ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು 3 ಕೋಟಿ ರೂ.ಗೆ ಬೇಡಿಕೆ ಬಂದಿತ್ತು ಎಂದು ಸಚಿವರ ಪುತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯವು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಫೆ.23ರಂದು ಬಂಧಿಸಿದೆ. ಸಚಿವರ ಪುತ್ರ ಅಮೀರ್ ಮಲಿಕ್ ನೀಡಿದ ದೂರಿನ ಮೇರೆಗೆ ವಿಬಿ ನಗರ ಪೊಲೀಸರು ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. …
Read More »Daily Archives: ಮಾರ್ಚ್ 17, 2022
ಹಿಜಬ್ ತೀರ್ಪು: ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿ
ಬೆಂಗಳೂರು: ಹಿಜಬ್ ವಿವಾದದ ಕುರಿತು ಹೈಕೋರ್ಟ್ ನೀಡಿದ ತೀರ್ಪಿನ ವಿಷಯ ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಕಾರಣವಾಯಿತು. ಬಜೆಟ್ ಚರ್ಚೆ ವೇಳೆ ಕಾಂಗ್ರೆಸ್‍ನ ಸದಸ್ಯ ಸಲೀಂ ಅಹಮದ್, ತೀರ್ಪು ಯಾಕೆ ಈ ರೀತಿ ಬಂದಿತು ಎನ್ನುವ ಕುರಿತು ಚರ್ಚೆ ನಡೆಯಬೇಕು ಎಂದರು. ಈ ವಿಚಾರಕ್ಕೆ ಸದನದಲ್ಲಿ ಗಲಾಟೆ ಪ್ರಾರಂಭ ಆಯಿತು. ಸಲೀಂ ಅಹಮದ್ ಮಾತನಾಡಿ, ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಬಂತು. ಹಿಜಬ್ ವಿಚಾರದಲ್ಲಿ ಕೋರ್ಟ್ …
Read More »ಯಾರೇ ಲಂಚ ಕೇಳಿದರೂ ಆಡಿಯೋ – ವೀಡಿಯೋ ನನಗೇ ಕಳುಹಿಸಿ: ಪಂಜಾಬ್ ಸಿಎಂ
ಚಂಡೀಗಡ: ಪಂಜಾಬ್‍ನ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ `ಭ್ರಷ್ಟಾಚಾರ ಮುಕ್ತ’ ಸಹಾಯವಾಣಿ ಪ್ರಾರಂಭಿಸುತ್ತಿದ್ದು, ಮಾರ್ಚ್ 23ರಂದು ಅನಾವರಣಗೊಳ್ಳಲಿದೆ. ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 23ರಂದು ಸಹಾಯವಾಣಿ ಪ್ರಾರಂಭಿಸಲಾಗುತ್ತದೆ ಎಂದೂ ಅವರು ಭರವಸೆ ನೀಡಿದ್ದಾರೆ. ಸಹಾಯವಾಣಿ ಸಂಖ್ಯೆಯು ನನ್ನ ವೈಯಕ್ತಿಕ ಸಂಪರ್ಕ ಸಂಖ್ಯೆಯಾಗಿದ್ದು, ಯಾರೇ ಲಂಚ ಕೇಳಿದರೂ ಅದರ ಆಡಿಯೋ, ವಿಡಿಯೋ ಅನ್ನು ಈ ಸಂಖ್ಯೆಗೆ ಕಳುಹಿಸಿ’ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಯಾವುದೇ ಸರ್ಕಾರಿ …
Read More »ಇಬ್ರಾಹಿಂ ನಿವಾಸಕ್ಕೆ ಜಮೀರ್ ದಿಢೀರ್ ಭೇಟಿ
ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಇವತ್ತು ಸಿ.ಎಂ.ಇಬ್ರಾಹಿಂ ನಿವಾಸಕ್ಕೆ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಭೇಟಿ ಕೊಟ್ಟಿದ್ದರು. ಬೆಂಗಳೂರಿನಲ್ಲಿರುವ ಜಯಮಹಲ್ ನಿವಾಸದಲ್ಲಿ ಭೇಟಿಯಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಇಬ್ರಾಹಿಂ ಜೊತೆ ಮಹತ್ವದ ಮಾತುಕತೆ ನಡೆಸಿದರು. ಸುಮಾರು 20 ನಿಮಿಷಗಳ ಕಾಲ ಮಹತ್ವದ ಮಾತುಕತೆ ನಡೆಸಿದ್ದು, ಇಬ್ಬರ ಮಾತುಕತೆ ಕುತೂಹಲ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್‌ಗೆ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿದ್ದರೂ ಕಾಂಗ್ರೆಸ್ ತೊರೆಯದಂತೆ ಜಮೀರ್ ಮನವೊಲಿಸಿದ್ದಾರೆ ಎನ್ನಲಾಗಿದೆ. ಈ ನಡುವೆ …
Read More »ಹೊಸ ಟಿಬಿ ಲಸಿಕೆಗಾಗಿ ಬಯೋಫ್ಯಾಬ್ರಿ ಜೊತೆ ಕೈ ಜೋಡಿಸಿದ ಭಾರತ್ ಬಯೋಟೆಕ್
ನವದೆಹಲಿ : ಕೋವಿಡ್ ವಿರುದ್ಧ ಕೋವಾಕ್ಸಿನ್ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಕ್ಷಯರೋಗದ ವಿರುದ್ಧ ಲಸಿಕೆಯನ್ನು ಹೊರತರುವ ಚಿಂತನೆ ನಡೆಸಿದೆ. ಈ ಹಿನ್ನೆಲೆ ಶೀಘ್ರದಲ್ಲೇ ಸಂಸ್ಥೆಯು ತಂತ್ರಜ್ಞಾನಕ್ಕಾಗಿ ಮತ್ತೊಂದು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬುಧವಾರದಂದು ಭಾರತ್ ಬಯೋಟೆಕ್ ಸಂಸ್ಥೆ ಕ್ಷಯರೋಗ ಲಸಿಕೆ ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸ್ಪ್ಯಾನಿಷ್ ಜೈವಿಕ ಔಷಧೀಯ ಸಂಸ್ಥೆಯಾದ ಬಯೋಫ್ಯಾಬ್ರಿ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ. ಈ ಪಾಲುದಾರಿಕೆಯು 70 ಕ್ಕೂ ಹೆಚ್ಚು ದೇಶಗಳಲ್ಲಿ …
Read More »ಮುಸ್ಲಿಂ ಯುವತಿ, ಹಿಂದೂ ಯುವಕನ ಪ್ರೇಮ್ ಕಹಾನಿ; ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟ ರೌಡಿಶೀಟರ್!
ದೇಶ ಅಭಿವೃದ್ಧಿ ಪಥದತ್ತ ಸಾಗಿದೆ ಆದ್ರೆ ನಮ್ಮಲ್ಲಿ ಜಾತಿ (Caste), ಧರ್ಮದ (Religion)) ಪಿಡುಗು ಮಾತ್ರ ಕಡಿಮೆಯಾಗಿಲ್ಲ. ಹೌದು ಇಲ್ಲೊಬ್ಬ ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ (Love Marriage) ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಜಾತಿ, ಧರ್ಮದ ಪಿಡುಗು ಜನರನ್ನ ಎಷ್ಟರ ಮಟ್ಟಿಗೆ ಆವರಿಸಿದೆ ಅಂದ್ರೆ ಕರುಳ ಸಂಬಂಧ, ರಕ್ತ ಸಂಬಂಧಗಳಿಗೂ ಜನ ಬೆಲೆ ಕೊಡದೆ ಜಾತಿ, ಧರ್ಮ ಹಾಗೂ ಮಾನ-ಮಾರ್ಯಾದೆ ಅಂತ ಮಚ್ಚು-ಕೊಡಲಿ ಹಿಡಿದು ಕೊಲೆ …
Read More »ಪುನೀತ್ ರಾಜ್ಕುಮಾರ್ ‘ಜೇಮ್ಸ್’ ಹೇಗಿದೆ? ಇಲ್ಲಿದೆ ಟ್ವಿಟರ್ ರಿವ್ಯೂ
ಪುನೀತ್ ರಾಜ್ಕುಮಾರ್ ಅವರ (Puneeth Rajkumar) ಬಹು ನಿರೀಕ್ಷಿತ ಚಿತ್ರ ಜೇಮ್ಸ್ (James) ಅದ್ದೂರಿ ಬಿಡುಗಡೆಗೊಂಡಿದೆ, ಚಿತ್ರಮಂದಿರಗಳಿಗೆ ರಭಸವಾಗಿಯೇ ಅಪ್ಪಳಿಸಿದೆ. ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಭಾರಿ ಸ್ವಾಗತವನ್ನು ನೀಡಿದ್ದಾರೆ. ಇಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನವೂ ಆಗಿರುವುದರಿಂದ ಅವರ (Puneeth Rajkumar Birthday) ಅಭಿನಯವನ್ನು ತೆರೆಯ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಚಿತ್ರಮಂದಿರಗಳಿಗೆ ಧಾವಿಸುತ್ತಿದ್ದಾರೆ. ಜೇಮ್ಸ್ ಸಿನಿಮಾ ಚಿತ್ರ ವೀಕ್ಷಿಸಿದವರು ಸಿನಿಮಾ ಹೇಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. …
Read More »ಪತ್ನಿ ಸಾಕ್ಷಿ ಬಗ್ಗೆ ಅಭಿಮಾನಿ ಕೇಳಿದ ವೈಯಕ್ತಿಕ ಪ್ರಶ್ನೆಗೆ ಎಂ.ಎಸ್. ಧೋನಿ ಕೊಟ್ಟ ಉತ್ತರ ವೈರಲ್
ನವದೆಹಲಿ: ಐಪಿಎಲ್ 15ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೆನ್ನೈ ಸೂಪರ್ಸ್ ಕಿಂಗ್ (ಸಿಎಸ್ಕೆ) ತಂಡ ಅಭಿಮಾನಿಗಳಿಗಾಗಿ ನಡೆಸಿದ ಈವೆಂಟ್ನಲ್ಲಿ ಫ್ಯಾನ್ಸ್ ಜತೆ ಕ್ಯಾಪ್ಟನ್ ಎಂ.ಎಸ್. ಧೋನಿ ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಧೋನಿ ನೀಡಿದ ಉತ್ತರ ಭಾರೀ ವೈರಲ್ ಆಗಿದೆ. ವಿಡಿಯೋವೊಂದನ್ನು ಸಿಎಸ್ಕೆ ಫ್ಯಾನ್ಸ್ ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಅಭಿಮಾನಿ ಮೊದಲು ಧೋನಿಗೆ ‘ವೈಯಕ್ತಿಕ ಪ್ರಶ್ನೆ’ ಕೇಳಬಹುದೇ …
Read More »ಸರ್ಕಾರಿ ಸಿಬ್ಬಂದಿ ವೇತನಕ್ಕೆ ಆಯೋಗ ರಚನೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಸುಮಾರು 5.12 ಲಕ್ಷ ನೌಕರರ ವೇತನ ಪರಿಷ್ಕರಣೆ ಕುರಿತು ಶಿಫಾರಸುಗಳ ನೀಡಲು ಶೀಘ್ರದಲ್ಲೇ ಆಯೋಗ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದು, ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿಯಿದ್ದು, ಮುಖ್ಯಮಂತ್ರಿಗಳ ಈ ನಿರ್ಧಾರ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಈ ಕ್ರಮದಿಂದ ಪ್ರಭಾವಿತರಾದ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ತಂಡ …
Read More »ಜಲ್ಲಿ ಕ್ರಷರ್ ಲಂಚ ಪ್ರಕರಣದ ಬಗ್ಗೆ ಸಿಎಂ ಸ್ಪಷ್ಟನೆ
ಬೆಂಗಳೂರು, ಮಾ. 17: ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪ್ರಕರಣ ಗುರುವಾರ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿ ಧ್ವನಿಸಿತು. ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೆಸರು ಪ್ರಸ್ತಾಪಿಸದೇ ಜಲ್ಲಿ ಕ್ರಷರ್ ಮಾಲೀಕನಿಂದ ಲಂಚ ಪಡೆದ ಪ್ರಕರಣ ಪ್ರಸ್ತಾಪಿಸಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮ ಯಾಕೆ ಕ್ರಮ ಜರುಗಿಸಿಲ್ಲ ಎಂಬ ಪ್ರಶ್ನೆ ಸದನದಲ್ಲಿ ಎದುರಾಯಿತು. ‘ಜಲ್ಲಿ ಕ್ರಷರ್ ಮಾಲೀಕರಿಂದ ಲಂಚ ಪಡೆದ ಪ್ರಕರಣ ಸಂಬಂಧ ಪೊಲೀಸ್ ಇನ್‌ಸ್ಪೆಕ್ಟರ್ …
Read More »
Laxmi News 24×7