Breaking News

Yearly Archives: 2021

ಸತ್ಯಕ್ಕೆ ಜಯ, ಸತ್ಯಮೇವ ಜಯತೇ: ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಂಧಿತರಾಗಿದ್ದ ನಟಿ ರಾಗಿಣಿ 144 ದಿನಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಬರುತ್ತಿದ್ದಂತೆ ನಿಜವಾಗಿ ಸತ್ಯಕ್ಕೆ ಜಯವಾಗಿದೆ, ಸತ್ಯಮೇವ ಜಯತೇ ಎಂದಿದ್ದಾರೆ. ಜೈಲಿನಿಂದ ಹೊರಬಂದು ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಇಷ್ಟು ದಿನ ನನ್ನ ಪರ ನಿಂತಿದ್ದ ಬಂಧುಗಳಿಗೆ, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಾನು ನ್ಯಾಯಾಲಯದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೆ. ಹಾಗಾಗಿ ನನಗೆ ಸಿಕ್ಕ ಜಯವಿದು. ನಾನು ತುಂಬಾ ಹೋರಾಟಗಳನ್ನು ನಡೆಸಿ ಜೈಲಿನಿಂದ ಹೊರಗಡೆ …

Read More »

ನಾಳೆ ಮಾಧುಸ್ವಾಮಿ, ಆನಂದ್‌ ಸಿಂಗ್‌ ರಾಜೀನಾಮೆ?

ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಖಾತೆ ಕಿತ್ತಾಟ ಮುಂದುವರಿದಿದೆ. ಈಗ ಕ್ಯಾಬಿನೆಟ್‌ನಲ್ಲಿ ಪ್ರಭಾವಿಗಳಾಗಿರುವ ಮಾಧುಸ್ವಾಮಿ ಮತ್ತು ಆನಂದ್‌ ಸಿಂಗ್‌ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 9 ದಿನದಲ್ಲಿ ಮೂರನೇ ಬಾರಿ ನಡೆದಿರುವ ಖಾತೆಗಳ ಪುನರ್ ಹಂಚಿಕೆಯಲ್ಲಿ ಸಚಿವರಾದ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರ ಖಾತೆ ಮತ್ತೆ ಬದಲಾಗಿದೆ. ಅದರಲ್ಲೂ ಸಚಿವ ಮಾಧುಸ್ವಾಮಿಯ ಖಾತೆಗಳಲ್ಲಿ ಸತತ ಮೂರನೇ ಬಾರಿ ಬದಲಾವಣೆಯಾಗಿದೆ. ಕಾನೂನು ಮತ್ತು …

Read More »

ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ

ಪುತ್ತೂರಿನ ಬಾಲಕನ ಆವಿಷ್ಕಾರಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಮಂಗಳೂರು: ದಕ್ಷಿಣ ಕನ್ನಡದ ರಾಕೇಶ್‍ಕೃಷ್ಣ ಕೆ. ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಸೇರಿದಂತೆ ದೇಶದ ಒಟ್ಟು 32 ಮಕ್ಕಳಿಗೆ ಈ ಬಾರಿಯ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಅವರ ಸೀಡೋಗ್ರಾಫರ್ ಅನ್ನೋ ಬೀಜ ಬಿತ್ತನೆಯ ಕೃಷಿ ಯಂತ್ರ ಸಂಶೋಧನೆಗೆ ಈ ಪ್ರಶಸ್ತಿ ಸಂದಿದೆ. ಇಂದು ಪ್ರಧಾನಿ …

Read More »

ಪೊಲೀಸ್ ಇಲಾಖೆ ಹಾಗೂ ಒಟ್ಟಾರೆ ಜಿಲ್ಲಾಡಳಿತ ಅಕ್ರಮದಲ್ಲಿ ಭಾಗಿಯಾಗಿದ್ದಾರಾ?:D.C.M.

ರಾಯಚೂರು: ಡಿಸಿ, ಸಿಇಓ ,ಎಸ್‍ಪಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಿರಾ? ಅಕ್ರಮ ಮರಳುಗಾರಿಕೆ, ಮಟಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ನೀವುಗಳು ಇದರಲ್ಲಿ ಶಾಮೀಲಾಗಿದ್ದಾರಾ? ಅಕ್ರಮ ನಡೆಯುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಮುಂದೆ ನಾನು ಎಂತಹ ಉಸ್ತುವಾರಿ ಸಚಿವ ಎನ್ನುವುದನ್ನು ತೋರಿಸುತ್ತೇನೆ ಲಕ್ಷ್ಮಣ್ ಸವದಿ ಅಧಿಕಾರಿಗಳನ್ನ ತರಾಟೆ …

Read More »

ರೈತರ ಪ್ರತಿಭಟನೆ ವಿರುದ್ಧ ಶೆಟ್ಟರ್ ಕಿಡಿ,ಎಂಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ಕೊಟ್ಟು ನೋಡೋಣ

ಹುಬ್ಬಳ್ಳಿ: ಎಪಿಎಂಸಿಯಿಂದ ರೈತರಿಗೆ ಲಾಭವಾಗಿಲ್ಲ. ಎಪಿಎಂಸಿ ಇಲ್ಲ ಅಂದ್ರೆ ಇಲ್ಲ, ಎಂಪಿಎಂಸಿ ಮುಚ್ಚಿದ್ರೆ ಏನಾಯ್ತು? ಹೊರಗಡೆಯವರಿಗೆ ಅವಕಾಶ ಕೊಟ್ಟು ನೋಡೋಣ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರು ಬೆಳೆದ ಕೃಷಿ ಉತ್ಪನ್ನಗಳಿಂದ ಇಷ್ಟು ವರ್ಷ ಎಪಿಎಂಸಿಯಲ್ಲಿ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದರು. ತಿದ್ದುಪಡಿ ಕಾಯ್ದೆಯಿಂದ ಹೊರಗಡೆ ವಹಿವಾಟು ನಡೆಸಲು ಅವಕಾಶ ಇರುವುದರಿಂದ ಅದರ ಲಾಭ …

Read More »

ಪ್ರಥಮ ದರ್ಜೆಯ ಗುತ್ತಿಗೆದಾರನಿಗೆ ಐಬಿಯನ್ನೇ ಅಧಿಕಾರಿಗಳು ಬರೆದು ಕೊಟ್ರಾ..?

ವಿಜಯಪುರ: ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುಂಡು, ತುಂಡು ಪಾರ್ಟಿ ನಡೆದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಕ್ಲಾಸ್ 1 ಗುತ್ತಿಗೆದಾರನೊಬ್ಬ ಮುಳವಾಡ ಪ್ರವಾಸಿ ಮಂದಿರದಲ್ಲಿ ಪೆಂಡಾಲ್ ಹಾಕಿಸಿ ಭರ್ಜರಿಯಾಗಿ ಗುಂಡು ತುಂಡು ಪಾರ್ಟಿ ನಡೆಸಿದ್ದಾನೆ. ಈ ಪಾರ್ಟಿಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ 200ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಎಣ್ಣೆ, ಮಾಂಸದೂಟ ಎಲ್ಲವೂ ರಾಜಾರೋಷವಾಗಿ ನಡೆದಿದೆ. ಪ್ರವಾಸಿ …

Read More »

11 ನೇ ರಾಷ್ಟೀಯ ಮತದಾರ ದಿನದ್ ಅಂಗವಾಗಿ ಬೆಳಗಾವಿ ಜಿಲ್ಲಾಡಳಿತದಿಂದ ಜಾಥಾ ಕಾರ್ಯಕ್ರಮ.

   ಬೆಳಗಾವಿ :ಜಿಲ್ಲಾಡಳಿತದಿಂದ 11 ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಮ್ಮ ಮತದಾರರನ್ನು ಅಧಿಕಾರಯುಕ್ತ,ಜಾಗರೂಕ, ಸುರಕ್ಷಿತ,ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವ ಸಂದೇಶವನ್ನು ಇಟ್ಟುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಜಾಥಾ ನಡೆಯಿತು ನಂತರ ಜಿಲ್ಲಾ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು. ಬೆಳಗಾವಿ ಜಿಲ್ಲಾಡಳಿತದಿಂದ 11 ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಮ್ಮ ಮತದಾರರನ್ನು ಅಧಿಕಾರಯುಕ್ತ,ಜಾಗರೂಕ, ಸುರಕ್ಷಿತ,ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವ ಸಂದೇಶವನ್ನು ಇಟ್ಟುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಅವರು …

Read More »

ಸೈಫ್‍ಅಲಿಖಾನ್ ತಾಂಡವ ಸಿನಿಮಾ ವಿರೋಧಿಸಿ ಶ್ರೀರಾಮ ಸೇನಾ ಹಿಂದೂಸ್ತಾನ್ ಪ್ರತಿಭಟನೆ

ಕೋವಿಡ್ ಸೋಂಕು ತಡೆ ಹೆಸರಿನಲ್ಲಿ ಬಂದ್ ಮಾಡಿರುವ ಹಿಂದೂ ದೇವಾಲಯಗಳನ್ನು ತೆರೆದು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಹಿಂದೂ ದೇವತೆಗಳಿಗೆ ಅಪಮಾನ ಮಾಡುವಂತೆ ಚಿತ್ರೀಕರಿಸಿರುವ ತಾಂಡವ ಹಿಂದಿ ಚಲನಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಯ ಮುಖಂಡರು, …

Read More »

ಅಕ್ರಮ ಅಕ್ಕಿ ಸಾಗಾಟಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ಕಿತ್ತೂರು : ಖಚಿತ ಮಾಹಿತಿ ಮೇರೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಕಿತ್ತೂರು ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಹಾವೇರಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ ಲಾರಿಗಳನ್ನು ಕಿತ್ತೂರು ಗಜರಾಜ ಪ್ಯಾಲೇಸ್ ಎದುರಿಗೆ ರಾಷ್ಟ್ರಿಯ ಹೆದ್ದಾರಿ 4 ರಲ್ಲಿ ವಶಕ್ಕೆ ಪಡೆದು, ಚಾಲಕರು ಹಾಗೂ ಕ್ಲೀನರ್‍ಗಳನ್ನು ಬಂಧಿಸಿದ್ದಾರೆ. ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ತಲಾ 50ಕೆಜಿಯ 1040 ಚೀಲ ರೇಷನ್ ಅಕ್ಕಿ, …

Read More »

ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲ ಪತ್ತೆ, ಮತ್ತಿಬ್ಬರು ಅರೆಸ್ಟ್

ಬೆಂಗಳೂರು,ಜ.25- ಎಫ್‍ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಹತ್ವದ ಪ್ರಗತಿ ಸಾಸಿದ್ದು, ಸೋರಿಕೆಯ ಮೂಲವನ್ನು ಪತ್ತೆಹಚ್ಚಿರುವ ಸಿಸಿಬಿ ಪೊಲೀಸರು ಕರ್ನಾಟಕ ಲೋಕಸೇವಾ ಆಯೋಗದ ಇಬ್ಬರು ಸಿಬ್ಬಂದಿಗಳನ್ನು ಬಂಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ)ದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ರಮೇಶ್, ಪರೀಕ್ಷಾ ವಿಭಾಗದಲ್ಲಿ ಶೀಘ್ರ ಲಿಫಿಗಾರರಾಗಿರುವ ಸನಾಬೇಡಿ ಅವರನ್ನು ಬಂಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಸನಾಬೇಡಿ ಪರೀಕ್ಷಾ ವಿಭಾಗದ ನಿಯಂತ್ರಕರಾಗಿದ್ದು, ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿ ರಮೇಶ್‍ಗೆ …

Read More »