Breaking News

Yearly Archives: 2021

ಹಾಲಿನ ಬೆಲೆ ಹೆಚ್ಚಳ ಪ್ರತಿ ಲೀಟರ್ ಗೆ 100 ರೂ. ನಿಗದಿ!

ಚಂಡೀಗಢ : ಕೃಷಿ ಕಾನೂನುಗಳನ್ನು ವಿರೋಸಿ ಹಾಗೂ ತೈಲ ಬೆಲೆ ಏರಿಕೆ ವಿರೋಸಿ ಇನ್ನು ಮುಂದೆ ಪ್ರತಿ ಲೀಟರ್ ಹಾಲನ್ನು 100 ರೂ . ಗೆ ಮಾರಾಟ ಮಾಡುವಂತೆ ಹರಿಯಾಣದ ಹಿಸ್ಸಾರ್ ‍ ಕಾಫ್ ಪಂಚಾಯ್ತಿ ರೈತರಿಗೆ ಸಲಹೆ ನೀಡಿದೆ . ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸುಮಾರು 90 ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಹಂತ ಹಂತವಾಗಿ ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುತ್ತಿದ್ದಾರೆ …

Read More »

ಬಸ್ ಸಂಚಾರ ಸ್ತಬ್ಧವಾದ ಸಾಧ್ಯತೆ ಇದೆ…?

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಬಸ್ ಸಂಚಾರ ಸ್ತಬ್ಧವಾದ ಸಾಧ್ಯತೆ ಇದೆ. ಸಾರಿಗೆ ನೌಕರರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಬೀದಿಗೆ ಇಳಿಯಲು ನೌಕರರು ನಿರ್ಧರಿಸಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸರ್ಕಾರಕ್ಕೆ ನೀಡಿದ್ದ ಡೆಡ್ಲೈನ್ ಮುಗಿಯುತ್ತಿದ್ದಂತೆ ನೌಕರರು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಗರಂ ಆಗಿದ್ದು ಮುಷ್ಕರಕ್ಕೆ ಮುಂದಾಗಿದ್ದಾರೆ. ಸಾರಿಗೆ …

Read More »

ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಪ್ರೇಮಿಗಳಿಬ್ಬರು ಶವವಾಗಿ ಪತ್ತೆ

ಹಾವೇರಿ: ಅನುಮಾನಾಸ್ಪದ ರೀತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮೃತಪಟ್ಟವರನ್ನು ಪ್ರವೀಣ ಬಾಗಿಲದ(24) ಮತ್ತು ನೇತ್ರಾ ಬಾಳಿಕಾಯಿ(18) ಎಂದು ಗುರುತಿಸಲಾಗಿದೆ. ನೇತ್ರಾ ಮೂಲತಃ ಹಾವೇರಿ ತಾಲ್ಲೂಕು ಗೌರಾಪುರ ಗ್ರಾಮದ ನಿವಾಸಿಯಾಗಿದ್ದು, ಹಳೇರಿತ್ತಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಎಸ್.ಎಸ್‍ಎಲ್.ಸಿ ವಿದ್ಯಾಭ್ಯಾಸ ಮಾಡಿದ್ದಳು. ಪ್ರವೀಣ ಹಾವೇರಿ ತಾಲ್ಲೂಕು ಹಳೇರಿತ್ತಿ ಗ್ರಾಮದ ಯುವಕನಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಪ್ರೇಮಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತದೇಹಗಳ …

Read More »

ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ

ಕೊಪ್ಪಳ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ ಮಾಡಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಜಿಲ್ಲೆಯ ಕಾರಟಗಿ ಪಟ್ಟಣದ ನಜೀರ್ ಸಾಬ್ ಕಾಲೋನಿ ನಿವಾಸಿ 12 ವರ್ಷದ ಮಲ್ಲಿಕಾರ್ಜುನ ಕಳೆದ ಅಕ್ಟೋಬರ್ 23 ರಂದು ನಿಗೂಢವಾಗಿ ಸಾವನ್ನಪ್ಪಿದ್ದನು. ಇದೀಗ ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀಯನ್ನು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 23 ರಂದು ರಾಯಚೂರು ಜಿಲ್ಲೆ ಬಳಗಾನೂರ ಬಳಿಯ ತುಂಗಭದ್ರಾ …

Read More »

ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ

ಕೊಪ್ಪಳ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕೊಲೆ ಮಾಡಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಜಿಲ್ಲೆಯ ಕಾರಟಗಿ ಪಟ್ಟಣದ ನಜೀರ್ ಸಾಬ್ ಕಾಲೋನಿ ನಿವಾಸಿ 12 ವರ್ಷದ ಮಲ್ಲಿಕಾರ್ಜುನ ಕಳೆದ ಅಕ್ಟೋಬರ್ 23 ರಂದು ನಿಗೂಢವಾಗಿ ಸಾವನ್ನಪ್ಪಿದ್ದನು. ಇದೀಗ ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮಲ್ಲಿಕಾರ್ಜುನ್ ತಾಯಿ ಲಕ್ಷ್ಮೀಯನ್ನು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್ 23 ರಂದು ರಾಯಚೂರು ಜಿಲ್ಲೆ ಬಳಗಾನೂರ ಬಳಿಯ ತುಂಗಭದ್ರಾ …

Read More »

ಗೋಕಾಕ: ಜಿಲ್ಲಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಬಹುಮಾನ ಪಡೆಯುತ್ತಿರುವುದು.

ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಶನಿವಾರದಂದು ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ (ಬೆಳಗಾವಿ ನಗರ ಹೊರತು ಪಡಿಸಿ) ದೇಹದಾಢ್ರ್ಯದ ಸ್ಪರ್ಧೆಯಲ್ಲಿ ಖಾನಾಪೂರದ ರಾಜು ಗಾವಡೆ ಮಿಸ್ಟರ್ ಬಾಡಿ ಲೈನ್ 2021 ಚಾಂಪಿಯನ್ ಆಪ್ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ. ಬೆಳಗಾವಿ ಗ್ರಾಮೀಣದ ರನ್ನರ್ ಆಫ್ ಆಗಿ ಸುನೀಲ ಬಾತಖಾಂಡೆ, ಖಾನಾಪೂರದ ಬೇಸ್ಟ್ ಫೋಜರ್ ಪ್ರಶಸ್ತಿಯನ್ನು ಸಂದೀಪ ಅಂಗಡಿ ಪಡೆದಿದ್ದಾರೆ. ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯಲ್ಲಿ …

Read More »

ರಾಜ್ಯ ಹೆದ್ದಾರಿ ಕಾಮಗಾರಿ

ಗೋಕಾಕ: ಲೋಕೋಪಯೋಗಿ ಇಲಾಖೆಯು 2021-22 ನೇ ಸಾಲಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಡಿಪಿಆರ್ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು. ನಗರದಲ್ಲಿ ರವಿವಾರದಂದು ಜಲಸಂಪನ್ಮೂಲ ಸಚಿವರೊಂದಿಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಂದ ಈಗಾಗಲೇ ಈ ಪ್ರಸ್ತಾವನೆಯ ಅನುಮೋದನೆ ಪಡೆಯಲಾಗಿದ್ದು, …

Read More »

ಗೋಕಾಕ: ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸತೀಶ ಜಾರಕಿಹೊಳಿ ಮಾತನಾಡಿದರು.

ಗೋಕಾಕ: ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖಾಂತರ ಕಲೆ, ಸಾಹಿತ್ಯದ ಜೊತೆಗೆ ಕೃಷಿ, ಉದ್ದಿಮೆಗಳ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕು ಎಂದು ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದರು. ಅವರು ಶನಿವಾರದಂದು ಸಂಜೆ ಇಲ್ಲಿಯ ಎನ್‍ಇಎಸ್ ಶಾಲಾ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಂಡ ಗೋಕಾಕದ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ ಕಾಲದಿಂದಲೂ …

Read More »

ಗೋಕಾಕ: ಸಚಿವರ ಕಛೇರಿಯಲ್ಲಿ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನವನ್ನು ಸಚಿವ ರಮೇಶ ಜಾರಕಿಹೊಳಿ ವಿತರಿಸಿದರು.

ಗೋಕಾಕ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ತಮ್ಮ ಕಛೇರಿಯಲ್ಲಿ ತಾಲೂಕಿನ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಿಸಿ ಮಾತನಾಡಿದರು. ಸನ್ 2019-20 ಮತ್ತು 2020-21 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ ಯೋಜನೆಯಡಿಯಲ್ಲಿ ರೂ 2.42 ಲಕ್ಷಗಳ ಅನುದಾನದಲ್ಲಿ 5 ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ವರ್ಗದ ಬಿ.ಇ …

Read More »

ಇಂದು ಸಂಜೆ 6 ಗಂಟೆಗೆ ಬಿಗ್​ ಬಾಸ್ 8 ಪ್ರಾರಂಭ​!; ಮನೆ ಒಳಗೆ ಹೋಗುವವರು ಇವ್ರೇನಾ?

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫೆಬ್ರವರಿಯಿಂದ ಆರಂಭವಾಗಲಿದೆ ಎನ್ನುವ ಸುದ್ದಿ ಹೊರ ಬಿದ್ದಿದ್ದೇ ತಡ, ಪ್ರೇಕ್ಷಕರು ಮನೆ ಒಳಗೆ ಯಾರು ಹೋಗಲಿದ್ದಾರೆ? ಈ ಬಾರಿ ಮನೆ ಸೇರುವ ಸ್ಪರ್ಧಿಗಳೆಷ್ಟು? ಸುದೀಪ್​ ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಈ ಎಲ್ಲಾ ಪ್ರಶ್ನೆ ಹಾಗೂ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಸೀಸನ್​ 8 ಗ್ರ್ಯಾಂಡ್​ ಆಗಿ ಪ್ರಾರಂಭಗೊಳ್ಳಲಿದೆ. …

Read More »