ಪಡಿತರ ವಿತರಣೆಯಲ್ಲಿ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಯನ್ನು ರದ್ದು ಪಡಿಸಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಆದೇಶ ಹೊರಡಿಸಿದ್ದಾರೆ. ಹೌದು ಅಲಾರವಾಡ ಗ್ರಾಮದ ವಿಲೇಜ್ ಕಮೀಟಿ ಅಲಾರವಾಡ ಹೆಸರಿನ ನ್ಯಾಯ ಬೆಲೆ ಅಂಗಡಿ ಮೇಲೆ ಗ್ರಾಹಕರು ಸಾಕಷ್ಟು ದೂರು ಕೇಳಿ ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು …
Read More »Daily Archives: ಮಾರ್ಚ್ 23, 2022
ಟ್ವಿಟರ್‌ನಲ್ಲಿ ಬೆಳಗಾವಿ ಫೈಲ್ಸ್ ಎಂದು ವ್ಯಂಗ್ಯದ ಚಿತ್ರವನ್ನು ಸಂಜಯ್ ರಾವತ್ ಪೋಸ್ಟ್ ಮಾಡಿದ್ದು, ಕನ್ನಡಿಗರು ಆಕ್ರೋಶ
ಬೆಳಗಾವಿ: ವಿವಾದಾತ್ಮಕ ಟ್ವೀಟ್ ಮೂಲಕ ಶಿವಸೇನೆ ನಾಯಕ ಸಂಜಯ್ ರಾವತ್ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ಮಧ್ಯೆಯೇ ಟ್ವಿಟರ್‌ನಲ್ಲಿ ಸಂಜಯ್ ರಾವತ್ ಬೆಳಗಾವಿ ಫೈಲ್ಸ್ ಎಂದು ಪೋಸ್ಟ್ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಫೈಲ್ಸ್ ಎಂದು ವ್ಯಂಗ್ಯದ ಚಿತ್ರವನ್ನು ರಾವತ್ ಪೋಸ್ಟ್ ಮಾಡಿದ್ದಾರೆ. ಬೆಳಗಾವಿ ಫೈಲ್ಸ್ ಏನು ಕಡಿಮೆ ಇದೆಯಾ? ಪ್ರಜಾಪ್ರಭುತ್ವದ ಹತ್ಯೆ ಎಂಬ ಬರಹ …
Read More »ಅರಣ್ಯ ಸಚಿವ ಉಮೇಶ್ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ ಖದೀಮರಿಂದ ಜಪ್ತಿ ಮಾಡಲಾಗಿದ್ದ ಅರಣ್ಯ ಸಂಪತ್ತು ಕಳ್ಳತನ
ಬೆಳಗಾವಿ : ಅರಣ್ಯ ಸಚಿವ ಉಮೇಶ್ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ ಖದೀಮರಿಂದ ಜಪ್ತಿ ಮಾಡಲಾಗಿದ್ದ ಅರಣ್ಯ ಸಂಪತ್ತು ಕಳ್ಳತನವಾಗಿರುವ ಘಟನೆ ನಡೆದಿದೆ. ನಗರದ ಆರ್‌ಎಫ್‌ಒ ಕಚೇರಿ ಆವರಣದ ಗೋದಾಮಿನಲ್ಲಿ 2019-20ನೇ ಸಾಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಅರಣ್ಯ ಸಂಪತ್ತನ್ನು ಇಲಾಖೆ ಸಿಬ್ಬಂದಿ ಜಪ್ತಿ ಮಾಡಿ ಗೋದಾಮಿನಲ್ಲಿ ಇಟ್ಟಿದ್ದರು. ಶ್ರೀಗಂಧ, ನೀರಗಂಧ, ಗುವಾಡಾ ಸೇರಿದಂತೆ ವಿವಿಧ ಜಾತಿಯ ಕಟ್ಟಿಗೆ ತುಂಡು, ವನ್ಯ ಮೃಗಗಳ ಚರ್ಮ, ಕೊಂಬು ಸೇರಿ ಸಾಗಾಟಕ್ಕೆ ಬಳಸಿದ …
Read More »ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ: HIGH COURT
: ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಟ್ಟಡ ನಿರ್ಮಿಸುತ್ತಿರುವ ಜಾಗ ತಮ್ಮದು ಹಾಗೂ ಅದು ಕೃಷಿ ಭೂಮಿಯಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಲಕ್ಷಣರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠ ಈ …
Read More »ಜಮೀನು ಕಳೆದುಕೊಂಡ ಕುಟುಂಬದ ಸದಸ್ಯರಲ್ಲಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸ್ಥಾಪಿಸಿದ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.- ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು: ಕೆಐಡಿಬಿಯಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ರೈತರು ನಗದು ಪರಿಹಾರ ಪಡೆಯದೇ ಇದ್ದಲ್ಲಿ, ಅಭಿವೃದ್ದಿಪಡಿಸಿದ ನಿವೇಶನದಲ್ಲಿ ಪ್ರತಿ ಎಕರೆಗೆ 10,781 ಚ.ಅಡಿ ಜಾಗವನ್ನು ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು ಪ್ರತಿ ಎಕರೆಗೆ 9,500 ಚದರ ಅಡಿ ಅಭಿವೃದ್ದಿಪಡಿಸಿದ ಜಾಗವನ್ನು ಭೂ ಮಾಲೀಕರಿಗೆ ನೀಡಲಾಗುತ್ತಿತ್ತು. ಈಗ ಎಕರೆಗೆ …
Read More »ಇದೇ ವರ್ಷ ₹200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ
ಬೆಂಗಳೂರು : ಕೆಲ ನಿರ್ಬಂಧ ಎದುರಾಗುವ ಹಿನ್ನೆಲೆ ಪೊಲೀಸ್ ಕೆಲಸದಲ್ಲಿ ನಿರತರಾಗಿರುವ ನಿವೃತ್ತ ಸೈನಿಕರಿಗೆ 7 ವರ್ಷಕ್ಕೆ ಮುನ್ನ ವರ್ಗಾವಣೆ ನೀಡುವುದು ಕಷ್ಟವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ಮರು ನೇಮಕಾತಿಗೊಂಡಿರುವ ನಿವೃತ್ತ ಸೇನಾಧಿಕಾರಿಗಳ ಸಮಸ್ಯೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಂದರ್ಭ, ಪೊಲೀಸ್ ಕೆಲಸಕ್ಕೆ ನೇಮಿಸುವಾಗ ವಲಯ, ಪ್ರದೇಶವಾರು ನೋಟಿಫಿಕೇಷನ್ ನೀಡುತ್ತೇವೆ. ಶೇ.10ರಷ್ಟು ವಿಶೇಷ ಅವಕಾಶ ಇದೆ ಎಂದರು. ನೇಮಕಾತಿ …
Read More »2 ವರ್ಷದಲ್ಲಿ ಆನೆ ಕಾರಿಡಾರ್ ನಿರ್ಮಾಣ ಪೂರ್ಣ: ಸಚಿವ ಕತ್ತಿ
ಬೆಂಗಳೂರು: ಆನೆ ಹಾವಳಿ ನಿಯಂತ್ರಣಕ್ಕಾಗಿ ಕಾರಿಡಾರ್ ನಿರ್ಮಿಸಲು ಬೇಕಾಗುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂಡಿ ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರಲ್ಲಿ ಮನವಿ ಮಾಡಲಿದ್ದೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ಸಮಸ್ಯೆ, ಪರಿಹಾರೋಪಾಯ ಬಗ್ಗೆ ಚರ್ಚೆಗೆ ಅವರು ಉತ್ತರ ನೀಡಿದರು. ಈಗಾಗಲೇ ಕಾರಿಡಾರ್ ಕಟ್ಟುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ …
Read More »ಬಾಲ್ಯ ವಿವಾಹದಲ್ಲಿ ಕರ್ನಾಟಕಕ್ಕೆ ನಂಬರ್-1 ಸ್ಥಾನ:
ಬೆಂಗಳೂರು: ಬಾಲ್ಯವಿವಾಹಗಳಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 2020-21ರಲ್ಲಿ 296 ಬಾಲ್ಯವಿವಾಹ ಪ್ರಕರಣಗಳು ರಾಜ್ಯದಲ್ಲಿ ನಡೆದಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯ ವಿವಾಹ ತಡೆಯುವ ಪ್ರಕರಣ ತಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆ. ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಮಿನಿಸ್ತ್ರಿ ಅಫ್ ಹೋಮ್ ಅಫೇರ್ಸ್ …
Read More »ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ
ಬೆಂಗಳೂರು: ವಿಮಾನದಲ್ಲಿ ಪೈಲೆಟ್ಗಳು ಕಾರ್ಯ ನಿರ್ವಹಿಸುವ ರೀತಿಯಲ್ಲಿ ನೀವೂ ಸಹ ಪೈಲಟ್ ಸೀಟಲ್ಲಿ ಕುಳಿತು ಕೆಲ ಹೊತ್ತು ಪೈಲಟ್ ಅಗಬಹುದಾಗಿದೆ. ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಂತೂ ಇದೊಂದು ನೈಜ ಅನುಭವ. ರಾಜಧಾನಿಯ ಚಿಕ್ಕಬಾಣಾವರ ಸಮೀಪದ ಆಚಾರ್ಯ ಶಿಕ್ಷಣ ಸಂಸ್ಥೆ ಆವರಣಕ್ಕೆ ಭೇಟಿ ನೀಡಿದರೆ ಈ ಎಲ್ಲ ವಿಶೇಷತೆ ಕಂಡುಬರುತ್ತದೆ. ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ. ವಿಮಾನದ ಮುಖ್ಯ ವಿಭಾಗವಾದ …
Read More »ವ್ಯಕ್ತಿಯ ಕೊಲೆ ಮಾಡಿ ಕಾರಿಗೆ ಬೆಂಕಿಯಿಟ್ಟ ಪ್ರಕರಣ: ಮೂವರು ಆರೋಪಿಗಳ ಬಂಧನ!
ಅರಕಲಗೂಡು (ಹಾಸನ): ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಮಾ.15ರಂದು ಕಾರಿನ ಸಮೇತ ವ್ಯಕ್ತಿ ಸುಟ್ಟು ಹಾಕಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಣನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳವಾಡಿಯ ಹಿರಿಕೆರೆ ಏರಿಯ ಮೇಲೆ ಕಾರೊಂದು ಸುಟ್ಟು ಕರಕಲಾಗಿ, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ವ್ಯಕ್ತಿಯ ಶವ ದೊರಕಿತ್ತು.ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದ ಕೊಣನೂರು ಪೊಲೀಸರು 3 ಮಂದಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಚಾಲಕರುಗಳಾದ ಶಶಿಕುಮಾರ್ …
Read More »
Laxmi News 24×7