Breaking News

Yearly Archives: 2021

ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್‌ ನೀಡುವ ಮೂಲಕ ಸಹಾಯ ಮಾಡಿದ:ಡಾ ಸೋನಾಲಿಮತ್ತು ಡಾ ಸಮೀರ್ ಸರ್ನೋಬತ್

ನಿಯತಿ ಫೌಂಡೇಶನ್‌ನಿಂದ ಡಾ ಸೋನಾಲಿ ಸರ್ನೋಬತ್ ಮತ್ತು ಡಾ ಸಮೀರ್ ಸರ್ನೋಬತ್ ಆರ್ಕಿಟೆಕ್ಚರಲ್ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕಾಗಿ ಲ್ಯಾಪ್‌ಟಾಪ್‌ ನೀಡುವ ಮೂಲಕ ಸಹಾಯ ಮಾಡಿದ್ದಾರೆ. ಅವಳು ವಿನಮ್ರ ಹಿನ್ನೆಲೆಯಿಂದ ಬಂದಿದ್ದಾಳೆ ಮತ್ತು ಅವಳ ಅಂತಿಮ ವರ್ಷಕ್ಕೆ ವಿದ್ಯಾರ್ಥಿವೇತನದ ಅಗತ್ಯವಿದೆ. ಅವಳು ಯಾವಾಗಲೂ ತನ್ನ ತರಗತಿಯಲ್ಲಿ ಮೊದಲಿಗಳು. ಮಿಸ್ ವೈಷ್ಣವಿ ಬಸುರ್ತೆಕರ್ ಅವರು ಬೆಳಗಾವಿಯ ವಸಂತರಾವ್ ಪೋತದಾರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಅಂತಿಮ ವರ್ಷಕ್ಕೆ ಆಕೆಯ ಶುಲ್ಕಕ್ಕೆ …

Read More »

ಮನೆ ಕಟ್ಟುವ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿ

ಮನೆ ಕಟ್ಟುವ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಹಿರಿಯ ಪೆÇಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಸುನೀಲಕುಮಾರ ನಂದೇಶ್ವರ ನೇತೃತ್ವದಲ್ಲಿ ದಾಳಿ ಮಾಡಿ, ಟಿಪ್ಪು ಸುಲ್ತಾನ್ ನಗರ ನಗರ ಕ್ರಾಸ್ ಹತ್ತಿರ ಐದು ಜನರನ್ನು ವಾಹನ ಹಾಗೂ ಕಳುವಾದ ಮಾಲು ಸಮೇತ ವಶ ಪಡಿಸಿಕೊಂಡಿದ್ದಾರೆ. ಆರೋಪಿತರಿಂದ 4 ಲಕ್ಷ 80 ಸಾವಿರ ಮೌಲ್ಯದ ಬ್ರಾಸ್ ಬಾರ್‍ಗಳು, 1 …

Read More »

ಹೆರಾಯಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿ

ಅಕ್ರಮವಾಗಿ ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಬೆಳಗಾವಿಯ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ‌ ಅಬಕಾರಿ ಅಪರ ಆಯುಕ್ತರು (ಅಪರಾಧ)ಬೆಳಗಾವಿ, ಹಾಗೂ ಅಬಕಾರಿ ಅಧಿಕ್ಷರು,ಜಂಟಿ ಆಯುಕ್ತರ ಕಛೇರಿ ಬೆಳಗಾವಿ, ಅಬಕಾರಿ ಉಪ ಅಧಿಕ್ಷಕರು, ಬೆಳಗಾವಿ ಉಪ ವಿಭಾಗ ರವರ ಮಾಗ೯ದಶ೯ನದಲ್ಲಿ, ಬುಧವಾರ ರಾತ್ರಿ 10.30ರ ಸುಮಾರಿಗೆ ಜಂಟಿ ಕಾರ್ಯಚರಣೆ ವೇಳೆಯಲ್ಲಿ  ಬೆಳಗಾವಿ ಜಂಟಿ ಆಯುಕ್ತರ ಕಛೇರಿಯ ವಿಚಕ್ಷಣ ದಳದ  ನಿರೀಕ್ಷಕರು  ಹಾಗು ಸಿಬ್ಬಂದಿ ವ೦ಟಮುರಿ ಕಾಲೋನಿಯ …

Read More »

ವಿಧಾನ ಪರಿಷತ್ತ ಚುನಾವಣೆ ಕವಟಗಿಮಠ ನಾಮತ್ರ ವಾಪಸ್ ಪಡೆದಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಗೆ ಬೆಳಗಾವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ. ಜಗದೀಶ್ ಕವಟಗಿಮಠ ಅವರು ಇವತ್ತು ನಾಮಪತ್ರ ವಾಪಸ್ ಪಡೆದಿದ್ದಾರೆ. ಜಗದೀಶ್ ಕವಟಗಿಮಠ ಅವರು ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸಹೋದರರಾಗಿದ್ದು ಅವರು ಇಂದು ನಾಮತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಅಂತಿಮ ದಿನವಾಗಿದ್ದು ನಾಳೆ ಎಷ್ಟು ಜನ ನಾಮಪತ್ರ ವಾಪಸ್ ಪಡೆಯುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.  

Read More »

ಮೈಸೂರು ಮಹಾರಾಜರ ವಂಶಸ್ಥರ ಸ್ವತ್ತು; ರಾಜ್ಯದ ಮೇಲ್ಮನವಿ ವಜಾಗೊಳಿಸಿದ ‘ಸುಪ್ರೀಂ’

ನವದೆಹಲಿ: 1,561.31 ಎಕರೆ ಜಮೀನಿನ ಒಡೆತನ ಮೈಸೂರಿನ ಮಹಾರಾಜರ ವಂಶಸ್ಥರಿಗೆ ಸೇರಿದ್ದು ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಜುಲೈ 26ರ ತನ್ನ ಆದೇಶವನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅಜಯ್ ರಸ್ತೋಗಿ ಅವರ ಪೀಠ ತಿರಸ್ಕರಿಸಿದೆ. ‘ಮೇಲ್ಮನವಿಯಲ್ಲಿ ಸರ್ಕಾರ ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದ್ದೇವೆ. ಇದರಲ್ಲಿ ಮಧ್ಯಪ್ರವೇಶಿಸುವಂತಹ ಯಾವುದೇ …

Read More »

28 ಮನೆ, ₹18 ಕೋಟಿ ಒಡೆಯ ವಾಸು’ದೇವ’: ಬಿವಿ ಗಿರಿ ಬಳಿ ₹6.24 ಕೋಟಿ ಮೌಲ್ಯದ ಆಸ್ತಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ನಿವೃತ್ತ ಯೋಜನಾ ನಿರ್ದೇಶಕ ಆರ್.ಎನ್. ವಾಸುದೇವ ಅವರು 28 ಮನೆ ಸೇರಿ ₹18.20 ಕೋಟಿ ಮೌಲ್ಯದ ಆಸ್ತಿಗೆ ಒಡೆಯನಾಗಿದ್ದರೆ, ಬಿಬಿಎಂಪಿ ಶಾಲೆಯ ಡಿ ಗ್ರೂಪ್‌ ನೌಕರ ಬಿ.ವಿ. ಗಿರಿ ₹6.24 ಕೋಟಿ ಮೌಲ್ಯದ ಆಸ್ತಿಗೆ ಮಾಲೀಕ..! ಆದಾಯ ಮೀರಿ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯದ 15 ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದ್ದ ಭ್ರಷ್ಟಾಚಾರ ನಿಗ್ರಹ …

Read More »

ಬೆಳೆ ಹಾನಿ ಪ್ರದೇಶಕ್ಕೆ ಕಾಟಾಚಾರದ ಭೇಟಿ: ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಮುಖ್ಯಮಂತ್ರಿ ಹಾಗೂ ಸಚಿವರ ಅತಿವೃಷ್ಟಿಯ ವೀಕ್ಷಣೆ ‘ಬಂದ ಪುಟ್ಟ ಹೋದ ಪುಟ್ಟ’ ಎಂಬಂತಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ನೀಡಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. ಶಿಡ್ಲಘಟ್ಟದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್. ರವಿಕುಮಾರ್ ಅವರ ಮನೆಗೆ ಗುರುವಾರ ಭೇಟಿ ನೀಡಿದ್ದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸೌಹಾರ್ದ ಭೇಟಿ ಇದಾದರೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ …

Read More »

ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall) ಮತ್ತೆ ರಾಜ್ಯಕ್ಕೆ

ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ (Rainfall) ಮತ್ತೆ ರಾಜ್ಯಕ್ಕೆ (Karnataka Rains) ಎಂಟ್ರಿಯಾಗಲಿದ್ದಾನೆ. ಇಂದಿನಿಂದ ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದ್ದು,  ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಸಹ ನೀಡಲಾಗಿದೆ. ಮತ್ತೆ ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತಗೊಂಡಿರುವ ಪರಿಣಾಮ ಮೊದಲು ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈ (Chennai Rains) ಎದುರಿಸಲಿದೆ. ನಂತರ ಕರ್ನಾಟಕದ ಮೈಸೂರು ಭಾಗ ಸಹ ಸೈಕ್ಲೋನ್ ಗೆ (Cyclone) …

Read More »

ಒಂದೇ ಕುಟುಂಬದ 11 ಸದಸ್ಯರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥ

ಖಾನಾಪುರ: ತಾಲ್ಲೂಕಿನ ಬಂಕಿ ಗ್ರಾಮದ ಒಂದೇ ಕುಟುಂಬದ 11 ಸದಸ್ಯರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಹೀರ್ ಮಹಮ್ಮದ್ ಜಮಾದಾರ (14) ಮೃತಪಟ್ಟಿದ್ದಾನೆ. “ತೀವ್ರ ವಾಂತಿ ಮತ್ತು ಬೇಧಿಯಿಂದ ನಿತ್ರಾಣವಾಗಿದ್ದ ಸಾಹೀರ್ ಎಂಬ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದಾನೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ಮಾಹಿತಿ ನೀಡಿದರು. ಈ ಘಟನೆಯ …

Read More »

ಬ್ರಾ ಸೈಜ್​​, ಸೊಂಟದ ಸುತ್ತಳತೆ ಹಾಕಿ ಹುಡುಗಿ ಬೇಕು ಎಂದ ಭೂಪ! ಕಮೆಂಟ್​ ಬಾಕ್ಸ್​ನಲ್ಲೇ ಹಿಗ್ಗಾಮುಗ್ಗಾ ತರಾಟೆ

ನವದೆಹಲಿ: ಹುಡುಗಿ ನೋಡೋಕೆ ಸುಂದರವಾಗಿರಬೇಕು, ವಿದ್ಯಾವಂತೆ, ಗುಣವಂತೆ, ಬುದ್ಧಿವಂತೆ ಆಗಿದ್ರೆ ಸಾಕಪ್ಪ. ಅಂತಹ ಹುಡುಗಿ ಓಕೆ ಅಂದ್ರೆ ಕಣ್ಮುಂಚಿ ತಾಳಿ ಕಟ್ಟಿಬಿಡ್ತೀನಿ. ಕಣ್ಣಲ್ಲಿ ಕಣ್ಣಿಟ್ಟು ಅವಳನ್ನು ಕಾಪಾಡ್ತೀನಿ, ಸುಖವಾಗಿ ಸಂಸಾರ ಮಾಡಿಕೊಂಡು ಇರ್ತೀನಿ ಎಂದು ಯುವಕರು ಹೇಳೋದನ್ನು ಕೇಳಿದ್ದೀವಿ. ಆದ್ರೆ ಇಲ್ಲೊಬ್ಬ ಭೂಪ, ತನ್ನನ್ನು ಮದುವೆ ಆಗುವ ಹುಡುಗಿಯ ಬ್ರಾ ಸೈಜ್, ಸೊಂಟದ ಸುತ್ತಳತೆ, ಪಾದದ ಉದ್ದ, ಎತ್ತರ, ಗಾತ್ರ ಇಂತಿಷ್ಟೇ ಇರಬೇಕು ಎಂದು ಪಟ್ಟಿ ಮಾಡಿ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ …

Read More »