Breaking News

Daily Archives: ಮಾರ್ಚ್ 17, 2022

ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಹೋಳಿ ಹಬ್ಬದ ತಯಾರಿ.. ರತಿ ಕಾಮಣ್ಣನ ಪ್ರತಿಷ್ಠಾಪನೆ

ಹಾವೇರಿ: ಏಲಕ್ಕಿ ಕಂಪಿನ ನಗರ ಹಾವೇರಿ ರಂಗಪಂಚಮಿಗೆ ಸನ್ನದ್ಧಗೊಳ್ಳುತ್ತಿದೆ. ಎಲ್ಲೆಲ್ಲೂ ಬಣ್ಣಗಳಿಂದ ನಳನಳಿಸುತ್ತಿದೆ. ಮಾರ್ಚ್​ 19ರ ರಂಗಪಂಚಮಿಯ ಹೋಳಿ ಆಚರಣೆಗೆ ನಗರದ 21ಕಡೆ ಕಾಮರತಿಯ ಕಟ್ಟೆಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಕ್ಕಿಪೇಟೆ ಮಾರುಕಟ್ಟೆ, ಗದ್ದಿಗೇರ್ ಓಣಿ, ಯಾಲಕ್ಕಿ ಓಣಿ, ಪುರದ ಓಣಿ ಮತ್ತು ಮೇಲಿನ ಪೇಟೆ ಸೇರಿದಂತೆ ವಿವಿಧೆಡೆ ಈಗಾಗಲೇ ರತಿಮನ್ಮಥರ ಕಟ್ಟಿಗೆ ಮೂರ್ತಿಗಳನ್ನು ಸ್ಥಾಪಿಸಿ ಪೆಂಡಾಲಗಳನ್ನು ಹಾಕಲಾಗಿದೆ. ದಿನಕ್ಕೆ ಎರಡು ಬಾರಿ ಕಾಮರತಿಗೆ ಪೂಜೆ ಸಲ್ಲಿಸಲಾಗುತ್ತಿದ್ದು. ರತಿಮನ್ಮಥರ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರತಿಷ್ಠಾಪಿಸಲ್ಪಟ್ಟಿವೆ. …

Read More »

ಆರ್​ಟಿಇ ಆ್ಯಕ್ಟ್​​ನಲ್ಲಿ ಬದಲಾವಣೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ: ಸಚಿವ ನಾಗೇಶ್

ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ತಾವು ಶಾಲೆಗೆ ಹೋಗಬೇಕೋ ಬಿಡಬೇಕೋ ಅನ್ನೋ‌ ನಿರ್ಣಯ ತೆಗೆದುಕೊಳ್ಳುವ ಹಕ್ಕು ಕೊಡಲಾಗಿದೆ.‌ ನಮ್ಮ ರಾಜ್ಯದ ಆರ್​​ ಟಿಇ ಪ್ರಕಾರ 8ನೇ ತರಗತಿ ತನಕ ಶಿಕ್ಷಣ ಕಡ್ಡಾಯವನ್ನಾಗಿ ಮಾಡಿದ್ದೇವೆ. ಅದರ ಮೇಲಿನ ಮಕ್ಕಳು ಶಾಲೆಗೆ ಬರಲೇಬೇಕು ಅಂತೇನೂ ಇಲ್ಲ. ಆದರೆ ಹೊಸ ಆರ್​ಟಿಇ ಅಡಿಯಲ್ಲಿ 12ನೇ ತರಗತಿ ತನಕ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ನಿಯಮವನ್ನ ತರಬೇಕೆಂಬ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ …

Read More »

ವಾದ ವಿವಾದದ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 60 ಕೋಟಿ ಬಾಚಿದೆ.

ವಾದ ವಿವಾದದ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐದು ದಿನದಲ್ಲಿ ಬರೋಬ್ಬರಿ 60 ಕೋಟಿ ಬಾಚಿದೆ. ಈ ಮಾದರಿಯ ಸಿನಿಮಾಗಳಲ್ಲೇ ಅತೀ ಕಡಿಮೆ ಸಮಯದಲ್ಲಿ ಇಷ್ಟೊಂದು ಗಳಿಕೆ ಮಾಡಿದ ಮೊದಲ ಚಿತ್ರ  ಎಂಬ ಹೆಗ್ಗಳಿಕೆಗೂ ಕಾರಣವಾಗಿದೆ. ಈ ಕುರಿತು ಬಾಲಿವುಡ್ ಖ್ಯಾತ ಟ್ರೇಡ್ ಅನಾಲಿಸಿಸ್ಟ್ ಟ್ವೀಟ್ ಕೂಡ ಮಾಡಿದ್ದು, ಆಯಾ ದಿನದ ಗಳಿಕೆಯ ಲೆಕ್ಕ ಕೊಟ್ಟಿದ್ದಾರೆ. ಮೊದಲ ದಿನ 3.55 ಕೋಟಿ ರೂಪಾಯಿ ಬಾಕ್ಸ್ ಆಫೀಸಿಗೆ ಹರಿದು ಬಂದಿದ್ದರೆ, …

Read More »

ಬಲವಂತದ ಬಂದ್​ ಆಚರಣೆ ಸರಿಯಲ್ಲ – ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!

ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ‌ ಕಮಲ್‌ ಪಂತ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಬುಧವಾರದಂದು ಸಭೆ ನಡೆಸಿದರು. ನಗರದಲ್ಲಿ 144 ಸೆಕ್ಷನ್ ಜಾರಿಯಿದ್ದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ರಸ್ತೆಯಲ್ಲಿ ಜನರನ್ನು ಗುಂಪು ಗೂಡಿಸುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು …

Read More »