ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಂತ್ರ, ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಇದಕ್ಕೆ ಅನುಗುಣವಾಗಿ ಸಂಪನ್ಮೂಲ ಕ್ರೂಢೀಕರಣವನ್ನು ಗಮನಿಸಿ, ಮುಂದಿನ ವಾರ ಹೆಚ್ಚುವರಿ ಬಜೆಟ್ ( Supplementary Budget ) ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ತೆರಿಗೆ ವಸೂಲಾತಿ ಗಣನೀಯವಾಗಿ ಹೆಚ್ಚಿದೆ. ಆಧಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಆದ್ದರಿಂದ ಈಗಾಗಲೇ ಘೋಷಿಸಿರುವ ಬಜೆಟ್ ಗಾತ್ರ ಕುಗ್ಗುವ ಭೀತಿ …
Read More »Monthly Archives: ಮಾರ್ಚ್ 2022
ಪೊಲೀಸರಿಂದ ಅನ್ಯಾಯವಾಗಿದೆ ಎಂದು ಸಿಎಂ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ!
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ವೃದ್ಧನೊಬ್ಬ, ತನಗೆ ಪೊಲೀಸರಿಂದ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಲ್ಲದೇ ಆತ್ಮಹತ್ಯೆಗೂ ಯತ್ನಿಸಿದ ಘಟನೆ ಸಿಎಂ ನಿವಾಸ ಆರ್.ಟಿ.ನಗರದಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ನಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಬಳಿ ವೃದ್ಧ ಕಣ್ಣೀರಿಟ್ಟಿದ್ದಾನೆ. ಪೊಲೀಸರು ಕೆಲವರೊಂದಿಗೆ ಸೇರಿ ಸೈಟ್ ವಿಚಾರವಾಗಿ ತನಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ನ್ಯಾಯ …
Read More »ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ
ಕರ್ನಾಟಕ ಸರಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಟ್ಟ ಬೆನ್ನಲ್ಲೇ, ಸರಕಾರದ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿದೆ. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ‘ ಸಹಕಾರ ರತ್ನ’ ಪ್ರಶಸ್ತಿಯನ್ನು ಪುನೀತ್ ಅವರಿಗೆ ಘೋಷಿಸಲಾಗಿದ್ದು, ನಂದಿನಿ ಹಾಲು ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತು ನೀಡಿರುವ ಸೇವೆಯನ್ನು ಪರಿಗಣಿಸಲಾಗಿದೆ. ಈ ಕುರಿತು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್, ‘ನಟ ಪುನೀತ್ ರಾಜ್ ಕುಮಾರ್ ಅವರು ನಂದಿನಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. …
Read More »ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ.
ಚಿಕ್ಕೊಡಿ: ಹೋಳಿ ಹಬ್ಬದ ನಿಮಿತ್ತ ಬಣ್ಣ ಆಡುವ ನೆಪದಲ್ಲಿ ಕೆಲ ಯುವಕರು ವಸೂಲಿ ದಂಧೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ವಸೂಲಿಗೆ ಇಳಿದಿರುವ ಖದೀಮರು ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡುತ್ತಿದ್ದರು. ಪ್ರತಿ ವಾಹನದಿಂದ 30 ರಿಂದ 50 ರೂಪಾಯಿವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದರೇ ಮಾತ್ರ ಮುಂದೆ …
Read More »ಭೂ ಸರ್ವೆ ಮಾಡುವ ಅಧಿಕಾರ ತಹಶಿಲ್ದಾರ್‌ಗಿದೆʼ : ಹೈಕೋರ್ಟ್
ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ(Municipal Corporation Coverage) ಬರುವ ಭೂಮಿಯ ಸರ್ವೆ(land Survey) ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್(Tehsildar)ಗಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್ ಅನ್ನೋರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ‘ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌ಗಿದೆ’ ಎಂದಿದೆ. ‘ಕಾಯಿದೆಯ …
Read More »ಪೊಲೀಸರ ಗಮನ ಬೇರೆಡೆ ಸೆಳೆದು ಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ
ಗಲಾಟೆ, ಜಾತಿನಿಂದನೆ ಸೇರಿದಂತೆ ಒಟ್ಟು 6 ಪ್ರಕರಣದಲ್ಲಿ ಆತ ಭಾಗಿಯಾಗಿದ್ದ. ಇದೀಗ ಜೈಲು ಸೇರಿ 15 ದಿನಗಳಲ್ಲೇ ಆರೋಪಿ ಪರಾರಿ ಆಗಿದ್ದಾನೆ. ಪೊಲೀಸರ ಗಮನ ಬೇರೆಡೆ ಸೆಳೆದು ತಪ್ಪಿಸಿಕೊಂಡಿದ್ದಾನೆ.ಬೆಳಗಾವಿ: ವಿಚಾರಣಾಧೀನ ಖೈದಿ ಒಬ್ಬ ಕಾರಾಗೃಹದಿಂದಲೇ ಪರಾರಿ ಆದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಾರಾಗೃಹದಲ್ಲಿ ನಡೆದಿದೆ. ಖೈದಿ ಖಾದಿರಸಾಬ್ ರಾಜೇಖಾನ್ (34) ಎಂಬಾತ ಜೈಲಿನಿಂದಲೇ ಪರಾರಿ ಆಗಿದ್ದಾನೆ. ಜೈಲು ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸಬ್ ಜೈಲಿನ ಮುಖ್ಯ ದ್ವಾರದಿಂದಲೇ ಆರೋಪಿ …
Read More »ರೈಲ್ವೆ ಎಂಜಿನ್ ನಲ್ಲಿ ತಾಂತ್ರಿಕ ದೋಷ: ನೆಲಮಂಗಲ ಬಳಿ ಎರಡು ಗಂಟೆಗೂ ಅಧಿಕ ಕಾಲ ನಿಂತ ಜನ ಶತಾಬ್ದಿ ಎಕ್ಸ್‌ಪ್ರೆಸ್
ಬೆಂಗಳೂರು: ಸುಮಾರು 2 ಸಾವಿರ ಪ್ರಯಾಣಿಕರಿದ್ದ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ನಿನ್ನೆ ಗುರುವಾರ ಬೆಳಗ್ಗೆ 6.40 ರ ಸುಮಾರಿಗೆ ನೆಲಮಂಗಲದ ಗೋಲಹಳ್ಳಿ ಮತ್ತು ದೊಡ್ಡಬೆಲೆ ರೈಲು ನಿಲ್ದಾಣಗಳ ನಡುವೆ ಎಂಜಿನ್ ಕೆಟ್ಟುಹೋಗಿ ನಿಂತಿತು. ನಂತರ ಡೀಸೆಲ್ ಲೊಕೊವನ್ನು ಬದಲಾಯಿಸಿ ರೈಲು ಕೊನೆಗೆ 2.20 ಗಂಟೆ ತಡವಾಗಿ ಹೊರಟಿತು. ಡೀಸೆಲ್ ಎಂಜಿನ್ ರೈಲು ಸಂಖ್ಯೆ 12079ರಲ್ಲಿ ನಿನ್ನೆ ದೋಷ ಕಂಡುಬಂದು ಲೊಕೊ-ಪೈಲಟ್‌ನ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಸ್ಟಾರ್ಟ್ ಆಗಲೇ ಇಲ್ಲ. ಎರಡು …
Read More »ನಾಳೆಯಿಂದ ಎರಡು ದಿನ ಜಮ್ಮು ಪ್ರವಾಸದಲ್ಲಿ ಅಮಿತ್ ಶಾ
ಶ್ರೀನಗರ(ಜಮ್ಮು): ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನಗಳ ಕಾಲ ಜಮ್ಮು ಪ್ರವಾಸ ಕೈಗೊಳ್ಳಲಿದ್ದು, ಭದ್ರತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಸಶಸ್ತ್ರ ಪಡೆ, ಕಾಶ್ಮೀರ ಪೊಲೀಸ್, ಗುಪ್ತಚರ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಅಲ್ಲಿನ ಭದ್ರತಾ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಿರುವ ಅಮಿತ್ ಶಾ, ಮಾರ್ಚ್ 19ರಂದು ಜಮ್ಮುವಿನಲ್ಲಿ ಆಯೋಜನೆಗೊಂಡಿರುವ ಸಿಆರ್ಪಿಎಫ್ನ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ …
Read More »ಗಂಡ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ ವೈದ್ಯೆಯಾಗಿರುವ ಹೆಂಡತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್(ತೆಲಂಗಾಣ): ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪತಿ-ಪತ್ನಿ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಆದರೆ, ಗಂಡ ವರದಕ್ಷಿಣೆಗಾಗಿ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ನೊಂದ ಪತ್ನಿ ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ನೀಡಿರುವ …
Read More »ಪೊಲೀಸ್ ಕಾನ್ಸ್ಟೇಬಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಗದಗ: ಕಿರುಕುಳಕ್ಕೆ ಬೇಸತ್ತು ಪೊಲೀಸ್ ಕಾನ್ಸ್ಟೇಬಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರು, ಐವರು ಪೊಲೀಸರು ಸೇರಿದಂತೆ 9 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿದ್ದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅರ್ಜುನ್ ಪಾಟೀಲ್ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಆರೇಳು ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ದುಷ್ಕರ್ಮಿಗಳ ಕಿರುಕುಳ ಹೆಚ್ಚಾಗಿದ್ದು, …
Read More »
Laxmi News 24×7