Breaking News

Monthly Archives: ಜನವರಿ 2022

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆ ಮೋನಿಷಾ

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ಮೋನಿಷಾ. ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ಅವರ ಬದುಕು ಅನೇಕರಿಗೆ ಸ್ಫೂರ್ತಿಯಾಗುವಂಥದ್ದು. ಹುಟ್ಟಿದ್ದು ಗಂಡಾಗಿ, ಬೆಳೆದದ್ದು ಹೆಣ್ಣಾಗಿ. ಹೆಣ್ಣಾಗುವ ಆಸೆಯನ್ನು ಅದುಮಿಡಲಾಗದೇ ಶಾಲೆಯ ನಾಟಕಗಳಲ್ಲಿ ಸ್ತ್ರೀಪಾತ್ರ ಮಾಡಿದಾಗ ಮನೆಯವರ ತಿರಸ್ಕಾರಕ್ಕೊಳಗಾದರು. ಇಂದಲ್ಲ ನಾಳೆ ಮಗ ರಾಮು (ಮೂಲಹೆಸರು) ಸರಿಹೋದಾನು ಎಂಬ ಕುಟುಂಬದ ಭರವಸೆ ನಿಜವಾಗಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದಾಗ ಅಪ್ಪನಿಂದ ಬೆತ್ತದೇಟಿನ ರುಚಿ ಕಂಡು …

Read More »

ಜೀವಂತವಾಗಿ ವಾಪಾಸ್‌ ಬಂದಿದ್ದೇನೆ, ನಿಮ್ಮ ಸಿಎಂಗೆ ನನ್ನ ಧನ್ಯವಾದ ತಿಳಿಸಿಬಿಡಿ : ಅಧಿಕಾರಿಗಳ ಬಳಿ ʼಪ್ರಧಾನಿ ಮೋದಿʼ ಅಸಮಾಧಾನ

ಚಂಡೀಗಢ: ಪ್ರಧಾನ ಮಂತ್ರಿಗಳ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾದ ಹಿನ್ನೆಲೆಯಲ್ಲಿ ಪಂಚಾಬ್‌ನ ಫಿರೋಜ್ ಪುರ(Ferozepur)ದಲ್ಲಿ ಬುಧವಾರ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರ ಮೊದಲ ರ್ಯಾಲಿ(first rally)ಯನ್ನ ರದ್ದುಗೊಳಿಸಲಾಗಿದ್ದು, ಪ್ರಧಾನಿ ನವದೆಹಲಿಗೆ ವಾಪಸ್‌ ಆಗಿದ್ದಾರೆ.   ಇನ್ನು ದೆಹಲಿಗೆ ವಾಪಸಾಗುವಾಗ ಭಟಿಂಡಾ ಸೆಕ್ಯೂರಿಟಿ ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಮಾತನಾಡಿದ್ದು, ಈ ವೇಳೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ, ‘ಏರ್‌ಪೋರ್ಟ್‌ವರೆಗೆ ಜೀವಂತವಾಗಿ ವಾಪಸ್‌ …

Read More »

ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ನ ಚುನಾವಣಾ ಪ್ರಚಾರಾರ್ಥ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ವೇಳೆ ಪ್ರತಿಭಟನೆಯ ಕಾರಣದಿಂದಾಗಿ ಹಲವು ನಿಮಿಷಗಳ ಕಾಲ ರಸ್ತೆ ಮಧ್ಯೆಯೇ ನಿಂತು ಬಳಿಕ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದರು. ಈ ಘಟನೆಯು ಪಂಜಾಬ್‌ ಮುಖ್ಯಮಂತ್ರಿ ʼಭದ್ರತಾ ಲೋಪʼ ಎಸಗಿದ್ದಾರೆ ಎಂಬ ಆರೋಪಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಾಮಾಜಿಕ ತಾಣದಾದ್ಯಂತ ಈ ಕುರಿತು ಹಲವು ಹೇಳಿಕೆಗಳು ಮತ್ತು ವೀಡಿಯೋಗಳು ಹರಿದಾಡುತ್ತಿವೆ. “ಇದು ನಾವೆಲ್ಲರೂ ಖಂಡಿಸಲೇಬೇಕಾದ ಸುದ್ದಿ. …

Read More »

ಹಸಿದ ನಾಯಿ ಮರಿಗಳಿಗೆ ಪ್ರತಿನಿತ್ಯ ಹಾಲುಣಿಸುವ ಗೋಮಾತೆ..!

ಗೋವನ್ನ ಸುಮ್ಮನೆ ಕಾಮಧೇನು ಅನ್ನುವುದಿಲ್ಲ. ಈಗಿನ ಕಾಲದಲ್ಲಿ ಮನುಷ್ಯನಲ್ಲಿ ಮಾನವೀಯತೆ ಕಾಣೆಯಾಗಿದ್ರು, ಪ್ರಾಣಿಗಳಲ್ಲಿ ಅದು ಕಾಣಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆಯೆ ಈ ಗೋವಿನ ಕಥೆ. ಕರ್ನಾಟಕ ಯಾದಗಿರಿಯ ಅಮ್ಮಾಪುರ ಗ್ರಾಮದಲ್ಲಿ ಹಸುವೊಂದು ಹಸಿದ ನಾಯಿಮರಿಗಳಿಗೆ ಹಾಲುಣಿಸುತ್ತಿದೆ. ಇದೇ ಗ್ರಾಮದಲ್ಲಿ ಬೀದಿನಾಯಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ‌. ಆದರೆ ಈ ತಾಯಿ ಶ್ವಾನ ತೀರಾ ಬಡಕಲಾಗಿದ್ದು, ಅಪೌಷ್ಟಿಕತೆಗೆ ಒಳಗಾಗಿದೆ. ಸಿಗುವ ಅಷ್ಟು ಇಷ್ಟು ಊಟವನ್ನ ತಿಂದುಕೊಂಡು ಬದುಕಿರುವ ತಾಯಿ ಶ್ವಾನದ ಕೆಚ್ಚಲಿನಿಂದ …

Read More »

ವಿಧಾನ ಪರಿಷತ್ ಸದಸ್ಯರಾಗಿ  ಲಖನ್ ಜಾರಕಿಹೊಳಿ  ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿ  ಲಖನ್ ಜಾರಕಿಹೊಳಿ  ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಡಿಸೆಂಬರ್ 10ರಂದು ನಡೆದ ಚುನಾವಣೆಯಲ್ಲಿ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ ಸ್ಥಾನದಿಂದ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಹಾಲಿ ಸದಸ್ಯರಾದ ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಪಕ್ಷೇತರ ವಿವೇಕರಾವ್ ಪಾಟೀಲ ಅವರ ಅವಧಿ ಬುಧವಾರ ಮುಕ್ತಾಯವಾಗಿದೆ. ಚನ್ನರಾಜ ಹಟ್ಟಿಹೊಳಿ ಮತ್ತು …

Read More »

ವಾರಾಂತ್ಯ ಕರ್ಫ್ಯೂ: ಸ್ಥಳೀಯ ಆರ್ಥಿಕತೆಗೆ ಮತ್ತೆ ಕುಸಿತದ ಭಯ

ಸರಕಾರವು ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಒಟ್ಟಾರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಅಪಾಯವಿದೆ.   ಈ ಹಿಂದಿನ ಲಾಕ್‌ಡೌನ್‌ ಹಾಗೂ ಅನಂತರ ನಿರ್ಬಂಧಗಳ ಸಡಿಲಿಕೆ ಬಳಿಕ ಇತ್ತೀಚೆಗಷ್ಟೇ ದೈನಂ ದಿನ ಜನ ಜೀವನ ಸಾಮಾನ್ಯ ಸ್ಥಿತಿಗೆ ತಲುಪಿತ್ತು. ಅಷ್ಟರಲ್ಲಿ ಮತ್ತೊಮ್ಮೆ ಹಿಂದಿನ ಕರಾಳ ಸ್ಥಿತಿಯ ಭೀತಿ …

Read More »

ವೀಕೆಂಡ್ ಕರ್ಫ್ಯೂ ವೇಳೆ ಎಂದಿನಂತೆ ಸಂಚರಿಸಲಿವೆ ಕೆಎಸ್‌ಆರ್‌ಟಿಸಿ ಬಸ್‌; ಆದರೆ ಬಿಎಂಟಿಸಿ ಬಸ್‌ ಸಂಚಾರ ಇರಲ್ಲ

ಬೆಂಗಳೂರು: ಒಮಿಕ್ರಾನ್​ ಮತ್ತು ಮೂರನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಗೊಳಿಸಿದೆ. ಮುಂದಿನ ಎರಡು ವಾರಗಳ ಕಾಲ ವೀಕೆಂಡ್​ ಕರ್ಫ್ಯೂ ಇರಲಿದ್ದು, ಈ ವೇಳೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ (Bus) ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊವಿಡ್​ಗೆ (Coronavirus) ಸರ್ಕಾರ ಹೇರಿರುವ ನಿಯಮ‌ …

Read More »

ಭಾನುವಾರದಿಂದ ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್, ನಾಳೆಯಿಂದ ರಾತ್ರಿ ಕರ್ಫ್ಯೂ

ಚೆನ್ನೈ: ಒಮಿಕ್ರಾನ್ (omicron) ರೂಪಾಂತರದ ಪ್ರಾಬಲ್ಯದಿಂದಾಗಿ ಹೆಚ್ಚುತ್ತಿರುವ ಕೊವಿಡ್ -19 (Covid 19)ಪ್ರಕರಣಗಳನ್ನು ತಡೆಯಲು ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ (Lockdown) ಹೇರುವುದಾಗಿ ತಮಿಳುನಾಡು ಸರ್ಕಾರ ಬುಧವಾರ ಪ್ರಕಟಿಸಿದೆ. ಇದಲ್ಲದೆ, ಜನವರಿ 6 (ಗುರುವಾರದಿಂದ) ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ (night curfew)ವಿಧಿಸಲಾಗಿದೆ. ಈ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ನೇತೃತ್ವದಲ್ಲಿ ರಾಜ್ಯದ ಆರೋಗ್ಯ ಸಚಿವ …

Read More »

ಇವಳೂ ವೈದ್ಯೆ, ಅವಳೂ ವೈದ್ಯೆ: ನಾಗ್ಪುರದಲ್ಲಿ ಇವರಿಬ್ಬರ ಮದುವೆ, ಗೋವಾದಲ್ಲಿ ಹನಿಮೂನ್‌

ನಾಗ್ಪುರ (ಮಹಾರಾಷ್ಟ್ರ): ಇತ್ತೀಚೆಗೆ ಸಲಿಂಗಿಗಳ ಲಿವ್‌ ಇನ್‌ ರಿಲೇಷನ್‌ನಲ್ಲಿ ಇರುವುದು, ಮದುವೆಯಾಗುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಿಂದೊಮ್ಮೆ ತಾವು ಇಂಥವರು ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಿದ್ದವರು, ಇದು ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆ, ತಮ್ಮದೇನೂ ತಪ್ಪಿಲ್ಲ ಎನ್ನುವ ವಾಸ್ತವಕ್ಕೆ ಬಂದಿದ್ದಾರೆ. ನಿಸರ್ಗವೇ ತಮ್ಮ ದೇಹ ಪ್ರಕೃತಿಯನ್ನು ಈ ರೀತಿ ಮಾಡಿರುವಾಗ ತಮ್ಮದಲ್ಲದ ತಪ್ಪಿಗೆ ಏಕೆ ಮುಜುಗರ ಪಟ್ಟುಕೊಳ್ಳಬೇಕು ಎನ್ನುವುದು ಅವರ ವಾದ. ಇದೇ ರೀತಿಯ ವಾದವನ್ನೇ ಮುಂದಿಟ್ಟು ಇದೀಗ ಇಬ್ಬರು ಮಹಿಳಾ ವೈದ್ಯರು ಮದುವೆಯಾಗುವ …

Read More »

ಸದ್ದು ಗದ್ದಲವಿಲ್ಲದೇ ಮಜಲಬೆಟ್ಟು ಬೀಡುವಿನಲ್ಲಿ ನಟಿ ಶುಭಾ ಪೂಂಜಾ ವಿವಾಹ,

ಉಡುಪಿ:ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಬುಧವಾರ(ಜನವರಿ 05) ಶಿರ್ವದ ನಿವಾಸದಲ್ಲಿ ಸುಮಂತ್ ಜತೆ ಹಸೆಮಣೆ ಏರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ನಿವಾಸದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿರುವುದಾಗಿ ಮೂಲಗಳು ತಿಳಿಸಿವೆ.   ಕಳೆದ ವರ್ಷವೇ ವಿವಾಹವಾಗುವ ವದಂತಿ ಇತ್ತು, ಆದರೆ ಲಾಕ್ ಡೌನ್ ನಿಂದಾಗಿ ವಿವಾಹ ಮುಂದೂಡಲಾಗಿತ್ತು. ಇಂದು ಸುಮಂತ್ ಮತ್ತು ಶುಭಾ ಪೂಂಜಾ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿರ್ವದ ಮಜಲಬೆಟ್ಟು ಬೀಡುವಿನಲ್ಲಿರುವ …

Read More »