Breaking News

Monthly Archives: ಮಾರ್ಚ್ 2022

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು: ಆಯಕ್ಸಿಡೆಂಟ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಿಂಬು ಒಡೆತನದ ಕಾರು ಅಪಘಾತಕ್ಕೆ ಒಳಗಾಗಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಸಿಂಬು ತಂದೆ ಟಿ. ರಾಜೇಂದರ್​ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ಸೆಲೆಬ್ರಿಟಿಗಳ ಕಾರು ಅಪಘಾತಕ್ಕೆ ಜನಸಾಮಾನ್ಯರು ಬಲಿ ಆದ ಘಟನೆಗಳು ಪದೇಪದೇ ಮರುಕಳಿಸುತ್ತಲೇ ಇವೆ. ಈಗ ಖ್ಯಾತ ಕಾಲಿವುಡ್​ ನಟ ಸಿಂಬು (Actor Simbu) ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮಾ.18ರಂದು ಈ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದಲ್ಲಿ ಸಿಂಬು (Silambarasan) ಅವರು ತುಂಬ ಫೇಮಸ್​ ಆಗಿದ್ದಾರೆ. ಹಲವು …

Read More »

ಹರ್ಷ್ಯ ಕೊಲೆ ಆರೋಪಿಗಳು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

ಶಿವಮೊಗ್ಗ: ಬಂಜರಗದಳ ಹರ್ಷ ಕೊಲೆ ಪ್ರಕರಣಕ್ಕೆ ಸಂಭಂದಿಸಿದ್ದಂತೆ ತನಿಕೆ ಚುರುಕುಗೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈ ಪ್ರಕರಣವು ಯುಎಪಿಎ ಆಯಕ್ಟ್ ಅಳವಡಿಕೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್​ಐಎಗೆ ಶಿಫ್ಟ್ ಮಾಡಲಾಗಿದ್ದು, ಈಗಾಗಲೇ ತನಿಖೆಯ ಪ್ರಥಮ ಹಂತವೂ ಆರಂಭಗೊಂಡಿದೆ. ಹಾಗೇ ಎನ್‌ಐಎ ವಿಶೇಷ ನ್ಯಾಯಾಲಯದ ಮೂಲಕ ಪ್ರಕರಣದ ಆರೋಪಿಗಳನ್ನು ಬೆಂಗಳೂರು ಜೈಲಿಗೆ ಸ್ಥಳಾಂತರ ಮಾಡಿಸಿಕೊಳ್ಳಲಾಗುತ್ತಿದೆ. ಕೊಲೆ ಆರೋಪಿಗಳ ಪೈಕಿ ಮೂರು ಜನ ಮೈಸೂರು, ನಾಲ್ವರು ಬಳ್ಳಾರಿ, ಉಳಿದ …

Read More »

ಜಮೀರ್ ಒಂದು ಮಾತು ಹೇಳ್ತೀನಿ, ಮುಂದೆ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತದೆ : ಸ್ಪೀಕರ್

ಬೆಂಗಳೂರು: ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುವಾಗ ಆರ್‌ಎಸ್‍ಎಸ್‍ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಜಮೀರ್ ಒಂದು ಮಾತು ಹೇಳ್ತೀನಿ, ಮುಂದೆ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಚರ್ಚೆ ವೇಳೆ ಸಿದ್ದರಾಮಯ್ಯ ಮಾತನಾಡುವಾಗ ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್, …

Read More »

ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ: ಪ್ರಮೋದ್ ಮುತಾಲಿಕ್

ಬೆಳಗಾವಿ: ಮುಸ್ಲಿಂ ವಿಸ್ತಾರವಾದ, ಪ್ರತ್ಯೇಕವಾದ ಹಿನ್ನೆಲೆ ಆರ್ಥಿಕ ಬಹಿಷ್ಕಾರ, ಮುಸ್ಲಿಮರ ಜೊತೆಗೆ ವ್ಯಾಪಾರ ವಹಿವಾಟು ಮಾಡಬಾರದು ಅನ್ನೋದು ಪ್ರಾರಂಭವಾಗಿದೆ. ಹೀಗಾಗಿ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳು ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ. ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ. ಇದನ್ನ ನಿಲ್ಲಿಸುವವರೆಗೂ ರೀತಿ ಪ್ರಕ್ರಿಯೆ …

Read More »

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ: ಸಾಲ ಸೌಲಭ್ಯಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಹೈನುಗಾರರಿಗೆ ಸಹಕಾರ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಆದೇಶ ಹೊರಡಿಸಿದೆ. ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರಚನೆಗೆ ಹಸಿರುನಿಶಾನೆ ತೋರಿದ್ದು, ಬಜೆಟ್ನಲ್ಲಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ.   ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. 1000 ರೂಪಾಯಿ ನೀಡಿ ಹೈನುಗಾರರು ಷೇರು ಪಡೆಯಬಹುದು. ಸರ್ಕಾರದಿಂದ ಬ್ಯಾಂಕಿಗೆ 100 ಕೋಟಿ ರೂಪಾಯಿ ಬಂಡವಾಳ ನೀಡಲಾಗುತ್ತದೆ. ಹಾಲು ಒಕ್ಕೂಟಗಳಿಂದ …

Read More »

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ‘ಜೇಮ್ಸ್​’ ಎತ್ತಂಗಡಿ ಆರೋಪ; ಸಿಎಂ ಭೇಟಿಯಾದ ಶಿವಣ್ಣ

ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಭೇಟಿಯಾದರು. ಈ ವೇಳೆ ಜೇಮ್ಸ್ ಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ನಿರ್ಮಾಪಕ ಶ್ರೀಕಾಂತ್ ಕೂಡ ಹಾಜರಿದ್ದರು.

Read More »

ಒಡೆದ ಸಮಾಜಕ್ಕೆ ಒಗ್ಗಟ್ಟಿನ ಸಂದೇಶ; ಸಿದ್ಧಾಂತ ಬೇರೆಯಾದ್ರೂ ವೈರಿಗಳಲ್ಲ..!

ಬೆಂಗಳೂರು: ಕಟಿಬದ್ಧ ಸ್ನೇಹಿತರೇ ಆದರೂ ಯಾವುದೋ ಒಂದು ಚಿಕ್ಕ ವಿಷಯಕ್ಕೆ ಬದ್ಧವೈರಿಗಳಾಗಿಬಿಡುತ್ತಾರೆ. ಅಂಥದ್ರದಲ್ಲಿ ರಾಜಕೀಯ ವೈರಿಗಳು, ಸಿದ್ಧಾಂತ ವಿಚಾರದಲ್ಲಿ ವಿಭಿನ್ನ ನಿಲುವು ಹೊಂದಿರೋರು ಆತ್ಮೀಯರಾಗಿ ಇರೋದು ತುಂಬಾನೇ ಕಡಿಮೆ. ಆದರೆ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಈ ವಿಚಾರದಲ್ಲಿ ತುಂಬಾ ಭಿನ್ನ. ರಾಜಕೀಯ ವಿಚಾರದಲ್ಲಿ ಎಷ್ಟೇ ಕೆಸರೆರಚಾಡಿಕೊಂಡರೂ ವೈಯಕ್ತಿಕ ವಿಚಾರ, ಮಾನವೀಯ ನಿಲುವು ಅಂತಾ ಬಂದಾಗ ತುಂಬಾ ವಿನಮ್ರತೆಯಿಂದ ನಡೆದುಕೊಳ್ತಾರೆ. ಮೊದಲಿನಿಂದಲೂ ‘ಮಾದರಿ ನಡವಳಿಕೆ’ಯಲ್ಲಿ ಸೈಎನಿಸಿಕೊಂಡಿರುವ ಹಿರಿಯ …

Read More »

ಉಚಿತ ಬಸ್​ ಸೇವೆಗಾಗಿ ಹುಡುಗಿಯಾದ ಯುವಕ.. ಕಂಡಕ್ಟರ್​ ಕೈಗೆ ಸಿಕ್ಕಿಬಿದ್ದಿದ್ದು ಹೀಗೆ.. ವಿಡಿಯೋ!

ನವದೆಹಲಿ: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಸೇವೆ ಆರಂಭಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಉಚಿತ ಬಸ್​ ಸೇವೆ ಆನಂದಿಸಲು ಯುವಕನೊಬ್ಬ ತನ್ನ ಎಲ್ಲ ಮಿತಿಗಳನ್ನು ದಾಟಿದ್ದಾನೆ. ಹುಡುಗಿಯಂತೆ ರೆಡಿಯಾದ ಯುವಕ ಬಸ್​ವೊಂದಕ್ಕೆ ಹತ್ತಿ ಪ್ರಯಾಣಿಸುತ್ತಿದ್ದನು. ಆದರೆ ಆತ ಕಂಡಕ್ಟರ್​ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹೌದು, ಉಚಿತ ಬಸ್​ ಸೌಲಭ್ಯ ಆನಂದಿಸಲು ಯುವಕನೊಬ್ಬ ಹುಡುಗಿಯಂತೆ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು …

Read More »

ಅಕ್ರಮ ಆಸ್ತಿ ಗಳಿಕೆ: ಸಚಿವ ಸೋಮಣ್ಣ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣಗೆ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ನೋಟಿಸ್​ ನೀಡಿದೆ. ಹೀಗಾಗಿ, ತಕ್ಷಣವೇ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಿ, ರಾಮಕೃಷ್ಣ ಎಂಬುವರು ಸಲ್ಲಿಸಿರುವ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ …

Read More »

ಸ್ಕೂಟಿಯಲ್ಲಿ ಬರುತ್ತಿದ್ದಾಗಲೇ ಟ್ರಾನ್ಸ್​ಫಾರ್ಮರ್​ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು

ಬೆಂಗಳೂರು: ಮಂಗನಹಳ್ಳಿಯಲ್ಲಿ ನಡೆದ ವಿದ್ಯುತ್ ಪರಿವರ್ತಕ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಅಪ್ಪ, ಮಗಳು ಮೃತಪಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ಮದುವೆಗಾಗಿ ಕಲ್ಯಾಣ ಮಂಟಪ ಬುಕ್​ ಮಾಡಿಕೊಂಡು ಸ್ಕೂಟಿಯಲ್ಲಿ ವಾಪಸ್​ ಮನೆಗೆ ಬರುತ್ತಿದ್ದಾಗ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್​ ಪರಿವರ್ತಕ ಸ್ಫೋಟಗೊಂಡು ಯುವತಿ ಚೈತನ್ಯ(25), ಅವರ ತಂದೆ ಶಿವರಾಜ್(55) ಗಂಭೀರವಾಗಿ ಗಾಯಗೊಂಡಿದ್ದರು. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗನಹಳ್ಳಿ ಬಳಿ ಬುಧವಾರ ಘಟನೆ ನಡೆದಿತ್ತು‌. ಟ್ರಾನ್ಸ್​ಫಾರ್ಮರ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಾಗಿದ್ದ ಶಿವರಾಜ್ …

Read More »