ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರು ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕುಟುಂಬದ ಆತಿಥ್ಯ ಸ್ವೀಕರಿಸಿದ್ದಾರೆ. ಬೆಂಗಳೂರಿನಿಂದ ಪ್ರಜ್ವಲ್ ಅವರೊಂದಿಗೆ ಆಗಮಿಸಿದ ದರ್ಶನ್ ಅವರನ್ನು ಜೆಡಿಎಸ್ ಬೆಂಬಲಿಗರು, ಅಭಿಮಾನಿಗಳು ಸ್ವಾಗತಿಸಿದ್ದಾರೆ. ದರ್ಶನ್ ಆಗಮನದ ಸುದ್ದಿ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದಾರೆ. ಪ್ರಜ್ವಲ್ ರೇವಣ್ಣ ಅವರೊಂದಿಗೆ 8 ವರ್ಷಗಳಿಂದ ಗೆಳೆತನವಿದೆ …
Read More »Yearly Archives: 2021
ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ?
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐ ಟಿ ಯುವತಿ ಹಾಗೂ ಸಿಡಿ ಮಾಸ್ಟರ್ ಮೈಂಡ್ ಹುಡುಕಾಟದಲ್ಲಿ ನಿರತವಾಗಿದೆ. ಈ ನಡುವೆ ಸಿಡಿಯಲ್ಲಿರುವ ಧ್ವನಿ ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದೆ ಎಂಬ ಶಂಕೆ ಮೂಡಿದೆ. ವ್ಯಕ್ತಿಯ ದ್ವನಿಗೂ ಸಿಡಿಯಲ್ಲಿರುವ ಧ್ವನಿನೂ ಸಾಮ್ಯತೆ ಇರುವುದರಿಂದ ಈಗಾಗಲೇ ಎಸ್ ಐ ಟಿ ವ್ಯಕ್ತಿಯ ಧ್ವನಿ ಸಂಗ್ರಹಿಸಿದ್ದು, ಧ್ವನಿ ಸ್ಯಾಂಪಲ್ ನ್ನು ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದೆ. ಇಂದು ವರದಿ ಬರುವ …
Read More »ಶಕುನಿ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ: ಜಿಟಿಡಿ ವಾಗ್ದಾಳಿ
ಮೈಸೂರು: ಜೆಡಿಎಸ್ ನಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಕುನಿ, ಮಂಥರೆಯ ಮಾತು ಕೇಳಿ ಕುಮಾರಸ್ವಾಮಿ ಜೆಡಿಎಸ್ ನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಜಿ.ಟಿ.ಡಿ., ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ನಾಶವಾಯಿತು. ರಾಮಾಯಣದಲ್ಲಿ ಮಂಥರೆ ಮಾತು ಕೇಳಿ ಕೈಕೇಯಿ ರಾಮನನ್ನು ವನವಾಸಕ್ಕೆ ಕಳುಹಿಸಿದಳು. ಇದೀಗ ರಾಜಕೀಯದಲ್ಲಿ ಕುಮಾರಸ್ವಾಮಿ ಶಕುನಿ, ಮಂಥರೆ ಮಾತು ಕೇಳಿ ಜೆಡಿಎಸ್ ನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದರು. …
Read More »ನಾನು ನಿಮ್ಮ ಖುರ್ಚಿಯಲ್ಲಿ ಕೂರುವ ಕಾಲ ದೂರವಿಲ್ಲ; ಸಿಎಂ ಕಾಲೆಳೆದ ಸಿದ್ದರಾಮಯ್ಯ
ಬೆಂಗಳೂರು: ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇತಿಹಾಸದಲ್ಲೇ ಇಂತಹ ಕೆಟ್ಟ ಬಜೆಟ್ ನ್ನು ನೋಡಿರಲಿಲ್ಲ. ಬಜೆಟ್ ನಲ್ಲಿ ರೆವೆನ್ಯೂ, ಖರ್ಚು-ವೆಚ್ಚ ಸಮತೋಲನವಿರಬೇಕು ಆದರೆ ಈ ಬಾರಿ ಬಜೆಟ್ ವೆಚ್ಚವೇ ಅಧಿಕವಾಗಿದೆ ಎಂದು ಕಿಡಿಕಾರಿದರು. ಈ ರೀತಿ ಬಜೆಟ್ ನಿಂದ ಸರ್ಕಾರದ ಮೇಲೂ ಪರಿಣಾಮ ಬೀರುತ್ತೆ. ನಾವು ತೆಗೆದುಕೊಳ್ಳುವ ಸಾಲ ಆದಾಯದ ಶೇ.25ರ ಒಳಗಿರಬೇಕು. 2004-05ರಲ್ಲಿ ನಾವು ಸಮತೋಲನ ಕಾಯ್ದುಕೊಂಡೆವು. ಆಗ ನಾನು ಹಣಕಾಸು …
Read More »ಶಿವಸೇನೆ ಕಚೇರಿ ಮುಚ್ಚಿಸಲು ವಾಹನಗಳ ಜಪ್ತಿಗೆ ಕನ್ನಡ ಕ್ರಿಯಾ ಸಮಿತಿ ಆಗ್ರಹ
ಕರ್ನಾಟಕ, ಕನ್ನಡಿಗರ ವಿರುದ್ಧವೇ ನಾಡದ್ರೋಹಿ ಚಟುವಟಿಕೆ ನಡೆಸುವ ಶಿವಸೇನೆಗೆ ಕರ್ನಾಟಕದ ನೆಲದಲ್ಲಿಯೇ ಕಾರ್ಯಾಲಯ ನಡೆಸಲು ಅವಕಾಶ ಮಾಡಿಕೊಡುವದು ಎಷ್ಟು ಸರಿ? ನಮ್ಮ ವಿರುದ್ಧವೇ ಪಿತೂರಿ ನಡೆಸುವ ಇಂಥ ಸಂಘಟನೆಯ ವಾಹನಗಳು ನಮ್ಮ ಮುಂದೆಯೇ ನಾಮಫಲಕ ಹಾಕಿಕೊಂಡು ಸಂಚರಿಸಲು ಅವಕಾಶ ಮಾಡಿಕೊಡುವದು ಎಷ್ಟು ಸಮಂಜಸ? ಕೂಡಲೇ ಶಿವಸೇನೆಯ ಬೆಳಗಾವಿ ಕಾರ್ಯಾಲಯವನ್ನು ಮುಚ್ಚಿಸಬೇಕು ಮತ್ತು ಈ ಸಂಘಟನೆಯ ವಾಹನಗಳನ್ನು ಜಪ್ತಿ ಮಾಡಬೇಕೆಂದು ಆಗ್ರಹಿಸುವ ಮನವಿಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …
Read More »ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು:ಪ್ರಿಯಾಂಕಾ ಜಾರಕಿಹೊಳಿ
ಯಮಕನಮರಡಿ: “ಮಹಿಳೆಯರು ಕಾಯ್ದೆ, ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಿಂದೇಟು ಹಾಕಬಾರದು” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳು, ಯಮಕನಮರಡಿ, ಹತ್ತರಗಿ ಹಾಗೂ ಜಿಲ್ಲಾ ಸ್ತ್ರೀ ಒಕ್ಕೂಟ ಮತ್ತು ಹುಕ್ಕೇರಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಮೇರಿಕಾದಲ್ಲಿ 1914ರಲ್ಲಿ …
Read More »ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ಬಜೆಟ್ನಲ್ಲಿ 2 ಬ್ಯಾಂಕ್ ಖಾಸಗೀಕರಣ ಮಾಡುವುದಾಗಿ ಹೇಳಿತ್ತು. ಬಳಿಕ 4 ಬ್ಯಾಂಕ್ಗಳನ್ನು ಖಾಸಗೀಕರಣಕ್ಕೆ ಒಳಪಡಿಸಲು ಕೇಂದ್ರ ಯತ್ನಿಸಿದೆ. ಇದರಿಂದ ಸಾರ್ವಜನಿಕರ ಹಣ ಖಾಸಗಿಯವರ ಕೈ ಸೇರಲಿದೆ. ಜನರ ಹಣಕ್ಕೆ (ಠೇವಣಿಗೆ) ಯಾವುದೇ ಭದ್ರತೆ ಇರುವುದಿಲ್ಲ. ಈಗಾಗಲೇ ಹಲವು ಖಾಸಗಿ ಬ್ಯಾಂಕ್ಗಳು ಅಕ್ರಮ ಎಸಗಿವೆ ಎಂದು ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಆರೋಪಿಸಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಖಾಸಗೀಕರಣದಿಂದ ವಿದೇಶಿ ಬಂಡವಾಳದಾರರು ಹಾಗೂ ಉದ್ಯಮಪತಿಗಳ …
Read More »ಬೆಳಗಾವಿ ಶಿವಸೇನೆ ಕಚೇರಿ ಮುಚ್ಚಲು ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಸದಸ್ಯರಿಂದ ಡಿಸಿ ಗೆ ಮನವಿ
ಬೆಳಗಾವಿ: ಬೆಳಗಾವಿಯಲ್ಲಿರುವ ಶಿವಸೇನೆ ಕಚೇರಿಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸದಸ್ಯರು ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಿವಸೇನೆ ಬೋರ್ಡ್ ಹೊಂದಿರೋ ವಾಹನವನ್ನು ಜಪ್ತಿ ಮಾಡಬೇಕು ಹಾಗೂ ನಗರದಲ್ಲಿರುವ ಶಿವಸೇನೆ ಕಚೇರಿಯನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕ ಹಾಕಲು, ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸಲು ಅವಕಾಶ ಕೊಡದೇ ಇರುವಾಗ, ನಿರಂತರವಾಗಿ ನಾಡವಿರೋಧಿ ಚಟುವಟಿಕೆ ನಡೆಸುವ ಶಿವಸೇನೆಗೆ ಬೆಳಗಾವಿಯಲ್ಲಿ ಕಚೇರಿ ಮುಂದುವರೆಸಲು ಅನುಮತಿ …
Read More »ಕಿತ್ತೂರು ಕರ್ನಾಟಕಕ್ಕೆ 371 ಜೆ ವಿಶೇಷ ಸ್ಥಾನ ನೀಡಿ : ಮಾಜಿ ಶಾಸಕ ಕೋನರೆಡ್ಡಿ ಆಗ್ರಹ
ಬೆಳಗಾವಿ : ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ನೀಡಿರುವ ಸಂವಿಧಾನದ ಪರಿಚ್ಛೇದ 371 ಜೆ ತಿದ್ದುಪಡಿ ಮಾಡಿ ಮುಂಬೈ ಕರ್ನಾಟಕದ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವಂತೆ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಡಾ. ನಂಜುಂಡಪ್ಪ ವರದಿ ಜಾರಿಯಾದರೂ …
Read More »ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ ಕ್ಯಾಮರಾದಲ್ಲಿ ಸೆರೆ
ಮೈಸೂರು: ಹುಲಿಯೊಂದು ಹೆಬ್ಬಾವನ್ನ ಬೇಟೆಯಾಡುವ ಅಪರೂಪದ ದೃಶ್ಯ ನಾಗರಹೊಳೆಯ ಕಬಿನಿ ಭಾಗದಲ್ಲಿ ಸಫಾರಿ ಮಾಡುತ್ತಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ಆನೆ, ಸಿಂಹದಂತಹ ದೈತ್ಯ ಪ್ರಾಣಿಗಳನ್ನ ಸಲೀಸಾಗಿ ಬೇಟೆಯಾಡುತ್ತದೆ. ಹೆಬ್ಬಾವಿನ ಬಿಗಿ ಹಿಡಿತಕ್ಕೆ ಸಿಲುಕಿದ ಪ್ರಾಣಿಗಳು ಅಲ್ಲಿಂದ ಹೊರಬರಲಾಗದೇ ಅವುಗಳಿಗೆ ಆಹಾರವಾಗಿಬಿಡುತ್ತದೆ. ಆದರೆ ಇಲ್ಲಿ ಹುಲಿಯೊಂದು ತಾನೇ ಬಂದು ಮಲಗಿದ್ದ ಹೆಬ್ಬಾವನ್ನ ಬೇಟೆಯಾಡಿರೋದೆ ವಿಶೇಷ ಎನ್ನಲಾಗಿದೆ. ಈ ಹಿಂದೆ ಹಾವು ಮಲಗಿರುವುದನ್ನ ನೋಡಿ ಹುಲಿ ಹೆದರಿಕೊಂಡಿದ್ದ ವಿಡಿಯೋ ಸಾಮಾಜಿಕ …
Read More »