ಬೆಂಗಳೂರು : ರಾಜ್ಯದ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ವಿಪರೀತ ಎನ್ನುವ ರೀತಿ ತಲೆಯೆತ್ತಿವೆ. ಇದರಿಂದಾಗಿ ಸುಮಾರು 19,291 ಎಕರೆ ಭೂಮಿ ದುರ್ಬಳಕೆಯಾಗಿದ್ದು, ಈ ಅಕ್ರಮದಿಂದಾಗಿ ₹ 19,622 ಕೋಟಿ ಮೊತ್ತದ ತೆರಿಗೆ ವಂಚನೆ ನಡೆದಿದೆ. ವಿಧಾನಮಂಡಲದಲ್ಲಿ ಮಾರ್ಚ್ 4ರಂದು ಮಂಡಿಸಿದ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2021-22’ರಲ್ಲಿ ಈ ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ವಿವರಗಳಿವೆ. ಉದ್ಯಾನಗಳಿಗಾಗಿ ಮೀಸಲಿಟ್ಟಿದ್ದ 1,929 ಎಕರೆ ಹಾಗೂ ರಸ್ತೆಗಾಗಿ ಮೀಸಲಿಟ್ಟಿದ್ದ 964 ಎಕರೆ …
Read More »Monthly Archives: ಮಾರ್ಚ್ 2022
‘ಪಂಚಮಸಾಲಿ ಮೀಸಲಾತಿ: ಅವಸರ ಪಟ್ಟರೆ ಸಂಕಷ್ಟ’: ವಚನಾನಂದ ಸ್ವಾಮೀಜಿ
ಹರಿಹರ : ‘ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯದವರಿಗೆ ನ್ಯಾಯಯುತವಾಗಿ 2ಎ ಮೀಸಲಾತಿ ದೊರೆಯಬೇಕು. ಆದರೆ ಮೀಸಲಾತಿ ದೊರಕಿಸಲು ಅವಸರ ಪಟ್ಟರೆ ಸಂಕಷ್ಟ ಎದುರಾಗಬಹುದು’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಭಾನುವಾರ ನಡೆದ ರಾಜ್ಯ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಸಮಾಜಕ್ಕೆ 2ಎ …
Read More »ಬೊಮ್ಮಾಯಿ ವಿರುದ್ಧ ಡಿಕೆಶಿ ಕಿಡಿ
ಬೆಂಗಳೂರು: ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್, ಮಾಮೂಲಿ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ. ಪೊಲೀಸ್ ಇಲಾಖೆಯ ‘ವರ್ಗಾವಣೆ ದಂಧೆ’ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ‘ಕಾಸು ಕೊಟ್ಟರಷ್ಟೇ ಪೊಲೀಸ್ ಬಾಸ್’ ವರದಿಯನ್ನು ಉಲ್ಲೇಖಿಸಿ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. ‘ಅಭಿನಂದನೆಗಳು ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅದರಲ್ಲೂ ಗೃಹ ಇಲಾಖೆಯ ದಕ್ಷತೆ …
Read More »ಮಾ.7; ಜಾಗತಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ; ಭಾರತದಲ್ಲಿ ಇಂಧನ ದರವೆಷ್ಟು?
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 100 ಯುಎಸ್ ಡಾಲರ್ ಗಡಿ ದಾಟಿದೆ. ಇಂದು ಮತ್ತೆ ಸಾರ್ವಕಾಲಿಕ ಏರಿಕೆ ಕಂಡಿದೆ. ಈ ನಡುವೆ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂದು ಸೋಮವಾರ (ಮಾರ್ಚ್, 7) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂದು ಕೂಡ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ದೇಶದ …
Read More »ಯಶಸ್ವಿನಿ ಯೋಜನೆ’ ಮರು ಜಾರಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದರಾ ಸಿಎಂ ಬೊಮ್ಮಾಯಿ?
ಬೆಂಗಳೂರು: ಮುಂಬರಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಕಾರ್ಯಕ್ರಮಗಳ ಮೊರೆ ಹೋಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಯಶಸ್ವಿನಿ ಯೋಜನೆ’ ಮರು ಜಾರಿ ಮೂಲಕ ಜಾತಿ, ಧರ್ಮಗಳನ್ನು ಮೀರಿ ಅರ್ಧ ಕೋಟಿ ಜನರ ಮನ ತಲುಪಲು ಮುಂದಾಗಿದ್ದಾರೆ. ರಾಜ್ಯದಲ್ಲಿನ 30 ಜಿಲ್ಲೆಗಳಲ್ಲಿರುವ ಸಹಕಾರಿ ಸಂಘಗಳು, ಸೊಸೈಟಿಗಳು, ಪತ್ರಕರ್ತರ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್, ಸ್ತ್ರೀ ಶಕ್ತಿ ಸಂಘ, ಸಾಂಸ್ಕೃತಿಕ ಸಹಕಾರ ಸೊಸೈಟಿಗಳ 43.42 ಲಕ್ಷ ಮಂದಿ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದರು. …
Read More »ಉಕ್ರೇನ್ ಶರಣಾಗುವವರೆಗೂ ರಷ್ಯಾ ದಾಳಿ ಮುಂದುವರೆಸಲಿದೆ – ನ್ಯಾಟೋ
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಇಂದಿಗೆ 11ನೇ ದಿನ. ಕಳೆದ 10 ದಿನಗಳಲ್ಲಿ ರಷ್ಯಾ, ಉಕ್ರೇನ್ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡುವ ಮೂಲಕ ವಿಧ್ವಂಸಕ ಕೃತ್ಯ ಎಸಗಿದೆ. ಪುಟಿನ್ ಅವರ ಆಕ್ರಮಣವನ್ನು ಗಮನದಲ್ಲಿಟ್ಟುಕೊಂಡು, ಉಕ್ರೇನ್ ತಾವು ಶರಣಾಗುವವರೆಗೆ ಮುಂದಿನ ದಿನಗಳಲ್ಲಿ ರಷ್ಯಾ ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿಯನ್ನು ಮುಂದುವರೆಸಲಿದೆ ಎಂದು ನ್ಯಾಟೋ ಮತ್ತು ಯುಎಸ್‌ನಂತಹ ದೇಶಗಳು ಹೇಳಿಕೆ ನೀಡಿವೆ. ಉಕ್ರೇನ್ ಮೇಲಿನ ದಾಳಿಯ ನಂತರ, ವಿಶ್ವದ …
Read More »ಕೋವಿಡ್ ತೀವ್ರತೆ ಇಳಿಕೆ: ಸೆರೋ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆ ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯು ಅಪ್ಪಳಿಸಿ ಇದೀಗ ಅದರ ತೀವ್ರತೆ ಗಣನೀಯವಾಗಿ ಕುಸಿದಿದೆ. ಇದರಿಂದ ರಾಜ್ಯದಲ್ಲಿ ಒಮಿಕ್ರಾನ್ ದಾಳಿ ಬಳಿಕ ಎಷ್ಟು ಜನರಿಗೆ ಸೋಂಕು ವ್ಯಾಪಿಸಿದೆ ಎಂಬುದನ್ನು ತಿಳಿಯಲು ಸರ್ಕಾರ ಸೆರೋ ಸಮೀಕ್ಷೆ ನಡೆಸಲು ಮುಂದಾಗಿದೆ. ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ಉಲ್ಬಣಗೊಂಡು ಜನವರಿ ಮೊದಲ ವಾರದಲ್ಲಿ ಪಾಸಿಟಿವ್ ರೇಟ್ ಶೇ.5ರಷ್ಟು ದಾಟಿತ್ತು. ಅಲ್ಲಿಂದ ಹೆಚ್ಚುತ್ತಾ ಗರಿಷ್ಠ ಶೇ.32.95 ರಷ್ಟು ತಲುಪಿತ್ತು. ಇದಾದ ಬಳಿಕ ದಿನೇ ದಿನೆ ಇಳಿಕೆ ದಾರಿ …
Read More »ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ: ಮುನ್ನೋಟ ಇಲ್ಲದ ಬಜೆಟ್: ಸಿದ್ದರಾಮಯ್ಯ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಪ್ರಶ್ನೋತ್ತರಕ್ಕೆ ಅವಕಾಶ ನೀಡಿದರು. ಇದಾದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬಜೆಟ್ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರ ಏನೇನು ಮಾಡಿದೆ ಎಂಬುದನ್ನು ಎಲ್ಲೂ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದು ಪ್ರತಿ …
Read More »ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಎಂದ ಸಿದ್ದರಾಮಯ್ಯ
ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಹೇಳಿದ್ದಾರೆ. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದು ತಿಳಿಸಿದರು. ಆಗ ಸಿದ್ದರಾಮಯ್ಯ ಅವರು, ಸ್ಪೀಕರ್‌ಗೆ ವೆರಿ ಗುಡ್.. ಗುಡ್ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ನೀವು ಗುಡ್ ಅನ್ನಲೇಬೇಕು ಅಲ್ಲವಾ ಎಂದು ತಮಾಷೆ ಮಾಡಿದರು. ಇದಕ್ಕೆ …
Read More »ಒಂದು ಗ್ರಾಂ ಚಿನ್ನ ಆರು ಸಾವಿರ ರೂಪಾಯಿ ಏರಿಕೆಯಾಗುವ ಸಾಧ್ಯತೆ ಒಂದು ಗ್ರಾಂ ಚಿನ್ನ ಆರು ಸಾವಿರ ರೂಪಾಯಿ ಏರಿಕೆಯಾಗುವ ಸಾಧ್ಯತೆ
ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ. ಇಂದಿನ ಮಾರುಕಟ್ಟೆಯ ಮಾಹಿತಿ ಪ್ರಕಾರ ಹತ್ತು ಗ್ರಾಂ ಚಿನ್ನಕ್ಕೆ ಒಂದೇ ದಿನದಲ್ಲಿ ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ. ಅಲ್ಲದೇ ಬೆಳ್ಳಿ ಕೂಡ ಕೆಜಿಗೆ 1,800 ರೂಪಾಯಿ ಏರಿಕೆ ಕಂಡಿದೆ. ಮುಂದಿನ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇನ್ನಷ್ಟು ಏರಿಕೆಯಾಗಲಿದೆ. ಒಂದು ಗ್ರಾಂ ಚಿನ್ನ ಆರು ಸಾವಿರ ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ದು, ಹತ್ತು …
Read More »
Laxmi News 24×7