ಚಂಡೀಗಢ(ಪಂಜಾಬ್): ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಮತ್ತು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಗವಂತ್ ಮಾನ್ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಕಾಂಗ್ರೆಸ್ ಶಾಸಕ ದಲ್ಬೀರ್ ಗೋಲ್ಡಿ ಸ್ಪರ್ಧಿಸಿದ್ದರು. ಈ ಮೊದಲು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಭಗವಂತ್ ಮಾನ್, ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅವರು ದೇಶದಲ್ಲಿ ಆಪ್ ಪಕ್ಷದ ಪರವಾಗಿ ಸಂಸತ್ ಸ್ಥಾನವನ್ನು ಗೆದ್ದ ಏಕೈಕ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದರು.ಈ …
Read More »Monthly Archives: ಮಾರ್ಚ್ 2022
ಪಂಜಾಬ್ನಲ್ಲೊಬ್ಬ ಸಿಧು, ರಾಜ್ಯದಲ್ಲೊಬ್ಬ ಸಿದ್ದು – ಇಲ್ಲೂ ಕಾಂಗ್ರೆಸ್ ಅವನತಿಯಾಗುತ್ತೆ: ಜಗದೀಶ್ ಶೆಟ್ಟರ್ ಲೇವಡಿ
ಬೆಂಗಳೂರು: ಪಂಜಾಬ್ನಲ್ಲಿ ಒಬ್ಬ ಸಿದ್ದು, ರಾಜ್ಯದಲ್ಲಿ ಒಬ್ಬ ಸಿದ್ದು ಇದ್ದಾರೆ. ಪಂಜಾಬ್ ಸಿಧುರಿಂದ ಅಲ್ಲಿ ಕಾಂಗ್ರೆಸ್ ನಾಶವಾಗಿದೆ. ಇಲ್ಲಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ರಿಂದ ಕಾಂಗ್ರೆಸ್ಗೆ ಇತಿಶ್ರೀ ಬೀಳಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಟಾಂಗ್ ನೀಡಿದರು. ವಿಧಾನಸೌಧದಲ್ಲಿ ಪಂಚ ರಾಜ್ಯಗಳ ಫಲಿತಾಂಶ ಬಗ್ಗೆ ಮಾತನಾಡಿದ ಅವರು, ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿದೆ. ಚುನಾವಣಾ ಸಮೀಕ್ಷೆ ಕೂಡ ನಿಜವಾಗಿದೆ. ಉತ್ತರಾಖಂಡ್‌ನಲ್ಲಿ ಅಭೂತಪೂರ್ವ ಫಲಿತಾಂಶ ಬಂದಿದೆ. 4 ರಾಜ್ಯಗಳ ಮತದಾರರಿಗೆ, …
Read More »ಲಂವವನ್ನು ಪೇಟಿಯಮ್ ಮಾಡಿಸಿಕೊಂಡ ಇಬ್ಬರು ಎಸಿಬಿ ಬಲೆಗೆ
ಬೆಳಗಾವಿ: ಈಗ ಏನಿದ್ದರೂ ಡಿಜಿಟಲ್ ಪರ್ವ ಹೀಗಾಗಿ ಈಗ ಕ್ಯಾಶ್ ಲೆಸ್ ರೋಗ ಬ್ರಷ್ಟಾಚಾರದ ಕ್ಷೇತ್ರಕ್ಕೂ ಹರಡಿದ್ದು ,ಲಂವವನ್ನು ಪೇಟಿಯಮ್ ಮಾಡಿಸಿಕೊಂಡ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅನ್ನೋದು ವಿಶೇಷ ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು ರೂ.4,000 ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಬುಧವಾರ …
Read More »ಒಬ್ಬ ಹುಡ್ಗಿಗಾಗಿ ಇಬ್ಬರ ಫೈಟ್ – ನಡುರಾತ್ರಿ ಲವ್‍ಗಾಗಿ ನಡೀತು ಮರ್ಡರ್
ಬೆಂಗಳೂರು: ಒಂದೇ ಹುಡುಗಿಯ ಮೇಲೆ ಇಬ್ಬರು ಹುಡುಗರು ಕಣ್ ಹಾಕಿದ್ರು. ಆ ಹುಡುಗಿಯನ್ನ ಮನವೊಲಿಸಿಕೊಳ್ಳೋ ಪೈಪೋಟಿಯಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಡೆದಿದೆ. ಕೆಜಿ ಹಳ್ಳಿ ನಿವಾಸಿ ಉಸ್ಮಾನ್ ಹಾಗೂ ಮೋಹಿನ್ ಇಬ್ಬರೂ ಅದೇ ಏರಿಯಾದ ಹುಡುಗಿಯನ್ನು ಇಷ್ಟಪಡುತ್ತಿದ್ದರಂತೆ. ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೀತಾನೇ ಇತ್ತು. ಇಬ್ಬರು ಸಿನಿಮಾ ಸ್ಟೈಲ್‍ನಲ್ಲಿ ಒಬ್ಬರಿಗೊಬ್ಬರು …
Read More »ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ
ಲಕ್ನೋ: ಉತ್ತರ ಪ್ರದೇಶ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು ಆರಂಭದ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಬಿಜೆಪಿ 25, ಎಸ್‌ಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಪಡೆದರೂ ಮಧ್ಯಾಹ್ನದ ವೇಳೆ ಫಲಿತಾಂಶ ಸ್ಪಷ್ಟವಾಗಲಿದೆ. 2024ರ ಲೋಕಸಭಾ ಚುನಾವಣೆ ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಲಿದೆ. ಚುನಾವಣೋತ್ತರ ಸಮೀಕ್ಷೆಗಳು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು …
Read More »ಪರಿಷತ್‌ನಲ್ಲಿ ನಿವೃತ್ತ ಶಾಸಕರ ಸಂಕಷ್ಟ ವಿವರಿಸಿದ ಎಚ್.ವಿಶ್ವನಾಥ್
ಬೆಂಗಳೂರು: ವಿಧಾನಪರಿಷತ್ನಲ್ಲಿ ಶಾಸಕರಾಗಿ ನಿವೃತ್ತಿ ಹೊಂದುವ ಪ್ರಾಮಾಣಿಕ ರಾಜಕಾರಣಿಗಳಿಗೆ ಎದುರಾಗುವ ಸಮಸ್ಯೆಯನ್ನು ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಸವಿಸ್ತಾರವಾಗಿ ವಿವರಿಸಿದರು. ವಿಧಾನಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಶಾಸಕರ ವೇತನ ವಿಚಾರ ಮಾತನಾಡಿದಾಗ, ವಿಶ್ವನಾಥ್ ಹಳೆಯ ಘಟನೆ ವಿವರಿಸಿದರು. 1978ರಲ್ಲಿ ನಮ್ಮ ಗೌರವಧನ 600 ರೂ. ಇತ್ತು. ಪ್ರತಿದಿನ ಹಾಜರಾಗಿ ಸಹಿ ಹಾಕಿದರೆ 50 ರೂ.ಕೊಡ್ತಿದ್ದರು. ನಾನು ಶಾಸಕನಾಗಿದ್ದಾಗ ಒಬ್ಬ ಹುಡುಗ ಕಾರು ತೊಳೀತಿದ್ದ. ಒಮ್ಮೆ ಹೊಡೆದುಬಿಟ್ಟೆ. ದಿನಕ್ಕೆ ಎರಡು ರೂ. ಕೇಳಿದ್ದಕ್ಕೆ …
Read More »ಶೀಘ್ರದಲ್ಲೇ ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮರಾ ಅಳವಡಿಕೆ: ಜಿಲ್ಲಾಧಿಕಾರಿ
ಕಡಬ: ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಅವ್ಯವಹಾರಗಳ ಸಮಗ್ರ ತನಿಖೆ ನಡೆಸುತ್ತೇನೆ, ಕೇವಲ ಎಚ್ಚರಿಕೆ ಕೊಟ್ಟು ಅಲ್ಲಿಗೆ ಬಿಡುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ. ಇಂದು ಕಡಬ ತಾಲೂಕು ಕಛೇರಿಗೆ ಭೇಟಿ ನೀಡಿದ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಡಬ ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಹಾಗೂ ಪ್ಲಾಟಿಂಗ್ಗೆ ಸಂಬಂಧಪಟ್ಟ ಫೈಲ್ಗಳ ವಿಲೇವಾರಿಯಲ್ಲಿ ಅವ್ಯವಹಾರಗಳು ನಡೆಯುತ್ತಿದೆ …
Read More »ಗಂಗಾವತಿಯ ಇಸ್ಪೀಟ್ ಕ್ಲಬ್ಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ
ಗಂಗಾವತಿ/ಬೆಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಅಂದರ್-ಬಾಹರ್, ಇಸ್ಪೀಟ್ ಕ್ಲಬ್ ಮತ್ತು ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿಯ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಿತು. ಮಧ್ಯಾಹ್ನದ ಬಳಿಕ ಸದನದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ಲಭಿಸಿರುವ ದಾಖಲೆ ಅನ್ವಯ ಈ ಬಗ್ಗೆ ಪ್ರಸ್ತಾಪಿಸಿ ಸ್ಪೀಕರ್ ಗಮನಕ್ಕೆ ತರಲು ಯತ್ನಿಸಿದರು. ಗಂಗಾವತಿಯಲ್ಲಿ 20ಕ್ಕೂ ಹೆಚ್ಚು ಇಸ್ಪೀಟ್ ಕ್ಲಬ್ಗಳಿವೆ. ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು …
Read More »ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ
ಮತ ಎಣಿಕೆ ಆರಂಭ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭ ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡುತ್ತಿರುವ ಸಿಬ್ಬಂದಿ ಉತ್ತರ ಪ್ರದೇಶದ 75 ಕೇಂದ್ರಗಳಲ್ಲಿ ಎಣಿಕೆ ಪ್ರಕ್ರಿಯೆ ಶುರು 07:46 March 10 ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಗೆಲುವು ಖಚಿತ – ರಾವತ್ ಉತ್ತರಾಖಂಡ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತೆ 2-3 ಗಂಟೆಯಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಉತ್ತರಾಖಂಡ್ ಜನರ ಮೇಲೆ ನನಗೆ ನಂಬಿಕೆ ಇದೆ ಕಾಂಗ್ರೆಸ್ 48 ಸ್ಥಾನ ಪಡೆಯುವುದು …
Read More »ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ : 202 ಶಾಲೆಗಳು, 1500 ಮನೆಗಳು ಧ್ವಂಸ
ರಷ್ಯಾದ ಆಕ್ರಮಣಕ್ಕೆ ಉಕ್ರೇನ್ ತತ್ತರಿಸಿ ಕಹೋಗಿದ್ದು, 10 ದಿನಗಳ ನಿರಂತರ ದಾಳಿಯಿಂದ ಸುಮಾರು 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸಗೊಂಡಿವೆ. ಈ ಬಗ್ಗೆ ವರದಿ ಮಾಡಿದ ಯುರೋಮೇಡನ್ ಪ್ರೆಸ್, ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು. 1500 ವಸತಿ ಕಟ್ಟಡಗಳು ನಾಶವಾಗಿವೆ. ಇನ್ನು ಸುಮಾರು 900 ಮನೆಗಳಿಗೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಉಕ್ರೇನ್ ಅಧ್ಯಕ್ಷರ ಸಹಾಯಕ ಮೈಖೈಲೊ ಪೊಡೊಲ್ಯಕ್ …
Read More »
Laxmi News 24×7