ಶ್ರೀನಗರ: 73ನೇ ಗಣರಾಜ್ಯೋತ್ಸವದ ಅಂಗವಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ತ್ರಿವರ್ಣ ಧ್ವಜವನ್ನು ಶ್ರೀನಗರದ ಪ್ರಸಿದ್ಧ ಲಾಲ್ ಚೌಕ್ ಪ್ರದೇಶದ ಗಡಿಯಾರ ಗೋಪುರದ ಮೇಲೆ ಹಾರಿಸಲಾಯಿತು. ಭಾರತದ ಸ್ವಾತಂತ್ರ್ಯದ ನಂತರ ಗಡಿಯಾರ ಗೋಪುರದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರುವುದು ಇದೇ ಮೊದಲು ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇಬ್ಬರು ಸ್ಥಳೀಯ ಕಾರ್ಯಕರ್ತರಾದ ಸಾಜಿದ್ ಯೂಸುಫ್ ಶಾ ಮತ್ತು ಸಾಹಿಲ್ ಬಶೀರ್ ಅವರು ಸ್ಥಳೀಯರು ಎನ್‌ಜಿಒ ಮತ್ತು ಆಡಳಿತದೊಂದಿಗೆ ಲಾಲ್ ಚೌಕ್ ಪ್ರದೇಶದಲ್ಲಿ …
Read More »Daily Archives: ಜನವರಿ 26, 2022
ಪತ್ನಿಯ ಐಶಾರಾಮಿ ಜೀವನಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ
ಬೆಂಗಳೂರು: ದುಬಾರಿ ಬೆಲೆಯ ಬಟ್ಟೆ ಖರೀದಿ ಸೇರಿದಂತೆ ಪತ್ನಿಯ ಐಶಾರಾಮಿ ಜೀವನಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಮೆಕಾನಿಕ್ ಕೆಲಸ ಮಾಡುತ್ತಿದ್ದ ಚಾಂದ್‌ಪಾಷಾ (31) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕೌಟುಂಬಿಕ ಕಲಹ ದಿಂದ ಮೊದಲ ಪತ್ನಿಯಿಂದ ದೂರವಾಗಿದ್ದರು. ಆ ಹಿನ್ನೆಲೆ ಚಾಂದ್ ಪಾಷಾ ಕಳೆದ 4 ತಿಂಗಳ ಹಿಂದಷ್ಟೇ ಉಸ್ಮಾ (26) ಎಂಬಾಕೆಯನ್ನು ಮದುವೆಯಾಗಿದ್ದ. ಚಾಂದ್ ಪಾಷಾ ಪತ್ನಿ ಉಸ್ಮಾಗೆ ಐಷಾರಾಮಿ …
Read More »5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಕೈಗಾರಿಕಾ ವಲಯ
ಕಲಬುರಗಿ: ಹಿಂದುಳಿದ ಭಾಗವಾದ ಕಲಬುರಗಿ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆಕರ್ಷಿಸಲು ಸೇಡಂ ರಸ್ತೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ 5 ಸಾವಿರ ಎಕರೆ ಜಮೀನು ವಶಕ್ಕೆ ಪಡೆದುಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ಹಾಗೂ ಕೈಗಾರಿಕಾ ವಲಯವನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಪ್ರಕಟಿಸಿದರು. ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ …
Read More »ಮೃತಪಟ್ಟ ಮಹಿಳೆಯೊಬ್ಬರ ಅಂಗಾಂಗಳನ್ನು ದಾನ ಮಾಡಿ ಜೀವನದ ಸಾರ್ಥಕತೆ
ಮಣಿಪಾಲ: ದಾವಣಗೆರೆ ಬಳಿ ಸಂಭವಿಸಿದ ರಸ್ತೆ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯೊಬ್ಬರ ಅಂಗಾಂಗಳನ್ನು ದಾನ ಮಾಡಿ ಜೀವನದ ಸಾರ್ಥಕತೆ ಮೆರೆದಿದ್ದಾರೆ. ದಾವಣಗೆರೆ ಬಳಿ ಗುಡಾಲು ಗ್ರಾಮದ ಗುಮ್ಮನೂರು ರಸ್ತೆಯಲ್ಲಿ ಜ.22ರ ಸಂಜೆ ಅಪಘಾತ ಸಂಭವಿಸಿತ್ತು. ನಂಜುಂಡಪ್ಪ ಎಚ್.ಎನ್. ಅವರ ಪತ್ನಿ ಇಂದ್ರಮ್ಮ ಬಿ.ಎಂ. (57) ಗಂಭೀರ ಗಾಯಗೊಂಡಿದ್ದು, ಜ. 23ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಗಂಭೀರ ಪ್ರಯತ್ನದ ಹೊರತಾಗಿಯೂ ಚೇತರಿಸಿಕೊಳ್ಳದ …
Read More »ಪ್ರಶಸ್ತಿಗಾಗಿ ಕೆಲಸ ಮಾಡಲಿಲ್ಲ
ಮಂಗಳೂರು : ಛಲವೊಂದಿದ್ದರೆ ಎನನ್ನೂ ಸಾಧಿಸಬಹುದು ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮೈ ಮಹಾಲಿಂಗ ನಾಯ್ಕ ಅವರೇ ಸಾಕ್ಷಿ. ಬೋಳುಗುಡ್ಡೆಯಲ್ಲಿ ಸುರಂಗ ನಿರ್ಮಿಸಿ, ನೀರು ಹರಿಸಿ ಬಂಗಾರ ಬೆಳೆದ ಭಗೀರಥ. ಶಾಲೆ, ಕಾಲೇಜುಗಳಿಗೆ ಹೋಗದಿದ್ದರೂ, ನೀರನೆಮ್ಮದಿಯನ್ನು ಕಂಡು ಪ್ರಗತಿಪರ ಕೃಷಿಕರೆನಿಸಿಕೊಂಡವರು. ಮಹಾಲಿಂಗ ನಾಯ್ಕರ ಸಾಧನೆ ಮನ್ನಿಸಿ ಅವರನ್ನು ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ. ‘ದೇಶದ ದೊಡ್ಡ ಪ್ರಶಸ್ತಿ ಬಂದಿರುವುದು ನಮಗೆ ಖುಷಿ ಕೊಟ್ಟಿದೆ. …
Read More »ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ, ಸಲ್ಯೂಟ್ ಮಾಡಿದ ಸಚಿವ; ರಾಜೀನಾಮೆಗೆ ಪಟ್ಟು ಹಿಡಿದ ಬಿಜೆಪಿ
ಕೇರಳ : ಸಿಪಿಐ ನೇತೃತ್ವದ ಎಲ್‌ಡಿಎಫ್‌ನ ಮಿತ್ರಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್ (ಐಎನ್‌ಎಲ್) ನ ನಾಮನಿರ್ದೇಶಿತ ಶಾಸಕರಾದ ದೇವರಕೋವಿಲ್ ಜಿಲ್ಲಾ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಚಿವರು, ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಗಣ್ಯರು ಸೇರಿದಂತೆ ಯಾರೂ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿದ್ದನ್ನು ಗಮನಿಸಲಿಲ್ಲ. ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು ತಲೆಕೆಳಗಾಗಿದ್ದ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ನಂತರ ತಮ್ಮ ಭಾಷಣಕ್ಕೆ ಮುಂದಾದರು. ಇದರ …
Read More »ಕ್ರೀಡೆಯಲ್ಲಿ ಮಿಂಚಿ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುತ್ತಿರುವ ಭಾರತದ ಮಹಿಳಾ ಕ್ರೀಡಾಪಟು
ಭಾರತದ ಮಹಿಳೆಯರು ಕ್ರೀಡಾ ಲೋಕದಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಭಾರತೀಯ ಮಹಿಳಾ ಆಟಗಾರ್ತಿಯರು ವಿವಿಧ ಕ್ರೀಡೆಗಳಲ್ಲಿ ದೇಶಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ಅದು ಬಾಕ್ಸಿಂಗ್ ಅಥವಾ ವೇಟ್ ಲಿಫ್ಟಿಂಗ್ ಅಥವಾ ಅಥ್ಲೆಟಿಕ್ಸ್ ಆಗಿರಲಿ. ಭಾರತದ ಮಹಿಳೆಯರು ಪ್ರತಿ ಪಂದ್ಯದಲ್ಲೂ ಮುಂದಿದ್ದಾರೆ. ಇದಕ್ಕಾಗಿ ಬಹುಮಾನವನ್ನೂ ಪಡೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದರ ಫಲವಾಗಿ ಹಲವಾರು ಮಹಿಳಾ ಆಟಗಾರ್ತಿಯರಿಗೆ ಭದ್ರತಾ ಪಡೆ ಸೇರುವ ಅವಕಾಶ ಸಿಕ್ಕಿತು. ಭದ್ರತಾ ಪಡೆಗೆ ಸೇರ್ಪಡೆಯಾದ ಅಂತಹ ಕೆಲವು ಭಾರತೀಯ …
Read More »ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವವುಳ್ಳ ಇಲ್ಲಿನ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ
ಸವದತ್ತಿ: ಪೊಲೀಸ್ ಅರ್ಥ ರಕ್ಷಕ ಮತ್ತು ಕಾನೂನು ಪಾಲಕ. ಇವೆರಡರ ಜೊತೆಗೂ ಇಲ್ಲೊಂದು ಸಮಾಜಮುಖಿ ಕಾರ್ಯ ನಡೆದಿದೆ. ಸವದತ್ತಿ ಠಾಣೆಯ ಪೊಲೀಸ್ ಅಧಿಕಾರಿ ಕಾನೂನು ಪಾಲನೆ ಜೊತೆಗೆ ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಾವೂ ಸಹ ಮುಂದಿದ್ದೇವೆಂದು ನಿಖರವಾಗಿ ತೋರಿಸಿ ಸಾರ್ವಜನಿಕ ವಲಯದಲ್ಲಿ ಅತೀವ ಪ್ರಂಶಸೆಗೆ ಪಾತ್ರರಾಗಿದ್ದಾರೆ. ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವವುಳ್ಳ ಇಲ್ಲಿನ ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಬೆತ್ತದ ಜೊತೆಗೆ …
Read More »ಪ್ರತಿ ಮನೆಯ್ಲೂ ಕನಿಷ್ಠ ಒಂದಾದರೂ ಹಸು ಸಾಕಬೇಕು. ಸರ್ವೋತ್ತಮ ಜಾರಕಿಹೊಳಿ
ಕಕಮರಿ (ಬೆಳಗಾವಿ ಜಿಲ್ಲೆ): ‘ಪ್ರತಿ ಮನೆಯ್ಲೂ ಕನಿಷ್ಠ ಒಂದಾದರೂ ಹಸು ಸಾಕಬೇಕು. ಹೈನುಗಾರಿಕೆ ಮಾಡಬೇಕು. ಹಾಲು ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಪಡೆದು ಸವಲತ್ತುಗಳನ್ನು ಗಳಿಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಬೇಕು’ ಎಂದು ಗೋಕಾಕದ ಲಕ್ಷ್ಮಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಸಲಹೆ ನೀಡಿದರು. ಗ್ರಾಮದ ರಾಯಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ‘ಹಾಲು ಉತ್ಪಾದಕರ ಸಂಘದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದನ್ನು …
Read More »ಪಥ ಸಂಚಲನಕ್ಕೆ ಕನ್ನಡದಲ್ಲಿ ಕವಾಯತ್ತಿಗೆ ನಿದೇರ್ಶನ ನೀಡಿದ ಗೋಕಾಕ ಪಿಎಸ್ಐ ಕೆ. ವಾಲಿಕರ.
ಗೋಕಾಕ : ಪ್ರಥಮ ಬಾರಿಗೆ ಸ್ಥಳೀಯ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ಅವರು ಪಥ ಸಂಚಲನಕ್ಕೆ ಕನ್ನಡದಲ್ಲಿ ಕವಾಯತ್ತಿಗೆ ನಿರ್ದೇಶನ ನೀಡಿ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು ಪಿಎಸ್ಐ ಕೆ.ವಾಲಿಕರ ಅವರಿಗೆ ಸತ್ಕರಿಸಿ ,ಗೌರವಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡ ಬಸವರಾಜ ಖಾನಪ್ಪನವರ , ಸಾದಿಕ ಹಲ್ಯಾಳ ,ಮಹಾನಿಂಗ ಕೆಂಚನ್ನವರ ಜಾಪರ ಶಾಬಾಶಖಾನ, ಬಸವರಾಜ ದೇಶನೂರ, ಜೇಮ್ಸ ವರ್ಗಿಸ, ಉಪಸ್ಥಿತರಿದ್ದರು.
Read More »