ಖಾರ್ಕಿವ್ : ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಾರ್ಕಿವ್‌ನಲ್ಲಿ ಬಂದಿಳಿದಿದ್ದು, ಭಾರಿ ದಾಳಿ ನಡೆಸುತ್ತಿವೆ. ಕನಿಷ್ಠ 14 ಮಕ್ಕಳನ್ನು ಒಳಗೊಂಡಂತೆ ಇದುವರೆಗೆ 350 ಕ್ಕೂ ಹೆಚ್ಚು ಉಕ್ರೇನ್ ನಾಗರಿಕರ ಸಾವುನೋವುಗಳು ವರದಿಯಾಗಿವೆ. 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಸೇನಾ ಸಾಮರ್ಥ್ಯ ನಾಶವಾಗಿದೆ ಎಂದು ತಿಳಿದು ಬಂದಿದೆ. ಇದೆ ವೇಳೆ ನಾವು ೭ ದಿನದ ಯುದ್ಧದಲ್ಲಿ ರಷ್ಯಾದ 6,000 ಮಂದಿ ಭದ್ರತಾ ಪಡೆಗಳನ್ನು …
Read More »Monthly Archives: ಮಾರ್ಚ್ 2022
ಮುನ್ಸಿಪಾಲಿಟಿ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಜಯ
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಹತ್ತು ತಿಂಗಳ ನಂತರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಬುಧವಾ ಡಾರ್ಜಿಲಿಂಗ್ ಮುನ್ಸಿಪಾಲಿಟಿಯ 32 ಸ್ಥಾನಗಳ ಪೈಕಿ ಸಾಮಾಜಿಕ ಕಾರ್ಯಕರ್ತ ಅಜೋಯ್ ಎಡ್ವರ್ಡ್ ಅವರ ಸಂಘಟನೆಯಾದ ಹ್ಯಾಮ್ರೊ ಪಾರ್ಟಿ 17 ರಲ್ಲಿ ಮುನ್ನಡೆ ಸಾಧಿಸಿದೆ. 107 ಮುನ್ಸಿಪಾಲಿಟಿ ಗಳಲ್ಲಿ 93 ರಲ್ಲಿ ಗೆಲುವು ಸಾಧಿಸಿದ್ದು, ಪ್ರತಿಪಕ್ಷವನ್ನು ಧೂಳೀಪಟ ಮಾಡಿದೆ ಎಂದು ಎಸ್ ಇಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ …
Read More »ನವೀನ್ ಪಾರ್ಥೀವ ಶರೀರ ತರಲು ಸತತ ಪ್ರಯತ್ನ
ಹಾವೇರಿ : ಉಕ್ರೇನ್ ದೇಶದಲ್ಲಿ ಶೆಲ್ ದಾಳಿಯಿಂದ ಅಮಾಯಕ ನವೀನ್ ಮೃತಪಟ್ಟಿದ್ದು ನಮ್ಮೆಲ್ಲರಿಗೂ ಆಘಾತ ಉಂಟುಮಾಡಿದೆ. ತಂದೆ-ತಾಯಿಗೆ ತೀವ್ರ ಆಘಾತವಾಗಿದ್ದು, ಮೃತದೇಹ ತರಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಇದರೊಂದಿಗೆ ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯರ ಜೀವ ರಕ್ಷಣೆಯೊಂದಿಗೆ ಅವರನ್ನು ದೇಶಕ್ಕೆ ಕರೆತರಲು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಷಿ ಅವರು ಹೇಳಿದರು . ರಾಣೇಬೆನ್ನೂರು ತಾಲೂಕು ಚಳಗೇರಿ ಗ್ರಾಮದಲ್ಲಿ ಬುಧವಾರ ಪಾಲಕರಿಗೆ ಸಾಂತ್ವನ ಹೇಳಿ …
Read More »ಇಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 6 ನೇ ಸುತ್ತಿನ ಮತದಾನ
ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 6 ನೇ ಸುತ್ತಿನ ಮತದಾನ ಇಂದು ನಡೆಯಲಿದೆ.ಒಟ್ಟು 57 ಸ್ಥಾನಗಳಿಗೆ ನಡೆಯಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್‌ನ ಅಜಯ್ ಕುಮಾರ್ ಲಲ್ಲು ಮತ್ತು ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರಂತಹ ರಾಜಕೀಯ ಪ್ರಮುಖರ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ಉಳಿದ ಕ್ಷೇತ್ರಗಳ ಪೈಕಿ 10 ಜಿಲ್ಲೆಗಳಲ್ಲಿ ಹರಡಿರುವ 57 ಕ್ಷೇತ್ರಗಳಿಗೆ ಇಂದು ಮತ್ತು 54 ಕ್ಷೇತ್ರಗಳಿಗೆ ಮಾರ್ಚ್ 10 ರಂದು ಅಂತಿಮ ಹಂತದಲ್ಲಿ …
Read More »ನಾಳೆ ಚಂದ್ರನ ಮೇಲೆ ಅಪ್ಪಳಿಸಲಿದೆ 3 ಟನ್ ತೂಕದ ರಾಕೆಟ್
ನವದೆಹಲಿ: ಮಾ.4ರಂದು ಚಂದ್ರನ ಮೇಲ್ಮೈ ಗೆ 3 ಟನ್ ತೂಕದ ರಾಕೆಟ್ ಒಂದು ಅಪ್ಪಳಿಸಲಿದೆ. ರಾಕೆಟೊಂದರ 2ನೇ ಹಂತದ ಭಾಗ ಬೀಳುತ್ತಿರಬಹುದು, ಇದರ ಪರಿಣಾಮ ಚಂದ್ರನಲ್ಲಿಯ ಶಾಂತಿ ಕದಡಲಿದೆ ಎಂದು ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ಅಭಿಪ್ರಾಯಪಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ, ಚೀನಾ 10 ವರ್ಷದ ಹಿಂದೆ ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದ ನೌಕೆ ಇದಾಗಿರಬಹುದು. ಆದ್ದರಿಂದ ಇದು ಬೀಳುತ್ತಿದೆ ಎನ್ನಲಾಗಿದೆ. ಆದರೆ ಖಚಿತ ಕಾರಣ ಯಾರಿಗೂ ಗೊತ್ತಿಲ್ಲ. ಇದು ಅಪ್ಪಳಿಸಿದ ನಂತರ ಇಸ್ರೋದ …
Read More »ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಎರಡು ಕೋಟಿ ರೂ. ನೆರವು
ಶಿವಮೊಗ್ಗದಲ್ಲಿ ಕೋಮುದ್ವೇಷಕ್ಕೆ ಬಲಿಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬಂದಿದ್ದು, ಈವರೆಗೆ 2 ಕೋಟಿ ರೂಪಾಯಿಗಳಿಗೂ ಅಧಿಕ ನೆರವು ನೀಡಲಾಗಿದೆ ಎಂದು ತಿಳಿದುಬಂದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 10 ಲಕ್ಷ ರೂಪಾಯಿ ನೀಡಿರುವುದು ಸೇರಿದಂತೆ ಹರ್ಷ ಅವರ ಮನೆಗೆ ಭೇಟಿ ನೀಡಿದ್ದ ರಾಜಕಾರಣಿಗಳು, ಮಠಾಧೀಶರು ಹಣದ ನೆರವು ನೀಡಿದ್ದಾರೆ. ಅಲ್ಲದೆ ಹರ್ಷ ತಾಯಿ ಪದ್ಮಾ ಅವರ ಖಾತೆಯ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ …
Read More »ಉಕ್ರೇನ್ ಅಧ್ಯಕ್ಷರನ್ನು ಕೊಲ್ಲಲು ಬಂದಿದ್ದವರ ಹತ್ಯೆ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೊಲ್ಲಲು ಆಗಮಿಸಿದ್ದ ಚೆಚೆನ್ಯಾ ಮೂಲದ ಹಂತಕರ ಗುಂಪೊಂದನ್ನು ಸಂಪೂರ್ಣವಾಗಿ ನಾಶ ಮಾಡಿರುವುದಾಗಿ ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣ ಕೌನ್ಸಿಲ್‌ನ ಮುಖ್ಯಸ್ಥರಾದ ಒಲೆಕ್ಸಿಯ್ ಡ್ಯನಿಲೊವ್ ತಿಳಿಸಿದ್ದಾರೆ. ಉಕ್ರೇನ್‌ನ ರಾಷ್ಟ್ರೀಯ ಟೆಲಿವಿಶನ್ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ರಷ್ಯಾ ಗುಪ್ತಚರ ಇಲಾಖೆಯಲ್ಲಿರುವ, ಯುದ್ಧ ಮಾಡುವ ಮನಸ್ಸಿಲ್ಲದ ಅಧಿಕಾರಿಗಳು ಉಕ್ರೇನ್‌ನ ಅಧಿಕಾರಿಗಳಿಗೆ ಚೆಚೆನ್ಯಾದಿಂದ ಬಂದಿದ್ದ ಈ ಹಂತಕರ ಗುಂಪಿನ ಬಗ್ಗೆ ಮಾಹಿತಿ …
Read More »ನಾಳೆ ಮಧ್ಯಾಹ್ನ 12.30 ಕ್ಕೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದು, ಅವರು ತಮ್ಮ ಮೊದಲ ಬಜೆಟ್ ನಲ್ಲಿ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಮಾರ್ಚ್ 4ರ ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಬಜೆಟ್ 2022-23 ವಿಧಾನಮಂಡಲದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಲಿದ್ದಾರೆ.ಈ ಬಜೆಟ್ ನಲ್ಲಿ ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸೇರಿದಂತೆ …
Read More »ನೀಟ್ ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣಶಾಸನ: H.D.K.
ನೀಟ್ ವ್ಯವಸ್ಥೆಯಿಂದ ಬಡ, ಮಧ್ಯಮ ವರ್ಗ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ವೈದ್ಯ ಶಿಕ್ಷಣದ ಕನಸು ನುಚ್ಚುನೂರು ಆಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಾವೇರಿ ಮೂಲದ ನವೀನ್ ಉಕ್ರೇನ್‍ನಲ್ಲಿ ಸಾವನ್ನಪ್ಪಿರುವ ಕುರಿತು ಸರಣಿ ಟ್ವೀಟ್ ಮೂಲಕ ನೀಟ್ ವಿರುದ್ಧ ಸಿಡಿದೆದ್ದಿರುವ ಮಾಜಿ ಸಿಎಂ ಕುಮಾರಸ್ವಾಮಿ ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ ವಿದ್ಯಾರ್ಥಿಗಳು ಮತ್ತು ಪೆÇೀಷಕರ ಪಾಲಿಗೆ …
Read More »ಉತ್ತರಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ಧಾರೂಢರ ಮಹಾರಥೋತ್ಸವವು ಬುಧವಾರ ಸಂಜೆ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿ, ಸಡಗರ, ಸಂಭ್ರಮದಿಂದ ನಡೆಯಿತು
ಉತ್ತರಕರ್ನಾಟಕದ ಪ್ರಸಿದ್ಧ ಶ್ರೀ ಸಿದ್ಧಾರೂಢರ ಮಹಾರಥೋತ್ಸವವು ಬುಧವಾರ ಸಂಜೆ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿ, ಸಡಗರ, ಸಂಭ್ರಮದಿಂದ ನಡೆಯಿತು. ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಈ ಮಹಾರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಅನುಭವಿಸಿದರು. ಸಿದ್ಧಾರೂಢರ ಮಹಾರಥೋತ್ಸಕ್ಕೆ ಉತತ್ತಿ, ಬಾಳೆ, ಬೇಡಿದ ವರ್ ಸಿದ್ದಿಯಾಗಲಿ ಎಂದು ಬೇಡಿಕೊಂಡು ಎಸೆದರು. ಮಹಾರಥೋತ್ಸವದಲ್ಲಿ ಧಾರವಾಡ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ ಸೇರಿ ರಾಜ್ಯದ ವಿವಿಧೆಡೆಯ ಭಕ್ತರು ಮಾತ್ರವಲ್ಲದೆ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಂದಲೂ ಭಕ್ತಸಾಗರವೇ …
Read More »
Laxmi News 24×7