Breaking News

Daily Archives: ಫೆಬ್ರವರಿ 18, 2022

ಅನೈತಿಕ ಸಂಬಂಧಕ್ಕೆ ಬೆಸೆದುಕೊಂಡ ಅಣ್ತಂಗಿ, ತಾಯಿಯನ್ನು ಕೊಲೆ ಮಾಡಿ ಸಂಪ್​ಗೆ ತಳ್ಳಿದ್ದರು!

ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ ಮತ್ತು ದೊಡ್ಡಮ್ಮನ ಮಕ್ಕಳು. ವರಸೆಯಲ್ಲಿ ಶೈಲಜಾಗೆ ಪುನೀತ್ ಅಣ್ಣನಾಗಿದ್ದಾನೆ. ಹೊರಜಗತ್ತಿಗೆ ಇಬ್ಬರೂ ಅಣ್ಣ ತಂಗಿಯಂತೆ ವರ್ತನೆ ಮಾಡ್ತಿದ್ದರು. ಆದರೆ ಮನೆಯೊಳಗೆ.. ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗ್ತಿದ್ದರು.ತುಮಕೂರು: ಮನೆ ಮುಂದಿನ ನೀರಿನ ಸಂಪ್ ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕಾಗಿ (Illicit relationship) ಅಣ್ಣನ ಜೊತೆ ಸೇರಿ ತಾಯಿಯನ್ನೇ ಮಗಳು ಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪುನೀತ್ (26) …

Read More »

ರಾಯಚೂರು: ಚಿನ್ನದ ಗಣಿಯಲ್ಲಿ ಕಲ್ಲು ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ಹಟ್ಟಿ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಊಟಿ ಗೋಲ್ಡ್ ಮೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕನ ಮೇಲೆ ಕಲ್ಲು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಊಟಿ ಗೋಲ್ಡ್ ಮೈನ್ಸ್‌ನಲ್ಲಿ ನಿನ್ನೆ ರಾತ್ರಿ ಮೇಲ್ಭಾಗದ ಕಲ್ಲು ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ, ಇಬ್ಬರು ಗಾಯಗೊಂಡಿದ್ದಾರೆ. ಮೃತಪಟ್ಟ ಕಾರ್ಮಿಕನನ್ನು ಯಲ್ಲಪ್ಪ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಪಾಳೆಯದ ಕಾರ್ಮಿಕರು 700ರಿಂದ 800 ಅಡಿ …

Read More »

ತಿಂಗಳಿಗೆ ₹ 63,000 ಸಂಬಳ, SSLC ಪಾಸಾದವರಿಗೆ ನೌಕಾದಳದಲ್ಲಿ ಉದ್ಯೋಗ

indian Navy Recruitment 2022: ಭಾರತೀಯ ನೌಕಾದಳ(Indian Navy)ದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1531 ಟ್ರೇಡ್ಸ್​​ಮ್ಯಾನ್​ ಗ್ರೂಪ್​ ಸಿ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​​​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​​ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ …

Read More »

ಎಲ್ಲಾ ಅಪರ ಜಿಲ್ಲಾಧಿಕಾರಿಗಳಿಗೆ ಹೊಸ ಕಾರು

ರಾಜ್ಯದ 31 ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲೇ ಹೊಸ ಕಾರು ಸಿಗಲಿದೆ. 9 ಲಕ್ಷ ರೂ. (Ex showroom) ಬೆಲೆಯೊಳಗೆ ಕಾರು ಖರೀದಿಸಲು ಸರ್ಕಾರ ಸಮ್ಮತಿ ನೀಡಿದೆ. ಜಿಲ್ಲೆಗಳಲ್ಲಿ ಓಡಾಟ, ಪ್ರಗತಿ ಪರಿಶೀಲನೆ ನಡೆಸಲು ವಾಹನದ ಅವಶ್ಯಕತೆ ಇರುವುದರಿಂದ ಹೊಸ ಕಾರುಗಳ ಖರೀದಿಗೆ ಸರ್ಕಾರ ಓಕೆ ಎಂದಿದೆ.   ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಠೇವಣಿ ಇಟ್ಟಿರುವ ಮೊತ್ತದ ಮೇಲೆ ಆಕರಣೆಯಾಗಿರುವ ಬಡ್ಡಿ ಮೊತ್ತದಿಂದ 279 ಲಕ್ಷ …

Read More »

ಕುಡಿತದ ಚಟ.. ಸ್ವಂತ ಮಗಳ ಮೇಲಿನ ಅತ್ಯಾಚಾರಕ್ಕೆ ಸಾಥ್​ ನೀಡಿದ ತಾಯಿ: ಕೊನೆಗೆ ಆಗಿದ್ದೇನು..?

ಆನೇಕಲ್ : ಕಟ್ಟಿಕೊಂಡ ಸಂಸಾರವನ್ನು ತ್ಯಜಿಸಿ ಗಂಡನಿಲ್ಲದ ಮಹಿಳೆಯ ಸಹವಾಸ ಮಾಡಿ, ಕುಡಿದ ಮತ್ತಿನಲ್ಲಿ ಆಕೆಯ ಮಗಳನ್ನು ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನು, ಮತ್ತು ಅವನಿಗೆ ಸಹಕಾರ ನೀಡಿದ್ದ ಬಾಲಕಿಯ ತಾಯಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೆಹೆಂದಿಪುರ ಮೂಲದ ಮೋಹನ್ ಆಸ್ದಾ ಚೋಟಾ (47), ಹಾಗೂ ತಿಮಲ್ಲಿ ಮೂಲದ ಸೊಂಬರಿ ಮುರುಮು ( 46 ) ಬಂಧಿತ ಆರೋಪಿಗಳು. ಇವರು ಎರಡು ವರ್ಷಗಳ ನಂತರ ಪೊಲೀಸ್​​ ಬಲೆಗೆ ಬಿದ್ದಿದ್ದಾರೆ. ಕಳೆದ …

Read More »

ಆಂಕರ್ ಅನುಶ್ರೀ ಕಡೆಯಿಂದ ಹೊಸ ಸುದ್ದಿ

ಬೆಂಗಳೂರು: ಕಿರುತೆರೆಯಲ್ಲಿ ಆಂಕರ್ ಆಗಿ ಜನಮನ ಗೆದ್ದಿರುವ ಅನುಶ್ರೀ ಈಗ ಮತ್ತೆ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಈಗಾಗಲೇ ಅವರು ಹೇಳಿಕೊಂಡಿದ್ದರು. ಆಂಕರ್ ಅನುಶ್ರೀ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಕೆಲವು ಸಮಯದ ಬ್ರೇಕ್ ನಂತರ ಮತ್ತೆ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಎಸ್‌ಎಂ ಪಾರ್ತಿಬನ್, ಪುನೀತ್ ಎಚ್. ನಿರ್ಮಾಣದ ಪ್ರಭಾಕರ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಲಾಂಚ್ ಇಂದು ಕಲಾವಿದರ ಸಂಘದಲ್ಲಿ …

Read More »

ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ.

ಮಂಗಳೂರು: ಮಂಗಳೂರಿನ ಮೀನುಗಾರರ ಬಲೆಗೆ ಅಪರೂಪದ ಹಾರುವ 2 ಮೀನುಗಳು ಬಿದ್ದಿವೆ. ಎರಡು ದಿನ ಹಿಂದೆ ದಕ್ಕೆಗೆ ಬಂದಿರುವ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನುಗಳೂ ಸಿಕ್ಕಿವೆ ಎಂದು ಮೀನುಗಾರ ಲೋಕೇಶ್‌ ಬೆಂಗ್ರೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ. ಆಂಗ್ಲ ಭಾಷೆಯಲ್ಲಿ ಫ್ಲೆಯಿಂಗ್​ ಫಿಶ್​ ಹಾಗೂ ತುಳುವಲ್ಲಿ ಪಕ್ಕಿಮೀನ್​ ಎಂದು ಇವನ್ನು ಕರೆಯುತ್ತಾರೆ. ಹಾರುವ ಮೀನು ಹೆಚ್ಚಾಗಿ ಆಳಸಮುದ್ರದಲ್ಲಿರುವಂಥ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ …

Read More »

ಬಚ್ಚಲು ಬಾಯಿ ಈಶ್ವರಪ್ಪನವರನ್ನು ಸಚಿವ ಸ್ಥಾನದಿಂದ ರಾಜ್ಯಪಾಲರು, ಸಿಎಂ ವಜಾ ಮಾಡಬೇಕು: ಡಿ ಕೆ ಶಿವಕುಮಾರ್

ಬೆಂಗಳೂರು: ನಮಗೆ ಸಚಿವ ಈಶ್ವರಪ್ಪನವರ ರಾಜೀನಾಮೆ ಬೇಕಾಗಿಲ್ಲ, ರಾಜೀನಾಮೆ ಎನ್ನುವುದು ಬಹಳ ಗೌರವಯುತ ಪದ. ಲಾಲ್ ಬಹದ್ದೂರ್ ಶಾಸ್ತ್ರಿಯಂತವರು ಗೌರವಯುತವಾಗಿ ತಮ್ಮ ಹುದ್ದೆ ತ್ಯಾಗ ಮಾಡಿದವರು. ಬಚ್ಚಲು ಬಾಯಿ ಈಶ್ವರಪ್ಪನವರನ್ನು ರಾಜ್ಯಪಾಲರು, ಸಿಎಂ ಬೊಮ್ಮಾಯಿ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸುತ್ತಿದ್ದಾರೆ.   ರಾಷ್ಟ್ರಧ್ವಜ ಕುರಿತು ಹೇಳಿಕೆ ನೀಡಿ ದೇಶಕ್ಕೆ, ದೇಶದ ಘನತೆ-ಗೌರವದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರು …

Read More »

ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ

ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಐಎಂಎ ಪ್ರಕರಣದ ಕುರಿತು ಪ್ರಶ್ನೆ ಮಾಡಿದರು. ಐಎಂಎ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಯಾರನ್ನೂ ರಕ್ಷಣೆ ಮಾಡಬಾರದು ಅಂತ …

Read More »

ಯುವಕನ ಮೇಲೆ ಐವರ ಗ್ಯಾಂಗ್​ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನ್ಯೂಗಾಂಧಿ ನಗರದಲ್ಲಿ ನಡೆದಿದೆ.

ಬೆಳಗಾವಿ: ಓರ್ವ ಯುವಕನ ಮೇಲೆ ಐವರ ಗ್ಯಾಂಗ್​ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ನ್ಯೂಗಾಂಧಿ ನಗರದಲ್ಲಿ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ನಿನ್ನೆ ನಿನ್ನೆ ರಾತ್ರಿ ಐವರು ಕೈಫ್ ತನ್ವೀರ್ ಬಾಗವಾನ( 20) ಎಂಬಾತನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯಗಳನ್ನು ಕಂಡ ಸ್ಥಳೀಯರು ಕಿರುಚಾಡಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುಸ್ತಾಕ ಎಂಬಾತನ ನೇತೃತ್ವದಲ್ಲಿ ಕೈಫ್ ತನ್ವೀರ್ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಸದ್ಯ ಗಂಭೀರ ಗಾಯಗೊಂಡಿರುವ …

Read More »