Breaking News

Daily Archives: ಮಾರ್ಚ್ 9, 2022

ರಶ್ಮಿಕಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ ‘ಮಿಷನ್ ಮಜ್ನು’ ರಿಲೀಸ್​ಗೆ ಮುಹೂರ್ತ ಫಿಕ್ಸ್​

ಮುಂಬೈ ( ಮಹಾರಾಷ್ಟ್ರ) : ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣಾ ಅಭಿನಯದ ಬೇಹುಗಾರಿಕೆಯ ಕಥೆಯುಳ್ಳ ಮಿಷನ್ ಮಜ್ನು ಸಿನೆಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ. ಹಲವು ಹಿಟ್ ಸಿನೆಮಾಗಳನ್ನು ನೀಡಿರುವ, ಸದ್ಯ ಪುಷ್ಪ ಸಿನೆಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣಾ ಇದೇ ಮೊದಲ ಬಾರಿಗೆ ಹಿಂದಿ ಸಿನೆಮಾದಲ್ಲಿ ನಟಿಸಿದ್ದಾರೆ. ಮಿಷನ್ ಮಜ್ನು ರಶ್ಮಿಕಾ ಮಂದಣ್ಣಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾವಾಗಿದ್ದು, ಜೂನ್ 10 ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ …

Read More »

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಗೋವಾದಲ್ಲಿ ಠಿಕಾಣಿ ಹೂಡಿದ ಸತೀಶ್ ಜಾರಕಿಹೊಳಿ‌

ಬೆಳಗಾವಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಗೋವಾದಲ್ಲಿ ಠಿಕಾಣಿ ಹೂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿವೆ. ಈ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಅಲರ್ಟ್‌ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೂ ಗೋವಾಗೆ ಹೋಗಲು …

Read More »

ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

ಡಾಕಾ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಬಾಂಗ್ಲಾದೇಶೀಯರನ್ನೂ ಸ್ಥಳಾಂತರಿಸಿದ್ದಕ್ಕೆ ಪ್ರಧಾನಿ ಮೋದಿಗೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಧನ್ಯವಾದ ತಿಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಭಾರತ ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಉಕ್ರೇನ್‌ನ ಸುಮಿಯಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯ ನಡೆಸುತ್ತಿದೆ. ಕದನ ವಿರಾಮ ಸಂದರ್ಭದಲ್ಲಿ ಕೀವ್, ಸುಮಿ, ಖಾರ್ಕಿವ್, ಚೆರ್ನಿಹಿವ್ ಹಾಗೂ ಮರಿಯೋಪೋಲ್‌ನಿಂದ ಭಾರತೀಯರು ಗಡಿಯೆಡೆಗೆ ಧಾವಿಸುತ್ತಿದ್ದು, ಅಲ್ಲಿಂದ ಅವರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ.  ಈ ಸಂದರ್ಭದಲ್ಲಿ ಬೆಂಗಾವಲು ಪಡೆ …

Read More »

EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

ಲಕ್ನೋ: ಉತ್ತರಪ್ರದೇಶದ ವಾರಣಾಸಿಯಲ್ಲಿ ಇವಿಎಂನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಆರೋಪದ ನಂತರ ಅಧಿಕಾರಿಯೊಬ್ಬರು ಲೋಪ ಮಾಡಿರುವುದಾಗಿ ಒಪ್ಪಿಕೊಂಡಿರುವ ವೀಡಿಯೋವೊಂದನ್ನು ಅವರ ಸಮಾಜವಾದಿ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ. ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಮಾತನಾಡಿ, ನೀವು ಇವಿಎಂಗಳ ಚಲನೆಯ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‍ನಲ್ಲಿ ಲೋಪವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದು ತಿಳಿಸಿದ್ದಾರೆ.ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, …

Read More »

ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಸುಟ್ಟು ಭಸ್ಮ

ಕಲಬುರಗಿ: ವಿದ್ಯುತ ಶಾರ್ಟ್ ಸರ್ಕ್ಯೂಟ್‌ನಿಂದ ಗದ್ದೆಯಲ್ಲಿ ಬೆಳೆದ ಕಬ್ಬು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದಲ್ಲಿ ನಡೆದಿದೆ. ಯಲ್ಲಾಲಿಂಗ ಪಾಟೀಲ್ ಮತ್ತು ಮಲ್ಲಮ್ಮಾ ಪಾಟೀಲ್‌ಗೆ ಸೇರಿದ ಕಬ್ಬಿನ ಗದ್ದೆ ಇದಾಗಿದೆ. ೭ ಎಕರೆ ೧೯ ಗುಂಟೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂ ಮೌಲ್ಯದ ಸುಮಾರು ೫೦೦ ಟನ್ ಕಬ್ಬು ಸುಟ್ಟು ಕರಕಲಾಗಿದೆ.  ವಿದ್ಯುತ್ ತಂತಿಗಳು ಜೊತು ಬಿದ್ದಿರುವ ಪರಿಣಾಮ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಘಟನೆಯು …

Read More »

ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

ದಕ್ಷಿಣದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಎರಡು ಸಿನಿಮಾದಲ್ಲಿ ಈಗಾಗಲೇ ನಟಿಸಿರುವ ಕಿಚ್ಚ ಸುದೀಪ್, ಇದೀಗ ಅವರ ಮತ್ತೊಂದು ಸಿನಿಮಾದಲ್ಲಿ ಒಂದಾಗಿದ್ದಾರೆ. ಅದು ಆರ್.ಆರ್.ಆರ್ ಸಿನಿಮಾದಲ್ಲಿಯೇ ಎನ್ನುವುದು ಬಿಗ್ ಸರ್ ಪ್ರೈಸ್.  ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಕಿಚ್ಚನಿಗೆ ಒಂದೊಳ್ಳೆ ಪಾತ್ರ ಕೊಟ್ಟು ತಮ್ಮ ಟೀಮ್ ಗೆ ಸೇರಿಸಿಕೊಂಡಿದ್ದರು ರಾಜಮೌಳಿ. ಮತ್ತೆ ಮತ್ತೆ ಸುದೀಪ್ ಅವರ ಜತೆ ಸಿನಿಮಾ ಮಾಡುವ ಇಂಗಿತವನ್ನೂ ಅವರು ವ್ಯಕ್ತ ಪಡಿಸಿದ್ದರು. ಆದರೆ, ಆರ್.ಆರ್.ಆರ್ ಸಿನಿಮಾದಲ್ಲಿ …

Read More »

ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

ಬೆಂಗಳೂರು: ತಮ್ಮ ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ವ್ಯಾಪಾರಾ ಮಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಸಿಗಿಲ್ ವರ್ಗಿಸ್ ಮತ್ತು ವಿಷ್ಣುಪ್ರಿಯ ಬಂಧಿತ ಆರೋಪಿಗಳು. ಬೆಂಗಳೂರಿನ ಹುಳಿಮಾವು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ಸಿಗಿಲ್ ವರ್ಗಿಸ್ ಮತ್ತು ವಿಷ್ಟುಪ್ರಿಯ ವಿದ್ಯಾಭ್ಯಾಸಕ್ಕಾಗಿ ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ಡ್ರಗ್ಸ್ ಸೇವನೆ ಚಟಕ್ಕೆ ಬಿದ್ದಿದ್ದ ಇಬ್ಬರು ಪ್ರೇಮಿಗಳು ಐಷಾರಾಮಿ ಜೀವನ ನಡೆಸಲು ಪೆಡ್ಲಿಂಗ್ ನಡೆಸಲು ಶುರುಮಾಡಿದ್ದಾರೆ. ಕೇರಳ ಮತ್ತು ತಮಿಳುನಾಡಿನ ಕೊಯಮತ್ತೂರಿನಿಂದ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ …

Read More »

ಚಹಾದಲ್ಲೂ ಕಲಬೆರಕೆ; ಕಳಪೆ ಟೀ ಪೌಡರ್

ಮಂಗಳೂರು: ಚಹಾ ಪ್ರಿಯರೇ ಎಚ್ಚರ! ಕಡಿಮೆ ದರದಲ್ಲಿ ಕಲಬೆರಕೆ ಚಹಾ ಪುಡಿಯನ್ನು ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಕಡಿಮೆ ದರ, ಆಕರ್ಷಕ ಬಣ್ಣಕ್ಕೆ ಮೈಮರೆತು ಅನೇಕ ಹೋಟೆಲ್, ಕ್ಯಾಂಟೀನ್ ಮಾಲೀಕರು ಇದನ್ನು ಖರೀದಿಸುತ್ತಾರೆ. ಈ ಕಳಪೆ ಚಹಾ ಪುಡಿ ವಹಿವಾಟು ನ್ಯಾಯಯುತ ವಾಗಿ ಚಹಾ ಪುಡಿ ವ್ಯಾಪಾರ ಮಾಡುವವರಿಗೆ ಹೊಡೆತ ನೀಡಿದೆ. ಎಲ್ಲೆಲ್ಲಿದೆ ದಂಧೆ?: ತಮಿಳುನಾಡಿನ ವಿರುಧುನಗರದಿಂದ ರಾಜ್ಯಕ್ಕೆ ನಕಲಿ ಟೀಪುಡಿ ಪೂರೈಕೆಯಾಗುತ್ತದೆ. …

Read More »

40 ಸಾವಿರ ರೂಪಾಯಿ ಕೊಟ್ರೆ ಸಿಗಲಿವೆ ಅಂಕಪಟ್ಟಿ!; ಫೇಲಾದ ವಿದ್ಯಾರ್ಥಿಗಳೇ ಟಾರ್ಗೆಟ್

ಬೆಂಗಳೂರು: ಪದವೀಧರರಾಗಲು ಹಗಲು-ರಾತ್ರಿ ಕಷ್ಟಪಟ್ಟು ಓದಬೇಕು. ಕೆಲವೊಮ್ಮೆ ಇನ್ನಿಲ್ಲದಂತೆ ಅಭ್ಯಾಸ ಮಾಡಿದರೂ ಕೆಲವರು ಪಾಸ್ ಆಗಲ್ಲ. ಆದರೆ, ಬರೀ 40 ಸಾವಿರ ರೂ. ಕೊಟ್ಟರೆ ಸಾಕು, ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳೇ ನಿಮಗೆ ಸಿಗುತ್ತೆ! ಅದೂ ಹಣ ಕೊಟ್ಟ 20 ದಿನದಲ್ಲೇ! ಹೌದು, ಅಚ್ಚರಿ ಎನಿಸಿದರೂ ಇದು ನಿಜ. ದೇಶದ ವಿವಿಧ ವಿವಿಗಳ ಪದವಿಯ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಬೆಂಗಳೂರಿನ …

Read More »

ಕಸ ಸಂಗ್ರಹಣಾ ಆಟೋಗೆ ಚಂದನಾ ಡ್ರೈವರ್​! ಗಂಡ-ಅತ್ತೆಯ ಸಹಕಾರ, ಆತ್ಮಬಲವೇ ಈಕೆಗೆ ಶ್ರೀರಕ್ಷೆ

ಬೆಂಗಳೂರು ಗ್ರಾಮಾಂತರ :ಹೆಣ್ಮಕ್ಕಳು ಆಟೋ ಓಡಿಸೋದಾ, ಅದೂ ಮನೆಮನೆಯಿಂದ ಕಸ ತೆಗೆದುಕೊಳ್ಳೋ ಆಟೋಗೆ ಡ್ರೈವರ್ರಾ! ಇಂಥ ಮೂದಲಿಕೆ, ಮುಜುರಗಳಿಗೆಲ್ಲ ಸೆಡ್ಡು ಹೊಡೆದು ಕಸ ಸಂಗ್ರಹಣೆ ಆಟೋವೊಂದಕ್ಕೆ ಚಾಲಕಿಯಾಗಿ ಇದೇ ಮೂದಲಿಗೆ ಜನರಿಂದಲೇ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದಾರೆ ತೂಬಗೆರೆ ಚಂದನಾ! ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಸ ಸಂಗ್ರಹಣೆ ಆಟೋಗೆ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರವಾಗಿದ್ದಾರೆ. ತೂಬಗೆರೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯೆಯಾಗಿದ್ದ ಚಂದನಾ, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪಾಲಕರ ಒತ್ತಾಸೆಯಂತೆ …

Read More »