Breaking News

Daily Archives: ಫೆಬ್ರವರಿ 5, 2022

ಪತ್ನಿಯನ್ನು ಬೇರೆಯವರೊಂದಿಗೆ ಮಲಗಿಸಿ ಹಣ ಗಳಿಸುತ್ತಿದ್ದ ವಿಕೃತ ಪತಿ!

ಬೆಂಗಳೂರು: ತನ್ನ ಪತ್ನಿಯನ್ನು ಬೇರೆಯವರ ಜೊತೆ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡುತ್ತಾ ಹಣ ಸಂಪಾದನೆ ಮಾಡುವ ದಾರಿ ಹಿಡಿದಿದ್ದ ಪತಿಗೆ ಪತ್ನಿಯೂ ಸಾಥ್ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದೀಗ ಈ ಇಬ್ಬರು ಪತಿ-ಪತ್ನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.   ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಫ್ ಸ್ವಾಫಿಂಗ್ ದಂಧೆ ನಡೆಸುತ್ತಿದ್ದ ದಂಪತಿ ಹಣ ಸಂಪಾದನೆ ಮಾರ್ಗ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿರುವ …

Read More »

ಮದುವೆಗೆ ಇನ್ನೇನು ಕೆಲವೇ ಕ್ಷಣಗಳಿರುವಾಗಲೇ ವರನ ಮೊಬೈಲ್ ಗೆ ಬಂತು ವಧುವಿನ ನಗ್ನ ವಿಡಿಯೋ..! ಮುಂದೇನಾಯ್ತು..?

ನವದೆಹಲಿ: ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ …

Read More »

ಸಂಸತ್‍ನಲ್ಲಿ ಪ್ರತಿಧ್ವನಿಸಿದ ಕರ್ನಾಟಕದ ‘ಹಿಜಾಬ್’ ವಿವಾದ

ನವದೆಹಲಿ,ಫೆ.5-ಕರ್ನಾಟಕದಲ್ಲಿ ಭಾರೀ ವಿವಾದದ ಕಿಡಿ ಹೊತ್ತಿಸಿರುವ ವಿದ್ಯಾರ್ಥಿಗಳು ಹಿಜಾಬ್-ಕೇಸರಿ ಶಾಲು ಧರಿಸಿ ಶಾಲೆಗೆ ಬರುತ್ತಿರುವ ಸಂಗತಿ ಇದೀಗ ಸಂಸತ್‍ನಲ್ಲೂ ಪ್ರತಿಧ್ವನಿಸಿದೆ. ಕಾಂಗ್ರೆಸ್, ಡಿಎಂಕೆ, ಎಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳು ಸಂಸದರು ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವುದನ್ನು ಪ್ರಸ್ತಾಪಿಸಿದ್ದಾರೆ.   ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದು, ವಿದ್ಯಾರ್ಥಿಗಳಿಗೆ ಜಾತಿ-ಧರ್ಮ ಯಾವುದೂ ಗೊತ್ತಿರುವುದಿಲ್ಲ. ಕೆಲವರು ಇಲ್ಲಿಯೂ ಕೂಡ …

Read More »

ನಾಲ್ಕು ಸರ್ಕಾರಿ ನೌಕರಿ ಬಿಟ್ಟಿದ್ದ ಜ್ಯೋತಿ ಪಿಎಸ್‌ಐ ಹುದ್ದೆಗೆ ಆಯ್ಕೆ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ನಾಲ್ಕು ಸರ್ಕಾರಿ ನೌಕರಿಗಳ ಆದೇಶ ಪತ್ರ ಬಂದಿದ್ದರೂ ನಿರಾಕರಿಸಿದ್ದ ಯುವತಿ, ಎಂಜಿನಿಯರಿಂಗ್‌ ಪದವೀಧರೆ ಜ್ಯೋತಿ ಮಹಾಬಳೇಶ್ವರ ಗೂಳಪ್ಪನವರ ಈಚೆಗೆ ನಡೆದ ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದಾರೆ. ತಾಲ್ಲೂಕಿನ ಉಡಿಕೇರಿ ಗ್ರಾಮದ ಪ್ರಗತಿಪರ ರೈತ ಮಹಾಬಳೇಶ್ವರ ಗೂಳಪ್ಪನವರ ಅವರ ಪುತ್ರಿ ಈ ಸಾಧಕಿ. ಬರೆದಿರುವ ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅವರು ಸೋಲು ಕಂಡಿಲ್ಲ. ಮನೆ ಬಾಗಿಲಿಗೆ ಬಂದಿದ್ದ ನೌಕರಿಗಳ ಆದೇಶ ಪತ್ರಗಳನ್ನು ಒಪ್ಪಿಕೊಳ್ಳದೆ ಉನ್ನತ ಹುದ್ದೆಗೆ ಕಾದಿದ್ದರು; ಪ್ರಯತ್ನ ಮುಂದುವರಿಸಿದ್ದರು. …

Read More »

ಪುನೀತ್​ ರಾಜ್​ ಕುಮಾರ್​ ಜೇಮ್ಸ್​ ಟೀಸರ್​ ರಿಲೀಸ್​ಗೆ ಡೇಟ್​ ಫಿಕ್ಸ್​!

ಬೆಂಗಳೂರು: ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಟನೆಯ ಕೊನೇ ಸಿನಿಮಾ ಮೇಲೆ ಈಗ ನಿರೀಕ್ಷೆಗಳು ಉತ್ತುಂಗದಲ್ಲಿದ್ದು, ಆ ಸಿನಿಮಾದ ಪ್ರತಿಯೊಂದು ಅಪ್ಡೇಟ್​ಗಾಗಿ ಅಭಿಮಾನಿಗಳು ಕಾತಯುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಪುನೀತ್​ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್​ ಒಂದನ್ನ ಬಿಡುಗಡೆ ಮಾಡಿದ್ದ ಚಿತ್ರ ತಂಡ ಈಗ ಸಿನಿಮಾ ಟೀಸರ್​ ಬಿಡುಗಡೆಗೆ ದಿನಾಂಕ ಫಿಕ್ಸ್​ ಮಾಡಿದೆ.   ಫೆಬ್ರವರಿ 11 ರಂದು ಸರಿಯಾಗಿ 11 ಗಂಟೆ 11 ನಿಮಿಷಕ್ಕೆ ಜೇಮ್ಸ್​ ಸಿನಿಮಾದ ಟೀಸರ್​ ಬಿಡುಗಡೆ ಮಾಡಲು …

Read More »

ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಫೋಟೋ ಕಡ್ಡಾಯ: ಹೈಕೋರ್ಟ್

ಬೆಂಗಳೂರು: ಹೈಕೋರ್ಟ್‌ ಸೇರಿ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಗಳಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಡುವುನ್ನು ಕಡ್ಡಾಯಗೊಳಿಸಲು ಹೈಕೋರ್ಟ್ ತೀರ್ಮಾನ ಕೈಗೊಂಡಿದೆ.   ರಾಯಚೂರು ಜಿಲ್ಲಾ ನ್ಯಾಯಾಧೀಶರು ಜನವರಿ 26 ರಂದು ಗಣರಾಜ್ಯೋತ್ಸವ ಸಮಾರಂಭದ ಸ್ಥಳದಿಂದ ಅಂಬೇಡ್ಕರ್ ಅವರ ಫೋಟೋ ತೆಗೆಸಿದ್ದಾರೆ ಎಂದು ಆರೋಪಿಸಿ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಅಂಬೇಡ್ಕರ್ ಅವರ ಫೋಟೋ ಕೋರ್ಟ್ ಅಧಿಕೃತ ಸಮಾರಂಭಗಳಲ್ಲಿ ಇಡಲಾಗುತ್ತದೆ. ಜನವರಿ 26 …

Read More »

ಜಮೀನು ಖಾತೆ ಬದಲಾವಣೆಗೆ ಲಂಚ ಸ್ವೀಕಾರ : ಪಿಡಿಒ, ಕಾರ್ಯದರ್ಶಿ ಎಸಿಬಿ ಬಲೆಗೆ

ಹಾಸನ : ಜಮೀನು ಖಾತೆ ಬದಲಾವಣೆಗಾಗಿ ಲಂಚ ಪಡೆಯುವ ವೇಳೆ ಪಿಡಿಒ ಮತ್ತು ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಕೌಶಿಕ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹಾಗೂ ಕಾರ್ಯದರ್ಶಿ ಪುಷ್ಪಲತಾ ಎಸಿಬಿ ಬಲೆಗೆ ಬಿದ್ಧಿರುವ ಅಧಿಕಾರಿಗಳು. ಹಾಸನದ ಸುರೇಶ್ ಕುಮಾರ್ ಎಂಬುವರು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದು, ಖಾತೆ ಬದಲಾವಣೆಗಾಗಿ ಲಂಚ ನೀಡಬೇಕೆಂದು ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಮೊದಲ ಕಂತಾಗಿ ₹2600 ಹಣ …

Read More »

ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಹೊಸ ಕ್ರಮ:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ಕೆಲ ವಾಹನ ಮಾಲೀಕರಿಗೆ ಎಷ್ಟು ಬಾರಿ ನೊಟೀಸ್ ಕಳಿಸಿದರೂ ನಿರ್ಲಕ್ಷ್ಯ ಧೋರಣೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿಕ್ರಮ ತೆಗೆದುಕೊಳ್ಳಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಪದೇಪದೆ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ, ಅಂಥ ವಾಹನಗಳು ಯಾವುದೇ ಕಾರಣದಿಂದ ಸಾರಿಗೆ ಕಚೇರಿಗೆ ಬಂದಾಗ ಮಾಲೀಕರಿಂದ ಅಲ್ಲಿಯೇ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ 10 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್​ಸ್ಪೆಕ್ಟರ್​ ದರ್ಜೆಯ …

Read More »

ಪದ್ಮಶ್ರೀ ಪುರಸ್ಕೃತ ಸೂಫಿಸಂತ ಇಬ್ರಾಹಿಂ ಸುತಾರ ನಿಧನ ಸಂತಾಪ ಸೂಚಿಸಿದ ಸಂತೋಷ್ ಜಾರಕಿಹೊಳಿ

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(Ibrahim Sutar) ಇಂದು ಬೆಳಿಗ್ಗೆ 6.30ಕ್ಕೆ ಹೃದಯಾಘಾತದಿಂದ(Heart attack) ಮೃತಪಟ್ಟಿದ್ದಾರೆ. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ(padma shri) ಪುರಸ್ಕೃತ ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್(76) ನಿಧನರಾಗಿದ್ದಾರೆ. ಇಬ್ರಾಹಿಂ ಸುತಾರ್ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು. ಪ್ರವಚನಕ್ಕೆ ಹೆಸರಾಗಿದ್ದರು. ಅಲ್ಲದೇ ಬಣವಣ್ಣನವರ ಅನುಯಾಯಿಗಳಾಗಿದ್ದು, ಬಸವಣ್ಣನವರ ವಚನಗಳನ್ನು ಹೇಳುತ್ತಿದ್ದರು. ಇಂದು ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ತಲುಪಿಸುವ ಮಾರ್ಗದಲ್ಲಿ ಸೂಫಿಸಂತ ಇಬ್ರಾಹಿಂ …

Read More »

ರವಿ ಚೇನ್ನನ್ನವರ ಆಸ್ತಿ ವಿವಾದ ತಂದೆ ತಾಯಿ ಮಾಧ್ಯಮಕ್ಕೆ ಹೇಳಿದ್ದೇನು

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಅವರ ತಾಯಿ-ತಂದೆ ಕೂಡ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಕೆಲವರು ಆರೋಪಿಸಿದ್ದು, ಆ ಬಗ್ಗೆ ಪರ-ವಿರೋಧ ಪ್ರತಿಕ್ರಿಯೆಗಳು ಕೂಡ ಕೇಳಿ ಬರುತ್ತಿವೆ. ಈ ಮಧ್ಯೆ ಆರೋಪದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ರವಿ …

Read More »