ಕಾಕಿನಾಡ: 2010ರಲ್ಲಿ ಅಮೆರಿಕವಾಸಿಯಾಗಿದ್ದ ಕುಟುಂಬ ಕೆಲ ದಿನಗಳಿಗೆಂದು ಭಾರತಕ್ಕೆ ಬಂದಿತ್ತು. ಆ ಕುಟುಂಬ ಸಮೇತ ಬೀಚಿಗೆ ತೆರಳಿದ್ದರು. ಆಲ್ಲಿ ಅವರ ಕುಟುಂಬ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆ ಖರೀದಿಸಿದ್ದರು. ಕಡಲೆ ಖರೀದಿಸಿದ ಹಣವನ್ನು ನೀಡಲು ಪ್ರಣವ್ ತಂದೆ ಜೇಬಿಗೆ ಹಾಕಿದರು. ಆದರೆ ಅವರು ತಮ್ಮ ಪರ್ಸನ್ನು ಮನೆಯಲ್ಲೇ ಮರೆತುಬಂದಿದ್ದರು. ಹೀಗಾಗಿ ಆ ಅಜ್ಜಿಯ ಫೋಟೊ ಕ್ಲಿಕ್ಕಿಸಿ, ತಾವು ಹಣವನ್ನು ಮರಳಿಸುವುದಾಗಿ ಭರವಸೆ ನೀಡಿ ಅಲ್ಲಿಂದ ವಾಪಸ್ಸಾಗಿದ್ದರು. ಇದಾದ ಸ್ವಲ್ಪ …
Read More »Daily Archives: ಜನವರಿ 3, 2022
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದ ಬಸ್ ವಾಪಸ್ ಕಳುಹಿಸಿದ ಪೊಲೀಸರು..!
ಬೆಳಗಾವಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದ ಬಸ್ ಅನ್ನು ಬೆಳಗಾವಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಖಾಸಗಿ ಬಸ್ ಅನ್ನು ವಾಪಸ್ ಕಳುಹಿಸಲಾಗಿದೆ. ಖಾಸಗಿ ಬಸ್ ಪುಣೆಯಿಂದ ಬೆಳಗಾವಿಗೆ ಬರುತ್ತಿತ್ತು. ರಾಜ್ಯದಲ್ಲಿ ಕೊರೊನಾ ಹಾಗೂ ಒಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ಹೈಅಲರ್ಟ್ ಮಾಡಲಾಗಿದೆ.
Read More »ಕೊರೋನಾ ಅಬ್ಬರದ ಹೊತ್ತಲ್ಲೇ ಮತ್ತೊಂದು ಶಾಕ್: ಧಾರವಾಡ 2 ಸೇರಿ ರಾಜ್ಯದಲ್ಲಿ ಮತ್ತೆ 10 ಒಮಿಕ್ರಾನ್ ಕೇಸ್ ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರುಗತಿಯಲ್ಲಿ ಸಾಗಿ ಸಾವಿರದ ಗಡಿದಾಟಿ ಹೊಸ ಪ್ರಕರಣ ಪತ್ತೆಯಾಗ್ತಿವೆ. ಇದೇ ವೇಳೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆ ಆಗಿದೆ. ಇವತ್ತು ಹೊಸದಾಗಿ 10 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಕೂಡ ಏರಿಕೆ ಕಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ 8 ಕೇಸ್ ಗಳು ಪತ್ತೆಯಾಗಿದೆ. ಇವರಲ್ಲಿ 5 ಜನ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಧಾರವಾಡದಲ್ಲಿ 2 ಕೇಸ್ …
Read More »ಹೊಸ ನ್ಯಾಯಬೆಲೆ ಅಂಗಡಿ’ ತೆರೆಯಲು ಅರ್ಜಿ ಆಹ್ವಾನ
ಬಾಗಲಕೋಟೆ: ಹುನಗುಂದ ತಾಲೂಕಿನ ಅಮೀನಗಡ ತಾಂಡಾ, ಕಮತಗಿ ತಾಂಡಾ, ಇಲಕಲ್ಲ ತಾಲೂಕಿನ ಬಲಕುಂದಿ ತಾಂಡಾ, ಚಿಕ್ಕಕೊಡಗಲಿ ತಾಂಡಾ, ಜೋಶಿಗಲ್ಲಿ ತಾಂಡಾ ನಂ.2, ಹೊಸೂರ ತಾಂಡಾ, ಬಾಗಲಕೋಟೆ ತಾಲೂಕಿನ ಬಸವನಗರ ತಾಂಡಾ, ಮುಗಳೊಳ್ಳಿ ತಾಂಡಾ ನಂ.2, ನಾಯನೇಗಲಿ ತಾಂಡಾಗಳಲ್ಲಿ ಹೊಸ ನ್ಯಾಯಬೆಲೆ ಮಂಜೂರಾತಿ ನೀಡಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಹಕಾರಿ ಸಂಘವು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು, ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಠ 2 …
Read More »ರಾಜ್ಯ ಸರಕಾರದಿಂದ ಗುಡ್ ನ್ಯೂಸ್ : ಇನ್ಮುಂದೆ ಸಿಗಲಿದೆ ಫ್ರಿ ಡ್ರೈವಿಂಗ್ ಲೈಸೆನ್ಸ್
ಬಾಗಲಕೋಟೆ : ಮುಂಬರುವ ದಿನಗಳಲ್ಲಿ ಚಾಲನಾ ಲೈಸೆನ್ಸ್ ಇಲ್ಲದೇ ಚಾಲನೆ ಮಾಡುತ್ತಿರುವವರಿಗೆ ವರ್ಷದಲ್ಲಿ ಎರಡು ದಿನ ಉಚಿತವಾಗಿ ಚಾಲನಾ ಲೈಸೆನ್ಸ್ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು. ತಾಲೂಕಿನ ಶಿಗಿಕೇರಿ ಬಾದಾಮಿ ರಸ್ತೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಭೂಮಿ ಪೂಜೆ ನೆರವೇರಿಸಿ ಸಮಾರಂಭವನ್ನು ಉದ್ದೇಶಿಸಿ …
Read More »ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಪುನರ್ ನಾಮಕರಣ ಮಾಡಿ ಸರ್ಕಾರದಿಂದ ಆದೇಶ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಪುನರ್ ನಾಮಕರಣ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಯ ಮಕ್ಕಳಿಗೆ ಒಂದರಿಂದ ಐದನೇ ತರಗತಿವರೆಗೆ ಶಿಕ್ಷಣ ನೀಡಲು 68 ವಸತಿ ಶಾಲೆಗಳನ್ನು ತೆರೆಯಲಾಗಿದೆ. 8500 ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಶಾಲೆಗಳಿಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಲಾಗುವುದು. ಅಂಬೇಡ್ಕರ್ ಅವರ ಹೋರಾಟ, ದೇಶಕ್ಕೆ ಅವರು …
Read More »ರಾಜ್ಯ ದಲ್ಲಿ ಮತ್ತೆ 10 ಒಮಿಕ್ರಾನ್ ಹೊಸ ಕೇಸ್ ಪತ್ತೆ!
ಬೆಂಗಳೂರು : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ಸೋಂಕಿನ ಅಬ್ಬರ ರಾಜ್ಯದಲ್ಲೂ ಹೆಚ್ಚಾಗಿದ್ದು, ಇಂದು ರಾಜ್ಯದಲ್ಲಿ 10 ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಜನವರಿ 2 ರಂದು ಕರ್ನಾಟಕದಲ್ಲಿ 10 ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 8 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 5 ವಿದೇಶಿ ಪ್ರಯಾಣಿಕರಾಗಿದ್ದಾರೆ. ಧಾರವಾಡದಲ್ಲಿ 2 …
Read More »