಿಗೆ ಆಫರ್​ ಬರುತ್ತಿದೆ. ಆದರೆ ಅವುಗಳನ್ನು ಒಪ್ಪಿಕೊಳ್ಳುವಲ್ಲಿ …

Read More »

ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್

ಬೆಂಗಳೂರು : ನಗರದ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬೇರೆ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಆಡಳಿತ ಮಂಡಳಿ ಆದೇಶವನ್ನು ಹೊರಡಿಸಿದೆ. ಇತ್ತೀಚೆಗಷ್ಟೇ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲಾಗಿತ್ತು. ಇದೀಗ ಬೈಬಲ್ ವಾರ್ ಮುಂದುವರಿದಿದ್ದು, ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಿ, ಹಿಂದೂ ಮಕ್ಕಳಿಗೆ ಪ್ರವೇಶ ಮಾಡಿಕೊಳ್ಳದಂತೆ ಶಾಲಾ …

Read More »