ಚಾಮರಾಜನಗರ: 204ನೇ ಭೀಮ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆಯ ವತಿಯಿಂದ ಕೋರೆಗಾಂವ್ ವಿಜಯಸ್ತಂಭದ ಪ್ರತಿಕೃತಿಯ ಮೆರವಣಿಗೆ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ಎಸ್.ನಂಜುಂಡಸ್ವಾಮಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಸತ್ಯಮಂಗಲ ರಸ್ತೆ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಚಾಮರಾಜೇಶ್ವರ ಉದ್ಯಾನವನ ರಸ್ತೆ, ನಗರಸಭಾ ಕಚೇರಿ ಮೂಲಕ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, …
Read More »Monthly Archives: ಜನವರಿ 2022
ಉಚಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ದಾಂಡೇಲಿ ಹಾಗೂ ಜೆಸಿಬಿ ಇವರ ಜಂಟಿ ಸಹಯೋಗದಲ್ಲಿ ನಡೆಯುವ 30 ದಿನಗಳ ಉಚಿತ ಜೆಸಿಬಿ ಚಾಲನಾ (ಆಪರೇಟರ್) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ 18 ರಿಂದ 45 ವಯೋಮಿತಿಯ ಆಸಕ್ತರು ತಮ್ಮ ಹೆಸರು, ಜನ್ಮ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕೆತ, ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಒಳಗೊಂಡ ಮಾಹಿತಿಯ 2022ರ ಜನವರಿ 10 …
Read More »ಮತ್ತೆ ಲಾಕ್ಡೌನ್ ಮಾಡುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ
ಮುಂಬೈ, ಜನವರಿ 1: ದೇಶದ ಒಂದೊಂದೇ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಜೊತೆಗೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿಯೂ ಕಾಡುತ್ತಿದೆ. ಸದ್ಯ ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಗಳಲ್ಲಿ ಕೊರೊನಾ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ ಲಾಕ್ಡೌನ್ ಮಾಡುವ ಸೂಚನೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದಲ್ಲಿ ಕೊರೊನಾ …
Read More »ಡಿಕೆಶಿ ಹಿಂದೂ ಹೌದ, ಅಲ್ಲವಾ ಅನ್ನೋದರ ಬಗೆಗೆ ಸಂಶಯ; ಸಿಟಿ ರವಿ
ಬೆಂಗಳೂರು, ಡಿಸೆಂಬರ್ 31; ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷಡಿ. ಕೆ. ಶಿವಕುಮಾರ್ಟ್ವೀಟ್ ಮಾಡಿ, “ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ದೇಗುಲಗಳಿಂದ ಸರ್ಕಾರದ ಖಜಾನೆಗೆ ಸಾಕಷ್ಟು ಆದಾಯ ಬರುತ್ತಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ಇಂತಹ ಸಮಯದಲ್ಲಿ ಆದಾಯ ತರುತ್ತಿರುವ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ …
Read More »ʼUPSC ಸಂಯೋಜಿತ ವೈದ್ಯಕೀಯ ಸೇವೆʼಗಳ ಪರೀಕ್ಷೆ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ನೋಡಿ |
ಕೇಂದ್ರ ಲೋಕಸೇವಾ ಆಯೋಗ (UPSC) ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ ಫಲಿತಾಂಶ(Combined Medical Services Examination 2021) ಘೋಷಿಸಿದೆ. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್ ಸೈಟ್(official website) upsc.gov.in ನಲ್ಲಿ ತಮ್ಮ ಫಲಿತಾಂಶವನ್ನ ಪರಿಶೀಲಿಸಬಹುದು. ಅಂದ್ಹಾಗೆ, ಈ ಪರೀಕ್ಷೆಯನ್ನ 21 ನವೆಂಬರ್ 2021ರಂದು ನಡೆಸಲಾಗಿತ್ತು. ಲಿಖಿತ ಪರೀಕ್ಷೆಯನ್ನ ಎರಡು ಶಿಫ್ಟ್‌ನಲ್ಲಿ ಅಂದ್ರೆ ಮೊದಲ ಶಿಫ್ಟ್ʼನಲ್ಲಿ, ಪರೀಕ್ಷೆ ಬೆಳಿಗ್ಗೆ 9:30 ರಿಂದ 11:30 ರವರೆಗೆ ನಡೆಯಿತು. ಎರಡನೇ ಪಾಳಿಯಲ್ಲಿ ಮಧ್ಯಾಹ್ನ 2 …
Read More »ಶಿಕ್ಷಣ ಸಚಿವ ʼಬಿ.ಸಿ ನಾಗೇಶ್ʼಗೆ ಕೊರೊನಾ ಪಾಸಿಟಿವ್
ಬೆಂಗಳೂರು : ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್(B.C Nagesh) ಅವ್ರಿಗೆ ಕೊರೊನಾ ಸೋಂಕು(Corona infection) ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಕ್ವಾರಂಟೈನ್ ಆಗಿದ್ದಾರೆ. ಈ ಕುರಿತು ಟ್ವಿಟ್ ಮೂಲಕ ಮಾಹಿತಿ ನೀಡಿದ ಸಚಿವರು ‘ಕೋವಿಡ್-19 ಲಘು ಲಕ್ಷಣಗಳು ಕಾಣಿಸಿದ ಕಾರಣ ನಾನು ಇಂದು ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್-19 ವರದಿ ಪಾಸಿಟಿವ್ ಬಂದಿದೆ. ಕ್ವಾರಂಟೈನ್‌ನಲ್ಲಿದ್ದು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ …
Read More »ಹೊಸ ವರ್ಷದ ಮೊದಲ ದಿನವೇ ಕಾಮದ ಮದದಲ್ಲಿ ನೀಚ ಕೃತ್ಯ
ಹೊಸಪೇಟೆ(ವಿಜಯನಗರ): ಹೊಸ ವರ್ಷದ ಮೊದಲ ದಿನವೇ ಪೋಕ್ಸೋ ಪ್ರಕರಣ ದಾಖಲಾಗಿದೆ. ಕಾಮುಕನೊಬ್ಬ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. 17 ವರ್ಷದ ಕಾಮುಕ 7 ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.
Read More »ಖಾಸಗಿ ಶಾಲೆ ಮುಚ್ಚುವ ಹುನ್ನಾರ: ಆರ್.ಎಂ. ಕುಬೇರಪ್ಪ
ಹಾವೇರಿ: ‘ಖಾಸಗಿ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾನ್ಯತೆ ನವೀಕರಣ ನೆಪದಲ್ಲಿ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸಿದೆ. ಆಗಸ್ಟ್ ತಿಂಗಳಲ್ಲಿ ಹೊರಡಿಸಿರುವ ಕಾನೂನು ಬಾಹಿರ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ರಾಜ್ಯ ಘಟಕದ ಅಧ್ಯಕ್ಷ ಆರ್.ಎಂ.ಕುಬೇರಪ್ಪ ಒತ್ತಾಯಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಖಾಸಗಿ ಶಾಲೆಗಳು ಕಡ್ಡಾಯವಾಗಿ ನ್ಯಾಷನಲ್ ಬಿಲ್ಡಿಂಗ್ ಕೋಡ್ ಮತ್ತು ಅಗ್ನಿ ಸುರಕ್ಷತೆ ಬಗ್ಗೆ ಸಂಬಂಧಿಸಿದ …
Read More »ಮನೆ, ನಿವೇಶನ ಖರೀದಿದಾರರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ
ಬೆಂಗಳೂರು,ಜ.1- ಮನೆ, ಫ್ಲಾಟ್ ಮತ್ತು ನಿವೇಶನ ಖರೀದಿಸಲು ಎದುರು ನೋಡುತ್ತಿದ್ದ ರಾಜ್ಯದ ಜನತೆಗೆ ಕಂದಾಯ ಇಲಾಖೆ ಬಂಪರ್ ಕೊಡುಗೆ ನೀಡಿದೆ. ಫ್ಲಾಟ್‍ಗಳು ಮತ್ತು ಮನೆ ಹಾಗೂ ನಿವೇಶನ ಖರೀದಿ ಮಾಡುವವರಿಗೆ ಹಾಲಿ ಇರುವ ಮಾರ್ಗಸೂಚಿಯ ದರದಲ್ಲಿ ಶೇ.10ರಷ್ಟು ಕಡಿಮೆ ಮಾಡುವ ಮೂಲಕ ಸರ್ಕಾರ ರಾಜ್ಯದ ಜನತೆಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದಿನಿಂದ ಮಾ.31ರವರೆಗೆ ಅನ್ವಯವಾಗುವಂತೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಮನೆ …
Read More »ಹೊಸ ವರ್ಷದ ವೇಳೆ ಡಿಸಿಗಳಿಗೆ ಸಿಎಂ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಆಡಳಿತಕ್ಕೆ ಮೇಜರ್ ಸರ್ಜರಿ
ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಐಎಎಸ್, ಐಪಿಎಸ್ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕೆ.ಎಸ್.ಪಿ.ಎಸ್.ನಿಂದ ಐಪಿಎಸ್ ಗೆ ಬಡ್ತಿ ಹೊಂದಿದ 26 ಅಧಿಕಾರಿಗಳಿಗೆ ಎಸ್ಪಿ ಹುದ್ದೆಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡಲಾಗಿದೆ. 50ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ಬಡ್ತಿ ಹೊಂದಿದವರು ಪಿ.ಎಸ್. ಹರ್ಷ -ಹೆಚ್ಚುವರಿ ಆಯುಕ್ತರು, ವಾರ್ತಾ ಇಲಾಖೆ ಎಸ್. ಮುರುಗನ್ -ಎಡಿಜಿಪಿ, ಲಾಜಿಸ್ಟಿಕ್ ಅಂಡ್ ಮಾಡರ್ನೈಸೇಶನ್ ಕೆ.ವಿ. ಶರತ್ -ಎಡಿಜೆಪಿ, ಸಿಐಡಿ …
Read More »